ಐಟಿ ಕ್ಷೇತ್ರದ ನೌಕರರನ್ನು ಕಾಡುತ್ತಿರುವ ಉದ್ಯೋಗ ಅಭದ್ರತೆಯ ತಳಮಳ

 ಬೆಂಗಳೂರು: ಐಟಿ ಕ್ಷೇತ್ರದ ನೌಕರರಲ್ಲಿ ತಳಮಳ ಉಂಟಾಗಿದೆ. ಪುಣೆ ಮೂಲದ ಟೆಕ್ಕಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಟಿಪ್ಪಣಿಯೊಂದನ್ನು ಬರೆದಿಟ್ಟಿದ್ದು, ಐಟಿಯಲ್ಲಿ ಉದ್ಯೋಗ ಭದ್ರತೆ ಇಲ್ಲ. ನನ್ನ ಕುಟುಂಬದ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ ಎಂದು ಪತ್ರ ಬರೆದಿಟ್ಟು ಮೃತಪಟ್ಟಿದ್ದ.
60ರ ವಯಸ್ಸಿನ ತಂದೆಯೊಬ್ಬರು ತಮ್ಮ ಪುತ್ರಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದಾಳೆಂದು ದೂರಿದರು. ಅವಳನ್ನು ಕೌನ್ಸಿಲಿಂಗ್‌ಗೆ ಕರೆದುಕೊಂಡು ಹೋದಾಗ, ಅವಳು ಕೆಲಸ ಕಳೆದುಕೊಂಡ ವಿಷಯ ತಂದೆ, ತಾಯಿಗಳಿಗೆ ಗೊ

ತ್ತಾಗಿತ್ತು. ಆದರೂ ದಿನನಿತ್ಯ ಅವಳು ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋಗುತ್ತಿದ್ದಳು.
ವಿಪ್ರೋ, ಇನ್ಫೋಸಿಸ್, ಟೆಕ್ ಮಹೇಂದ್ರ ಮುಂತಾದ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಕಂಪನಿಗಳಲ್ಲಿ ಲೇಆಫ್

ಕೊಡುತ್ತಿರುವುದು ಸಾವಿರಾರು ಐಟಿ ವೃತ್ತಿಪರರ ನಿದ್ದೆ ಗೆಡಿಸಿದೆ. ಅನೇಕ ಮಂದಿ ಮನೋ ವೈದ್ಯರನ್ನು ಭೇಟಿ

ಮಾಡುತ್ತಿದ್ದು, ಒತ್ತಡ ನಿವಾರಣೆಗೆ ಅನೇಕ ಮಂದಿ ಆನ್‌ಲೈನ್ ಕೌನ್ಸಿಲಿಂಗ್ ಪ್ಲಾಟ್‌ಫಾರಂಗೆ ಮೊರೆ ಹೋಗಿದ್ದಾರೆ.
ಲೇಆಫ್ ಪ್ರಭಾವ ಮಾತ್ರ ಕೆಟ್ಟದಾಗಿದೆ. ಲೆಆಫ್‌ನಿಂದ ಪಾರಾದವರು ಕೂಡ ತಮ್ಮ ಸರದಿ ಬರಬಹುದೆಂದು ಚಿಂತೆಗೊಳಗಾಗಿದ್ದಾರೆ.


ಸ್ವಾತಿ ಪ್ರೇಮ್ ಕುಮಾರ್ ಈ ವರ್ಗಕ್ಕೆ ಸೇರಿದ್ದಾಳೆ. ಕಳೆದ ದಶಕದಿಂದ ಐಟಿ ಸೇವೆಯಲ್ಲಿ ದುಡಿಯುತ್ತಿರುವ ಈಕೆ ತನ್ನ ವೃತ್ತಿಜೀವನದ ಹಾದಿ ಬಗ್ಗೆ ವಿಶ್ವಾಸ ಹೊಂದಿದ್ದಳು. ಆದರೆ ಅವಳ ಸಹೋದ್ಯೋಗಿಗಳನ್ನು ಮನೆಗೆ ಕಳಿಸಿದ್ದನ್ನು ನೋಡಿ ಅವಳೂ ಕೂಡ ಚಿಂತಿತಳಾಗಿದ್ದಾಳೆ. ಅವಳ ಕುಟುಂಬ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ, ತಂದೆತಾಯಿಗಳಿಗೆ, ಮಕ್ಕಳಿಗೆ, ಸ್ನೇಹಿತರ ಪ್ರಶ್ನೆಗಳಿಗೆ ಏನೆಂದು ಉತ್ತರಿಸಲಿ ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ಮಾನಸಿಕ ಒತ್ತಡದಿಂದ ಪಾರಾಗಲು ಕೊನೆಗೆ ಅವಳು ಮನೋ ವೈದ್ಯರ ನೆರವನ್ನು ಕೋರಿದ್ದಾಳೆ.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery