ವ್ಯವಹಾರ
ಫೇಸ್‌ಬುಕ್ ಬಗ್ ಪತ್ತೆ ಹಚ್ಚಿದ ಪ್ರಕಾಶ್‌ಗೆ 10 ಲಕ್ಷ ರೂ. ಬಹುಮಾನ
 ನವದೆಹಲಿ: ಬೆಂಗಳೂರು ಮೂಲದ ಹ್ಯಾಕರ್ ಆನಂದ್ ಪ್ರಕಾಶ್ ಫೇಸ್ ಬುಕ್ ಲಾಗಿನ್ ಸಿಸ್ಟಮ್‌ನಲ್ಲಿ ಬಗ್ (ದೋಷ) ಪತ್ತೆಹಚ್ಚಿದ್ದಕ್ಕಾಗಿ 15000 ಡಾಲರ್(ಅಂದಾಜು 10 ಲಕ್ಷ ರೂ.)ಗಳನ್ನು ಅವರಿಗೆ ನೀಡಿ ಪುರಸ್ಕರಿಸಲಾಗಿದೆ. ಈ ಬಗ್ ದುರ್ಬಳಕೆಯಾಗಿದ್ದರೆ, ಹ್ಯಾಕರ್‌ಗಳು ಯುಸರ್ ಸಂದೇಶಗಳನ್ನು, ಫೋಟೊಗಳನ್ನು ಮತ್ತು ಪೇಮಂಟ್ ಸೆಕ್ಷನ್‌ನಲ್ಲಿ ಸಂಗ್ರಹವಾದ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುವ ಅವಕಾಶವಿತ್ತು. ಫ್ಲಿಪ್‌ಕಾರ್ಟ್ ಸೆಕ್ಯೂರಿಟಿ  ಅನಾಲಿಸ್ಟ್ ಪ್ರಕಾಶ್  ಫೇಸ್ಬುಕ್ ಈ ವಿಷಯವನ್ನು ಒಪ್ಪಿಕೊಂಡು ದೋಷ ಪರಿಹರಿಸಿತು ಎಂದು ಬ್ಲಾಗ್ ಸ್ಪಾಟ‌್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಕಾಶ್ ಫೆ. 22ರಂದು ಫೇಸ್ ಬುಕ್ ಭದ್ರತಾ ತಂಡಕ್ಕೆ ಬಗ್ ವರದಿಯನ್ನು ಮಾಡಿದ್ದರು ಮತ್ತು ಮಾರ್ಚ್ 2ರಂದು ಬಹುಮಾನದ ಮೊತ್ತದ ಬಗ್ಗೆ ಮೇಲ್ ಸ್ವೀಕರಿಸಿದ್ದಾಗಿ ಹೇಳಿದ್ದಾರೆ. .... ಮುಂದೆ ಓದಿ
ರೈಲಿನಲ್ಲೂ ಸ್ಥಳದಲ್ಲೇ ಟಿಕೆಟ್ ನೀಡುವ ಕಂಡಕ್ಟರ್ ಸೇವೆ
ನವದೆಹಲಿ: ಬಸ್‌ಗಳಲ್ಲಿ ಇರುವಂತೆ ರೈಲಿನಲ್ಲೂ ಸ್ಥಳದಲ್ಲೇ ಟಿಕೆಟ್ ನೀಡುವ ಕಂಡಕ್ಟರ್ ಸೇವೆಯನ್ನು ಬಳಸಿಕೊಳ್ಳಲು ರೈಲ್ವೆ ಇಲಾಖೆ ಯೋಜಿಸುತ್ತಿದೆ.ಪ್ರಸ್ತುತ ಈ ಕ್ರಮವನ್ನು  ಪ್ರಾಯೋಗಿಕವಾಗಿ ಜಾರಿಗೆ ತರಲು ಇಲಾಖೆ ನಿರ್ಧರಿಸಿದ್ದು, ಆರಂಭಿಕ ಆರಂಭಿಕ ಹಂತವಾಗಿ ಉತ್ತರ ಪ್ರದೇಶದ ಮುಘಲ್ ಸರಾಯ್‍ನಲ್ಲಿ ಇದನ್ನು ಜಾರಿಗೆ ತರಲಾಗಿದೆ.  ಟಿಕೆಟ್ ರಹಿತ ಪ್ರಯಾಣಿಕರು ದುಬಾರಿ ದಂಡ ತೆರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ರೈಲಿನಲ್ಲಿ ಟಿಕೆಟ್ ನೀಡುವ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಲು ಕೂಡ ರೈಲ್ವೆ ಇಲಾಖೆ ಯೋಜಿಸುತ್ತಿದೆ. .... ಮುಂದೆ ಓದಿ
ಇಂದು ಬ್ಯಾಂಕ್ ಮುಷ್ಕರ, 3 ದಿನಗಳ ಕಾಲ ವಹಿವಾಟು ಸ್ತಬ್ಧ
ನವದೆಹಲಿ: ಇಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮತ್ತು ತರುವಾಯ ಎರಡು ದಿನಗಳ ವಾರಾಂತ್ಯ ರಜೆಗಳ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ. ಇದರಿಂದ ಪ್ರಮುಖ ಮೆಟ್ರೋ ನಗರಗಳ ಎಟಿಎಂಗಳಲ್ಲಿ ಹಣವಿಲ್ಲದ ಪರಿಸ್ಥಿತಿ ಉಂಟಾಗಬಹುದು. ಚೆಕ್ ಕ್ಲಿಯರೇನ್ಸ್ ಮತ್ತು ಇತರ ವಹಿವಾಟುಗಳು ಮೂರು ದಿನಗಳ ಕಾಲ ತಡವಾಗಲಿದೆ.ಸಾರ್ವಜನಿಕ ವಲಯ, ಖಾಸಗಿ ಮತ್ತು ವಿದೇಶಿ  ಬ್ಯಾಂಕುಗಳ 3,50,000 ನೌಕರರು ಇಂದಿನ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಐಬಿಇಎ ಈ ಮುಷ್ಕರಕ್ಕೆ ಕರೆ ನೀಡಿದ್ದು, ಎಸ್‌ಬಿಐನ ಐದು ಸಹವರ್ತಿ ಬ್ಯಾಂಕುಗಳಲ್ಲಿ ವ್ರತ್ತಿ ಪ್ರಗತಿ ಯೋಜನೆ ಅನುಷ್ಠಾನವನ್ನು ವಿರೋಧಿಸಿ ಅವರು ಮುಷ್ಕರಕ್ಕೆ ಇಳಿದಿದ್ದಾರೆ. .... ಮುಂದೆ ಓದಿ
ವಾರ್ಷಿಕ 10 ಲಕ್ಷ ಆದಾಯವರ್ಗಕ್ಕೆ 2016ರಿಂದ ಎಲ್‌ಪಿಜಿ ಸಬ್ಸಿಡಿ ಕಡಿತ
ನವದೆಹಲಿ: ಕೇಂದ್ರ ಸರ್ಕಾರ 2016 ಜನವರಿ 1ರಿಂದ ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವವರಿಗೆ ಎಲ್‌ಪಿಜಿ ಸಬ್ಸಿಡಿಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಶೀಘ್ರವೇ ಈ ಕುರಿತು  ಅಧಿಕೃತ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಹೊರಡಿಸಲಿದೆ. ಇದಕ್ಕೆ ಮುಂಚೆ ಸ್ವಯಂಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿಯನ್ನು ಶ್ರೀಮಂತ ವರ್ಗದ ಕೆಲವರು ಕೈಬಿಟ್ಟಿದ್ದರು. ಗ್ರಾಹಕರು ಪ್ರಸಕ್ತ ಸಬ್ಸಿಡಿ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್ ಪಡೆಯಲು ಅರ್ಹರಾಗಿದ್ದು, ಅದಕ್ಕಿಂತ ಹೆಚ್ಚಿಗೆ ಪಡೆಯಲು ಮಾರುಕಟ್ಟೆ ದರವನ್ನು ನೀಡಬೇಕಾಗುತ್ತದೆ. ದೆಹಲಿಯಲ್ಲಿ ಸಬ್ಸಿಡಿಯೇತರ ಅಡುಗೆ ಅನಿಲದ ದರ 606. 50 ರೂ.ಗಳಾಗಿದ್ದರೆ, ಸಬ್ಸಿಡಿ ಸಿಲಿಂಡರ್ ದರ 14.2 ಕೆಜಿ ಸಿಲಿಂಡರ್‌ಗೆ 417. 82 ರೂ. .... ಮುಂದೆ ಓದಿ
ಮಹಡಿ ಮೇಲಿಂದ ಬಿದ್ದು ಸ್ವರಾಜ್ ಪಾಲ್ ಪುತ್ರನ ಸಾವು
ಲಂಡನ್: ಅನಿವಾಸಿ ಭಾರತೀಯ ಕೈಗಾರಿಕೋದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಪುತ್ರ ಅಂಗದ್ ಪಾಲ್ ಸೆಂಟ್ರಲ್ ಲಂಡನ್‌ನ ಪೆಂಟ್‌ಹೌಸ್ ನಿವಾಸದ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಸ್ವರಾಜ್ ಪಾಲ್ ಸ್ಥಾಪಿಸಿದ ಕೆಪಾರಾ ಗ್ರೂಪ್ ಸಿಇಒ ಆಗಿರುವ 45 ವರ್ಷದ ಅಂಗದ್ 8ನೇ ಮಹಡಿಯಿಂದ ಬಿದ್ದಿದ್ದರಿಂದ ತೀವ್ರ ಗಾಯಗಳಾಗಿ ಸತ್ತಿದ್ದಾರೆ. ಈ ಘಟನೆಯ ಸಂದರ್ಭಗಳ ಬಗ್ಗೆ ಲಂಡನ್ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಅಂಗದ್ ಸಾವು ಅನುಮಾನಕ್ಕೆ ಆಸ್ಪದವಾಗಿಲ್ಲ ಎಂದು  ಹೇಳಿದ್ದಾರೆ. ಕೆಪಾರೋ ಉದ್ಯಮಗಳು ಉಕ್ಕಿನ ದರಗಳ ಬಿಕ್ಕಟ್ಟು ಎದುರಿಸುತ್ತಿದ್ದ ನೇಪಥ್ಯದಲ್ಲಿ ಅವರ ದುರಂತದ ಸಾವು ಸಂಭವಿಸಿದೆ. ಕೆಪಾರೊ ಉದ್ಯಮಗಳ ಬಿಕ್ಕಟ್ಟಿನಿಂದಾಗಿ ಅವರ 16 ಕಂಪನಿಗಳನ್ನು ಆಡಳಿತಾಧಿಕಾರಿಯ ಸುಪರ್ದಿಗೆ ಒಪ್ಪಿಸಿದ್ದರು. ದಿವಾಳಿ ಘೋಷಣೆಗೆ ಪರ್ಯಾಯವಾದ ಪ್ರಕ್ರಿಯೆ .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery