ವ್ಯವಹಾರ
ಕಂಪನಿಯ ಬಾಸ್ ನೌಕರರಿಗೆ ನೀಡಿದ ಬೋನಸ್ ತಲಾ 1.5 ಕೋಟಿ ರೂ.
ಟರ್ಕಿ: ಕಂಪನಿಗೆ ಬರುವ ಲಾಭವನ್ನು ಕಂಪನಿಯ ಮಾಲೀಕ ಅಥವಾ ಸಿಇಒ ಮತ್ತು ಮೇಲಾಧಿಕಾರಿಗಳು ತಿಂದು ತೇಗುವ ಇಂದಿನ ಕಾಲದಲ್ಲಿ ಟರ್ಕಿಯ ಆಹಾರ ದೈತ್ಯ  ಕಂಪನಿ ಯೆಮೆಕ್‌ಸೆಪೆಟಿಯ ಮುಖ್ಯ ಸಿಇಒ ತನ್ನ ನೌಕರರಿಗೆ ತಲಾ 1.5 ಕೋಟಿ ರೂ. ಬೋನನ್ ನೀಡಿದ್ದಾರೆಂದರೆ ನಂಬಲು ಸಾಧ್ಯವೇ, ಆದರೆ ಇದು ನಂಬಲೇಬೇಕಾದ ಸತ್ಯವಾಗಿದ್ದು, ಸಿಇಒ ನೆವಜಾತ ಐಡಿನ್ 1,50,000 ರೂ. ಸ್ಟರ್ಲಿಂಗ್ ಪೌಂಡ್ ಬೋನಸ್ ಪ್ರತಿಯೊಬ್ಬ ನೌಕರನಿಗೆ ಆಫರ್ ಮಾಡಿದ್ದಾರೆ. ಭಾರತದ ಕರೆನ್ಸಿಗೆ ಅದನ್ನು ಪರಿವರ್ತಿಸಿದರೆ ತಲಾ 1.50 ಕೋಟಿ ರೂ.ಗಳಾಗುತ್ತದೆ. ಜರ್ಮನಿ ಮೂಲಕ ಡೆಲಿವರಿ ಹೀರೋ ಯೆಮೆಕ್ ಸೆಪೆಟಿ ಕಂಪನಿಯನ್ನು 375 ದಶಲಕ್ಷ ಪೌಂಡ್‌ಗಳಿಗೆ ಖರೀದಿಸಿದಾಗ ಕಂಪನಿಯ ಬಾಸ್ ಅದರಲ್ಲಿ ಸ್ವಲ್ಪ ಭಾಗ ಅಂದರೆ 17 ದಶಲಕ್ಷ ಪೌಂಡ್ .... ಮುಂದೆ ಓದಿ
ಈ-ವಾಣಿಜ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್ಸ್ ಮುಷ್ಕರ
ಬೆಂಗಳೂರು: ಈ ವಾಣಿಜ್ಯ ಸಂಸ್ಥೆ ಫ್ಲಿಪ್‌ಕಾರ್ಟ್ ನೌಕರರಿಗೆ ಹೆರಿಗೆ ರಜೆ ನೀತಿ ಮುಂತಾದ ಸೌಲಭ್ಯಗಳನ್ನು ನೀಡುವುದಕ್ಕೆ ಮೆಚ್ಚಿಗೆಗೆ ಪಾತ್ರವಾಗಿದೆ. ಆದರೆ ಅದೇ ಸಂದರ್ಭದಲ್ಲಿ ಕಂಪನಿಯ ಡೆಲಿವರಿ ಹುಡುಗರನ್ನು ಸಂತೋಷದಿಂದ ಇಡಲು ಫ್ಲಿಪ್‌ಕಾರ್ಟ್ ವಿಫಲವಾಗಿದೆ.   ಡೆಲಿವರಿ ಹುಡುಗರು ಕಂಪನಿಯ ಸುಸೂತ್ರ ನಿರ್ವಹಣೆಗೆ ನೆರವಾಗುತ್ತಾರೆ. ಫ್ಲಿಪ್‌ಕಾರ್ಟ್ ಮತ್ತು ಮೈಂತ್ರಾದ  ಸುಮಾರು 400 ಡೆಲಿವರಿ ಸಿಬ್ಬಂದಿ ಕಳೆದ ಕೆಲವು ದಿನಗಳಿಂದಭ ಮುಷ್ಕರ ಹೂಡಿದ್ದಾರೆ. ಮೂಲಭೂತ ಸೌಲಭ್ಯಗಳಾದ ಟಾಯ್ಲೆಟ್ ಕೊರತೆ, ವಾರದಲ್ಲಿ ಏಳು ದಿನ ರಜೆಇಲ್ಲದೇ ಕೆಲಸ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಇಳಿದಿದ್ದಾರೆ. ಮುಷ್ಕರನಿರತ ಕಾರ್ಮಿಕರು ತಮ್ಮ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದು, ಸಮರ್ಪಕ ಶೌಚಾಲಯಗಳು ಮತ್ತು ವಾರದ ರಜೆ ನೀಡಬೇಕೆಂದು ಆಗ್ರಹಿಸಿದ್ದಾರೆ.  .... ಮುಂದೆ ಓದಿ
ಪೆಟ್ರೋಲ್ ಪ್ರತಿ ಲೀಟರ್‌ಗೆ 2.43, ಡೀಸೆಲ್ 3.60 ರೂ. ಇಳಿಮುಖ
ನವದೆಹಲಿ: ಪೆಟ್ರೋಲ್ ಮತ್ತು  ಡೀಸೆಲ್ ದರಗಳನ್ನು ಶುಕ್ರವಾರ ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ದರಗಳಲ್ಲಿ ಪ್ರತಿ ಲೀಟರ್‌ಗೆ 2.43 ರೂ. ಇಳಿಮುಖವಾಗಿದ್ದರೆ, ಡೀಸೆಲ್ ದರಗಳಲ್ಲಿ ಪ್ರತಿ ಲೀಟರ್‌ಗೆ 3.60 ರೂ. ಕಡಿತವಾಗಿದೆ. ಈ ಪರಿಷ್ಕರಣೆಯು ಸ್ಥಳೀಯ ತೆರಿಗೆಗಳಿಂದ ಹೊರತಾಗಿದೆ. ತೈಲ ಮಾರಾಟ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪುನರ್ಪರಿಶೀಲನೆ ಮಾಡಿ ಅಂತಾರಾಷ್ಟ್ರೀಯ ತೈಲ ದರಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪರಿಷ್ಕರಣೆ ಮಾಡುತ್ತದೆ. ಜುಲೈ 15ರಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಆಗ ಪ್ರತಿ ಲೀಟರ್‌ಗೆ 2 ರೂ. ಕಡಿತ ಮಾಡಲಾಗಿತ್ತು.  .... ಮುಂದೆ ಓದಿ
ಚಿನ್ನದ ದರ ಪಾತಾಳಕ್ಕೆ: ಪ್ರತಿ 10 ಗ್ರಾಂ.ಗೆ 23,000 ರೂ.ಗಿಂತ ಕಡಿಮೆ
ಮುಂಬೈ: ಚಿನ್ನದ ಧಾರಣೆ ಪ್ರತಿ ಹತ್ತು ಗ್ರಾಂ.ಗೆ 23,000ಕ್ಕಿಂತ ಕೆಳಗೆ ಕುಸಿಯುವುದೆಂದು ನಿರೀಕ್ಷಿಸಲಾಗಿದೆ. ಫೆಡರಲ್ ರಿಸರ್ವ್‌ನಿಂದ ಕಡಿಮೆ ಬಡ್ಡಿ ದರಗಳು ಮತ್ತು ಅಮೆರಿಕ ಡಾಲರ್ ಮೌಲ್ಯ ಸುಭದ್ರವಾಗುತ್ತಿರುವುದರಿಂದ ಈ ಬೆಳವಣಿಗೆ ಉಂಟಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.  ಚಿನ್ನದ ದರಗಳು ವಾರದಿಂದ ತಿಂಗಳಿನಲ್ಲಿ 23,000ದಿಂದ 23,500 ರೂ.ಗೆ ಕುಸಿಯುವ ನಿರೀಕ್ಷೆಯಿದೆ. ಬಡ್ಡಿ ದರದ ಏರಿಕೆ ಬಗ್ಗೆ ಅಮೆರಿಕ ಫೆಡರಲ್ ರಿಸರ್ವ್ ಜುಲೈ 29ರಂದು ನಿರ್ಧಾರ ತೆಗೆದುಕೊಳ್ಳುವುದರಿಂದ ಪೇಟೆಯಲ್ಲಿ ಫಲಿತಾಂಶದ ಬಗ್ಗೆ ಆತಂಕ ಮೂಡಿದೆ. ಚಿನ್ನದ ಧಾರಣೆ ಶನಿವಾರ ಪ್ರತಿ 10 ಗ್ರಾಂ.ಗೆ 24, 752ರೂ.ಗಳಿತ್ತು.. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್‌ಗೆ 1097.50 ಡಾಲರ್‌ಗಳಾಗಿತ್ತು .... ಮುಂದೆ ಓದಿ
ಜಿಎಸ್‌ಟಿ ಭಿನ್ನಾಭಿಪ್ರಾಯಗಳು ನಿವಾರಣೆ: ನಿರ್ಮಲಾ ಸೀತಾರಾಮನ್
ಕೊಯಮತ್ತೂರು: ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಮಸೂದೆ ನಡುವಿನ ಭಿನ್ನಾಭಿಪ್ರಾಯ ನಿವಾರಣೆಯಾಗಿದ್ದು, ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಅದನ್ನು ಅಂಗೀಕರಿಸುವ ನಿರೀಕ್ಷೆ ಹೊಂದಿರುವುದಾಗಿ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯಸಭೆ ಸಮಿತಿಯು ತನ್ನ ವರದಿ ಸಲ್ಲಿಸಿದ್ದು, ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದು ಹೇಳಿದ್ದು ಪರೋಕ್ಷ ತೆರಿಗೆವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಜಿಎಸ್‌ಟಿಯಿಂದ ಉಂಟಾಗುತ್ತದೆ ಎಂದು ಹೇಳಿದರು. ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯಾದ್ದರಿಂದ 2/3ನೇ ಬಹುಮತದಿಂದ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಬೇಕು. ಇದಲ್ಲದೇ 29 ರಾಜ್ಯಗಳಲ್ಲಿ ಅರ್ಧದಷ್ಟು ರಾಜ್ಯಗಳು ಶಾಸನಕ್ಕೆ ಅನುಮೋದನೆ ನೀಡಬೇಕು.  ಏಪ್ರಿಲ್ 1ರಿಂದ ಜಿಎಸ್‌ಟಿ ಜಾರಿಗೆ ಯೋಜಿಸಿದ್ದು, ಬಹುಮಟ್ಟಿಗೆ ರಾಜ್ಯದ ತೆರಿಗೆಗಳನ್ನು ರದ್ದುಮಾಡಿ ಏಕರೂಪದ ತೆರಿಗೆ ಜಾರಿಗೆ ಬರುತ್ತದೆ.ಸರ್ಕಾರ ಆಸ್ಟ್ರೇಲಿಯಾ, ಕೆನಡಾ ಮತ್ತು .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery