ವ್ಯವಹಾರ
ಬೇಳೆಕಾಳುಗಳು ಮಾತ್ರವಲ್ಲ ಗಗನಕ್ಕೇರುತ್ತಿದೆ ಶಿಕ್ಷಣ, ಆರೋಗ್ಯಸೇವೆ ವೆಚ್ಚ
ನವದೆಹಲಿ: ಕಳೆದ ಕೆಲವು ತಿಂಗಳಿಂದ ಗ್ರಾಹಕ ದರ ಸೂಚ್ಯಂಕ ಅಥವಾ ಚಿಲ್ಲರೆ ಆಧಾರಿತ ಹಣದುಬ್ಬರ ತಗ್ಗಿರಬಹುದು. ಆದರೆ ಭಾರತದ ಮಧ್ಯಮ ವರ್ಗದ ಜನರ ಜೀವನ ವೆಚ್ಚ ಏರುತ್ತಲೇ ಇದ್ದು, ಅದರ ದಿನಬಳಕೆಯ ವಸ್ತುಗಳಾದ ಬೇಳೆಕಾಳುಗಳು, ಉಡುಪು, ಶಿಕ್ಷಣ, ಆರೋಗ್ಯ ಸೇವೆ, ಮಾಂಸ, ಮೀನು ಮತ್ತಿತರ ದರಗಳು ಏರುತ್ತಲೇ ಇವೆ ಎಂದು ಕೈಗಾರಿಕಾ ಸಂಸ್ಥೆ ಅಸೋಚಾಮ್ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಹಣದುಬ್ಬರವು ಗಮನಾರ್ಹವಾಗಿ ತಗ್ಗಿರಬಹುದು. ಆದರೆ ಮಧ್ಯಮವರ್ಗವು ಸರಕು ಮತ್ತು ಸೇವೆಗಳ ಅಧಿಕದರವು ಅವರ ಸೌಕರ್ಯ ಮಟ್ಟವನ್ನು ಮೀರಿದೆ ಎಂದು ವರದಿ ತಿಳಿಸಿದೆ. ಸಿಪಿಐ ಪ್ರವತ್ತಿಯ ಅದರ ವಿಶ್ಲೇಷಣೆಯಲ್ಲಿ, ಮಧ್ಯಮವರ್ಗವು ಹಣದುಬ್ಬರದ ಒತ್ತಡದಿಂದ ಇನ್ನೂ ತತ್ತರಿಸಿದ್ದು, ಅನೇಕ ಪದಾರ್ಥಗಳು ಸಿಐಪಿ ಸಂಖ್ಯೆಗಿಂತ ಮೇಲಿದೆ. ಉದಾಹರಣೆಗೆ ಬೇಳೆಕಾಳುಗಳಲ್ಲಿ .... ಮುಂದೆ ಓದಿ
1.20 ಲಕ್ಷ ಕೋಟಿ ರೂ.ಗೆ ಸ್ಯಾನ್ ಡಿಸ್ಕ್ ಕಾರ್ಪ್ ಖರೀದಿಸಿದ ವೆಸ್ಟರ್ನ್ ಡಿಜಿಟಲ್
ಹಾರ್ಡ್ ಡಿಸ್ಕ್ ಡ್ರೈವ್ ತಯಾರಕ ಸಂಸ್ಥೆ ವೆಸ್ಟರ್ನ್ ಡಿಜಿಟಲ್ ಫ್ಲಾಷ್ ಮೆಮರಿ ಚಿಪ್‌ಗಳನ್ನು ತಯಾರಿಸುವ ಸ್ಯಾನ್ ಡಿಸ್ಕ್  ಕಾರ್ಪ್ ಸಂಸ್ಥೆಯನ್ನು ಬರೋಬ್ಬರಿ 19 ಶತಕೋಟಿ ಡಾಲರ್ (1.20 ಲಕ್ಷ ಕೋಟಿ ರೂ.)ಗೆ  ಖರೀದಿಸುತ್ತಿದೆ. ಸ್ಯಾನ್ ಡಿಸ್ಕ್ ಕಾರ್ಪ್ ಸಂಸ್ಥೆಯ ಸಹ ಸಂಸ್ಥಾಪಕ ಭಾರತೀಯ ಮೂಲದ ಸಂಜಯ್ ಮೆಹ್ರೋತ್ರಾ ಅವರು ಈ ಸ್ವಾಧೀನದ ಬಳಿಕ ವೆಸ್ಟರ್ನ್ ಡಿಜಿಟಲ್ ಬೋರ್ಡ್‌ಗೆ ಸೇರುವ ಸಾಧ್ಯತೆಯಿದೆ.  58 ವರ್ಷದ ಮೆಹ್ರೋತ್ರಾ ಪ್ರಸಕ್ತ ಕ್ಯಾಲಿಫೋರ್ನಿಯಾ ಮೂಲದ ಕಂಪನಿಯ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಮತ್ತು ಅಧ್ಯಕ್ಷ. 2014ರಲ್ಲಿ ಮೆಹ್ರೋತ್ರಾ ಅತ್ಯಧಿಕ ವೇತನ ಪಡೆಯುತ್ತಿದ್ದ ಭಾರತೀಯ ಮೂಲದ ಅಮೆರಿಕನ್ನರಾಗಿದ್ದು, ಅವರ ವಾರ್ಷಿಕ ವೇತನ ಪ್ಯಾಕೇಜ್ 70 ಕೋಟಿ ರೂ.ಗಳು. ಸ್ಯಾನ್ ಡಿಸ್ಕ್ ಜಗತ್ತಿನಲ್ಲಿ ಫ್ಲಾಷ್ ಮೆಮರಿ .... ಮುಂದೆ ಓದಿ
ಸ್ಟಾರ್ಟ್‌ಅಪ್ ಕಂಪನಿಗಳಿಗೆ ಸರ್ಕಾರದ ವಿನಾಯಿತಿಗಳ ಕೊಡುಗೆ
ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ಸ್ಟಾರ್ಟ್‌ ಅಪ್ ನೀತಿಯು ಹೊಸ ಉದ್ಯಮಿಗಳಿಗೆ ವಿನಾಯಿತಿಗಳ ಕೊಡುಗೆಯನ್ನು ಹರಿಸಲಿದೆ. ಕಾರ್ಮಿಕ ಕಾನೂನುಗಳಿಂದ ವಿನಾಯಿತಿಗಳನ್ನು ನೀಡುವುದು ಸೇರಿದಂತೆ ಅವರಿಗೆ ಹಣಕಾಸು ಒದಗಿಸಲು ನೆರವಾಗುವ ಮೂಲಕ ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ನೀಡುವ ಸಮಗ್ರ ನೀತಿಯತ್ತ ಸರ್ಕಾರ ನೋಡುತ್ತಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ದೇಶಿತ ಸ್ಟಾರ್ಟ್ ಅಪ್ ನೀತಿಯು ಐಟಿ-ಬಿಟಿ ಸಚಿವರ ಮುಂದಾಳತ್ವದಲ್ಲಿ 100 ಕೋಟಿ ರೂ.ವರೆಗಿನ ಯೋಜನೆಗಳಿಗೆ ಏಕಗವಾಕ್ಷಿ ಅನುಮತಿಯನ್ನು ನೀಡುತ್ತದೆ. ಹೊಸ ಅಂತರ್ಜಾಲ ಶಕೆಯ ಕಂಪನಿಗಳಿಗೆ ಹಣಕಾಸು ಕುರಿತಂತೆ ಮಾತನಾಡಿದ ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್ ಸರ್ಕಾರವು ಬಂಡವಾಳ ಹೂಡಿಕೆದಾರರರೊಂದಿಗೆ 50: 50 ಪಾಲುದಾರಿಕೆಯನ್ನು ಹೊಂದುತ್ತದೆ ಎಂದು ವಿವರಿಸಿದರು. ಎಂಜಿನಿಯರಿಂಗ್ ಕಾಲೇಜ್ ಮಟ್ಟದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಇನ್ ಕ್ಯೂಬೇಷನ್ ಕೇಂದ್ರಗಳನ್ನು ಒದಗಿಸಲು ಪ್ರತಿ .... ಮುಂದೆ ಓದಿ
ಆರ್‌ಬಿಐ ರೆಪೊ ದರ ಕಡಿತ: ಮನೆಸಾಲದ ಮೇಲಿನ ಬಡ್ಡಿದರ ಕಡಿತ ನಿರೀಕ್ಷೆ
ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್  ರಘುರಾಂ ರಾಜನ್ ಮಂಗಳವಾರ ರೆಪೊ ದರವನ್ನು 50 ಮೂಲಾಂಕಗಳಿಗೆ ಕಡಿತಗೊಳಿಸುವ ಮೂಲಕ  ರೆಪೊ ದರವು ನಾಲ್ಕುವರೆವರ್ಷಗಳಲ್ಲೇ ಅತೀ ಕನಿಷ್ಟವಾದ ಶೇ. 6.75ಕ್ಕೆ ಇಳಿದಿರುವ ಅಚ್ಚರಿಯ ಕ್ರಮ ಕೈಗೊಂಡಿದ್ದಾರೆ. ರಾಜನ್ ಅವರ ರೆಪೊ ದರ ಕಡಿತ ಪ್ರಕಟಣೆಯ ಕೆಲವೇ ಗಂಟೆಗಳಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಆಫ್ ಬ್ಯಾಂಕ್ ಆಫ್  ಇಂಡಿಯಾ ತನ್ನ ಮೂಲ ದರದಲ್ಲಿ 40 ಮೂಲಾಂಕಗಳನ್ನು ಅಕ್ಟೋಬರ್ 5ರಿಂದ ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಇದರಿಂದ ಲಕ್ಷಾಂತರ ಮನೆಸಾಲದ ಗ್ರಾಹಕರು ಖುಷಿ ಪಡುವಂತಾಗಿದೆ. ಇತರೆ ಬ್ಯಾಂಕ್‌ಗಳು ಕೂಡ ಬಡ್ಡಿದರಗಳನ್ನು ಇಳಿಸುವುದೆಂದು ನಿರೀಕ್ಷಿಸಲಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ರೆಪೊ ದರ ಕಡಿತವನ್ನು ಆರ್ಥಿಕತೆಗೆ ವರ್ಗಾಯಿಸಲು ಸರ್ಕಾರದ ಜತೆ ಕಾರ್ಯೋನ್ಮುಖವಾಗುವುದಾಗಿ ರಾಜನ್ .... ಮುಂದೆ ಓದಿ
ಪೆಟ್ರೋಲ್ ಲೀಟರ್‌ಗೆ 2 ರೂ. ಡೀಸೆಲ್ ಲೀ.ಗೆ 50 ಪೈಸೆ ಕಡಿತ
ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಕುಸಿತವಾಗಿರುವ ಹಿನ್ನೆಲೆಯಲ್ಲಿ  ಪೆಟ್ರೋಲ್ ದರಗಳನ್ನು ಸೋಮವಾರ ಲೀಟರ್‌ಗೆ 2 ರೂ. ಕಡಿತ ಮಾಡಲಾಗಿದೆ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 0.50 ರೂ. ಕಡಿತ ಮಾಡಲಾಗಿದೆ.  ಈ ತಿಂಗಳಲ್ಲಿ ಉಂಟಾಗಿರುವ ಮೂರನೇ ಕಡಿತ ಇದಾಗಿದೆ. ಹೊಸ ದರಗಳು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.ದೆಹಲಿಯಲ್ಲಿ ಪೆಟ್ರೋಲ್ ದರಗಳು ಪ್ರತಿ ಲೀಟರ್‌ಗೆ ಸ್ಥಳೀಯ ತೆರಿಗೆಗಳು ಸೇರಿದಂತೆ 2 ರೂ. ಇಳಿಮುಖವಾಗಿದೆ.ಇಂದು ಮಧ್ಯರಾತ್ರಿಯಿಂದ ಪ್ರತಿ ಲೀಟರ್‌ಗೆ 63.20 ರೂ. ಇದ್ದಿದ್ದು 61. 20 ರೂ.ಗೆ ಇಳಿಯಲಿದೆ. ಡೀಸೆಲ್ ದರ ಪ್ರಸಕ್ತ 44.95ರಿಂದ 44. 45ರೂ.ಗೆ ಇಳಿಮುಖವಾಗಿದೆ. .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery