ವ್ಯವಹಾರ
ಪೇಟಿಎಂ ಮಾಲ್ ಆರಂಭಿಸಿದ ಪೆಟಿಎಂ ವ್ಯಾಲೆಟ್
ಮೊಬೈಲ್ ವ್ಯಾಲೆಟ್ಸ್ ವೇದಿಕೆ ಪೇಟಿಎಂ ಸ್ವತಂತ್ರ ಈ-ವಾಣಿಜ್ಯ ವೇದಿಕೆಯಾದ ಪೇಟಿಎಂ ಮಾಲ್ ಆರಂಭಿಸಿದೆ. ಪೇಟಿಎಂ ತನ್ನ ಮೊಬೈಲ್ ವ್ಯಾಲೆಟ್ ಆಪ್ ಮತ್ತು ವೆಬ್‌ಸೈಟ್‌ನಲ್ಲಿ  ವಿವಿಧ ಗ್ರಾಹಕ ಉತ್ಪನ್ನಗಳನ್ನು ಈಗಾಗಲೇ ಮಾರುತ್ತಿದ್ದು, ಚೀನಾದ ಈ-ವಾಣಿಜ್ಯ ಸಂಸ್ಥೆಯಾದ ಟಿಮಾಲ್ ಮಾದರಿಯಲ್ಲಿ ಈ ಆ್ಯಪ್ ರೂಪಿಸಲಾಗಿದೆ. ಪ್ರಸಕ್ತ ಆಂಡ್ರಾಯ್ಡ್ ಫೋನ್‌ನಲ್ಲಿ ಮಾತ್ರ ಲಭ್ಯವಿರುವ ಈ ಆ್ಯಪ್ ಫೆ. 26ರಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಳವಡಿಸಲಾಗಿದೆ.ಮೊಬೈಲ್ ಬಿಡಿಭಾಗಗಳಿಂದ ಹಿಡಿದು ಎಲೆಕ್ಟ್ರಾನಿಕ್, ದಿನಸಿ ವಸ್ತುಗಳು, ಫಿಟ್ನೆಸ್ ವಸ್ತುಗಳು, ಸಂಗೀತೋಪಕರಣಗಳು, ಪಠ್ಯೋಪಕರಣಗಳನ್ನು ಕೂಡ ಮಾರಾಟ ಮಾಡಲಿದೆ.ಈ-ವ್ಯಾಲೆಟ್ ಸೇವೆಯ ಸಂಸ್ಥೆ ತನ್ನ ಸೇವೆಗಳನ್ನು ಶೀಘ್ರದಲ್ಲೇ ವಿಸ್ತರಿಸುತ್ತಿದ್ದು, ಈ-ವಾಣಿಜ್ಯ ವ್ಯವಹಾರಕ್ಕೆ ಪೆಟಿಎಂ ಪ್ರವೇಶಿಸುವುದಲ್ಲದೇ ಪೇಮೆಂಟ್ಸ್ ಬ್ಯಾಂಕ್ ಸ್ಥಾಪಿಸುವ ಅಂತಿಮ ಹಂತಗಳಲ್ಲಿವೆ. ಕ್ಯೂಆರ್ ಕೋಡ್ ಪೇಮೆಂಟ್ ವ್ಯವಸ್ಥೆಯ ಅಭಿವೃದ್ಧಿಗೆ .... ಮುಂದೆ ಓದಿ
20 ವರ್ಷದ ಸಾಲಕ್ಕೆ ಪ್ರಥಮ ಮನೆಯ ವೆಚ್ಚ 2.4 ಲಕ್ಷ ರೂ. ಕಡಿತ
 ನವದೆಹಲಿ:ನೀವು ವಾರ್ಷಿಕ 18 ಲಕ್ಷ ರೂ. ಗಳಿಸುತ್ತಿದ್ದರೆ, ನಿಮ್ಮ ಪ್ರಥಮ ಮನೆ ಖರೀದಿಯ ವೆಚ್ಚವು 2.4 ಲಕ್ಷ ರೂ.ಗಳಷ್ಟು ಕಡಿಮೆಯಾಗುತ್ತದೆ. ಸರ್ಕಾರ ನಿಮ್ಮ ಗೃಹಸಾಲದ ಬಡ್ಡಿಯ ಒಂದು ಭಾಗಕ್ಕೆ ಸಬ್ಸಿಡಿ ನೀಡುವುದರಿಂದ ಇದು ಸಾಧ್ಯವಾಗುತ್ತದೆ.ಪ್ರಸಕ್ತ ವಾರ್ಷಿಕ 6 ಲಕ್ಷ ರೂ. ಗಳಿಕೆದಾರರಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿತ್ತು.ಸರ್ಕಾರ ಸ್ಥಿರಾಸ್ತಿ ಮಾರುಕಟ್ಟೆಯನ್ನು ಉತ್ತೇಜಿಸುವ ಮೂಲಕ 2022ರೊಳಗೆ ಸರ್ವರಿಗೂ ಗೃಹಸೌಲಭ್ಯ ಸಿಗುವಂತಾಗಲು ಎರಡು ಹೊಸ ಸಬ್ಸಿಡಿ ಹಂತಗಳನ್ನು ಪ್ರಕಟಿಸಿದೆ. ಈ ಸಬ್ಸಿಡಿ ಹಂತಗಳು ಪ್ರಸಕ್ತ 15 ವರ್ಷಗಳ ಕಾಲಮಿತಿಗೆ ಬದಲಾಗಿ 20 ವರ್ಷಗಳ ಕಾಲಾವಧಿಯ ಸಾಲಗಳಿಗೆ ಸಿಗುತ್ತದೆ. ಕಳೆದ ಡಿ.31, 2016ರಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಎರಡು ಸಬ್ಸಿಡಿ ಯೋಜನೆಗಳನ್ನು ಪ್ರಕಟಿಸಿತು. ಗೃಹಖರೀದಿದಾರರು ಅವರ .... ಮುಂದೆ ಓದಿ
ವಿಜಯಮಲ್ಯ ಮತ್ತು ಐಡಿಬಿಐ ಬ್ಯಾಂಕ್ ನಡುವೆ ಒಳಸಂಚು: ಇಡಿ ಆರೋಪ
ನವದೆಹಲಿ: 350 ಕೋಟಿ ರೂ. ಮೌಲ್ಯದ ಸಾಲವನ್ನು ಎರಡು ಹಂತಗಳಲ್ಲಿ ಆತುರಾತುರವಾಗಿ ಐಡಿಬಿಐ ಬ್ಯಾಂಕ್ ಕಿಂಗ್‌ಫಿಷರ್ ಏರಲೈನ್ಸ್ ಸಂಸ್ಥೆಗೆ ವಿತರಿಸಿತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಆಗಿನ ಐಡಿಬಿಐ ಬ್ಯಾಂಕ್ ಸಿಎಂಡಿ ಅವರ ನಡುವೆ ರಜಾದಿನದ ಮೀಟಿಂಗ್ ನಡೆದ ಬಳಿಕ ಕಿಂಗ್ ಫಿಷರ್ ಏರ್ ಲೈನ್ಸ್‌ನ ದುರ್ಬಲ ಹಣಕಾಸಿನ ಸ್ಥಿತಿಗತಿ ನಡುವೆಯೂ ಇಡೀ ವ್ಯವಹಾರಕ್ಕೆ ಅನುಮತಿ ನೀಡುವುದಕ್ಕೆ ಕ್ರಿಮಿನಲ್ ಒಳಸಂಚು ನಡೆಸಲಾಯಿತು ಎಂದು ಇಡಿ ಆರೋಪಿಸಿದೆ.ಐಡಿಬಿಐ ಮಂಜೂರಾತಿ ನೀಡಿ ವಿತರಿಸಿದ ಒಟ್ಟು ಸಾಲ 860.92 ಕೋಟಿ ರೂ. ಎಂದು ಹಣ ಅವ್ಯವಹಾರ ಪ್ರಕರಣದ ವಿಚಾರಣೆ ನಡೆಸಿದ ಇಡಿ ತಿಳಿಸಿದೆ. ಈಗ ಅಸ್ತಿತ್ವದಲ್ಲಿಲ್ಲದ ಏರ್‌ಲೈನ್‌ಗೆ ಸಾಲದ ವ್ಯವಸ್ಥೆ ಮತ್ತು ಮರುವ್ಯವಸ್ಥೆಗೆ .... ಮುಂದೆ ಓದಿ
ಮಲ್ಯ ಆಸ್ತಿ ವಿವರಗಳನ್ನು ಬ್ಯಾಂಕ್ ಒಕ್ಕೂಟಕ್ಕೆ ನೀಡಿದ ಸುಪ್ರೀಂಕೋರ್ಟ್
ನವದೆಹಲಿ: ಸುಪ್ರೀಂಕೋರ್ಟ್ ಮಂಗಳವಾರ ಉದ್ಯಮಿ ವಿಜಯ್ ಮಲ್ಯ, ಅವರ ಮೂವರು ಮಕ್ಕಳು ಮತ್ತು ಪರಿತ್ಯಕ್ತ ಪತ್ನಿ ಹೊಂದಿರುವ ಆಸ್ತಿಯ ವಿವರಗಳನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ನೀಡಿದೆ. ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ಮನವಿ ಮೇಲೆ  ಸುಪ್ರೀಂಕೋರ್ಟ್ ಈ ವಿವರಗಳನ್ನು ನೀಡಿದೆ. ಈ ವಿವರಗಳ ಆಧಾರದ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆ  2 ತಿಂಗಳಲ್ಲಿ ಮಾಹಿತಿ ನೀಡುವಂತೆ ಉನ್ನತ ನ್ಯಾಯಾಲಯ ಕೇಳಿದೆ.ಸುಪ್ರೀಂಕೋರ್ಟ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ಇಡುವಂತೆ,  ಭಾರತಕ್ಕೆ ಹಿಂತಿರುಗುವ ಸಂಭವನೀಯ ದಿನಾಂಕವನ್ನು ಬಹಿರಂಗ ಮಾಡುವಂತೆ ನೀಡಿದ ಆದೇಶಕ್ಕೆ ಗೌರವ ನೀಡದ ಬಗ್ಗೆ ಸುಪ್ರೀಂಕೋರ್ಟ್ ಮಲ್ಯರನ್ನು ತರಾಟೆಗೆ ತೆಗೆದುಕೊಂಡಿತು. ಜಾಮೀನುರಹಿತ ಬಂಧನದ ಆದೇಶ ಎದುರಿಸುತ್ತಿರುವ ಮಲ್ಯ ಮುಂಚಿನ 4,400 ಕೋಟಿ ರೂ. ಜತೆಗೆ ಹೆಚ್ಚುವರಿ 2468 ರೂ. ಠೇವಣಿ .... ಮುಂದೆ ಓದಿ
ಕಳೆದ ವಾರವೇ ವಿದೇಶಕ್ಕೆ ಹಾರಿದ ವಿಜಯ್ ಮಲ್ಯ
ನವದೆಹಲಿ: ಸಾವಿರಾರು ಕೋಟಿ ರೂ. ಬ್ಯಾಂಕ್ ಸಾಲದ ಸುಸ್ತಿದಾರರಾದ ವಿಜಯ್ ಮಲ್ಯ ಕಳೆದ ವಾರವೇ ವಿದೇಶಕ್ಕೆ ಹಾರಿದ್ದಾರೆಂದು ಸರ್ಕಾರ  ಸುಪ್ರೀಂಕೋರ್ಟ್‌ಗೆ ತಿಳಿಸಿದ್ದು, ವಿಜಯ್ ಮಲ್ಯರಿಂದ ಸಾಲ ವಸೂಲಾತಿ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಮದ್ಯದ ದೊರೆ ಉದ್ದೇಶಪೂರ್ವಕ ಸುಸ್ತಿದಾರರಾಗಿರುವುದರಿಂದ ದೇಶ ಬಿಟ್ಟು ಹೋಗದಂತೆ ತಡೆಯಬೇಕೆಂದು ಬ್ಯಾಂಕುಗಳು ಸುಪ್ರೀಂಕೋರ್ಟ್‌ಗೆ ಕೋರಿದ್ದವು. ವಿಜಯ್ ಮಲ್ಯ ಮಾರ್ಚ್ 2ರಂದೇ ದೇಶವನ್ನು ತ್ಯಜಿಸಿದ್ದಾರೆಂದು ಸಿಬಿಐ ಮಾಹಿತಿ ನೀಡಿರುವುದಾಗಿ ಸರ್ಕಾರದ ಉನ್ನತ ವಕೀಲ ಮುಕುಲ್ ರೋಹಟಗಿ ಕೋರ್ಟ್‌ಗೆ ತಿಳಿಸಿದರು. ದೇಶದಲ್ಲಿ ಮಲ್ಯ ಆಸ್ತಿ ಅವರು ತೆಗೆದುಕೊಂಡ ಸಾಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಟಾರ್ನಿ ಜನರಲ್ ತಿಳಿಸಿದರು.ಮಲ್ಯ ಅವರ ಪಾಸ್‌ಪೋರ್ಟ್ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದೆಂದು ಎರಡು ವಾರಗಳಲ್ಲಿ ಉತ್ತರಿಸುವಂತೆ ಕೋರ್ಟ್ ಮಲ್ಯರಿಗೆ ಸೂಚಿಸಿದೆ. ಮಲ್ಯರ ರಾಜ್ಯಸಭೆ .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery