ವಿಜ್ಞಾನ
ಮೊಟ್ಟೆಯೊಳಗೊಂದು ಮೊಟ್ಟೆ ನೋಡಿ ಅಚ್ಚರಿಪಟ್ಟೆ
ಅಡುಗೆ ಮನೆಯಲ್ಲಿ ದೈತ್ಯ ಗಾತ್ರದ ಮೊಟ್ಟೆಯನ್ನು ನೋಡಿ ಆಶ್ಚರ್ಯಗೊಂಡ ಮಹಿಳೆ ಮೊಟ್ಟೆಯನ್ನು ಒಡೆದಾಗ ಅದರೊಳಗೆ ಮತ್ತೊಂದು ಸಣ್ಣ ಗಾತ್ರದ ಮೊಟ್ಟೆ  ಇರುವುದನ್ನು ನೋಡಿ ಚಕಿತಗೊಂಡರು.  ಆ ಮೊಟ್ಟೆಯನ್ನು ಒಡೆದು ಮಹಿಳೆ ತಮಗೆ ಬೇಕಾದ ಮೊಟ್ಟೆ ತಿನಿಸು ಮಾಡಿಕೊಂಡರು. ಕೋಳಿಯ ಸಂಪಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಕೆಲವು  ವೈಪರೀತ್ಯಗಳಿಂದ ಮೊಟ್ಟೆಯೊಳಗೊಂದು ಮೊಟ್ಟೆ ಹುಟ್ಟುತ್ತದೆ.ವಿಡಿಯೋ  ಕ್ಲಿಕ್ ಮಾಡಿ .... ಮುಂದೆ ಓದಿ
ಬುಧಕ್ಕೆ ಡಿಕ್ಕಿ ಹೊಡೆದು ದೊಡ್ಡ ಕುಳಿ ನಿರ್ಮಿಸಲಿರುವ ಮೆಸೆಂಜರ್
 ಕೇಪ್ ಕೆನಾವೆರಲ್: ನಾಸಾ ಬಾಹ್ಯಾಕಾಶ ಸಂಸ್ಥೆಯ ಅಂತರಿಕ್ಷನೌಕೆ ಮೆಸೆಂಜರ್ ಈ ವಾರ ಬುಧ ಗ್ರಹಕ್ಕೆ ಘರ್ಷಿಸಲಿದ್ದು, ಸೂರ್ಯನಿಗೆ ಅತೀ ಹತ್ತಿರದ ಸಣ್ಣ ಗ್ರಹದಲ್ಲಿ ದೊಡ್ಡ ಕುಳಿಯೊಂದನ್ನು ನಿರ್ಮಿಸಲಿದೆ. ಬುಧಗ್ರಹವನ್ನು ಸುತ್ತುತ್ತಿರುವ ಮೊದಲ ನೌಕೆ ಮೆಸೆಂಜರ್ ಕಕ್ಷೆಯಿಂದ ಕೆಳಕ್ಕೆ ಜಾರಿ ಗುರುವಾರ ಬುಧನಿಗೆ ಡಿಕ್ಕಿಹೊಡೆಯಲಿದೆ. ಸುಮಾರು 4 ವರ್ಷಗಳಿಂದ ಬುಧನ ಸುತ್ತ ಸುತ್ತುತ್ತಿರುವ ನೌಕೆಯು ಗಂಟೆಗೆ 8750 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದು, 52 ಅಡಿ ಅಗಲದ ಕುಳಿಯನ್ನು ಸೃಷ್ಟಿಸುವಷ್ಟು ವೇಗದಲ್ಲಿದೆ.ಅಂತರಿಕ್ಷ ನೌಕೆಯು ಸ್ವತಃ ತನ್ನ 10 ಅಡಿ ಸೌರ ರೆಕ್ಕೆಯನ್ನು ಹೊಂದಿದ್ದು, ಈಗ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಭೂನಿಯಂತ್ರಕರು ಅದಕ್ಕೆ ಮರುಜೀವ ತುಂಬಲು ಮೆಸೆಂಜರ್ ಕಕ್ಷೆಯನ್ನು ಏರಿಸಿ ಹೀಲಿಯಂ ಅನಿಲದ ನಿಕ್ಷೇಪದಲ್ಲಿ ಮುಳುಗಿಸಿದರು.ಆದರೆ ಅವೆಲ್ಲವೂ ಈಗ ಇಲ್ಲದಿರುವುದರಿಂದ .... ಮುಂದೆ ಓದಿ
ಮಂಗಳನ ಅಂಗಳದಲ್ಲಿ ನಿವೇಶನ ಖರೀದಿಗೆ 10,000 ಅರ್ಜಿದಾರರು
ಲಂಡನ್-ನಂಬಿದರೆ ನಂಬಿ ಬಿಟ್ಟರೆ ಬಿಡಿ, ಮಂಗಳ ಗ್ರಹದಲ್ಲಿ  ಕಾಯಂ ವಸಾಹತಿಗಾಗಿ ನಿವೇಶನ ಹೊಂದಲು ಆರೋಗ್ಯದ ಅಪಾಯಗಳನ್ನು ಲೆಕ್ಕಿಸದೇ 10,000 ಅರ್ಜಿಗಳನ್ನು ಜನರು ಸಲ್ಲಿಸಿದ್ದಾರೆ. ಮಂಗಳಗ್ರಹದಲ್ಲಿ ಕಾಯಂ  ವಸಾಹತಿಗಾಗಿ ನೆದರ್ಲೆಂಡ್ ಕಂಪೆನಿಯೊಂದು ಅರ್ಜಿಗಳನ್ನು ಆಹ್ವಾನಿಸಿದಾಗ ಮಂಗಳ ಗ್ರಹದ ವಾಸ ಕಾರ್ಯಸಾಧ್ಯವೇ ಇಲ್ಲವೇ ಎನ್ನುವುದನ್ನು ಲೆಕ್ಕಿಸದೇ 10 ,000 ಅರ್ಜಿಗಳು ಬಂದಿರುವುದು ಆಶ್ಚರ್ಯ ಮೂಡಿಸಿದೆ. ನೆದರ್ಲೆಂಡ್‌ನ ಕಂಪೆನಿ ಮಂಗಳ ಗ್ರಹದಲ್ಲಿ ಮಾನವ ವಸಾಹತು ನಿರ್ಮಾಣ ಮಾಡುವುದಕ್ಕಾಗಿ ನಾಲ್ಕು ಗಗನಯಾನಿಗಳ ಯಾತ್ರೆಯನ್ನು ಕಳಿಸಿಲಿದೆ.ಈ ಯೋಜನೆ ಕುರಿತು ಮಾರ್ಸ್ ಒನ್ ಕಂಪೆನಿ ಆಶಾವಾದಿಯಾಗಿದ್ದರೂ, ಗಂಭೀರ ಲೋಪದೋಷಗಳಿಂದ ಕೂಡಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.  ಮೊದಲಿಗೆ ಮಂಗಳ ಗ್ರಹ ವಾಸಿಗಳ ದೇಹಗಳು ಭೂಮಿಯ ಗುರುತ್ವದ ಶೇ. 38ರಷ್ಟು ಮೇಲ್ಮೈ ಗುರುತ್ವಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. .... ಮುಂದೆ ಓದಿ
ಧೂಮಕೇತುಗಳ ಅಪ್ಪಳಿಸುವಿಕೆಯಿಂದ ಭೂಮಿಯಲ್ಲಿ ಸಾಗರ?
ಪ್ಯಾರಿಸ್-ಭೂಮಿಯ ಬಹುತೇಕ ಸಾಗರಗಳು ಧೂಮಕೇತುಗಳಿಂದ ಉಂಟಾಗಿರಬಹುದು ಎಂದು ಜರ್ನಲ್ ನೇಚರ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯೊಂದು ತಿಳಿಸಿದೆ. ಬಿಲಿಯಾಂತರ ವರ್ಷಗಳ ಹಿಂದೆ ಈ ಧೂಮಕೇತುಗಳು ಶೈಶವಾವಸ್ಥೆಯಲ್ಲಿದ್ದ ಭೂಮಿಗೆ ಅಪ್ಪಳಿಸಿ, ನೀರ್ಗಲ್ಲಿನ ಗುಡ್ಡೆಯನ್ನು ರಾಶಿ ಹಾಕಿದವು ಎಂದು ಅದರಲ್ಲಿ ತಿಳಿಸಲಾಗಿದೆ. ನೀರಿನಲ್ಲಿ ಅತ್ಯಧಿಕ ಜಲಜನಕದ ಅನುಪಾತ ಇರುವುದು ಅದಕ್ಕೆ ಸಾಕ್ಷ್ಯವೊದಗಿಸಿದೆ. ಯುರೋಪ್‌ನ ಹರ್ಸ್‌ಚಲ್ ಬಾಹ್ಯಾಕಾಶ ದೂರದರ್ಶಕದಲ್ಲಿ ಅವರೋಹಿತ ಉಪಕರಣವು 103ಪಿ/ಹಾರ್ಟ್ಲಿ 2 ಎಂಬ ಧೂಮಕೇತುವಿನಲ್ಲಿರುವ ಹಿಮದ ವಿಶ್ಲೇಷಣೆ ನಡೆಸಿದಾಗ, ಭೂಮಿಯ ನೀರಿನಲ್ಲಿರುವಷ್ಟು ಸಮಾನ ಡ್ಯುಟೀರಿಯಂ ಅನುಪಾತವನ್ನು ಅದರಲ್ಲಿ ಹೊಂದಿರುವುದು ಪತ್ತೆಯಾಗಿದೆ. ಡರ್ಟಿ ಸ್ನೋಬಾಲ್ಸ್ ಎಂದು ಕರೆಯುವ ಧೂಮಕೇತುಗಳು ಹಿಮ ಮತ್ತು ಧೂಳಿನ ಮಿಶ್ರಣವಾಗಿರುವ ಹಿನ್ನೆಲೆಯಲ್ಲಿ ಭೂಮಿಯಲ್ಲಿ ನೀರಿನ ದೊಡ್ಡ ಮೂಲಕ್ಕೆ ಕ್ಷುದ್ರಗ್ರಹಗಳತ್ತ ಬೆಟ್ಟು ಮಾಡಲಾಗಿತ್ತು.ಪ್ರಸಕ್ತ ಸಿದ್ಧಾಂತಗಳಿಂದ ಭೂಮಿಯಲ್ಲಿ ಶೇಕಡ 10ಕ್ಕಿಂತ ಕಡಿಮೆ .... ಮುಂದೆ ಓದಿ
1
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery