ವಿಕ್ರಮಾದಿತ್ಯ-ಬೇತಾಳ
ರಸಂ ರುಚಿ ಕೆಟ್ಟಿದೆಯೆಂದು ಪಲಾಯನ ಮಾಡಿದ ವರ
ಎಲೈ ವಿಕ್ರಮಾದಿತ್ಯ, ಮತ್ತೆ ಮತ್ತೆ ನಿನ್ನ ಪ್ರಯತ್ನವನ್ನು ಕಂಡು ನಾನು ಮೆಚ್ಚಿದ್ದೇನೆ. ಆದರೂ ಒಂದು ಕಥೆ ಹೇಳುತ್ತೇನೆ, ಸಾವಧಾನದಿಂದ ಕೇಳುವಂತವನಾಗು, ರಸಂನ ರುಚಿ ಕೆಟ್ಟಿದೆ ಎಂಬ ಒಂದೇ ಕಾರಣಕ್ಕೆ ವರನೊಬ್ಬ ವಧುವಿಗೆ ತಾಳಿ ಕಟ್ಟಲು ವರ ನಿರಾಕರಿಸಿದ.  ಶನಿವಾರ ರಾತ್ರಿ ಆರತಕ್ಷತೆಯೂ ನಡೆದಿತ್ತು. ವರನ ಮಲತಾಯಿ ರಸಂ ರುಚಿ ಚೆನ್ನಾಗಿಲ್ಲವೆಂದು ಆಕ್ಷೇಪವೆತ್ತಿದರು. ವರ ಕೂಡ ಅದಕ್ಕೆ ಗೋಣು ಅಲ್ಲಾಡಿಸಿದರು. ರಾತ್ರಿ ಇಡೀ ಮಾತಿನ ಚಕಮಕಿ ನಡೆದು ವರಮಹಾಶಯ ತನ್ನ ಕುಟುಂಬದೊಂದಿಗೆ ಕಲ್ಯಾಣ ಮಂಟಪದಿಂದ ಹೊರ ನಡೆದೇಬಿಟ್ಟಿದ್ದ. ಕೊನೆಗೆ ವಧುವಿನ ಕಡೆಯವರೊಬ್ಬರ ದಯೆತೋರಿ ವಧುವಿಗೆ ತಾಳಿಕಟ್ಟಿದರು. ಎಲೈ  ವಿಕ್ರಮಾದಿತ್ಯ, ವರನು ತನ್ನ ವಧುವನ್ನು ಮೊದಲೇ ನೋಡಿ ಒಪ್ಪಿಕೊಂಡಿದ್ದ, ವಧುವನ್ನು ನೋಡಿದ ಮೇಲೆ ಮದುವೆ ನಿಶ್ಚಯವೂ ಆಯಿತು. ಆದರೂ .... ಮುಂದೆ ಓದಿ
ಭಾರತ ದೇಶ ಸಾಧಿಸಿದ್ದೇನು?
ಎಲೈ ವಿಕ್ರಮಾದಿತ್ಯ, ಭಾರತ ದೇಶ ಸ್ವಾತಂತ್ರ್ಯ ಪಡೆದಿದ್ದು 1947ರಂದು.  ಬರುವ ವರ್ಷ 2017ಕ್ಕೆ 70 ವರ್ಷಗಳನ್ನು ಪೂರೈಸುತ್ತದೆ. ಇಷ್ಟು ವರ್ಷಗಳಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಸಾಧಿಸಿದ್ದೇನು? ಚೀನಾ, ಜಪಾನ್ ಮುಂತಾದ ಏಷ್ಯಾ ಖಂಡದ ರಾಷ್ಟ್ರಗಳು ಆರ್ಥಿಕ ಮುನ್ನಡೆ ಸಾಧಿಸಿ ದಾಪುಗಾಲಿಡುತ್ತಿದ್ದರೆ ನಮ್ಮ ದೇಶ ಆಮೆಯ ನಡಿಗೆಯಂತೆ ನಿಧಾನಗತಿಯಾಲ್ಲಿ ಚಲಿಸುತ್ತಿರುವುದೇಕೆ? ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಗಳ ಬಡವರ ಸಂಖ್ಯೆ ಹೆಚ್ಚಾಗಿರುವುದೇಕೆ. ನಮ್ಮ ದೇಶ ಯಾವ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ.  ಭಾರತ ಮತ್ತು ಪಾಕಿಸ್ತಾನ ಸಂಬಂಧ 10 ವರ್ಷಗಳಲ್ಲಿ ಏನಾಗಬಹುದು? ಇವೆಲ್ಲಾ ಪ್ರಶ್ನೆಗಳಿಗೆ ನೀನು ಉತ್ತರಿಸದಿದ್ದರೆ ನಿನ್ನ ತಲೆ ಐಎಸ್ ಸಿಡಿಸುತ್ತಿರುವ ‌ಬಾಂಬ್‌ಗೆ ಹೋಳಾದಂತೆ 100 ಹೋಳಾಗುತ್ತದೆ ಎಚ್ಚರ.ಎಲೈ ಬೇತಾಳ, ನೀನು ನನ್ನನ್ನು ಆರ್ಥಿಕತಜ್ಞನೆಂದು ಭಾವಿಸಿ .... ಮುಂದೆ ಓದಿ
ಹಿಂಬದಿ ಸವಾರರು ಹೆಲ್ಮೆಟ್ ಖರೀದಿಸಬೇಕಾ?(ವಿಕ್ರಮಾದಿತ್ಯ-ಬೇತಾಳ)
ಎಲ್ಲೈ ವಿಕ್ರಮಾದಿತ್ಯ ರಾಜ್ಯ ಸರ್ಕಾರದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುವ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸಬೇಕೆಂದು ಕಡ್ಡಾಯ ಮಾಡಿರುವುದು ಸರಿಯಲ್ಲವೇ, ಹೌದು ಬೇತಾಳ ಅದಕ್ಕೆ ಹೆಲ್ಮೆಟ್ ಎಂದು ನಮ್ಮಲ್ಲಿ ಕರೆಯುತ್ತಾರೆ. ಸರಿ ಹೆಲ್ಮೆಟ್ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲು ನಾನು ಉತ್ಸುಕನಾಗಿದ್ದೇನೆ ವಿಕ್ರಮ,  ರಾಜ್ಯಸರ್ಕಾರ ಮುಂಬದಿ ಸವಾರರಿಗೆ ಮಾತ್ರವಲ್ಲದೇ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದೆ. ಈ ನಿಯಮ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬ ಸಂದೇಹಗಳು ನನ್ನ ತಲೆಯನ್ನು ಕೊರೆಯುತ್ತಿವೆ ಈ ಪ್ರಶ್ನೆಗಳಿಗೆ ಉತ್ತರಿಸುವಂತವನಾಗು, ಹಿಂಬದಿ ಸವಾರರಿಗೆ ಹೆಚ್ಚುವರಿ ಹೆಲ್ಮೆಟ್ ಯಾರು ಖರೀದಿಸಬೇಕು? ಹಿಂಬದಿ ಸವಾರರೇ ಖರೀದಿಸಬೇಕೋ ಅಥವಾ ದ್ವಿಚಕ್ರವಾಹನ ಸವಾರರು ಅವರಿಗಾಗಿ ಖರೀದಿಸಬೇಕಾ? ಹಿಂಬದಿ ಸವಾರರು ಸ್ವಂತ ವಾಹನ ಇಲ್ಲದಿದ್ದರೂ ಹೆಲ್ಮೆಟ್ ಖರೀದಿಸುತ್ತಾರೇನು?  ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ .... ಮುಂದೆ ಓದಿ
ಹೊಡೆಸಿಕೊಂಡವರು ಸುಮ್ಮನಿದ್ದ ಮೇಲೆ ನಮಗೇನು ಕೆಲಸ?
ಬಳ್ಳಾರಿಯಲ್ಲಿ ವಾಲ್ಮೀಕಿ ಭವನ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಸಿಎಂ ಅವರನ್ನು ಸ್ವಾಗತಿಸಲು ವಿಪರೀತ ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಅಷ್ಟರಲ್ಲಿ ಸಿಎಂ ಅವರನ್ನು ಸ್ವಾಗತಿಸಲು ಬಳ್ಳಾರಿ ಪಾಲಿಕೆ ಆಯುಕ್ತ ರಮೇಶ್ ಮುಂದಾಗಿ ಆಕಸ್ಮಿಕವಾಗಿ ಸಿಎಂ ಮೇಲೆ ಬಿದ್ದಿದ್ದರಿಂದ ಸಿಎಂ ಸಿಟ್ಟಾಗಿ  ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೊ ದೃಶ್ಯದಲ್ಲಿ ಸೆರೆಯಾಗಿದೆ.  ಆದರೆ ರಮೇಶ್ ಕೊನೆಗೆ  ಸಿಎಂ ನನಗ್ಯಾಕೆ ಕಪಾಳಮೋಕ್ಷ ಮಾಡ್ತಾರೆ. ಅವರೇನು ಮಾಡಿಲ್ಲವೆಂದು ಹೇಳಿದರು. ಸಿಎಂ ಕೂಡ ತಾವು ಯಾರಿಗೂ ಕಪಾಳ ಮೋಕ್ಷ ಮಾಡಿಲ್ಲವೆಂದು ವಾದಿಸಿದರು. ತಮಗೆ ಅಧಿಕಾರಿಗೆ ಹೊಡೆಯಬಾರದೆಂಬ ಪರಿಜ್ಞಾನವೂ ಇಲ್ಲವೇ ಎಂದು ಸಿಎಂ ಪ್ರಶ್ನಿಸಿದರು. ಹಾಗಾದರೇ ವಿಡಿಯೊದಲ್ಲಿ ಸಿಎಂ ಕೈಬೀಸಿದ್ದು ಯಾರಿಗೆ, ಸಿಎಂ ಹೊಡೆದಿದ್ದರೂ ಹೊಡೆದಿಲ್ಲವೆಂದು ರಮೇಶ್ ಹೇಳುವುದಕ್ಕೆ ಕಾರಣವೇನು, ರಮೇಶ್‌ರತ್ತ ಕೈಬೀಸಿದ್ದರೂ ಕಪಾಳಮೋಕ್ಷ .... ಮುಂದೆ ಓದಿ
1
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery