ರಾಷ್ಟ್ರಸುದ್ದಿ
ಬಂಗಾಳಕೊಲ್ಲಿಯಲ್ಲಿ ದೋಣಿ ಮುಳುಗಿ 8 ಪ್ರವಾಸಿಗಳು ನೀರುಪಾಲು
ತೂತ್ತುಕುಡಿ: ಬಂಗಾಳಕೊಲ್ಲಿಯಲ್ಲಿ ಮನ್ನಪಾಡು ಬಳಿ ಮೀನುಗಾರಿಕೆ ದೋಣಿಯೊಂದು ಮಗುಚಿಕೊಂಡು 8 ಪ್ರವಾಸಿಗಳು ನೀರುಪಾಲಾಗಿದ್ದಾರೆ ಮತ್ತು ಇನ್ನೂ 17 ಜನರನ್ನು ರಕ್ಷಿಸಲಾಗಿದೆ. ರಕ್ಷಿಸಿದವರನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಒಯ್ಯಲಾಗುತ್ತಿತ್ತೇ ಎಂಬ ಪ್ರಶ್ನೆಗೆ ವಿಸ್ತ್ರತ ತನಿಖೆಯು ಇದರ ಮೇಲೆ ಬೆಳಕು ಚೆಲ್ಲುತ್ತದೆ ಎಂದು ತಿಳಿಸಿದರು. .... ಮುಂದೆ ಓದಿ
ಜಯಾ ಅವರ ಆರ್.ಕೆ. ನಗರ ಕ್ಷೇತ್ರದಲ್ಲಿ ಅಣ್ಣನ ಮಗಳು ದೀಪಾ ಕಣಕ್ಕೆ
 ಚೆನ್ನೈ: ಕಳೆದ ಡಿಸೆಂಬರ್‌ನಲ್ಲಿ  ನಿಧನರಾದ ಎಐಎಡಿಎಂಕೆಯ ನಾಯಕಿ ಜಯಲಲಿತಾ ಅವರ ಆರ್.ಕೆ. ನಗರದ ತೆರವಾದ ಸ್ಥಾನದಲ್ಲಿ ಅವರ ಅಣ್ಣನ ಮಗಳು ದೀಪಾ ಜಯಕುಮಾರ್ ಸ್ಪರ್ಧಿಸಲಿದ್ದಾರೆ. ದೀಪಾ ಎಂಜಿಆರ್ ಅಮ್ಮಾ ದೀಪಾ ಒಕ್ಕೂಟ ಎಂಬ ವೇದಿಕೆಯನ್ನು ಕೂಡ ನಿರ್ಮಿಸಿಕೊಂಡಿದ್ದು, ಇದು ರಾಜಕೀಯ ಪಕ್ಷವಲ್ಲ ಎಂದಿದ್ದಾರೆ. ತನ್ನ ಅತ್ತೆಯ 69ನೇ ಜನ್ಮದಿನದಂದು ಆಡಳಿತ ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ.ಜಯಲಲಿತಾ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುವುದು ನಮ್ಮ ಗುರಿಯಾಗಿದೆ. ಎಐಎಡಿಎಂಕೆ ಕೇಡರ್ ನಾನು ನಾಯಕತ್ವದ ಪಾತ್ರ ವಹಿಸುವುದನ್ನು ಬಯಸಿದೆ ಎಂದು ಚೆನ್ನೈನ ಟಿನಗರದಲ್ಲಿರುವ ತಮ್ಮ ನಿವಾಸದಲ್ಲಿ ತಿಳಿಸಿದರು. ಜಯಲಲಿತಾ ಸೋದರ ಜಯಕುಮಾರ್ ಪುತ್ರಿಯಾದ ದೀಪಾ ತಾನು ಜಯಾ ಕುಟುಂಬಕ್ಕೆ ಸೇರಿದವರಾದ್ದರಿಂದ ಅವರ ಆಸ್ತಿಯ ಮೇಲೆ ಸಂಪೂರ್ಣ .... ಮುಂದೆ ಓದಿ
ಅನೈತಿಕ ಸಂಬಂಧ ಶಂಕೆ: ಪತ್ನಿಯ ತಲೆ ಕಡಿದ ಪತಿ
ಪರಪುರುಷನೊಂದಿಗೆ ಪತ್ನಿಯ ಅನೈತಿಕ ಸಂಬಂಧದಿಂದ ಕೋಪೋದ್ರಿಕ್ತನಾದ ಜಾರ್ಖಂಡ್ ವ್ಯಕ್ತಿಯೊಬ್ಬ, ಪತ್ನಿಯ ತಲೆಯನ್ನು ಕಡಿದಿದ್ದಲ್ಲದೇ ಕಡಿದ ತಲೆಯನ್ನು ಚೀಲವೊಂದರಲ್ಲಿ ಹಾಕಿ ಅದನ್ನು ಕೋರ್ಟಿಗೆ ತೆಗೆದುಕೊಂಡು ಹೋದ. ಬಂದ್‌ಮುತು ಗ್ರಾಮದ ನಿವಾಸಿ 38 ವರ್ಷಯ ಬುಬಾನ್ ಮಾರ್ಡಿ ತನ್ನ ಪತ್ನಿ ಪರಪುರುಷನೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡ ಬಗ್ಗೆ ಜಗಳವಾಡಿ ಕೋಪದಿಂದ ಮೊನಚಾದ ಆಯುಧದಿಂದ ಪತ್ನಿಯ ತಲೆಯನ್ನು ಕಡಿದ.ಅವನು ಕೋರ್ಟ್‌ಗೆ ಶರಣಾಗಲು ತೆರಳುತ್ತಿದ್ದಾಗ ನಮಗೆ ಹತ್ಯೆಯನ್ನು ಕುರಿತು ಮಾಹಿತಿ ಸಿಕ್ಕಿತು. ಮಹಿಳೆಯ ರುಂಡ ಕಡಿದ ಶವ ಅವಳ ಮನೆಯ ಬತ್ತದಗದ್ದೆಯಲ್ಲಿ ಸಿಕ್ಕಿತು. ಆರೋಪಿ ಹೆದ್ದಾರಿಯಲ್ಲಿ ಬರುವಾಗ ಬಂಧಿಸಲಾಯಿತು ಎಂದು ಸಂಜೀವ್ ಬೆಸ್ರಾ ತಿಳಿಸಿದರು. .... ಮುಂದೆ ಓದಿ
ಎಸ್‌ಬಿಐ ಎಟಿಎಂನಿಂದ ಹೊರಬಿತ್ತು ಚಿಲ್ಡ್ರನ್ ಬ್ಯಾಂಕ್‌ನ ನಕಲಿ ನೋಟುಗಳು
ನವದೆಹಲಿ: ಸಂಗಮ್ ವಿಹಾರ್‌ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಹಣ ಡ್ರಾ ಮಾಡಲು ತೆರಳಿದ್ದ ಕಾಲ್ ಸೆಂಟರ್ ಎಕ್ಸಿಕ್ಯೂಟವ್, ಎಟಿಎಂ ಯಂತ್ರದಿಂದ 500 ಮತ್ತು 2000 ರೂ. ನೋಟುಗಳು ಹೊರಬಂದಾಗ ಆಘಾತಕ್ಕೊಳಗಾದರು. ಆ ನೋಟುಗಳ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇಂಗ್ಲಿಷಿನಲ್ಲಿ ಮತ್ತು ಭಾರತೀಯ ಮನೋರಂಜನ್ ಬ್ಯಾಂಕ್ ಎಂದು ಹಿಂದಿಯಲ್ಲಿ  ಮುದ್ರಿಸಲಾಗಿತ್ತು. ಈ ಕುರಿತು ಪೊಲೀಸರಿಗ ಸುದ್ದಿ ಮುಟ್ಟಿಸಿದಾಗ ಸಂಗಮ್ ವಿಹಾರ ಪೊಲೀಸ್ ಠಾಣೆಯ ಪೇದೆ ಎಟಿಎಂನಿಂದ ಹಣ ತೆಗೆದಾಗ ಅವರಿಗೂ ಕೂಡ ನಕಲಿ ನೋಟುಗಳು ಸಿಕ್ಕಿದ್ದವು. ಅದಾದ ಬಳಿಕವೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಯಿತು.ಕಳೆದ ಫೆ. 6ರಂದು 8000 ರೂ. ಡ್ರಾ ಮಾಡಲು ಎಟಿಎಂಗೆ ತೆರಳಿ ಡ್ರಾ ಮಾಡಿದ ಹಣವನ್ನು .... ಮುಂದೆ ಓದಿ
ಜಮ್ಮುಕಾಶ್ಮೀರದಲ್ಲಿ ದುಂದುವೆಚ್ಚದ ಮದುವೆಗೆ ಕಡಿವಾಣದ ಅಧಿಸೂಚನೆ
ಶ್ರೀನಗರ: ಮದುವೆಯಲ್ಲಿ ದುಂದುವೆಚ್ಚ ಮಾಡುವುದಕ್ಕೆ ಕಡಿವಾಣ ಹಾಕಬೇಕೆಂಬ ಪ್ರಸ್ತಾವನೆ ಎಲ್ಲಾ ರಾಜ್ಯಗಳಲ್ಲಿ ಪ್ರಸ್ತಾಪದ ಹಂತದಲ್ಲೇ ಇರುವ ಸಂದರ್ಭದಲ್ಲಿ ಜಮ್ಮುಕಾಶ್ಮೀರ ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕುವ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಮಗನ ಮದುವೆಯಾದರೆ 500 ಜನರಿಗೆ ಮತ್ತು ಮಗಳ ಮದುವೆಯಾದರೆ 400 ಜನರಿಗೆ ಮಾತ್ರ ಆಹ್ವಾನ ಪತ್ರಿಕೆ ನೀಡಬಹುದು ಅಥವಾ ಕರೆಕಳುಹಿಸಬಹುದು. ನಿಶ್ಚಿತಾರ್ಥದಂತ ಸಮಾರಂಭಗಳಿಗೆ ಕೇವಲ 100 ಜನರಿಗೆ ಮಾತ್ರ ಆಹ್ವಾನ ನೀಡಲು ಜಮ್ಮುಕಾಶ್ಮೀರದಲ್ಲಿ ಅವಕಾಶ ಕಲ್ಪಿಸಲಾಗಿದೆ.ಆಮಂತ್ರಣ ಪತ್ರಿಕೆಗಳನ್ನು ನೀಡುವಾಗ ಏಪ್ರಿಲ್ ಒಂದರಿಂದ ಒಣಹಣ್ಣುಗಳನ್ನು ನೀಡುವುದಕ್ಕೆ ಕೂಡ ನಿಷೇಧ ವಿಧಿಸಲಾಗಿದೆ. ಇತ್ತೀಚೆಗೆ ಲೋಕಸಭೆಯಲ್ಲೂ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ಇಂಥದ್ದೇ ಮಸೂದೆಯೊಂದನ್ನು ಮಂಡಿಸಿ 5 ಲಕ್ಷ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡುವವರು ಆ .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery