ರಾಷ್ಟ್ರಸುದ್ದಿ
ಚುನಾವಣೆಯಲ್ಲಿ ಲಂಚದ ಹೇಳಿಕೆ ಸಮರ್ಥಿಸಿಕೊಂಡ ಕೇಜ್ರಿವಾಲ್
 ಪಣಜಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ವಿವಾದಾತ್ಮಕ ಲಂಚದ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ಚುನಾವಣೆ ಆಯೋಗ ತಮಗೆ ಛೀಮಾರಿ ಹಾಕುವ ಬದಲಿಗೆ ಬ್ರಾಂಡ್ ರಾಯಭಾರಿಯಾಗಿ ನೇಮಿಸಬೇಕಿತ್ತು ಎಂದಿದ್ದಾರೆ. ಚುನಾವಣೆಯಲ್ಲಿ ಹಣದ ಪ್ರಭಾವ ಮತ್ತು ಲಂಚವನ್ನು ನಿಗ್ರಹಿಸಲು ಚುನಾವಣೆ ಆಯೋಗಕ್ಕೆ ಸಾಧ್ಯವಾಗಲಿಲ್ಲ. ಹಣವನ್ನು ನೀಡುವ ಪಕ್ಷಗಳಿಂದ ಮತದಾರರು ಹಣ ಸ್ವೀಕರಿಸುತ್ತಾರಾದರೂ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಕೇಜ್ರಿವಾಲ್ ಸಿಎನ್ಎನ್ ನ್ಯೂಸ್‌ಗೆ ಹೇಳಿದರು.ಎಲ್ಲಾ ಪಕ್ಷಗಳಿಂದ ಹಣ ಸ್ವೀಕರಿಸಿ , ಆದರೆ ಆಮ್ ಆದ್ಮಿ ಪಕ್ಷಕ್ಕೆ ಮತಹಾಕಿ ಎಂದು ಹೇಳಿಕೆ ನೀಡಿದ ಕೇಂಜ್ರಿವಾಲ್ ಅವರಿಗೆ ಚುನಾವಣೆ ಆಯೋಗ ಛೀಮಾರಿ ಹಾಕಿದ ಬಳಿಕ ಅವರ ಹೇಳಿಕೆ ಹೊರಬಿದ್ದಿದೆ. ಮಾದರಿ ನೀತಿ ಸಂಹಿತೆಯನ್ನು ಅವರು ಉಲ್ಲಂಘಿಸಿದರೆ, ಅವರು ಮತ್ತು ಪಕ್ಷದ ವಿರುದ್ಧ .... ಮುಂದೆ ಓದಿ
ಕಾಂಗ್ರೆಸ್ ಮತ್ತು ಅಖಿಲೇಶ್ ಸಮಾಜವಾದಿ ಬಣದ ಮೈತ್ರಿ ಯಶಸ್ವಿ
ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಅಖಿಲೇಶ್ ಬಣದ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಯಶಸ್ವಿಯಾಗಿದೆ. ಉತ್ತರಪ್ರದೇಶದ 298 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿದರೆ, 105 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಸಾಧಿಸಿದೆ. ಕಾಂಗ್ರೆಸ್ ಮೊದಲಿಗೆ 120 ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿತ್ತು. ಕೊನೆಗೆ ಸಮಾಜವಾದಿ ಒತ್ತಡಕ್ಕೆ ಮಣಿದು ಸೀಟು ಹಂಚಿಕೆ ಮಾತುಕತೆ ಸುಸೂತ್ರವಾಗಿ ಬಗೆಹರಿದಿದೆ.ಈ ನಡುವೆ  ಅಖಿಲೇಶ್ ಮತ್ತು ಮುಲಾಯಂ ಸಿಂಗ್ ಅವರ ನಡುವೆ ಮೈತ್ರಿ ಬೆಸೆಯುವ ಪ್ರಯತ್ನ ನಡೆಯುತ್ತಿದ್ದು, ಸಮಾಜವಾದಿ ಪಕ್ಷ ಉತ್ತರಪ್ರದೇಶದ ಚುನಾವಣೆ ಸಮೀಪಿಸುತ್ತಿರುವ ಗಳಿಗೆಯಲ್ಲಿ ಎರಡು ಬಣಗಳಾಗಿ ಒಡೆದುಹೋಗದಂತೆ ರಕ್ಷಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕೆಳಗಿನ ಕೆಲವು ರಾಜಿಗಳೊಂದಿಗೆ ಶಾಂತಿ ಒಪ್ಪಂದದ ಚರ್ಚೆ ನಡೆಸಲಾಗುತ್ತಿದೆ.ಕಾಂಗ್ರೆಸ್ ಪಕ್ಷದ ಜತೆ ಅಖಿಲೇಶ್ ಮೈತ್ರಿ .... ಮುಂದೆ ಓದಿ
ದೋಣಿ ದುರಂತ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಪಾಟ್ನಾ: 24 ಜನರನ್ನು ಬಲಿತೆಗೆದುಕೊಂಡು ಅನೇಕ ಮಂದಿ ನಾಪತ್ತೆಯಾಗಿರುವ ಪಾಟ್ನಾ ದೋಣಿ ದುರಂತದ ರಕ್ಷಣಾ ಕಾರ್ಯಾಚರಣೆಯನ್ನು ಭಾನುವಾರ ಪುನಾಂಭಿಸಲಾಗಿದೆ. ಸೋನ್ ಪುರ ಪೊಲೀಸ್ ಠಾಣೆಯಲ್ಲಿ ದೋಣಿಯ ಮಾಲೀಕನ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಕಳಪೆ ಹವಾಮಾನದಿಂದ ಕಳೆದ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಡಿಐಜಿ ಶಲೀನ್ ತಿಳಿಸಿದ್ದಾರೆ. .... ಮುಂದೆ ಓದಿ
ಅಮೆಜಾನ್‌ನಿಂದ ಗಾಂಧಿ ಚಿತ್ರದ ಚಪ್ಪಲಿ ಮಾರಾಟ
ನವದೆಹಲಿ: ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಭಾರತದ ತ್ರಿವರ್ಣ ಧ್ವಜ ಚಿತ್ರವಿದ್ದ ಡೋರ್ ಮ್ಯಾಟ್ ಮಾರಾಟಕ್ಕಿಟ್ಟು ವಿವಾದದ ಕಿಡಿ ಹೊತ್ತಿಸಿದ ಬೆನ್ನ ಹಿಂದೆಯೇ ಮಹಾತ್ಮ ಗಾಂಧಿ ಮುಖವಿರುವ ಚಪ್ಪಲಿಗಳನ್ನು ಮಾರಾಟಕ್ಕಿಟ್ಟಿದೆ. ಕೆಲವು ಟ್ವಿಟರ್ ಬಳಕೆದಾರರು ಈ ವಿಷಯದ ಬಗ್ಗೆ ಪ್ರಧಾನಿ ಮೋದಿ, ಸುಷ್ಮಾಸ್ವರಾಜ್ ಅವರ ಗಮನಸೆಳೆದಿದ್ದಾರೆ. ಈ ಚಪ್ಪಲಿಗೆ 16.99 ಡಾಲರ್ ಅಥವಾ 1200 ದರವನ್ನು ನಿಗದಿಮಾಡಲಾಗಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಲಿಪ್ಪರ್ ವಿಷಯದ ಬಗ್ಗೆ ನೇರವಾಗಿ ಕಾಮೆಂಟ್ ಮಾಡಿರದಿದ್ದರೂ, ಅಮೆಜಾನ್ ಭಾರತೀಯರ ಭಾವನೆಗಳಿಗೆ ಗೌರವ ಕೊಡಬೇಕು ಎಂಬ ಹೇಳಿಕೆ ನೀಡಿದೆ.ಭಾರತದ ದ್ವಜದ ಚಿತ್ರವಿರುವ ಡೋರ್ ಮ್ಯಾಟ್ ಕೆನಡಾದ ವೇದಿಕೆಯಿಂದ ವಾಪಸ್ ತೆಗೆದುಕೊಳ್ಳದಿದ್ದರೆ, ಅಮೆಜಾನ್ .... ಮುಂದೆ ಓದಿ
ನಾವು ಶೀಘ್ರದಲ್ಲೇ 20, 50 ರೂ. ನೋಟು ವಿತರಿಸುತ್ತೇವೆ: ಭಟ್ಟಾಚಾರ್ಯ
 ಮುಂಬೈ: ಬ್ಯಾಂಕುಗಳಲ್ಲಿ ಮತ್ತು ಎಟಿಎಂಗಳಲ್ಲಿ ಸತತ ನಗದು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕ್ ಶೀಘ್ರದಲ್ಲೇ 50 ಮತ್ತು 20 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ನೆರವಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ. ದಕ್ಷಿಣ ರಾಜ್ಯಗಳಲ್ಲಿ ತಮ್ಮ ಎಲ್ಲಾ ಶಾಖೆಗಳಲ್ಲಿ ಕೆಲಸದ ಹೊರೆ ಶೇ. 50ಕ್ಕೆ ಕುಸಿದಿದ್ದು, ಇದರಿಂದ ಜನರು ಅಗತ್ಯಬಿದ್ದಾಗಲೆಲ್ಲಾ ಹಣ ಪಡೆಯುವ ಭರವಸೆ ಸಿಗುವ ಖಚಿತ ಲಕ್ಷಣವಾಗಿದೆ.ಆದರೆ ಎಟಿಎಂಗಳಲ್ಲಿ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ನಗದು ಖಾಲಿಯಾಗುತ್ತಿದ್ದು, ಜನಸಮೂಹಕ್ಕೆ ಉಂಟಾಗುತ್ತಿರುವ ಅನಾನುಕೂಲ ಕುರಿತು ಹೇಳಿದ ಅವರು, 100 ರೂ. ನೋಟುಗಳಿಗೆ ನಿರ್ದಿಷ್ಟ ಜಾಗ ಮಾತ್ರವಿರುವುದರಿಂದ ಎಟಿಎಂಗಳಲ್ಲಿ ನಗದು ಬೇಗ ಖಾಲಿಯಾಗುತ್ತಿವೆ. ಇದಲ್ಲದೇ ಹೊಸ ನೋಟುಗಳ ಅಳತೆ ಕೂಡ ಬದಲಾಗಿದೆ ಎಂದು .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery