ರಾಷ್ಟ್ರಸುದ್ದಿ
ಬಾತ್‌ರೂಂಗಳಲ್ಲಿ ಹಣಕಿನೋಡುವುದು ಮೋದಿಗೆ ಇಷ್ಟ: ರಾಹುಲ್
ನವದೆಹಲಿ:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕೆಲಸದಲ್ಲಿ ಸಂಪೂರ್ಣ ವಿಫಲತೆ ಹೊಂದಿದ್ದರೂ ಇತರರ ಶೌಚಾಲಯಗಳಲ್ಲಿ ಹಣಕಿ ನೋಡುವುದನ್ನು ಬಿಟ್ಟಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಛೇಡಿಸಿದ್ದಾರೆ. ಪ್ರಧಾನಮಂತ್ರಿಗೆ ಗೂಗಲ್ ಶೋಧನೆ ಮತ್ತು ಇತರರ ಬಾತ್‌‍ರೂಂಗಳಲ್ಲಿ ಹಣಕಿನೋಡುವುದೆಂದರೆ ಇಷ್ಟ. ಅವರು ತಮ್ಮ ಬಿಡುವಿನ ಅವಧಿಯಲ್ಲಿ ಆ ಕೆಲಸ ಮಾಡಿಕೊಳ್ಳಲಿ, ಆದರೆ ಪ್ರಧಾನಮಂತ್ರಿಗಳ ಕರ್ತವ್ಯ ಅವರ ಮುಖ್ಯ ಕೆಲಸವಾಗಿದ್ದು, ಅದರಲ್ಲಿ ಶೇ. ನೂರು ಪ್ರತಿಶತ ವೈಫಲ್ಯ ಹೊಂದಿದ್ದಾರೆ ಎಂದು ಗಾಂಧಿ ಹೇಳಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮೋದಿ ಚುನಾವಣೆಗೆ ಸಿದ್ಧವಾದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಅತ್ಯಂತ ಹಾಸ್ಯಕ್ಕೊಳಗಾದ ರಾಜಕಾರಣಿ ಎಂದು ರಾಹುಲ್‌ಗೆ ವ್ಯಂಗ್ಯವಾಡಿದ್ದರು. ಮುಂಚಿನ ಪ್ರಧಾನಿ .... ಮುಂದೆ ಓದಿ
ಶಶಿಕಲಾಗೆ ಮದ್ರಾಸ್ ಹೈಕೋರ್ಟ್ ಶಾಕ್
 ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಶಾಸಕರನ್ನು ಶಶಿಕಲಾ ಅಕ್ರಮವಾಗಿ ರೆಸಾರ್ಟ್‌ನಲ್ಲಿ ಕೂಡಿಹಾಕಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.ಚೆನ್ನೈನ ಕಾಂಚೀಪುರಂನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಎಐಎಡಿಎಂಕೆ ಶಾಸಕರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆಯೆಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಶಶಿಕಲಾ ಶಾಸಕರನ್ನು ಕೂಡಿಹಾಕಿರುವ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೂಡ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.  .... ಮುಂದೆ ಓದಿ
ರಾಜ್ಯಪಾಲರಿಗೆ 130 ಶಾಸಕರ ಬೆಂಬಲದ ಪಟ್ಟಿ ಸಲ್ಲಿಸಿದ ಶಶಿಕಲಾ
ಚೆನ್ನೈ: ತಮಿಳುನಾಡಿನಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿದ ಪ್ರಧಾನಕಾರ್ಯದರ್ಶಿ ಶಶಿಕಲಾ 130 ಶಾಸಕರ ಬೆಂಬಲವಿರುವ ಪಟ್ಟಿಯನ್ನು ಸಲ್ಲಿಸಿ, ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು. ನನ್ನ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ನನ್ನ ಪರವಾಗಿ ಬರುವ ಸಾಧ್ಯತೆಯಿದೆ. ಹೈಕೋರ್ಟ್ ಅಕ್ರಮ ಆಸ್ತಿ ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ಲೀನ್ ಚಿಟ್ ನೀಡಿರುವುದರಿಂದ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಶಶಿಕಲಾ ಕೇಳಿದ್ದು, ಶಾಸಕಾಂಗ ಪಕ್ಷದಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು. ಈ ನಡುವೆ ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆಯಿರುವುದರಿಂದ ಕಾದು ನೋಡುವ ತಂತ್ರಕ್ಕೆ ರಾಜ್ಯಪಾಲರು ಶರಣಾಗುವ ಲಕ್ಷಣಗಳು ಕಂಡುಬಂದಿವೆ. ಈ ನಡುವೆ ತಮಿಳುನಾಡಿನ ಪ್ರಸಕ್ತ ರಾಜಕೀಯ ವಿದ್ಯಮಾನ .... ಮುಂದೆ ಓದಿ
ಶಶಿಕಲಾ ವಿರುದ್ಧ ಕುದುರೆ ವ್ಯಾಪಾರದ ದೂರು ನೀಡಿದ ಪನ್ನೀರ್ ಸೆಲ್ವಂ
ಚೆನ್ನೈ: ಕಳೆದ 3 ದಿನಗಳಿಂದ ಮುಂಬೈನಲ್ಲಿದ್ದ ರಾಜ್ಯಪಾಲರು ತಮಿಳುನಾಡಿಗೆ ಆಗಮಿಸಿದ ಬಳಿಕ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ರಾಜ್ಯಪಾಲ ವಿದ್ಯಾಸಾಗರರಾವ್ ಅವರನ್ನು  ಭೇಟಿ ಮಾಡಿ ತಮ್ಮಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಯಿತು ಎಂದು ದೂರಿದ್ದಾರೆ. ತಾನು ಅಮ್ಮನ ಸೂಚನೆಯಂತೆ ಮುಖ್ಯಮಂತ್ರಿಯಾಗಿದ್ದೆ. ಅಮ್ಮನಿಗೆ ವಿಧೇಯನಾಗಿ ನಡೆದುಕೊಂಡು ಅವರ ಆಜ್ಞಾಪಾಲಕನಾಗಿದ್ದೆ. ಆದರೆ ಶಶಿಕಲಾ ಒತ್ತಡದಿಂದ ರಾಜೀನಾಮೆ ನೀಡಿದೆ. ಅಮ್ಮನಿಗೆ ಶಶಿಕಲಾ ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲ ಎಂದು ರಾಜ್ಯಪಾಲರಿಗೆ ಪನ್ನೀರ್ ಸೆಲ್ವಂ ಮನದಟ್ಟು ಮಾಡಿದರು. ಶಶಿಕಲಾ ಕುದುರೆ ವ್ಯಾಪಾರ ಮಾಡುತ್ತಿದ್ದು ಶಾಸಕರನ್ನು ತಮ್ಮ ಕಡೆ ಆಮಿಷವೊಡ್ಡಿ ಸೆಳೆದುಕೊಂಡಿದ್ದಾರೆಂದು, ಎಐಎಡಿಎಂಕೆಯನ್ನು ಕಬಳಿಸಲು  ಅವರು ತಂತ್ರ ಹೂಡಿದ್ದಾರೆಂದೂ ದೂರಿನಲ್ಲಿ ತಿಳಿಸಿದರು. ನಡುವೆ ಸಂಸದ ತಂಬಿದೊರೈ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ .... ಮುಂದೆ ಓದಿ
ಶಶಿಕಲಾ ತಮಿಳುನಾಡಿನ ನೂತನ ಮುಖ್ಯಮಂತ್ರಿ ಗಾದಿಗೆ
ಚೆನ್ನೈ: ದಿವಂಗತ ಜಯಲಲಿತಾ ಅವರ ಆಪ್ತ ಸ್ನೇಹಿತೆ ವಿಕೆ ಶಶಿಕಲಾ ಅವರು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವುದಕ್ಕೆ ದಾರಿ ಕಲ್ಪಿಸಲಾಗಿದೆ. ಓ. ಪನ್ನೀರ್‌ಸೆಲ್ವಂ ಬದಲಿಗೆ ಅವರು ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾರೆ. ಪಕ್ಷದ ಶಾಸಕರ ಸಭಎಲ್ಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಶಶಿಕಲಾ ಅವರ ಹೆಸರನ್ನು ಸೂಚಿಸಿದರು. ಚಿನ್ನಮ್ಮ ಎಂದು ಕರೆಯುವ ಶಶಿಕಲಾ ಅವರು ನಂತರ ಪಕ್ಷದ ಮುಖ್ಯಕಚೇರಿಗೆ ಆಗಮಿಸಿದಾಗ ಪನ್ನೀರ್ ಸೆಲ್ವಂ ಮತ್ತು ಪಕ್ಷದ ಹಿರಿಯ ನಾಯಕರು ಅಭಿನಂದಿಸಿದರು.ಜಯಲಲಿತಾ ನಿಧನರಾದ ಬಳಿಕ ಮುಖ್ಯಮಂತ್ರಿ ಮತ್ತು ಪ್ರಧಾನಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುವಂತೆ ಮೊದಲಿಗೆ ಪನ್ನೀರ್ ಸೆಲ್ವಂ ನನ್ನ ಮನವೊಲಿಸಿದರು ಎಂದು ಶಶಕಲಾ ಹೇಳಿದ್ದಾರೆ. ಸಭೆಗೆ .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery