ರಾಷ್ಟ್ರಸುದ್ದಿ
ಮೊದಲ ಬಾರಿಗೆ ಶಶಿಕಲಾ ಮುಖದಲ್ಲಿ ಮೂಡಿದ ಮಂದಹಾಸ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಾ ಆಪ್ತೆ ಶಶಿಕಲಾ ಶನಿವಾರ ವಿಶೇಷ ಕೋಣೆಯೊಂದರಲ್ಲಿದ್ದ ಟಿವಿಯಲ್ಲಿ ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳನ್ನು ವೀಕ್ಷಿಸಿದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ತಮ್ಮ ನಿಷ್ಠರಾದ ಪಳನಿಸ್ವಾಮಿ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಜಯಗಳಿಸಿದ್ದು ಕಂಡು ಖುಷಿಪಟ್ಟರು. ಅವರು ದೂರವಾಣಿಯಲ್ಲಿ ಪಳನಿಸ್ವಾಮಿಗೆ ಅಭಿನಂದನೆ ಸಲ್ಲಿಸಿ ಚೆನ್ನೈನ ಸಂಪುಟ ದರ್ಜೆ ಸಚಿವರ ಜತೆ ಚರ್ಚ ನಡೆಸಿದರೆಂದು ಮೂಲಗಳು ಹೇಳಿವೆ. ಸುಪ್ರೀಂಕೋರ್ಟ್ ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಕಂಗಾಲಾಗಿದ್ದ ಶಶಿಕಲಾ ಮುಖದಲ್ಲಿ ಮಂದಹಾಸ ಮೂಡಿದ್ದು ಇದೇ ಮೊದಲ ಬಾರಿಗೆ. ಬಹುಶಃ ತಮಗೆ ಹಿಂಬಾಗಿಲ ಮೂಲಕ ಅಧಿಕಾರದ ಲಗಾಮು ಕೈ ಸಿಕ್ಕಿತೆಂಬ ಖುಷಿಯಿಂದ ಅವರಿಗೆ ಸಂತೋಷವಾಗಿತ್ತು. .... ಮುಂದೆ ಓದಿ
ವಿಶ್ವಾಸ ಮತ ಗೆದ್ದ ಪಳನಿಸ್ವಾಮಿ: ತಮಿಳುನಾಡು ವಿಧಾನಸಭೆಯಲ್ಲಿ ಹೊಯ್‌ಕೈ
ಚೆನ್ನೈ: ತಮಿಳುನಾಡು ವಿಧಾನಸಭೆ ಇಂದು ತೀವ್ರ, ಗೊಂದಲ ಕೋಲಾಹಲ, ಘರ್ಷಣೆಗೆ ಸಾಕ್ಷಿಯಾಯಿತು. 89 ಶಾಸಕರು ರಹಸ್ಯ ಮತದಾನಕ್ಕೆ ಒತ್ತಾಯಿಸಿ ದಾಂಧಲೆ ನಡೆಸಿದ್ದರಿಂದ ಅವರನ್ನು ಬಲವಂತವಾಗಿ ಹೊರದೂಡಲಾಯಿತು. ಮುಖ್ಯಮಂತ್ರಿ ಪಳನಿಸ್ವಾಮಿ ವಿಶ್ವಾಸಮತ ಗೆಲ್ಲುವಾಗ ಸದನದಲ್ಲಿದ್ದದ್ದು  ಶಶಿಕಲಾಗೆ ಬೆಂಬಲಿಸಿದ ಎಐಎಡಿಎಂಕೆ ಶಾಸಕರು ಮತ್ತು ಪನ್ನೀರ್ ಸೆಲ್ವಂ ಬೆಂಬಲಿತ ಎಐಎಡಿಎಂಕೆ ಶಾಸಕರು ಮಾತ್ರ. ಡಿಎಂಕೆಯ 88 ಶಾಸಕರನ್ನು ಮತ್ತು ಐಯುಎಂಎಲ್‌ನ ಒಬ್ಬ ಶಾಸಕನನ್ನು ಬಲಪ್ರಯೋಗದಿಂದ ಹೊರಕ್ಕೊಯ್ಯಲಾಯಿತು ಮತ್ತು  ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.ಸ್ಪೀಕರ್ ಪಿ. ಧನಪಾಲ್ ತಾವು ವಿಭಜನೆ ಮತದಾನ ಕೈಗೊಳ್ಳುವುದಾಗಿ ಹೇಳಿದಾಗ ಪ್ರತಿಪಕ್ಷದ ಸದಸ್ಯರು ಮತ್ತು ಪನ್ನೀರ್ ಸೆಲ್ವಂ ಬಣದ ಸದಸ್ಯರು ಕೋಲಾಹಲವೆಬ್ಬಿಸಿದ್ದರಿಂದ 11 ಗಂಟೆಗೆ ಸೇರಿದ್ದ ಕಲಾಪವನ್ನು 2 ಬಾರಿ ಮುಂದೂಡಲಾಯಿತು. ಪ್ರತಿಪಕ್ಷದ ಸದಸ್ಯರು .... ಮುಂದೆ ಓದಿ
ಜಯಾ ಸಮಾಧಿಗೆ ತೆರಳಿ ಮೂರು ಬಾರಿ ಶಪಥ ಮಾಡಿದ ಶಶಿಕಲಾ
ಚೆನ್ನೈ:  ಜಯಾ ಆಪ್ತೆ ಶಶಿಕಲಾ  4ವರ್ಷ ಜೈಲು ಶಿಕ್ಷೆಗಾಗಿ ಕೋರ್ಟ್‌ಗೆ ಶರಣಾಗುವುದಕ್ಕೆ ಮುಂಚಿತವಾಗಿ  ಜಯಾ ಸಮಾಧಿಗೆ ತೆರಳಿ ಕೈಯಿಂದ ಮೂರು ಬಾರಿ ಬಡಿದು ಶಪಥ ಸ್ವೀಕರಿಸಿದರು. ತನ್ನ ಅಧಿಕಾರ ಕೈತಪ್ಪಿಹೋಗುವಂತೆ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎನ್ನುವುದೇ ಈ ಶಪಥವಾಗಿತ್ತು. ಈ ನಡುವೆ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರದತ್ತ ಶಶಿಕಲಾ ಕಾರಿನಲ್ಲಿ ಸಾಗಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲೂ ಶಶಿಕಲಾ ಅವರ ಸ್ವಾಗತಕ್ಕೆ ಜನರು ಕಿಕ್ಕಿರಿದು ನೆರೆದಿದ್ದರು. ಈ ನಡುವೆ ಶಶಿಕಲಾ ಪತಿ ನಟರಾಜನ್ ಫಾರ್ಚೂನರ್ ಕಾರಿನಲ್ಲಿ ನಾಲ್ವರು ಬೆಂಬಲಿಗರ ಜತೆ ಮೊದಲೇ ಬೆಂಗಳೂರಿಗೆ ಆಗಮಿಸಿದರು. ಶಶಿಕಲಾ ಹೊಸೂರು ಮೂಲಕ ಕಾರಿನಲ್ಲಿ ಪರಪ್ಪನ ಅಗ್ರಹಾರ ಜೈಲನ್ನು ತಲುಪಿ ನ್ಯಾ. ಅಶ್ವತ್ಥನಾರಾಯಣ ಎದುರು ಶಶಿಕಲಾ .... ಮುಂದೆ ಓದಿ
ಶಾಸಕಾಂಗ ಪಕ್ಷದ ನಾಯಕರಾಗಿ ಪಳನಿಸ್ವಾಮಿಗೆ ಶಶಿಕಲಾ ಪಟ್ಟ
ಚೆನ್ನೈ: ತಮ್ಮ ವಿರುದ್ಧ ಸಿಡಿದೆದ್ದ ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂಕೆಯ ಪ್ರಾಥಮಿಕ ಸದಸ್ಯತ್ವದಿಂದ ಶಶಿಕಲಾ ಉಚ್ಚಾಟನೆ ಮಾಡುವ ಮೂಲಕ ಪಂಚ್ ನೀಡಿದ್ದಾರೆ. ಆದರೆ ಶಶಿಕಲಾ ಅವರಿಂದ ಪನ್ನೀರ್ ಉಚ್ಚಾಟನೆಗೆ ಎಷ್ಟರಮಟ್ಟಿಗೆ ಬೆಲೆ ಸಿಗುತ್ತದೆನ್ನುವುದು ನಂತರವೇ ತಿಳಿದುಬರಲಿದೆ.ಏತನ್ಮಧ್ಯೆ ಲೋಕೋಪಯೋಗಿ ಸಚಿವ ಪಳನಿಸ್ವಾಮಿಗೆ ಶಾಸಕಾಂಗ ಪಕ್ಷದ ನಾಯಕರಾಗಿ ಶಶಿಕಲಾ ಪಟ್ಟ ಕಟ್ಟಿದ್ದಾರೆ. ಪಳನಿಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮಗಿರುವ ಶಾಸಕರ ಬೆಂಬಲದ ಪಟ್ಟಿಯನ್ನು ಅವರಿಗೆ ಒಪ್ಪಿಸಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಲಿದ್ದಾರೆ.ಈ ನಡುವೆ ಚೆನ್ನೈ ನಿವಾಸದಲ್ಲಿ ಪನ್ನೀರ್ ಸೆಲ್ವಂ ಸುದ್ದಿಗೋಷ್ಠಿ ನಡೆಸಿದ್ದು, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೇನೆ. ನನ್ನ ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ಜಯಲಲಿತಾ ಅವರ ಆಶೋತ್ತರಗಳಿಗೆ ತಕ್ಕಂತೆ ಸರ್ಕಾರವನ್ನು ನಡೆಸುತ್ತೇನೆ ಎಂದು .... ಮುಂದೆ ಓದಿ
ಶಶಿಕಲಾ ಕನಸು ಭಗ್ನ: 4 ವರ್ಷ ಜೈಲು, ಸುಪ್ರೀಕೋರ್ಟ್ ತೀರ್ಪು
ಚೆನ್ನೈ: ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜಯಲಲಿತಾ ಆಪ್ತೆ ಶಶಿಕಲಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 10 ಕೋಟಿ ರೂ. ದಂಡ ವಿಧಿಸಿದ ಮಹತ್ವದ ತೀರ್ಪು ನೀಡಿದ್ದರಿಂದ ತಮಿಳುನಾಡು ಮುಖ್ಯಮಂತ್ರಿಯಾಗುವ ಶಶಿಕಲಾ ಕನಸು ನುಚ್ಚುನೂರಾಗಿದೆ.ಶಶಿಕಲಾ ಜತೆ ಇಳವರಸಿ ಮತ್ತು ಸುಧಾಕರನ್ ಅವರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಬ್ಬರು ನ್ಯಾಯಾಧೀಶರ ಪೀಠ ಹೈಕೋರ್ಟ್ ತೀರ್ಪನ್ನು ಅನೂರ್ಜಿತಗೊಳಿಸಿ ಶಶಿಕಲಾ ಅಪರಾಧಿ ಎಂದು ತೀರ್ಪು ನೀಡಿದೆ. ಶಶಿಕಲಾ ಸಿಎಂ ಆಗುವುದರ ವಿರುದ್ಧ ಪನ್ನೀರ್ ಸೆಲ್ವಂ ಬಂಡೆದಿದ್ದರಿಂದ ತಮಿಳುನಾಡು ಎಐಎಡಿಎಂಕೆಯಲ್ಲಿ ಎರಡು ಬಣಗಳಾಗಿತ್ತು. ಶಶಿಕಲಾ ತನ್ನ ಬಣದ .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery