ರಾಷ್ಟ್ರಸುದ್ದಿ
ಭಾರತದ ರಸ್ತೆ ಅಪಘಾತಗಳಲ್ಲಿ ದಿನನಿತ್ಯ 410 ಜನರ ಬಲಿ
ನವದೆಹಲಿ: ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ ಕಳೆದ ವರ್ಷ ಅಸುನೀಗಿದವರ ಸಂಖ್ಯೆ ಪ್ರತಿ ದಿನ 410 ಜನರು. 2015ರಲ್ಲಿ ಈ ಸಂಖ್ಯೆ 400ರಷ್ಟಿತ್ತು. 2016ರಲ್ಲಿ ರಸ್ತೆ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಅದರ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿತ್ತು. 2015ರಲ್ಲಿ 1.46 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಅಸುನೀಗಿದ್ದರೆ, ಕಳೆದ ವರ್ಷ 1.5 ಲಕ್ಷ ಜನರು ಅಪಘಾತಗಳಲ್ಲಿ ಅಸುನೀಗಿದ್ದಾರೆ. ಭಾರತ ರಸ್ತೆ ಅಪಘಾತಗಳಲ್ಲಿ ಗರಿಷ್ಠ ಸಾವುಗಳನ್ನು ದಾಖಲಿಸಿದೆ. ಮಿಜೋರಾಮ್ ಮತ್ತು ಚಂದೀಗಢ, ಡಾಮನ್ ಮತ್ತು ಡಿಯು, ದಾದ್ರಾ, ನಗರ ಹವೇಲಿ ಮುಂತಾದ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಾ ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಅಪಘಾತ ಕುರಿತಂತೆ ಕೇಂದ್ರ ಮತ್ತು ಸುಪ್ರೀಂಕೋರ್ಟ್ ಜತೆ ಅಂಕಿಅಂಶಗಳನ್ನು ಹಂಚಿಕೊಂಡಿದೆ.ಈ ಅಂಕಿಅಂಶವು ಕಳವಳಕಾರಿಯಾಗದ್ದು, .... ಮುಂದೆ ಓದಿ
ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್
ನವದೆಹಲಿ: ಶೀಘ್ರದಲ್ಲೇ ನಿಮ್ಮ ಮನೆ ಬಾಗಿಲಿಗೆ ಮಿಲ್ಕ್ ಮ್ಯಾನ್ ಅಥವಾ ಸುದ್ದಿಪತ್ರಿಕೆ ಹಾಕುವ ಹುಡುಗನ ರೀತಿಯಲ್ಲಿ ಪೆಟ್ರೋಲ್ ವಾಲಾ ಅಥವಾ ಡೀಸೆಲ್ ವಾಲಾ  ಆಗಮಿಸಿ ಇಂಧನವನ್ನು ಸರಬರಾಜು ಮಾಡುವ ಕಾಲ ಸನ್ನಿಹಿತವಾಗಿದೆ. ನಾವು ಇ-ವಾಣಿಜ್ಯ ಪೋರ್ಟಲ್‌ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತರುತ್ತೇವೆ. ಬಹುಶಃ ನೀವು ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುತ್ತೀರಿ. ಪೋರ್ಟಲ್‌ನಲ್ಲಿ ನೀವು ಪೆಟ್ರೋಲ್ ಬುಕ್ ಮಾಡಿ ಆನ್ ಲೈನ್ ಪೇಮೆಂಟ್ ಮಾಡಿದರೆ,  ಮಾರನೇ ದಿನ 8 ಗಂಟೆಯೊಳಗೆ ಪೆಟ್ರೋಲ್ ಪೂರೈಸಬೇಕೆಂದು ತಿಳಿಸಿದ್ದರೆ, ಮಾರನೇ ದಿನ ಬೆಳಿಗ್ಗೆ ಕಚೇರಿಗೆ ಹೊರಡುವಷ್ಟರಲ್ಲಿ ನಿಮ್ಮ ಮನೆ ಬಾಗಿಲಿಗೆ ಪೆಟ್ರೋಲ್ ಸರಬರಾಜು ಆಗಿರುತ್ತದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರದಾನ್ ತಿಳಿಸಿದ್ದಾರೆ.  ಜನರಿಗೆ ಅನುಕೂಲದ ಮಟ್ಟವನ್ನು ಹೆಚ್ಚಿಸಲು ಚಕ್ರಗಳ .... ಮುಂದೆ ಓದಿ
ಉತ್ತರ ಪ್ರದೇಶ, ಉತ್ತರಾಕಾಂಡದಲ್ಲಿ ಬಿಜೆಪಿ ಭರ್ಜರಿ ಗೆಲುವು
ಲಕ್ನೋ: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ 325 ಸ್ಥಾನಗಳಿಂದ ಭರ್ಜರಿ ಜಯಗಳಿಸಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 56 ಸ್ಥಾನಗಳನ್ನು ಮತ್ತು ಬಿಎಸ್‌ಪಿ 19 ಮತ್ತು ಇತರೆ 3 ಸ್ಥಾನಗಳನ್ನು ಗೆದ್ದಿವೆ.  ಸಮಾಜವಾದಿ ಪಕ್ಷ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಿದ್ದು, ಮೋದಿಯ ಹವಾ ಇಡೀ ಉತ್ತರಪ್ರದೇಶದಲ್ಲಿ ಬೀಸಿದೆ. ಉತ್ತರಾಖಂಡದಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸಿದ್ದು, 57 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 11, ಬಿಎಸ್‌ಪಿ 0 ಮತ್ತು ಇತರೆ 2 ಸ್ಥಾನಗಳಲ್ಲಿ ಜಯಗಳಿಸಿವೆ. ಪಂಜಾಬ್‌ನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ಮತ್ತೆ ನೆಲೆಯೂರಿದ್ದು, 77 ಸ್ಥಾನಗಳಲ್ಲಿ ಜಯಗಳಿಸಿದೆ. ಅಧಿಕಾರದ ಗದ್ದುಗೆಗೆ ಏರುವ ಕನಸು ಕಂಡಿದ್ದ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟಿದ್ದು, ಅಕಾಲಿ ದಳ 18 .... ಮುಂದೆ ಓದಿ
ನನ್ನ ತಂದೆಯ ಹತ್ಯೆಯಿಂದ ಕನಸುಗಳು ನುಚ್ಚುನೂರಾದವು: ವಿಸ್ಮಯಾ
ಕಣ್ಣೂರು: `ನನ್ನ ತಂದೆಯನ್ನು ಏಕೆ ಕೊಂದಿರಿ. ನನ್ನ ಕನಸುಗಳನ್ನು ಈಡೇರಿಸಲು ನನ್ನ ತಂದೆ ಬಯಸಿದ್ದರು. ಆದರೆ ನನ್ನ ತಂದೆಯ ಹತ್ಯೆಯಿಂದ ನನ್ನ ಕನಸುಗಳು ನುಚ್ಚುನೂರಾದವು` ಎಂದು ಹತ್ಯೆಗೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತರ 12 ವರ್ಷ ವಯಸ್ಸಿನ ಪುತ್ರಿ ಭಾವುಕಳಾಗಿ ಕೇಳಿದ ಪ್ರಶ್ನೆಯಿದು.ಈ ವಿಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ವಿಸ್ಮಯ ಎಂಬ ಹೆಸರಿನ ಈ ಬಾಲಕಿ ಫಲಕಗಳ ಮೂಲಕ ತನ್ನ ಪ್ರಭಾವಶಾಲಿ ಸಂದೇಶವನ್ನು ಸಾರಿದ್ದಾಳೆ. ದೆಹಲಿ ವಿದ್ಯಾರ್ಥಿನಿ ಗುರ್‌ಮೆಹರ್ ಕೌರ್ ಪೋಸ್ಟ್‌ಗಳಿಂದ ಅವಳು ಬಹುಶಃ ಸ್ಫೂರ್ತಿ ಪಡೆದಿರಬಹುದು. ವಿಸ್ಮಯಾ ತಂದೆ  52 ವರ್ಷ ವಯಸ್ಸಿನ ಸಂತೋಷ್ ಕುಮಾರ್ ಅವರನ್ನು ಕಣ್ಣೂರಿನ ಅವರ ಮನೆಯಲ್ಲಿ ಕೊಚ್ಚಿ ಹತ್ಯೆ .... ಮುಂದೆ ಓದಿ
ಮುಸ್ಲಿಮರಿಗೆ ಟಿಕೆಟ್ ನೀಡದೇ ಬಿಜೆಪಿ ತಪ್ಪು ಮಾಡಿದೆ: ಉಮಾ ಭಾರತಿ
ಲಕ್ನೋ: ಪ್ರಸ್ತುತ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ ತಪ್ಪು ಮಾಡಿದೆ ಎಂದು ಬಿಜೆಪಿ ಮುಖಂಡೆ ಉಮಾ ಭಾರತಿ ಭಾನುವಾರ ತಿಳಿಸಿದ್ದಾರೆ. ನಾವು ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು ಎಂದು ರಾಜನಾಥ್ ಸಿಂಗ್ ಜಿ ಹೇಳಿದ್ದು ಸರಿಯಾಗಿಯೇ ಇದೆ. ಆದರೆ ಮುಸ್ಲಿಮರು ಮತ್ತು ಮಹಿಳೆಯರು ಇಬ್ಬರಿಗೂ ಸಂಬಂಧಿಸಿದಂತೆ ಕೆಲವು ಬಾರಿ ಗೆಲುವಿನ ಅಂಶ ಮೇಲುಗೈ ಪಡೆಯುತ್ತದೆ ಎಂದು ಉಮಾಭಾರತಿ ಅಭಿಪ್ರಾಯಪಟ್ಟರು.ಪಕ್ಷದ ಅಧ್ಯಕ್ಷ ಅಮಿತ್ ಶಾ ಜತೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಉಮಾಭಾರತಿ ಹೇಳಿದರು.ಮುಸ್ಲಿಮರು ಬಿಜೆಪಿಗೆ ಓಟು ಹಾಕದಿರುವಾಗ ತಮ್ಮ ಪಕ್ಷವು ಅವರಿಗೆ ಏಕೆ ಟಿಕೆಟ್ ನೀಡಬೇಕು ಎಂದು ಉತ್ತರಪ್ರದೇಶದ ಬಿಜೆಪಿ ನಾಯಕ ವಿನಯ್ ಕಟಿಯಾರ್ ಬಹಿರಂಗವಾಗಿ ಕೇಳಿದ್ದರು.ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery