ರಾಜ್ಯ ಸುದ್ದಿ
ಭಾರೀ ದಾಳಿ ನಡೆಸಲು ಸಂಚು ರೂಪಿಸಿದ್ದ ಐಸಿಸ್ ಉಗ್ರರ ಬಂಧನ
ಲಕ್ನೋ: ಲಕ್ನೊ ಬಳಿಕ ಠಾಕುರ್‌ಗಂಜ್‌ನಲ್ಲಿ ಹತ್ಯೆಯದ ಶಂಕಿತ ಭಯೋತ್ಪಾದಕ ಸೈಫುಲ್ಲಾ ಮತ್ತು ಕಾನ್ಪುರ ಮತ್ತು ಮಧ್ಯಪ್ರದೇಶದಲ್ಲಿ ಬಂಧಿತರಾದ ಐವರು ಐಸಿಸ್ ಭಯೋತ್ಪಾದಕ ಸಂಘಟನೆಯ ಹೊಸ ಘಟಕಕ್ಕೆ ಸೇರಿದ್ದು, ಒಂದು ತಿಂಗಳೊಳಗೆ ಭಾರೀ ದಾಳಿ ನಡೆಸಲು ಸಂಚು ರೂಪಿಸಿದ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಸೂಫಿ ಮಂದಿರದ ಮೇಲೆ ಭಯೋತ್ಪಾದಕ ದಾಳಿಗಾಗಿ ನಿನ್ನೆ ರೈಲಿನಲ್ಲಿ ಸ್ಫೋಟವನ್ನು ಅಭ್ಯಾಸದ ದೃಷ್ಟಿಯಿಂದ ಆಯೋಜಿಸಿತು ಎಂದು ತನಿಖೆದಾರರು ತಿಳಿಸಿದರು.ಶಂಕಿತ ಐಸಿಸ್ ಗುಂಪಿನಲ್ಲಿ ಒಟ್ಟು 9 ಮಂದಿಯಿದ್ದು, ಎಲ್ಲರೂ ಲಕ್ನೊ ಮತ್ತು ಕಾನ್ಪುರಕ್ಕೆ ಸೇರಿದ್ದಾರೆಂದು ಎನ್‌ಐಎ ತಿಳಿಸಿದೆ. ಸೈಫುಲ್ಲಾನನ್ನು ಲಕ್ನೊದ ಮನೆಯೊಂದರಲ್ಲಿ ಅಡಗಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿದೆ. ಐಸಿಸ್ ಘಟಕ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುವ ಮಾಲೀಕರಿಂದ ಈ ಮನೆಯನ್ನು ಬಾಡಿಗೆಗೆ ಪಡೆದಿತ್ತು.  .... ಮುಂದೆ ಓದಿ
ಭಾರತ ಭಾಗ್ಯ ವಿಧಾತದ ವೈಭವಕ್ಕೆ ಪ್ರೇಕ್ಷಕ ಮೂಕವಿಸ್ಮಿತ
ಚಿಕ್ಕಬಳ್ಳಾಪುರ: ಆ ವೇದಿಕೆಯ ತಾಕತ್ತೇ ಅಂಥಹದ್ದು. ಅಲ್ಲಿ ಧ್ವನಿ-ಬೆಳಕುಗಳದ್ದೇ ಆಟ. ಸಂಗೀತದ್ದೇ ಮೇಲುಗೈ. ಜನಪದ ಕಲೆಗಳದ್ದೇ ಮೆರಗು. ಧ್ವನಿ, ಬೆಳಕು, ಸಂಗೀತ, ಜನಪದ ಕಲೆಗಳು ಒಮ್ಮೆಲೆ ವೇದಿಕೆ ಮೇಲೆ ತಮ್ಮ ಕರಾಮತ್ತುಗಳನ್ನು ತೋರಿಸುತಿದ್ದರೆ ಎದಿರು ಕೂತ ಎಂಥಹದ್ದೇ ಪ್ರೇಕ್ಷಕ ಮೂಕವಿಸ್ಮಿತ.  ಇಂಥಹ ಅದ್ಭುತ ಕಾರ್ಯಕ್ರಮ ಸವಿದು ಮೈಮರೆತದ್ದು ಚಿಕ್ಕಬಳ್ಳಾಪುರದ ಜನತೆ. ಇಡೀ ಕಾರ್ಯಕ್ರಮ ವೀಕ್ಷಿಸಿದ ಪ್ರೇಕ್ಷಕರು ಮನಸಾರೆ ಹಾಡಿ ಹೊಗಳಿದರು.    .... ಮುಂದೆ ಓದಿ
ಸ್ಟೀಲ್ ಫ್ಲೈಓವರ್ ಯೋಜನೆ ಕೈಬಿಟ್ಟ ಕಾಂಗ್ರೆಸ್ ಸರ್ಕಾರ
ಬೆಂಗಳೂರು: ಸ್ಟೀಲ್ ಫ್ಲೈ ಓವರ್ ಯೋಜನೆ ವಿಚಾರವನ್ನು ಕೈಬಿಡುವುದಕ್ಕೆ ಸರ್ಕಾರ ನಿರ್ಧರಿಸಿದೆ. ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸ್ಟೀಲ್ ಫ್ಲೈ ಓವರ್ ರದ್ದು ಮಾಡುವುದಾಗಿ ಘೋಷಿಸಿದರು. ಸ್ಟೀಲ್ ಫ್ಲೈ ಓವರ್ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.ಡೈರಿ ಪ್ರಕರಣದಲ್ಲಿ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ 65 ಕೋಟಿ ಕಪ್ಪ ಸ್ವೀಕರಿಸಿದ ವರದಿಯಾಗಿತ್ತು. ಪ್ರೈಓವರ್ ನಿರ್ಮಾಣದ ವಿರುದ್ಧ ಬೆಂಗಳೂರು ಫೌಂಡೇಶನ್ ಅರ್ಜಿ ಸಲ್ಲಿಸಿತ್ತು. ಸ್ಟೀಲ್ ಫ್ಲೈಓವರ್ ನಿರ್ಮಾಣದಿಂದ ಪರಿಸರ ಹಾಳಾಗುತ್ತೆ ಎಂದು ಉಲ್ಲೇಖಿಸಲಾಗಿತ್ತು.ಇದರಿಂದಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಕೈಬಿಡಲು ನಿರ್ಧರಿಸಲಾಯಿತು.  ಡೈರಿಯಿಂದ ಉಂಟಾಗಿರುವ ಮುಜುಗರ ತಪ್ಪಿಸಿಕೊಳ್ಳಲು ಸ್ಟೀಲ್ ಫ್ಲೈಓವರ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿತೆಂದು ಹೇಳಲಾಗುತ್ತಿದೆ. .... ಮುಂದೆ ಓದಿ
ಎಸ್.ಎಸ್.ಎಲ್.ಸಿ. ಪರೀಕ್ಷೆ - ಪೂರ್ವಸಿದ್ಧತೆಗಾಗಿ ಸಹಾಯವಾಣಿ
 ಬೆಂಗಳೂರು : ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರ ಅಭಿಲಾಷೆಯಾಗಿರುತ್ತದೆ. ವಿದ್ಯಾರ್ಥಿಗಳ ಸಾಮಥ್ರ್ಯ, ಬುದ್ದಿಶಕ್ತಿ, ಆಸಕ್ತಿ, ಕ್ರಿಯಾಶೀಲನೆ, ಕಠಿಣ ಪರಿಶ್ರಮ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು, ಸಮಾಜ, ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಅಧ್ಯಯನ ಕಡೆ ಗಮನಹರಿಸಲಾಗದಿರುವುದು. ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿರುವುದು ಕಂಡು ಬಂದಿದ್ದು, ಈ ಸಮಸ್ಯೆ ನಿವಾರಣೆಯಾಗದೆ ವಿದ್ಯಾರ್ಥಿ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗಳ .... ಮುಂದೆ ಓದಿ
ಸ್ಟೀಲ್ ಫ್ಲೈಓವರ್ ಯೋಜನೆಗೆ 65 ಕೋಟಿ ಕಪ್ಪ: ಬಿಎಸ್‌ವೈ
ಬೆಂಗಳೂರು: ಗೋವಿಂದ ರಾಜು ಡೈರಿಯಿಂದ ಬಹಳ ಸಹಾಯವಾಗಿದೆ. ಸ್ಟೀಲ್ ಫ್ಲೈಓವರ್‌ ಯೋಜನೆಗೆ 65 ಕೋಟಿ ಕಪ್ಪ ನೀಡಲಾಗಿದೆ. ಗುತ್ತಿಗೆದಾರರು 65 ಕೋಟಿ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ.ಅವರು ಹೇಗೆ ಹಣ ಸಾಗಿಸುತ್ತಿದ್ದರು, ಎಷ್ಟೆಲ್ಲಾ ಹಣ ಸಾಗಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಈ ಪ್ರಕರಣ ಸಿದ್ದರಾಮಯ್ಯ ಅವರಿಗೆ ಉರುಳಾಗಲಿದೆ ಎಂದು ಬಿಜೆಪಿ ಮುಖಂಡ ಯಡಿಯೂರಪ್ಪ ಹೇಳಿದ್ದಾರೆ.ಯಡಿಯೂರಪ್ಪ ಪ್ರಕರಣಕ್ಕೆ ಮರುಜೀವ ಕುರಿತ ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಇಂದು ಗರಂ ಆಗಿ ಪ್ರತಿಕ್ರಿಯಿಸಿದರು. ಯಡಿಯೂರಪ್ಪ, ಯಡಿಯೂರಪ್ಪ ಅಂತಾ ಮಂತ್ರ ಜಪಿಸುತ್ತೀರಲ್ಲಾ, ನಿಮಗೆ ಬೇರೆ ಕೆಲಸ ಇಲ್ಲವಾ ಎಂದು ಅವರು ಪ್ರಶ್ನಿಸಿದರು. .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery