ರಾಜ್ಯ ಸುದ್ದಿ
ಸೌಜನ್ಯ ಹತ್ಯೆ ಪ್ರಕರಣಕ್ಕೆ ಮರುಜೀವ
ಬೆಂಗಳೂರು: ಸೌಜನ್ಯ ಹತ್ಯೆ ಪ್ರಕರಣ ಮರುಜೀವ ಪಡೆದಿದ್ದು, ಸೌಜನ್ಯ ಪ್ರಕರಣದ ಮರುತನಿಖೆಗೆ ಸಿಬಿಐ ಕೋರ್ಟ್ ಆದೇಶಿಸಿದೆ. ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಹಲವು ಲೋಪದೋಷಗಳನ್ನು ಸಿಬಿಐ ಕೋರ್ಟ್ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಮರುತನಿಖೆಗೆ ಆದೇಶಿಸಿದೆ. 2012ರ ಅಕ್ಟೋಬರ್ 9ರಂದು ಸೌಜನ್ಯ ಕಾಣೆಯಾಗಿದ್ದಾಳೆಂದು ಬೆಳ್ತಂಗಡಿ ಪೊಲೀಸರಿಗೆ ಸೌಜನ್ಯ ತಂದೆ ದೂರು ನೀಡಿದ್ದರು. ಅ.10ರಂದು ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಸೌಜನ್ಯಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಈ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುಟುಂಬದ ಹೆಸರು ಕೇಳಿಬಂದಿತ್ತು. ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿ ಹೋರಾಟ ನಡೆದಿದ್ದರಿಂದ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸಲಾಗಿತ್ತು. ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹಲವು ದೋಷಗಳನ್ನು ಪತ್ತೆಹಚ್ಚಿದ ಸೌಜನ್ಯ ತಂದೆ ಚಂದ್ರಪ್ಪಗೌಡ ಮರುತನಿಖೆಗೆ ಕೋರಿದ್ದರು. .... ಮುಂದೆ ಓದಿ
ಕಂಬಳದ ನಿಷೇಧ ತೆರವಿಗೆ ವಿಧೇಯಕ ಮಂಡನೆ
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕರ್ನಾಟಕ ಪ್ರಾಣಿಹಿಂಸೆ ತಡೆ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇದರಿಂದ ಕಂಬಳ ಮತ್ತು ಎತ್ತಿನಗಾಡಿ ಓಟದ ನಿಷೇಧಕ್ಕಿದ್ದ ಅಡ್ಡಿ ತೆರವಾಗಿದ್ದು, ಕಂಬಳ ಮತ್ತು ಎತ್ತಿನಗಾಡಿಯ ಹೋರಿಗಳಿಗೆ ಹಿಂಸೆ ನೀಡದಂತೆ ಷರತ್ತು ವಿಧಿಸಲಾಗಿದೆತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ವಿಧಿಸಿದ್ದ ನಿಷೇಧ ತೆರವು ಮಾಡಿದ ಬಳಿಕ ಕರ್ನಾಟಕದ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲಿದ್ದ ನಿಷೇಧ ತೆರವು ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಈ ಕುರಿತು ಅನೇಕ ಹೋರಾಟಗಾರರು ಕಂಬಳದ ಪರ ಧ್ವನಿ ಎತ್ತಿ ಸಾಂಪ್ರದಾಯಿಕ ಕ್ರೀಡೆಯ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದರು. .... ಮುಂದೆ ಓದಿ
ಹೈಕಮಾಂಡ್‌ಗೆ 1000 ಕೋಟಿ ರೂ. ಲಂಚ: ಯಡಿಯೂರಪ್ಪ ಗಂಭೀರ ಆರೋಪ
ಬೆಂಗಳೂರು: ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂ. ಲಂಚವನ್ನು ರವಾನಿಸಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಬಲಗೈ ಬಂಟ ಗೋವಿಂದ ರಾಜ್ ಮೂಲಕ ಹಣವನ್ನು  ರವಾನೆ ಮಾಡಿದ್ದಾರೆ ಎಂದು ಬಾಗಲಕೋಟೆಯಲ್ಲಿ ಯಡಿಯೂರಪ್ಪ ಆರೋಪ ಮಾಡಿದರು. ರಾಜ್ಯದ ಅಭಿವೃದ್ಧಿ ಹಣವನ್ನು ಕಾಂಗ್ರೆಸ್ ನಾಯಕರಿಗೆ ಸಿಎಂ ನೀಡಿದ್ದಾರೆ. ಈ ಬಗ್ಗೆ ರಾಜ್ಯದ ಜನತೆಗೆ ಸಿಎಂ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಯಡಿಯೂರಪ್ಪ ಹೇಳಿದರು. ಇಲ್ಲವಾದಲ್ಲಿ ಇನ್ನು ಎರಡು ದಿನದಲ್ಲಿ ಸತ್ಯಾಂಶ ಹೊರಬೀಳಲಿದೆ.ರಾಜ್ಯದಲ್ಲಿ ಹಗಲುದರೋಡೆ ನಡೆದಿದ್ದು, ರಾಜ್ಯದ ಹಣ ಲೂಟಿಯಾಗುತ್ತಿದೆ. ಈ ಕುರಿತು ಸಾಬೀತು ಮಾಡಲು ತಾವು ಸಿದ್ಧವಿರುವುದಾಗಿ ಯಡಿಯೂರಪ್ಪ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದರು. .... ಮುಂದೆ ಓದಿ
ಪನ್ನೀರ್‌ಸೆಲ್ವಂಗೆ ಮಧುಸೂದನ್ ಬೆಂಬಲದಿಂದ ಆನೆಬಲ
 ಚೆನ್ನೈ: ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ವಿ.ಕೆ. ಶಶಿಕಲಾ ವಿರುದ್ಧ ಬಂಡಾಯವೆದ್ದಿರುವ ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರಿಗೆ ಪಕ್ಷದ ಸ್ಥಾಯಿಸಮಿತಿ ಅಧ್ಯಕ್ಷ ಇ. ಮಧುಸೂಧನನ್ ಬೆಂಬಲ ನೀಡುವುದರೊಂದಿಗೆ ಗುರುವಾರ ಆನೆಬಲ ಸಿಕ್ಕಿದೆ.ಪನ್ನೀರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಮಧುಸೂದನ್, ಪನ್ನೀರ್‌ಸೆಲ್ವಂ ಪಾಳೆಯವನ್ನು ಸೇರುವಂತೆ ತಮ್ಮ ಆತ್ಮಸಾಕ್ಷಿ ಒತ್ತಾಯಿಸಿದ್ದು, ಆ ಧ್ವನಿಗೆ ತಾನು ಶರಣಾಗಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.ಮಧುಸೂದನ್ ಎಐಎಡಿಎಂಕೆಯ ಕಾಯಂ ಪ್ರಧಾನಕಾರ್ಯದರ್ಶಿಯಾಗಿದ್ದಾರೆಂದು ಪನ್ನೀರ್ ಸೆಲ್ವಂ ತಿಳಿಸಿದರು. ಶಶಿಕಲಾ ವಾಸವಾಗಿರುವ ಜಯಲಲಿತಾ ಅವರ ಪಯಸ್ ಗಾರ್ಡನ್ ನಿವಾಸವನ್ನು ಅಮ್ಮಾ ಸ್ಮಾರಕವಾಗಿ ಪರಿವರ್ತಿಸಲಾಗುವುದೆಂದು ಪನ್ನೀರ್‌ಸೆಲ್ವಂ ಹೇಳಿದರು.  ಮಧುಸೂದನ್ ಪಕ್ಷವು ಬೆಳೆಯಲು ಸಹಾಯ ಮಾಡಿದ್ದು, ಜೀವನದುದ್ದಕ್ಕೂ ಎಂಜಿಆರ್‌ಗೆ ಬೆಂಬಲವಾಗಿ ನಿಂತಿದ್ದರೆಂದು ಹೇಳಿದರು. ಜಯಲಲಿತಾ ಸಾವಿನ ಬಳಿಕ ಮಧುಸೂದನ್ ಪ್ರಧಾನಕಾರ್ಯದರ್ಶಿಯಾಗುತ್ತಾರೆಂದು .... ಮುಂದೆ ಓದಿ
ಕಾಂಗ್ರೆಸ್ ವಿರುದ್ಧ ಎಸ್. ಎಂ. ಕೃಷ್ಣ ವಾಗ್ದಾಳಿ
ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಜನಸಮೂಹದ ಬೆಂಬಲವಿರುವ ನಾಯಕರು ಬೇಕಾಗಿಲ್ಲ. ಬದಲಿಗೆ ಅದಕ್ಕೆ ಮ್ಯಾನೇಜರ್‌ಗಳು ಮಾತ್ರ ಬೇಕಾಗಿದ್ದಾರೆ. ಹೀಗಾಗಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮರುದಿನವೇ ಕಾಂಗ್ರೆಸ್ ಮುಖಂಡ ಎಸ್.ಎಂ. ಕೃಷ್ಣ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ರಾಜೀನಾಮೆ ಕುರಿತು ತಮ್ಮ ಔಪಚಾರಿಕ ಪ್ರಕಟಣೆಯನ್ನು ನೀಡಿದರು. ತಮ್ಮಂತಹ ನಿಷ್ಠಾವಂತ ಕಾರ್ಯಕರ್ತನನ್ನು ಕಾಂಗ್ರೆಸ್ ಕಡೆಗಣಿಸಿದ್ದು ತಮಗೆ ನೋವುವುಂಟುಮಾಡಿದೆ. ನನ್ನನ್ನು ನಿರ್ಲಕ್ಷಿಸಲು ನನ್ನ ವಯಸ್ಸಿನ ಕಾರಣವನ್ನು ಕೂಡ ಉದಾಹರಣೆ ನೀಡಿದೆ ಎಂದು ಕೃಷ್ಣ ಹೇಳಿದರು. 84 ವರ್ಷದ ಇಳಿವಯಸ್ಸಿನ ಕೃಷ್ಣ, ವಯಸ್ಸು ಮನಸ್ಸಿನ ಸ್ಥಿತಿಯಾಗಿದ್ದು, ಪರಿಸ್ಥಿತಿಗೆ ತಕ್ಕಂತೆ ನಿರ್ಧರಿಸುವ ಮಾನದಂಡವಾಗಿ ವಯಸ್ಸನ್ನು ಪರಿಗಣಿಸಬಾರದು ಎಂದು ಕೃಷ್ಣ ಹೇಳಿದರು. .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery