ರಾಜ್ಯ ಸುದ್ದಿ
ಏರೋ ಇಂಡಿಯಾದಲ್ಲಿ ಕಮಾಲ್ ನಡೆಸಿದ ತೇಜಸ್, ಸಾರಂಗ್ ವಿಮಾನಗಳು
ಬೆಂಗಳೂರು: ತೇಜಸ್, ರಘೇಲ್, ಸಾರಂಗ ವಿಮಾನಗಳು ಇಂದು ಯಲಹಂಕ ವಾಯುನೆಲೆಯಲ್ಲಿನ ಏರೊ ಇಂಡಿಯಾ-2017ರ ಪ್ರದರ್ಶನದಲ್ಲಿ ಕಮಾಲ್ ನಡೆಸಿದವು. ಬಾನಂಗಳದಲ್ಲಿ ಬಣ್ಣ, ಬಣ್ಣದ ಚಿತ್ತಾರವನ್ನು ಈ ವಿಮಾನಗಳು ಮೂಡಿಸಿದವು. ಸಾರ್ವಜನಿಕರು ವೈಮಾನಿಕ ಪ್ರದರ್ಶನ ನೋಡಿ ಕಣ್ತುಂಬಿಕೊಂಡರು. ಆಕಾಶದಲ್ಲಿ ಕೇಸರಿ, ಬಿಳಿ,ಹಸಿರು ರಂಗವಲ್ಲಿಯನ್ನು ಅವು ಬಿಡಿಸಿದವು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರಫೇಲ್ ಯುದ್ಧ ವಿಮಾನದಲ್ಲಿ ಅನಿಲ್ ಅಂಬಾನಿ ಯಾನ ನಡೆಸಿದರು. ಸುಮಾರು ಅರ್ಧ ಗಂಟೆಯ ಕಾಲ ರಫೇಲ್‌ನಲ್ಲಿ ಹಾರಾಟದ ಸುಖವನ್ನು ಅವರು ಅನುಭವಿಸಿದರು.  ಏರ್‌ಶೋನಲ್ಲಿ ಸರ್ಜಿಕಲ್ ಸ್ಟ್ರೈಕ್ ಪ್ರಾತ್ಯಕ್ಷಿಕೆಯು ಜನರನ್ನು ಮನರಂಜಿಸಿತು. ಪ್ಯಾರಾ ಕಮಾಂಡೊಗಳ ಸಾಹಸವು ಇದರಲ್ಲಿ ಅನಾವರಣಗೊಂಡಿತು. ಭಾರತೀಯ ಯೋಧರ ಶಕ್ತಿ, ಸಾಹಸಗಳು ಈ ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನಗೊಂಡಿತು. .... ಮುಂದೆ ಓದಿ
ಪನ್ನೀರ್ ಸೆಲ್ವಂಗೆ ಕೊಕ್, ಇಂದು ಪಳನಿಸ್ವಾಮಿ ಸಿಎಂ ಆಗಿ ಪ್ರಮಾಣ
 ಚೆನ್ನೈ: ಶಶಿಕಲಾ ಮತ್ತವರ ಬೆಂಬಲಿಗರ ಒತ್ತಡದಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಹಂಗಾಮಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್ ಸೆಲ್ವಂಗೆ ಮುಖ್ಯಮಂತ್ರಿ ಹುದ್ದೆ ಕೈತಪ್ಪಿಹೋಗುವ ಲಕ್ಷಣಗಳು ಕಾಣಿಸಿವೆ. ಶಶಿಕಲಾ ಶಾಸಕಾಂಗ ಪಕ್ಷದ ನಾಯಕರಾಗಿ ಪಳನಿಸ್ವಾಮಿಯನ್ನು ಆಯ್ಕೆ ಮಾಡಿದ್ದು, ಪಳನಿಸ್ವಾಮಿ ಎಐಎಡಿಎಂಕೆ ಶಾಸಕರ ಬೆಂಬಲದ ಪತ್ರವನ್ನು ಹಿಡಿದು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ರಾಜ್ಯಪಾಲರು ಪಳನಿಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಬೋಧಿಸುವ ಸಾಧ್ಯತೆಯಿದ್ದು, ಇದೇ 22ರಂದು ಬಹುಮತ ಸಾಬೀತು ಮಾಡುವಂತೆ ಪಳನಿಸ್ವಾಮಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ಪಳನಿಸ್ವಾಮಿಗೆ ಬಹುಮತದ ಶಾಸಕರ ಬೆಂಬಲವಿರುವಂತೆ ಕಂಡುಬಂದಿದ್ದು, ಅವರೇ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೇ ಶಶಿಕಲಾ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕೂಡ ಉಚ್ಚಾಟನೆ ಮಾಡಿದ್ದರು. ಪನ್ನೀರ್ ಸೆಲ್ವಂ ಬೆಂಬಲಿಗರು ಈಗ ಚೆನ್ನೈನಲ್ಲಿ ಪ್ರತಿಭಟನೆ .... ಮುಂದೆ ಓದಿ
ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆ ಜರುಗಿಸಲು ಕ್ರಮ-ಡಾ.ಜಿ.ಪರಮೇಶ್ವರ್
ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ವಿಧಾನಸಭೆಗೆ  ತಿಳಿಸಿದರು. ಸದಸ್ಯರಾದ ಶಶಿಕಲಾ ಜೊಲ್ಲೆ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಬಂಧಿಸಿದಂತೆ ಸದನದಲ್ಲ  ಸಚಿವರು ಉತ್ತರಿಸುತ್ತಿದ್ದರು.  ತುಮಕೂರು ಜಿಲ್ಲೆಯಲ್ಲಿ ಬುದ್ದಿಮಾಂದ್ಯ ಮಹಿಳೆ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ಸಮಾಜಕ್ಕೆ ಶೋಭೆ ತರುವಂತಹುದ್ದಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆರೋಪಿ ಎಎಸ್ಐ ಉಮೇಶ್ನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈತನ ವಿರುದ್ದ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಗೃಹ ಸಚಿವರು, ಇಂತಹ ಪ್ರಕರಣಗಳಲ್ಲಿ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಿ.ಸಿ. ಕ್ಯಾಮರಾ ಅಳವಡಿಕೆ: ಇಂಡಿ .... ಮುಂದೆ ಓದಿ
ಕರ್ನಾಟಕದ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿ: ಸಚಿವ ಆರ್.ವಿ.ದೇಶಪಾಂಡೆ
ಕೋಲಾರ : ಕೈಗಾರಿಕೆ ಸ್ಥಾಪನೆಗೆ ಕೃಷಿ ಭೂಮಿ ನೀಡಿದ ರೈತನ ಕುಟುಂಬಕ್ಕೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದು ಮೂಲಭೂತ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ  ನೂತನವಾಗಿ ಸೆರೆಬ್ರ ಇಂಟಿಗ್ರೇಟೆಡ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು. ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಿದ ರೈತರ ಕುಟುಂಬಕ್ಕೆ ಉದ್ಯೋಗವನ್ನು ಕಲ್ಪಿಸಬೇಕು. ಒಂದು ವೇಳೆ ಭೂಮಿ ನೀಡಿ ಉದ್ಯೋಗ ನೀಡಿಲ್ಲವಾದರೆ ತಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು. ಕರ್ನಾಟಕದ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದೆ. ಕೈಗಾರಿಕೆಗಳನ್ನು ಸ್ವಾಗತಿಸುವ ಮೂಲಕ ಇಲ್ಲಿಗೆ ಮತ್ತಷ್ಟು ಕೈಗಾರಿಕೆಗಳು ಬರುವಂತೆ ಸಹಕರಿಸಿ ಎಂದ ಅವರು, ಮುಂದಿನ 2025ಕ್ಕೆ ಇಡೀ ವಿಶ್ವದಲ್ಲೇ .... ಮುಂದೆ ಓದಿ
ಯಡಿಯೂರಪ್ಪಗೆ ಸೆಡ್ಡು ಹೊಡೆದ ಈಶ್ವರಪ್ಪ
ಬೆಂಗಳೂರು: ರಾಯಣ್ಣ ಬ್ರಿಗೇಡ್‌ಗೆ ಬ್ರೇಕ್ ಹಾಕಿಲ್ಲ ಅಥವಾ ಏನನ್ನೂ ಹಾಕಿಲ್ಲ. ನಾನು ನೇರವಾಗಿಯೇ ಇದರಲ್ಲಿ ಭಾಗವಹಿಸುತ್ತೇನೆ. ಪಕ್ಷಕ್ಕೆ ಧಕ್ಕೆಯಾಗದಂತೆ ಬ್ರಿಗೇಡ್ ಸಭೆಗಳಲ್ಲಿ ಭಾಗವಹಿಸುತ್ತೇನೆ. ಬ್ರಿಗೇಡ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್ ಸಮಾಜಸೇವೆಯಲ್ಲಿ ನಿರತವಾಗಲಿದೆ, ಬ್ರಿಗೇಡ್ ರಾಜಕೀಯೇತರ ಸಂಘಟನೆಯಾಗಿ ಮುಂದುವರಿಯಲಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ಮಾ.4ರಂದು ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಸಭೆ ನಡೆಯುತ್ತದೆಂದು ಅವರು ತಿಳಿಸಿದರು. ಬ್ರಿಗೇಡ್ ಹುಟ್ಟಿ 7 ತಿಂಗಳಾಗಿದೆ ಎಂದು ಹೇಳಿದ್ದರು.ಆದ್ದರಿಂದ ಬ್ರಿಗೇಡ್ ತಾಕತ್ತೇನು ಎಂದು ನಾವು ತೋರಿಸೋಣ ಎಂದು ಈಶ್ವರಪ್ಪ ಯಡಿಯೂರಪ್ಪಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಬಿಜೆಪಿಯಲ್ಲಿ ವರಿಷ್ಠರು ಸೂಚಿಸಿದಂತೆ ಪದಾಧಿಕಾರಿಗಳ ಬದಲಾವಣೆಯಾಗಬೇಕು. ಅಲ್ಲಿಯವರೆಗೆ ಬ್ರಿಗೇಡನ್ನು ಜೀವಂತವಾಗಿರುಸುವುದಾಗಿ ಈಶ್ವರಪ್ಪ ಹೇಳಿದರು. .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery