ರಾಜ್ಯ ಸುದ್ದಿ
ನಕಲಿ ಡೈರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಹಾನಿ: ಎಂಎಲ್‌ಸಿ ಲಹಾರ್ ಸಿಂಗ್ ಸಿರೋಯಾ
 ಬೆಂಗಳೂರು: ತನಗೆ ಸೇರಿರದ ಡೈರಿಯನ್ನು ಹಾಜರುಪಡಿಸಿದ ಬಗ್ಗೆ ತಾವು ರಾಜ್ಯ ಕಾಂಗ್ರೆಸ್ ಘಟಕದ ವಿರುದ್ಧ ನೀಡಿದ ದೂರಿನ ತನಿಖೆಯನ್ನು ತ್ವರಿತಗೊಳಿಸುವಂತೆ ಮನವಿ ಸಲ್ಲಿಸಲು ಬಿಜೆಪಿ ಎಂಎಲ್‌ಸಿ ಲಹಾರ್ ಸಿಂಗ್ ಸಿರೋಯಾ ಗೃಹಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಡೈರಿಯಲ್ಲಿ ತಮ್ಮ ಪಕ್ಷದ ಕೇಂದ್ರೀಯ ನಾಯಕತ್ವಕ್ಕೆ ತಾವು ಕಪ್ಪ ಸಲ್ಲಿಸಿದ ಬಗ್ಗೆ ಡೈರಿಯಲ್ಲಿ ವಿವರಗಳಿವೆ. ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಡೈರಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು.ಈ ವಿಷಯದ ಬಗ್ಗೆ ಸಿಐಐ ತನಿಖೆಗೆ ತಾವು ಕೋರಿದ್ದರೂ, ಸ್ಥಳೀಯ ಪೊಲೀಸರು ತನಿಖೆ ಮಾಡಿ ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಅವರು ಕೋರಿದರು. ಡೈರಿಯಲ್ಲಿರುವ ಸಹಿ ತಮ್ಮದಲ್ಲವೆಂದು ಪುನರುಚ್ಚರಿಸಿರುವ ಸಿರೋಯಾ, ತಾವು ಶಾಸಕಾಂಗ ಮಂಡಳಿ ಕಾರ್ಯಾಲಯದಲ್ಲಿ ಸಹಿ ಮಾಡಿದ .... ಮುಂದೆ ಓದಿ
ಪುತ್ರನ ದುರಂತ ಸಾವಿನ ಸುದ್ದಿಯನ್ನು ತಾಯಿಗೆ ತಿಳಿಸಲೇ ಇಲ್ಲ
 ಬೆಂಗಳೂರು: ಎನ್. ಅನ್ನಪೂರ್ಣ ಅಲಿಯಾಸ್ ಅಮ್ಮಾಜಮ್ಮ ಯಲಹಂಕ ಓಲ್ಡ್ ಟೌನ್ ನಿವಾಸಿಯಾಗಿದ್ದು, ಸೋಮವಾರ ಸಂಜೆ ಬಂಧುಗಳು ಮತ್ತು ಕುಟುಂಬದ ಸ್ನೇಹಿತರು ಅವರ ಮನೆಬಾಗಿಲಿಗೆ ಬಂದಾಗ ಭಯವಿಹ್ವಲರಾದರು.ತಮ್ಮ ಪುತ್ರ ಹರ್ಷರಾಜ್‌ನಿಗೆ ಅಪಘಾತವಾಗಿದ್ದು ಚಿಕಿತ್ಸೆ ಬಳಿಕ ಮನೆಗೆ ವಾಪಸಾಗುತ್ತಾನೆ ಎಂದು 40 ವರ್ಷದ ಅನ್ನಪೂರ್ಣರಿಗೆ ತಿಳಿಸಲಾಯಿತು. ಆದರೆ ಅನ್ನಪೂರ್ಣರ ತಾಯಿ ಹೃದಯ ಯಾವುದನ್ನೋ ಕಳೆದುಕೊಂಡ ಹಾಗೆ ಮಿಡಿಯಿತು.ನನ್ನ ಪುತ್ರನಿಗೆ ಅಪಘಾತದಲ್ಲಿ ಬರೀ ಗಾಯ ಮಾತ್ರವಾಗಿದೆಯೇ? ಇಲ್ಲಿ ನಿಂತು ಮಾತನಾಡುತ್ತಿರುವ ಜನರ ಗುಂಪು ಯಾರು? ನನ್ನ ಪುತ್ರನಿಗೆ ಏನೋ ಆಗಿದೆ.ದಯವಿಟ್ಟು ಏನನ್ನೂ ಮುಚ್ಚಿಡಬೇಡಿ. ನನ್ನ ಮಗನಿಗೆ ಏನಾಯಿತು ಹೇಳಿ ಎಂದು ತನ್ನ ಪತಿ ನಾರಾಯಣಸ್ವಾಮಿಗೆ ಅನ್ನಪೂರ್ಣ ಬೇಡಿಕೊಂಡಳು. ನಾರಾಯಣಸ್ವಾಮಿ ನಿವಾಸದಲ್ಲಿ 10 ಹಸುಗಳನ್ನು ಸಾಕಿದ್ದು, ಅವುಗಳ ಹಾಲಿನ ಮಾರಾಟದಿಂದ ಜೀವನೋಪಾಯ .... ಮುಂದೆ ಓದಿ
ಸಹಪಾಠಿಗಳಿಂದಲೇ ವಿದ್ಯಾರ್ಥಿಯ ಬರ್ಬರ ಹತ್ಯೆ
ಬೆಂಗಳೂರು: ಬೆಂಗಳೂರಿನ ಸರ್ಕಾರಿ ಶಾಲೆಯೊಂದರನ್ನು ವಿದ್ಯಾರ್ಥಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಂಭವಿಸಿದೆ. ಕ್ರೌರ್ಯ ಮತ್ತು ಹಿಂಸೆ ವಿದ್ಯಾರ್ಥಿ ಸಮುದಾಯದಲ್ಲಿ ಕೂಡ ಇರುವುದಕ್ಕೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ. ವಿದ್ಯಾರ್ಥಿಯನ್ನು ಅವನ ಸಹಪಾಠಿಗಳೇ ಇರಿದು ಕೊಂದಿದ್ದು, ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆಯಲ್ಲಿ ಈ ದುರಂತ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುವ ಜಾಗದ ವಿಷಯವಾಗಿ ಗಲಾಟೆ ನಡೆದಿದ್ದು, ಸಹಪಾಠಿಗಳು ವಿದ್ಯಾರ್ಥಿ ಹರ್ಷನಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಬೆಂಗಳೂರಿನ ಯಲಹಂಕದ ಸಂಯುಕ್ತ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. .... ಮುಂದೆ ಓದಿ
ಕಾಂಗ್ರೆಸ್ ಈಗ ತಿನ್ನುವ ಪಕ್ಷವಾಗಿದೆ: ಸದಾನಂದ ಗೌಡ
ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ಆದರೆ ಕಾಂಗ್ರೆಸ್ ಈಗ ತಿನ್ನುವ ಪಕ್ಷವಾಗಿದೆ ಎಂದು ಬಿಜೆಪಿ ಮುಖಂಡ ಡಿ.ವಿ. ಸದಾನಂದ ಗೌಡ ಹೇಳಿದರು. ಈಗಾಗಲೇ ಕಾಂಗ್ರೆಸ್ ಡೈರಿ ಮಾಧ್ಯಮಗಳಲ್ಲಿ ಬಯಲಾಗಿದೆ. ನಮ್ಮ ವಿರುದ್ಧ ಹೋರಾಟ ಮಾಡುವುದಾದರೆ ಮಾಡಲಿ ಎಂದು ಸದಾನಂದ ಗೌಡ ಸೋಮವಾರಪೇಟೆಯಲ್ಲಿ ಹೇಳಿದರು. ಯಡಿಯೂರಪ್ಪನವರ ವಿರುದ್ಧ ವೈಯಕ್ತಿಕವಾಗಿ ದ್ವೇಷ ಸಾಧಿಸುವ ಮೂಲಕ ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ಡಿವಿಎಸ್ ಟೀಕಿಸಿದರು.  ಕಾಂಗ್ರೆಸ್ ಡೈರಿ ಬಯಲಾದ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ. ನಮಗೂ ಹೋರಾಟ ಮಾಡುವುದು ಗೊತ್ತಿದೆ ಎಂದು ಹೇಳಿದ್ದರು. ಸಿಎಂ ಹೇಳಿಕೆಗೆ ಡಿವಿಎಸ್ ಮೇಲಿನಂತೆ ತಿರುಗೇಟು ನೀಡಿದರು. .... ಮುಂದೆ ಓದಿ
ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿಬಿದ್ದ ರಥ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಮುರಿದು ಬಿದ್ದು 25 ಕ್ಕೂ ಹೆಚ್ಚು ಜನರು ಗಾಯಗೊಂಡರು. ರಥವನ್ನು ಎಳೆಯುವಾಗ ಚಕ್ರ ಮುರಿದು ಉತ್ಸವ ಮೂರ್ತಿ ಸಮೇತ ರಥ ಉರುಳಿಬಿತ್ತು. ಜನರ ಕೂಗಾಟ, ಆರ್ತನಾದ ಮುಗಿಲುಮುಟ್ಟಿತು.ರಥ ಉರುಳಿಬಿದ್ದ ವಿಡಿಯೊ ವೀಕ್ಷಿಸಿ  .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery