ರಾಜ್ಯ ಸುದ್ದಿ
ತೆರೆದ ಕೊಳವೆಬಾವಿಗೆ ಬಿದ್ದ ಬಾಲಕಿ ಜೀವನ್ಮರಣ ಹೋರಾಟ
ಬೆಳಗಾವಿ: ಬೆಳಗಾವಿಯ ಅಥಣಿಯ ಝುಂಜರವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ಕಾವೇರಿ ತೆರೆದ ಕೊಳವೆ ಬಾವಿಗೆ ಬಿದ್ದು ಸಾವು, ಬದುಕಿನ ಹೋರಾಟ ನಡೆಸಿದ್ದಾಳೆ. ಈ  ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 27 ಅಡಿ ಆಳದಲ್ಲಿ ಬಾಲಕಿಯ ಕೈ ಕ್ಯಾಮರಾದ ಚಿತ್ರದಲ್ಲಿ ಕಂಡುಬಂದಿದೆ. ಕಾವೇರಿ ಬದುಕುಳಿಯಲು ರಕ್ಷಣಾ ಸಿಬ್ಬಂದಿ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಹುಕ್ ಮೂಲಕ ಈ ಬಾಲಕಿಯನ್ನು ಮೇಲೆತ್ತುವ ಪ್ರಯತ್ನ ಎರಡು ಬಾರಿ ವಿಫಲವಾದರೂ ಮೂರನೇ ಬಾರಿ ಕಾವೇರಿಯನ್ನು ಹೊರತೆಗೆಯುವ ಸಾಧ್ಯತೆ ಇದೆ. ಕಾವೇರಿ ಬದುಕಿ ಬಾ ಎಂಬ ಕೂಗು ಮುಗಿಲುಮುಟ್ಟಿದ್ದು, ಅವಳ ತಾಯಿಯ ಗೋಳು ಹೇಳತೀರದಾಗಿದೆ. ತೆರೆದ ಕೊಳವೆಬಾವಿಗೆ ಕಾವೇರಿ ಬಿದ್ದಕೂಡಲೇ ಆಕೆ ಮೇಲೆ ಬರಲು ಸಹಾಯಕವಾಗಲಿ ಎಂದು ಸವಿತಾ ಹಗ್ಗವನ್ನು ಕೊಳವೆಬಾವಿಯ .... ಮುಂದೆ ಓದಿ
ವಿದ್ಯಾವಾರಿಧಿ ವಸತಿ ಶಾಲೆ ಮಕ್ಕಳ ಸಾವಿನ ದುರಂತ, ಹತ್ತು ದಿನಗಳೊಳಗಾಗಿ ಪ್ರಯೋಗಾಲಯದ ವರದಿ
ತುಮಕೂರು : ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ನ್ಯಾಷನಲ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ವಿಷ ಮಿಶ್ರಿತವೆನ್ನಲಾದ ಆಹಾರ ಸೇವೆನೆಯಿಂದ ಮೂವರು ಮಕ್ಕಳು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಅಡಿಗೆ ಕೋಣೆಯಲ್ಲಿದ್ದ ಆಹಾರ ತಯಾರಿಕೆಗೆ ಬಳಸಲಾಗುವ 17 ವಿವಿಧ ಕಚ್ಚಾ ಸಾಮಗ್ರಿಗಳು ಸೇರಿ ವಿವಿಧ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಇನ್ನು 10 ದಿನಗಳೊಳಗಾಗಿ ವರದಿ ಬರಲಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದರು. ತಮ್ಮ ಕಚೇರಿಯಲ್ಲಿಂದು ಪ್ರಕರಣ ಕುರಿತಂತೆ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ವಸತಿ ಶಾಲೆಯ ಅಡಿಗೆ ಕೋಣೆಯಲ್ಲಿ ಮಕ್ಕಳ ಊಟಕ್ಕಾಗಿ ತಯಾರಿಸಿಟ್ಟಿದ್ದ ಅನ್ನ, ಸಾರು, ಮಕ್ಕಳ ವಾಂತಿಯ ಮಾದರಿ ಹಾಗೂ ಶಾಲಾ ಆವರಣದ ಬಳಿಯಿರುವ ದಾಳಿಂಬೆ ಎಲೆಗಳನ್ನು ಬೆಂಗಳೂರಿನ .... ಮುಂದೆ ಓದಿ
ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2016 ನೇ ಸಾಲಿನ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಹಾಗೂ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಪತ್ರಿಕೋದ್ಯಮ ಕ್ಷೇತ್ರದ ವಿವಿಧ ರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ಟೀಯೆಸ್ಸಾರ್, ಮೊಹರೆ ಹಣಮಂತರಾಯ, ಪರಿಸರ ಪತ್ರಿಕೋದ್ಯಮ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಟೀಯೆಸ್ಸಾರ್ ಪ್ರಶಸ್ತಿ: ಕನ್ನಡ ಪತ್ರಿಕೋದ್ಯಮದಲ್ಲಿ "ಛೂ ಬಾಣ" ದ ಮೂಲಕ ರಾಜಕಾರಣದ ಓರೆ ಕೋರೆಗಳಿಗೆ ಹೊಸ ರೂಪವನ್ನು ನೀಡಿದ ಹಿರಿಯ ಪತ್ರಕರ್ತ ದಿ: ಟಿ.ಎಸ್. ರಾಮಚಂದ್ರರಾವ್ ಅವರು ತಮ್ಮ ಮೊನಚು ಬರಹಗಳಿಂದಲೇ ಓದುಗರ ಹೃದಯವನ್ನು ಗೆದ್ದವರು. ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಟೀಯೆಸ್ಸಾರ್ ನೆನಪಿನಲ್ಲಿ ಕರ್ನಾಟಕ ಸರ್ಕಾರ 1993 .... ಮುಂದೆ ಓದಿ
ಇಂದಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಸುಗಮವಾಗಿ ನಡೆಯಲು ಕ್ರಮ: ತನ್ವೀರ್ ಸೇಠ್
ಇಂದಿನಿಂದ ಆರಂಭವಾಗಲಿರುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಸುಗಮವಾಗಿ ನಡೆಯಲಿದ್ದು ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ತಿಳಿಸಿದರು. ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಸಚಿವರು ಈಗಾಗಲೇ ನಿಗದಿಪಡಿಸಿರುವಂತೆಯೇ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಕಾರ್ಯಗಳು ನಡೆಯಲಿವೆ. ಈ ಕರ್ತವ್ಯಕ್ಕೆ ನಿಯೋಜಿಸಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಪರೀಕ್ಷೆ ಹಾಗೂ ಮೌಲ್ಯ ಮಾಪನ ಬಹಿಷ್ಕರಿಸುವಂತಹ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಚಿವರು ಪ್ರಕಟಿಸಿದರು.  ತಮ್ಮನ್ನು ಭೇಟಿ ಮಾಡಿದ ಐದು ಬೋಧಕ ಸಿಬ್ಬಂದಿ ಸಂಘಗಳ ಪ್ರತಿನಿಧಿಗಳು ಇಂದಿನಿಂದ ನಡೆಯುವ ಪರೀಕ್ಷೆಗಳು ಹಾಗೂ ಮೌಲ್ಯಮಾಪನಗಳನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸುವುದಾಗಿ .... ಮುಂದೆ ಓದಿ
ಮುಸ್ಲಿಂ ಯುವತಿ ದೇವರನಾಮ ಹಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ: ಖಾದರ್
ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಮುಸ್ಲಿಂ ಯುವತಿ ದೇವರನಾಮ ಹಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧಮ್ಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಯು.ಟಿ.ಖಾದರ್ ಎಚ್ಚರಿಸಿದರು.  ಚಾಮರಾಜನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ವಿಶ್ವ ಮಹಿಳಾ ದಿನ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವತಿ ತಪ್ಪು ಮಾಡಿದ್ದರೆ ಅದನ್ನು ಖಂಡಿಸಲು ಸಮಾಜದ ಮುಖಂಡರು, ಹಿರಿಯರು ಇದ್ದಾರೆ. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಧಮ್ಕಿ ಹಾಕಿದರೆ ಸೈಬರ್ ಕ್ರೈಂ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು. .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery