ಮನರಂಜನೆ
ಕೊಹ್ಲಿ, ಅನುಷ್ಕಾ ಲವ್ ಬ್ರೇಕ್‌ಗೆ ಸಲ್ಲು ಕಾರಣಕರ್ತರೇ?
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ನಡುವೆ ಲವ್ ಬ್ರೇಕ್ ಆಗುವುದಕ್ಕೆ ಸಲ್ಲು ಅರ್ಥಾತ್ ಸಲ್ಮಾನ್ ಖಾನ್ ಕಾರಣರಾಗಿದ್ದಾರೆಯೇ? ಸಲ್ಲು ಅಭಿನಯದ ಸುಲ್ತಾನ್ ಚಿತ್ರದಲ್ಲಿ ಅನುಷ್ಕಾಗೆ ಬಂದಿರುವ ಆಫರ್ ತಿರಸ್ಕರಿಸುವಂತೆ ಕೊಹ್ಲಿ ಅನುಷ್ಕಾಗೆ ಹೇಳಿದ್ದರಂತೆ. ಇದಲ್ಲದೇ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಹೌಸ್ ವೈಫ್ ಆಗಲು ಕೊಹ್ಲಿ ಅನುಷ್ಕಾಗೆ ಸಲಹೆ ಮಾಡಿದ್ದರಂತೆ. ಆದರೆ ಚಿತ್ರರಂಗ ತ್ಯಜಿಸಲು ಸುತಾರಾಂ ಒಪ್ಪದ ಅನುಷ್ಕಾ ಕೊಹ್ಲಿ ಪ್ರೇಮಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿರಬಹುದೆಂಬ ಮಾತು ಕೇಳಿಬರುತ್ತಿದೆ. ವೃತ್ತಿ ಜೀವನದ ಬಗ್ಗೆ ಆಸೆ, ಆಕಾಂಕ್ಷೆಗಳನ್ನು ಕಟ್ಟಿಕೊಂಡಿರುವ ಅನುಷ್ಕಾ ಕೊಹ್ಲಿ ನಡೆಯಿಂದ ಬೇಸತ್ತಿದ್ದಾರೆಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಮುಂಚೆ ಈ ವರ್ಷವೇ ಮದುವೆಯಾಗಬೇಕೆಂಬ ಒತ್ತಾಯವನ್ನು ಅನುಷ್ಕಾ ತಿರಸ್ಕರಿಸಿದ್ದರಿಂದ ಲವ್ ಬ್ರೇಕ್ .... ಮುಂದೆ ಓದಿ
ಚಿತ್ರನಟಿ ಪ್ರಣೀತಾ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಪಾಯದಿಂದ ಪಾರು
ಚಿತ್ರನಟಿ ಪ್ರಣೀತಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡು ಪ್ರಣೀತಾ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಕಮ್ಮಂ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಂಷಾದ್ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಗ ನೆಲ್ಗೊಂಡದ ಬಳಿ ಕಾರು ಪಲ್ಟಿ ಹೊಡೆದಿದೆ. ಎದುರಿಗೆ ಬರುತ್ತಿದ್ದ ಬೈಕ್ ಸ್ಕಿಡ್ ಆಗಿದ್ದರಿಂದ ಅದಕ್ಕೆ ಡಿಕ್ಕಿ ಹೊಡೆಯುವುದನ್ನು ಚಾಲಕ ತಪ್ಪಿಸುವುದಕ್ಕೆ ಬ್ರೇಕ್ ಅದುಮಿದಾಗ ಕಾರು 2 ಮೂರು ಬಾರಿ ಪಲ್ಟಿ ಹೊಡೆದಿದ್ದರೂ ಕಾರಿನಲ್ಲಿದ್ದ ಯಾರಿಗೂ ಪ್ರಾಣಾಪಾಯ ಉಂಟಾಗದೇ ಸುರಕ್ಷಿತವಾಗಿದ್ದಾರೆ. ಈ ಅಪಘಾತದಿಂದ ಕಾರು ನಜ್ಜುಗುಜ್ಜಾಗಿದ್ದು, ಗಾಜುಗಳು ಒಡೆದಿವೆ. ಪ್ರಣೀತಾ ಈ ಕುರಿತು ಟ್ವೀಟ್ ಮಾಡಿ ತಾನು ಸುರಕ್ಷಿತವಾಗಿರುವುದಾಗಿಯೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. .... ಮುಂದೆ ಓದಿ
ಹುಚ್ಚ ವೆಂಕಟ್‌ಗೆ ಖುಲಾಯಿಸಿದ ಅದೃಷ್ಟ
 ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಅವರ ಅದೃಷ್ಟ ಖುಲಾಯಿಸಿದೆ. ಯುಟ್ಯೂಬ್‌ನಲ್ಲಿ ಮಾತ್ರ ಮಿಂಚುತ್ತಿದ್ದ ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಗೆ ಬಂದ ನಂತರ ವೀಕ್ಷಕರನ್ನು ಸೆಳೆದಿದ್ದರು. ಅದಾದ ಬಳಿಕ ಅಂಬೇಡ್ಕರ್ ಕುರಿತ ಹೇಳಿಕೆಯಿಂದ ಜೈಲುವಾಸದ ಶಿಕ್ಷೆಯನ್ನೂ ಅನುಭವಿಸಿದರು. ಜೈಲಿಗೆ ಹೋಗಿ ಬಂದ ಮೇಲೆ ಹುಚ್ಚವೆಂಕಟ್‌ಗೆ ಜ್ಞಾನೋದಯವಾದಂತೆ ಕಂಡಿತು. ನನ್ ಎಕ್ಕಡ , ನನ್ ಮಗಂದ್ ಪದಪ್ರಯೋಗವನ್ನೇ ತ್ಯಜಿಸಿದರು. ಬಳಿಕ ಪರಪಂಚದಲ್ಲಿ ಯೋಗರಾಜ ಭಟ್ಟರ ರಚನೆಯ ಹುಟ್ಟಿದ ಊರನು ಹಾಡನ್ನು ಹಾಡಿ ಒಂದಿಷ್ಟು ಜನಪ್ರಿಯತೆ ಗಳಿಸಿದರು.ಇದೀಗ ವೆಂಕಟ್‌ಗೆ ಮತ್ತೊಂದು ಆಫರ್ ಬಂದಿದೆ. ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಡಿಕ್ಟೇಟರ್ ಚಿತ್ರದಲ್ಲಿ ನಟಿಸಲಿದ್ದಾರೆ. ವೆಂಕಟ್ ನಾಯಕಿ ಬಿಗ್ ಬಾಸ್‌ನಲ್ಲಿದ್ದ ಗೌತಮಿ. ವೆಂಕಟ್ .... ಮುಂದೆ ಓದಿ
ಶಾರೂಕ್ ರಾಷ್ಟ್ರೀಯ ಪ್ರಶಸ್ತಿ ಗೆಲ್ಲಬಾರದೆಂದು ಅಭಿಮಾನಿಗಳ ಹಾರೈಕೆ
ಶಾರುಕ್ ಖಾನ್ ಅವರ ಅಭಿಮಾನಿ ವರ್ಗ ಒಂದು ಹಾರೈಕೆ ಮಾಡುತ್ತಿದೆ.ಶಾರೂಕ್ ಖಾನ್ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲಲೇಬಾರದೆಂಬುದು ಫ್ಯಾನ್‌ಗಳ ಹಾರೈಕೆ. ಎಲ್ಲಾ ನಟರ ಫ್ಯಾನ್‌ಗಳು ತಮ್ಮ ನಾಯಕನ ಒಳಿತನ್ನು ಬಯಸಿದರೆ ಶಾರೂಕ್ ಫ್ಯಾನ್‌ಗಳು ಹೀಗೇಕೆ? ಶಾರೂಕ್ ಹೆಸರೇ ಪ್ರಶಸ್ತಿಗಳ ಜತೆ ತಳಕುಹಾಕಿಕೊಂಡಿದೆ. ಬಾದಶಾ ಬಾಲಿವುಡ್ ಗೆದ್ದ ಪ್ರಶಸ್ತಿಗಳ ಲೆಕ್ಕವೇ ಸಿಗುತ್ತಿಲ್ಲ. ಆದರೆ ಅಚ್ಚರಿಯ ಸಂಗತಿಯೇನೆಂದರೆ ಶಾರೂಕ್ ರಾಷ್ಟ್ರೀಯ ಪ್ರಶಸ್ತಿಯನ್ನೇ ಗೆದ್ದಿಲ್ಲವಂತೆ. ಅದನ್ನು ಗೆಲ್ಲಬೇಕೆಂಬ ಅಭಿಲಾಷೆಯೂ ಅವರಿಗಿದೆ.    ರಾಷ್ಟ್ರೀಯ ಪ್ರಶಸ್ತಿ ಗೆದ್ದನಂತರವೇ ತಾನು ಚಿತ್ರರಂಗದಿಂದ  ನಿವೃತ್ತಿಯಾಗುವುದಾಗಿ ಶಾರೂಕ್ ಹೇಳಿದ್ದಾರೆ. ಇದರಿಂದಾಗಿ ಶಾರೂಕ್ ರಾಷ್ಟ್ರೀಯ  ಪ್ರಶಸ್ತಿ ಗೆದ್ದರೆ ತಮ್ಮಿಂದ ಮರೆಯಾಗುವುದರಿಂದ ಅವರು ರಾಷ್ಟ್ರೀಯ ಪ್ರಶಸ್ತಿ ಗೆಲ್ಲಲೇಬಾರದೆಂದು ಅಭಿಮಾನಿಗಳು ಹಾರೈಕೆ ಮಾಡಿದ್ದಾರೆ. .... ಮುಂದೆ ಓದಿ
ಅತ್ಯಾಚಾರದ ದೂರಿನಿಂದ ನೊಂದ ಕಿರುತೆರೆ ನಟ ವಿಶಾಲ್ ನಾಪತ್ತೆ
ಮುಂಬೈ: ತನ್ನ ಗೆಳತಿಯಿಂದ ಅತ್ಯಾಚಾರದ ಆರೋಪಕ್ಕೆ ಒಳಗಾದ ಕಿರುತೆರೆ ನಟ ವಿಶಾಲ್ ತಕ್ಕರ್ ಜನವರಿ ಒಂದರಿಂದ ನಾಪತ್ತೆಯಾಗಿದ್ದಾರೆ. ಅತ್ಯಾಚಾರಿ ಎಂಬ ಹಣೆಪಟ್ಟಿಯಿಂದ ತೀವ್ರ ಖಿನ್ನತೆಗೊಳಗಾಗಿದ್ದ 31 ವರ್ಷದ ನಟ ನಾಪತ್ತೆಯಾಗಿದ್ದಾರೆ ಎಂದು ಏಷ್ಯನ್ ಏಜ್ ವರದಿ ಮಾಡಿದೆ. ಬ್ರೇಕ್ ತೆಗೆದುಕೊಳ್ಳುವಾಗ ಥಾನೆಯ ಫೌಂಟೇನ್ ಹೊಟೆಲ್‌‌ನಿಂದ  ಜನವರಿ ಒಂದರ ಬೆಳಿಗ್ಗೆ ನಾಪತ್ತೆಯಾಗಿದ್ದರು. ಗೆಳತಿ ರಜನಿ ಜತೆ ಹೊಸ ವರ್ಷ ಆಚರಿಸಿಕೊಂಡ ಬಳಿಕ ಅಹ್ಮದಾಬಾದ್ ವಿಹಾರಧಾಮದಿಂದ ಹಿಂತಿರುಗುತ್ತಿದ್ದ ವಿಶಾಲ್ ಕಾಣೆಯಾಗಿದ್ದರು.ಫೌಂಟೇನ್ ಹೊಟೆಲ್‌ನಲ್ಲಿ ಚಹಾ ಸೇವಿಸುತ್ತಿದ್ದ ವಿಶಾಲ್ ಅಂಧೇರಿಯಲ್ಲಿ ಸ್ನೇಹಿತರೊಬ್ಬರನ್ನು ನೋಡಬೇಕೆಂದು ಹೇಳಿ ನಿರ್ಗಮಿಸಿದ್ದರು. ಅದಾದ ಬಳಿಕ ರಜನಿ ಅವರಿಗಾಗಿ ಹುಡುಕಾಟ ನಡೆಸಿದ್ದರೂ ಫಲ ನೀಡಲಿಲ್ಲ. ಆಗಿನಿಂದ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತನಿಖಾಧಿಕಾರಿ ಜಯಂತ್ .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery