ಮನರಂಜನೆ
ಸಲ್ಮಾನ್ ಖಾನ್, ಲುಲಿತಾ ಪಂತುರ್ ವಿವಾಹ ನಿಶ್ಚಿತಾರ್ಥ?
ಅನೇಕ ವರ್ಷಗಳ ಕಾಲ ವಿವಾಹವಾಗದೇ ಉಳಿದು ಹದಿಹರೆಯದ ಯುವತಿಯರು ಮತ್ತು ಬಾಲಿವುಡ್ ಅವಿವಾಹಿತ ನಟಿಯರ ಮನಸ್ಸಿನಲ್ಲಿ  ಕಿಚ್ಚೆಬ್ಬಿಸಿದ್ದ ಸಲ್ಮಾನ್ ಖಾನ್ ರೊಮಾನಿಯಾದ ಗೆಳತಿ ಲುಲಿಯಾ ವಂತುರ್ ಜತೆ ನಿಶ್ಚಿತಾರ್ಥ ನೆರವೇರಿದೆ ಸುದ್ದಿ ಹರಿದಾಡುತ್ತಿದೆ.ಮನೋರಮಾ ಆನ್‌ಲೈನ್ ವರದಿ ಪ್ರಕಾರ, ಸಲ್ಮಾನ್ ಮತ್ತು ಲುಲಿಯಾ ಗೌಪ್ಯವಾಗಿ  ನಿಶ್ಚಿತಾರ್ಥ  ಮಾಡಿಕೊಂಡಿದ್ದು, ಅವರ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ.ಈ ನಿಶ್ಚಿತಾರ್ಥದ ಬಗ್ಗೆ ಬುಕಾರೆಸ್ಟ್ ಲೂಲಿಯಾ ಮ್ಯಾನೇಜರ್ ಖಚಿತಪಡಿಸಿದ್ದು, ವಿವಾಹ ಬೇಗನೆ ನೆರವೇರುತ್ತದೆಂದು ಹೇಳಿದ್ದಾರೆ. ಇಡೀ ರೊಮಾನಿಯಾದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಬಗ್ಗೆ ಊಹಾಪೋಹಗಳು ಎದ್ದಿವೆ. ಸಲ್ಮಾನ್ ಲುಲಿಯಾಳನ್ನು ಎರಡು ವರ್ಷಗಳ ಹಿಂದೆ ಸಂದಿಸಿದ್ದು, ಅನೇಕ ಬಾರಿ ಅವರಿಬ್ಬರು ಜೊತೆಗಿದ್ದಿದ್ದು ಪತ್ತೆಯಾಗಿತ್ತು. ಅರ್ಪಿತಾ ಖಾನ್ ವಿವಾಹ ಸಮಾರಂಭದಲ್ಲಿ ಸಲ್ಮಾನ್ ಲುಲಿತಾ ಜತೆ ತನ್ನ .... ಮುಂದೆ ಓದಿ
ವಂಚನೆ ಆರೋಪದ ಮೇಲೆ ಕನ್ನಡ ಚಿತ್ರನಟಿ ಮರಿಯಾ ಸುಸೈರಾಜ್ ಬಂಧನ
ಅಹಮದಾಬಾದ್: ಕನ್ನಡ ಚಿತ್ರನಟಿ ಮತ್ತು ರೂಪದರ್ಶಿ ಮೋನಿಕಾ ಮರಿಯಾ ಸುಸೈರಾಜ್ ಅವರನ್ನು ವಂಚನೆ ಆರೋಪದ ಮೇಲೆ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.  ಮರಿಯಾ ತನ್ನ ಟ್ರಾವೆಲ್ ಏಜನ್ಸಿಯ ಮೂಲಕ ಹಜ್ ಯಾತ್ರಾರ್ಥಿಗಳಿಗೆ 2.62 ಕೋಟಿ ರೂ. ವಂಚಿಸಿದ್ದಾಳೆಂದು ತಿಳಿದುಬಂದಿದೆ.  ವಡೋದರಾದಲ್ಲಿ ಅವರ ಟ್ರಾವಲ್ ಏಜನ್ಸಿಯಿದ್ದು, ಅನೇಕ ಹಜ್ ಯಾತ್ರಿಗಳಿಗೆ ಟಿಕೆಟ್ ಬುಕ್ ಮಾಡಿತ್ತು. ಆದರೆ ಬುಕಿಂಗ್ ಮಾಡಿದ ಬಳಿಕ ಎಲ್ಲಾ ಟಿಕೆಟ್‌ಗಳನ್ನು ರದ್ದುಮಾಡಿ ಗ್ರಾಹಕರಿಂದ ವಸೂಲಿ ಮಾಡಿದ್ದ 2.62 ಕೋಟಿ ರೂ. ವಂಚಿಸಿದ್ದಾರೆಂದು ಮರಿಯಾ ವಿರುದ್ಧ ಆರೋಪಿಸಲಾಗಿತ್ತು.  ಇದಕ್ಕೆ ಮುಂಚೆ ಮರಿಯಾ ಸುಸೈರಾಜ್  2008ರಲ್ಲಿ ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಹತ್ಯೆ ಪ್ರಕರಣದಲ್ಲಿ 3 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಹತ್ಯೆ ಆರೋಪದ .... ಮುಂದೆ ಓದಿ
ರಾಮ್ ಗೋಪಾಲ್ ವರ್ಮಾ ಬ್ರೂಸ್ ಲೀ ಟ್ರೇಲರ್
ರಾಮ್ ಗೋಪಾಲ್ ವರ್ಮ ಅವರು ಬಾಲಿವುಡ್ ಸಿನೆಮಾದ ಖ್ಯಾತ ನಿರ್ದೇಶಕರು. ಕನ್ನಡದಲ್ಲಿ ಕಿಲ್ಲಿಂಗ್ ವೀರಪ್ಪನ್ ಚಿತ್ರವನ್ನು ನಿರ್ಮಿಸುತ್ತಿದ್ದು, ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ. ವರ್ಮಾ ಹಿಂದಿಯಲ್ಲಿ 'ಬ್ರೂಸ್ ಲೀ' ಸಿನೆಮಾ ನಿರ್ದೇಶಿಸುತ್ತಿದ್ದು, ಈ ಚಿತ್ರದ  ಟ್ರೇಲರ್  ಬಿಡುಗಡೆ ಮಾಡಿದ್ದಾರೆ. ನಟ-ನಟಿ ಮತ್ತು ತಾಂತ್ರಿಕ ವರ್ಗದ ಯಾವುದರ ಬಗ್ಗೆಯೂ ಪ್ರಸ್ತಾಪಿಸದೇ ಬ್ರೂಸ್ ಲೀ ಅವರಿಗೆ ಟ್ರಿಬ್ಯೂಟ್ ಎಂದು ಹೇಳಿಕೊಂಡಿರುವ ಆರ್ ಜಿ ವಿ ಸಿನೆಮಾದಲ್ಲಿ ಯುವತಿಯೊಬ್ಬಳು ತಾನು ಕಲಿತ ಕರಾಟೆ ಕಲೆ ಮೂಲಕ ಯುವಕರನ್ನು ಹೊಡೆದು ಬೀಳಿಸುವ ದ್ರಶ್ಯ ರೋಮಾಂಚಕಾರಿಯಾಗಿದ್ದು,ಸೌಂದರ್ಯ ಮತ್ತು ಸಮರಕಲೆಯ ಶಕ್ತಿ ಮಿಳಿತಗೊಂಡಿದೆ. ವಿಡಿಯೊ ಕ್ಲಿಕ್ ಮಾಡಿ .... ಮುಂದೆ ಓದಿ
ಹಿಂದು ಧರ್ಮಕ್ಕೆ ಘರ್ ವಾಪಸಿಗೆ ರೆಹಮಾನ್‌ಗೆ ವಿಎಚ್‌ಪಿ ಸಲಹೆ
ನವದೆಹಲಿ: ಪ್ರವಾದಿ ಮೊಹಮ್ಮದ್ ಅವರ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ಖ್ಯಾತ ಸಂಗೀತ ಸಂಯೋಜಕ ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿರುವ ಬಗ್ಗೆ ವಿಶ್ವ ಹಿಂದು ಪರಿಷತ್ ವಿಷಾದ ವ್ಯಕ್ತಪಡಿಸಿದ್ದು ಹಿಂದು ಧರ್ಮಕ್ಕೆ ಮರುಮತಾಂತರಗೊಳ್ಳುವಂತೆ ಅದು ರೆಹಮಾನ್‌ ಅವರಿಗೆ ಕೋರಿದೆ. ರೆಹಮಾನ್ ಅವರು ಮುಂಚೆ ಹಿಂದುವಾಗಿದ್ದವರು ಮುಸ್ಲಿಂ ಧರ್ಮಕ್ಕೆ ಕಾರಣಾಂತರಗಳಿಂದ ಮತಾಂತರಗೊಂಡಿದ್ದರು.  ಫತ್ವಾ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಹೆಚ್‌ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್, ರೆಹಮಾನ್ ಘರ್ ವಾಪಸಿಯಾದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.  ರೆಹಮಾನ್ ಘರ್ ವಾಪಸಿಯಾದರೆ ಅವರಿಗೆ ಮುಸ್ಲಿಂ ಸಂಘಟನೆಯಿಂದ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದರು.  ಮೆಸೆಂಜರ್‌ ಆಫ್‌ ಗಾಡ್‌' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ರೆಹಮಾನ್‌ ವಿರುದ್ಧ ಮುಂಬಯಿ ಮೂಲದ .... ಮುಂದೆ ಓದಿ
ಈ ವಾರದ ಬೆಳ್ಳಿಸಿನಿಮಾ-ಬೆಳ್ಳಿಮಾತು: ತಲ್ಲಣ ಚಲನಚಿತ್ರ ಪ್ರದರ್ಶನ, ಸಂವಾದ
ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ ಬೆಳ್ಳಿಸಿನಿಮಾ-ಬೆಳ್ಳಿಮಾತು ಕಾರ್ಯಕ್ರಮದಡಿ ಸೆಪ್ಟೆಂಬರ್ 19 ರ ಶನಿವಾರ ಬೆಳ್ಳಿ ಸಿನಿಮಾ ತಲ್ಲಣ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ಶ್ರೀಮತಿ ವಸುಂಧರಾ ಕುಲಕರ್ಣಿ ಅವರಿಂದ ಬೆಳ್ಳಿಮಾತು ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ. ಬೆಂಗಳೂರು ಮಿಲ್ಲರ್ಸ್  ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸೆಪ್ಟೆಂಬರ್ 19 ರಂದು ಸಂಜೆ 4-೦೦ ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟರಾದ ಕೆ. ಎಸ್. ಶ್ರೀಧರ್, ಸಂಕಲನಕಾರರಾದ ಎಂ. .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery