ಮನರಂಜನೆ
ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು
ಚೆನ್ನೈ: ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಾವೇರಿ ವಿವಾದದ ವಿಚಾರವಾಗಿ 9 ವರ್ಷಗಳ ಹಿಂದೆ ತಾವು ನೀಡಿದ್ದ ಹೇಳಿಕೆಗೆ ವಿಷಾದ ಸೂಚಿಸಿದ ಬಳಿಕ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನು ರದ್ದು ಮಾಡಿದ್ದಾರೆ.ದರ್ಶನ್ ಅಭಿನಯದ ಚಕ್ರವರ್ತಿ ಹಾಗೂ ಶ್ರೀನಿವಾಸ ಕಲ್ಯಾಣ ಹಾಗೂ ಶುದ್ಧಿ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಮುಂಗಡ ಕಾಯ್ದಿರಿಸಿದ ಟಿಕೆಟ್'ಗಳನ್ನು ಸಹ ರದ್ದುಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನು ರದ್ದು ಮಾಡುವ ಮೂಲಕ ದ್ವೇಷದ ಕ್ರಮ ಅನುಸರಿಸಿದರೆ ನಾವು ಕೂಡ ತಮಿಳು ಚಿತ್ರಗಳ ಪ್ರದರ್ಶನವನ್ನು ಇಲ್ಲಿ ರದ್ದುಗೊಳಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ಸಾರಾ. ಗೋವಿಂದು ಎಚ್ಚರಿಸಿದ್ದಾರೆ. ಈ ನಡುವೆ ಸತ್ಯರಾಜ್ ತಮ್ಮ ಹೇಳಿಕೆಗೆ ವಿಷಾದ ಸೂಚಿಸುವ ಜತೆಗೆ ತಮಿಳರಿಗೆ ಅಭಯವನ್ನು ನೀಡಿ ಕಾವೇರಿ .... ಮುಂದೆ ಓದಿ
ಸ್ಟೀಲ್ ಫ್ಲೈಓವರ್ ಯೋಜನೆ ಕೈಬಿಟ್ಟ ಕಾಂಗ್ರೆಸ್ ಸರ್ಕಾರ
ಬೆಂಗಳೂರು: ಸ್ಟೀಲ್ ಫ್ಲೈ ಓವರ್ ಯೋಜನೆ ವಿಚಾರವನ್ನು ಕೈಬಿಡುವುದಕ್ಕೆ ಸರ್ಕಾರ ನಿರ್ಧರಿಸಿದೆ. ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸ್ಟೀಲ್ ಫ್ಲೈ ಓವರ್ ರದ್ದು ಮಾಡುವುದಾಗಿ ಘೋಷಿಸಿದರು. ಸ್ಟೀಲ್ ಫ್ಲೈ ಓವರ್ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.ಡೈರಿ ಪ್ರಕರಣದಲ್ಲಿ ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ 65 ಕೋಟಿ ಕಪ್ಪ ಸ್ವೀಕರಿಸಿದ ವರದಿಯಾಗಿತ್ತು. ಪ್ರೈಓವರ್ ನಿರ್ಮಾಣದ ವಿರುದ್ಧ ಬೆಂಗಳೂರು ಫೌಂಡೇಶನ್ ಅರ್ಜಿ ಸಲ್ಲಿಸಿತ್ತು. ಸ್ಟೀಲ್ ಫ್ಲೈಓವರ್ ನಿರ್ಮಾಣದಿಂದ ಪರಿಸರ ಹಾಳಾಗುತ್ತೆ ಎಂದು ಉಲ್ಲೇಖಿಸಲಾಗಿತ್ತು. ಇದರಿಂದಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆ ಕೈಬಿಡಲು ನಿರ್ಧರಿಸಲಾಯಿತು. ಡೈರಿಯಿಂದ ಉಂಟಾಗಿರುವ ಮುಜುಗರ ತಪ್ಪಿಸಿಕೊಳ್ಳಲು ಸ್ಟೀಲ್ ಫ್ಲೈಓವರ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿತೆಂದು ಹೇಳಲಾಗುತ್ತಿದೆ. .... ಮುಂದೆ ಓದಿ
ಮುಸ್ತಫಾ ಜತೆ ಸರಳವಾಗಿ ನಡೆದ ಪ್ರಿಯಾಮಣಿ ವಿವಾಹ ನಿಶ್ಚಿತಾರ್ಥ
 ಖ್ಯಾತ ನಟಿ ಪ್ರಿಯಾಮಣಿ ಮತ್ತು ಉದ್ಯಮಿ ಮುಸ್ತಫಾ ರಾಜ್ ವಿವಾಹ ನಿಶ್ಚಿತಾರ್ಥ ಬನಶಂಕರಿಯಲ್ಲಿರುವ ಪ್ರಿಯಾಮಣಿ ಮನೆಯಲ್ಲಿ ನೆರವೇರಿದೆ. ಕೆಲವು ಆಪ್ತರನ್ನು ಬಿಟ್ಟರೆ ಅಷ್ಟೊಂದು ಜನರು ವಿವಾಹ ನಿಶ್ಚಿತಾರ್ಥದಲ್ಲಿ ಇಲ್ಲದೇ ಸರಳವಾಗಿ ನಡೆಯಿತು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಪ್ರಿಯಾಮಣಿ ಉಂಗುರ ಬದಲಾಯಿಸಿಕೊಂಡರು. ಎಲ್ಲಾ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿ ತಾವು ರಿಜಿಸ್ಟರ್ಡ್ ವಿವಾಹ ಮಾಡಿಕೊಳ್ಳುವುದಾಗಿ ಪ್ರಿಯಾಮಣಿ ಹೇಳಿದ್ದಾರೆ.ನಟಿ ಅನುಷ್ಕಾ ಶೆಟ್ಟಿ 2010ರಲ್ಲಿ ರಾಗದಾ ಚಿತ್ರದಲ್ಲಿ ಪ್ರಿಮಣಿ ಜತೆಗೆ ನಟಿಸಿದ್ದು ಇನ್‌ಸ್ಟಾ ಗ್ರಾಂ ಪೋಸ್ಟ್‌ನಲ್ಲಿ ದಂಪತಿಗೆ ಶುಭ ಹಾರೈಸಿದ್ದಾರೆ. ಪ್ರಿಯಾಮಣಿ ಅಂಬರೀಷಾ, ಚಾಂದೀ, ಅಲೈಸ್ ಎ ಟ್ರು ಸ್ಟೋರಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. .... ಮುಂದೆ ಓದಿ
ಒಬಾಮಾ ಡಿ‌ನ್ನರ್‌ಗೆ ಹಾಜರಾಗುವುದಕ್ಕೂ ಪ್ರಿಯಾಂಕಗೆ ಪುರುಸೋತ್ತಿಲ್ಲವಂತೆ
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಜತೆ ಡಿನ್ನರ್‌ಗೆ ಹಾಜರಾಗುವುದು ಕೂಡ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಖಚಿತವಿಲ್ಲವಂತೆ. ಅಮೆರಿಕದ ಟಿವಿ ಸರಣಿಯಲ್ಲಿ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ಪ್ರಿಯಾಂಕಾಗೆ ಈ ತಿಂಗಳು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಥಮ ಮಹಿಳೆ ಮಿಶೆಲೆ ಒಬಾಮಾ ಡಿನ್ನರ್‌ಗೆ ಆಹ್ವಾನಿಸಿದ್ದಾರೆ. ಆದರೆ ಅಮೆರಿಕದ ಖ್ಯಾತ ಅಧ್ಯಕ್ಷ ಒಬಾಮಾ ಡಿನ್ನರ್‌ಗೆ ಹೋಗೋದುಕ್ಕೂ ಪ್ರಿಯಾಂಕಗೆ ಪುರುಸೋತ್ತಿಲ್ಲವಲ್ಲವಂತೆ. ಅವರು ಶೂಟಿಂಗ್‌ಗೆ ತೊಂದರೆಯಾಗದಂತೆ ಬಿಜಿಯಾಗಿರುವುದು ನೋಡಿದರೆ ಅವರ ಕಾರ್ಯನಿಷ್ಠೆಗೆ ಮೆಚ್ಚಲೇಬೇಕು. ಪ್ರಿಯಾಂಕಗೆ ಕ್ವಾಂಟಿಕೊ ಮತ್ತು ಹಾಲಿವುಡ್ ಚಿತ್ರ ಬೇವಾಚ್ ಚಿತ್ರೀಕರಣದಲ್ಲಿ ಬಿಗಿಯಾದ ಶೆಡ್ಯೂಲ್ ಇದ್ದು ಡಿನ್ನರ್‍‌ಗೆ ಹಾಜರಾಗುವುದೇ ಅನುಮಾನವೆಂದು ಹೇಳಿದರು. ಪ್ರಿಯಾಂಕ ಜತೆಗೆ ಹಾಲಿವುಡ್ ಗಣ್ಯ ನಟ. ನಟಿಯರಾದ ಬ್ರಾಡ್ಲಿ ಕೂಪರ್, ಲೂಸಿ ಲಿಯು, .... ಮುಂದೆ ಓದಿ
ಜೊಕೋವಿಕ್ ಜತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾ xxx ನ ಚಿತ್ರೀಕರಣದ ಸಂದರ್ಭದಲ್ಲಿ ಖ್ಯಾತ ಟೆನ್ನಿಸ್ ಆಟಗಾರ ನೊವಾಕ್ ಜೋಕೋವಿಕ್ ಜತೆ ಕಾಣಿಸಿಕೊಂಡು ಸುದ್ದಿಗೆ ಗ್ರಾಸ ಒದಗಿಸಿದ್ದಾರೆ. ದೀಪಿಕಾ ಮತ್ತು ಜೋಕೋವಿಕ್ ಲಾಸ್ ಏಂಜಲಿಸ್ ಬಾರ್‌ನಿಂದ ನಿರ್ಗಮಿಸುತ್ತಿರುವುದನ್ನು ಡೇಲಿ ಮೇಲ್ ವರದಿ ಮಾಡಿದೆ. ಆದರೆ ಈ ಸುದ್ದಿಯನ್ನು ಬಹಿರಂಗ ಮಾಡಿದ ಡೇಲಿ ಮೇಲ್ ವರದಿಗಾರನಿಗೆ ದೀಪಿಕಾರನ್ನು ಮಾತ್ರ ಗುರುತಿಸಲಾಗಲಿಲ್ಲ. ದೀಪಿಕಾ ನಟಿಯಾಗಿ ಬಾಲಿವುಡ್ ಜಗತ್ತಿನಲ್ಲಿ ಖ್ಯಾತಿ ಪಡೆದಿರುವುದು ಬಹುಶಃ ವರದಿಗಾರನಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ದೀಪಿಕಾಳನ್ನು ಲೆಗ್ಗೀ ಬ್ರುನೆಟ್ ಎಂದಷ್ಟೇ ಕರೆದಿದ್ದಾರೆ. ನೊವಾಕ್  2016ರ ಪುರುಷರ ಟೆನ್ನಿಸ್ ಎಟಿಪಿ ಶ್ರೇಯಾಂಕದಲ್ಲಿ ನಂ. 1 ಸ್ಥಾನಪಡೆದಿದ್ದರೆ, ದೀಪಿಕಾ ಬಾಲಿವುಡ್ ಎ-ಲಿಸ್ಟ್ ನಟಿ ಮತ್ತು ಹಾಲಿವುಡ್‌ಗೆ ಚೊಚ್ಚಲ .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery