ಬಾಲಿವುಡ್ ಸುದ್ದಿ
ಅನ್ ಫ್ರೀಡಂ ಚಿತ್ರಕ್ಕೆ ನಿಷೇಧ: ನಿರ್ದೇಶಕರಿಂದ ಪ್ರತಿಭಟನೆ
ಅನ್‌ಫ್ರೀಡಂ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ  ಅದರ ನಿರ್ದೇಶಕ ರಾಜ್ ಅಮಿತ್ ಕುಮಾರ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಪೌರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಕ್ಕಾಗಿ ಪ್ರಧಾನಮಂತ್ರಿಗೆ ಬರೆದ ಅರ್ಜಿಗೆ ಪ್ರತಿಯೊಬ್ಬರೂ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ.  ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ಸೆನ್ಸಾರ್ ಮಂಡಳಿಯ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.  ಸಲಿಂಗಕಾಮವನ್ನು ಕುರಿತಾದ ಅನ್ ಫ್ರೀಡಂ ಚಿತ್ರದ ನಿಷೇಧವನ್ನು ವಿರೋಧಿಸಿರುವ ಅವರು ಸೆನ್ಸಾರ್ ಮಂಡಳಿಯು ನಿಷೇಧ ವಿಧಿಸುವ ಮತ್ತು ಚಿತ್ರಕ್ಕೆ ಕತ್ತರಿಪ್ರಯೋಗ ಮಾಡುವ ಬದಲಿಗೆ  ಚಿತ್ರವನ್ನು ಪ್ರಮಾಣೀಕರಿಸಬೇಕು ಅಥವಾ ರೇಟಿಂಗ್ ಮಾಡಬೇಕು. ನಿಜವಾದ ಬದಲಾವಣೆ ಆಗುವ ತನಕ ತಾವು ಪ್ರಧಾನಿಗೆ ಸಹಿಹಾಕಿದ ಅರ್ಜಿಗಳನ್ನು ಕಳಿಸುತ್ತಲೇ ಇರುವುದಾಗಿ ಹೇಳಿದರು. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಎಲ್ಲರೂ ಬೆಂಬಲಿಸಬೇಕೆಂದು ಕುಮಾರ್ ಕೋರಿದ್ದಾರೆ. .... ಮುಂದೆ ಓದಿ
ಜೂಹಿ ಚಾವ್ಲಾ ಅಣ್ಣ ಬಾಬ್ಬಿ ದೀರ್ಘಕಾಲದ ಅಸ್ವಸ್ಥತೆಯ ನಂತರ ನಿಧನ
ಚಿತ್ರನಟಿ ಜೂಹಿ ಚಾವ್ಲಾ ಹಿರಿಯ ಸೋದರ ಬಾಬ್ಬಿ ಭಾನುವಾರ ಬೆಳಿಗ್ಗೆ ದೀರ್ಘಕಾಲದ ಕೋಮಾ ಸ್ಥಿತಿಯ ನಂತರ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು. 2010ರ ಏಪ್ರಿಲ್ ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಬಾಬ್ಬಿ ಬೆಳಿಗ್ಗೆ 6.30ಕ್ಕೆ ಮುಂಬೈನ ಚಸ್ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಜೂಹಿ ನಟನೆಯ ಗುಲಾಬ್ ಗ್ಯಾಂಗ್ ಕಾನೂನಿನ ತೊಡಕುಗಳನ್ನು ಎದುರಿಸಿದ ಬಳಿಕ ಎರಡು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಕುರಿತು ಜೂಹಿ ಪ್ರತಿಕ್ರಿಯಿಸುತ್ತಾ, ಇದೊಂದು ಪರಿಪೂರ್ಣ ಚಿತ್ರಕಥೆ. ನನ್ನ ಸೋದರ ಜೀವಮಾನದ ದೊಡ್ಡ ಕಾಣಿಕೆಯನ್ನು ನೀಡಿ ಅದರ ಬಿಡುಗಡೆಯ ನಂತರ ಕಣ್ಮರೆಯಾದ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಬಾಬ್ಬಿ 2010ರಲ್ಲಿ ದೊಡ್ಡ ಸ್ಟ್ರೋಕ್ ಸಂಭವಿಸಿ, ಕೋಮಾ ಸ್ಥಿತಿಗೆ ತಲುಪಿದ್ದರು. ಬಾಬ್ಬಿ ಬಾಲಿವುಡ್ ಸೂಪರ್ಸ್ಟಾರ್ ಶಾರುಕ್‌ಖಾನ್ ಅವರ ರೆಡ್ .... ಮುಂದೆ ಓದಿ
1
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery