ಪ್ರಚಲಿತ
ದ್ವೇಷರಾಜಕಾರಣಕ್ಕೆ ಬಲಿಪಶುವಾದೆಯಾ ಸರಬ್ಜಿತ್?
ಏಪ್ರಿಲ್  26 ಶುಕ್ರವಾರ ಸಂಜೆ ಸುಮಾರು 4.30ರ ವೇಳೆ.  ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಬಂಧಿಯಾಗಿದ್ದ.  ಸರಬ್ಜಿತ್ ಇರುವ ಕೊಠಡಿಯ ಸಮೀಪಕ್ಕೆ ಬಂದ 6 ಮಂದಿ ಕೈದಿಗಳ ಗುಂಪು ಇಬ್ಬರು ಜೈಲ್ ವಾರ್ಡನ್‌ಗಳ ಮೇಲೆ ಬಿದ್ದು ಅವರಿಂದ ಕೊಠಡಿಯ ಕೀಲಿಕೈಗಳನ್ನು ಕಸಿದುಕೊಂಡು ಸರಬ್ಜಿತ್ ತಲೆಗೆ ಇಟ್ಟಿಗೆಯಿಂದ ಹೊಡೆದರು. ಬಳಿಕ ಬ್ಲೇಡ್ ಹಾಗೂ ಸೀಸೆಯ ಚೂಪಾದ ತುಂಡುಗಳಿಂದ ಆತನ ಕತ್ತು, ಹೊಟ್ಟೆಯನ್ನು ಸೀಳಿದರು. ಸರಬ್ಜಿತ್ ಕೂಡಲೇ ತೀವ್ರವಾದ ಕೋಮಾ ಸ್ಥಿತಿಗೆ ತಲುಪಿ ಪ್ರಜ್ಞೆ ತಪ್ಪಿದರು.ರಕ್ತದ ಮಡುವಿನಲ್ಲಿ ಬಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಸರಬ್ಜಿತ್ ಸಿಂಗ್ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿರುವುದು ಪಾಕಿಸ್ತಾನದ ಜೈಲುಗಳಲ್ಲಿಬಂಧಿಯಾಗಿರುವ ಭಾರತೀಯ ಕೈದಿಗಳ ಅಭದ್ರತೆ ಸ್ಥಿತಿ .... ಮುಂದೆ ಓದಿ
ನಾಮಕಾವಸ್ಥೆ ತದ್ರೂಪಿ ಅಭ್ಯರ್ಥಿಗಳು
ಅಧಿಕೃತ ಪಕ್ಷಗಳ ಅಭ್ಯರ್ಥಿಗಳಿಗೆ  ವಿರುದ್ಧವಾಗಿ ‘ತದ್ರೂಪಿ’  ಪಕ್ಷೇತರ ಅಭ್ಯರ್ಥಿಗಳನ್ನು ಇತರೆ ಪಕ್ಷಗಳು ನಿಲ್ಲಿಸುತ್ತಿವೆಯೇ? ಬೆಂಗಳೂರಿನ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಅಧಿಕೃತ ಪಕ್ಷದ ಅಭ್ಯರ್ಥಿಯ ಯಥಾವತ್ ಹೆಸರನ್ನು ಹೊಂದಿರುವ ಪಕ್ಷೇತರ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದರಿಂದ ಈ ಸಂಶಯ ಕಾಡದೇ ಇರದು. ನಾಮಕಾವಸ್ಥೆ ಅಭ್ಯರ್ಥಿಯ ಚುನಾವಣೆ ಖರ್ಚು, ವೆಚ್ಚಗಳನ್ನು ವಿರೋಧ ಪಕ್ಷಗಳು ನಿಭಾಯಿಸುತ್ತಿರಬಹುದೇ? ಮತದಾರರು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವಾಗ ಯಾಮಾರಿ ಅಧಿಕೃತ ಅಭ್ಯರ್ಥಿಯ ಹೆಸರಿನ ಬದಲಿಗೆ ನಾಮಕಾವಸ್ಥೆ ಅಭ್ಯರ್ಥಿಯ ಹೆಸರಿನ ಮುಂದಿರುವ ಗುಂಡಿ ಅದುಮಿದರೆ ಕಥೆ ಏನಾಗಬಹುದು? ಉದಾಹರಣೆಗೆ ಫಲಿತಾಂಶ ಉಲ್ಟಾಪಲ್ಟಾ ಆಗಿ ಅಧಿಕೃತ ಅಭ್ಯರ್ಥಿ ಕೆಲವೇ ಕೆಲವು ಮತಗಳ ಅಂತರದಿಂದ ಸೋತರೆ ಹೊಟ್ಟೊಟ್ಟೆ ಉರಿದುಕೊಳ್ಳಬೇಕೇ ಹೊರತು ಬೇರೇನೂ ಮಾಡುವಂತಿಲ್ಲ. ಅದರ ವಿರುದ್ಧ ಚುನಾವಣಾಧಾಕಾರಿಗೆ ದೂರನ್ನು ಸಲ್ಲಿಸುವಂತೆಯೂ .... ಮುಂದೆ ಓದಿ
ಟಿಆರ್‌ಪಿ ಹೆಚ್ಚಿಸಿಕೊಳ್ಳಲು ವಾಹಿನಿಗಳು, ಪತ್ರಿಕೆಗಳ ಕಸರತ್ತು
ಸುದ್ದಿಪತ್ರಿಕೆಗಳು ಮತ್ತು ಟಿವಿ ವಾಹಿನಿಗಳು ಇಂದು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳಲ್ಲಿ ತೊಡಗಿವೆ. ಉದಾಹರಣೆಗೆ  ‘ಈ ಟಿವಿ’ ವಾಹಿನಿ ಆತ್ಮ ಕಥೆಗಳು ಎಂಬ ನಾಮಾಂತಕಿತದ ದೆವ್ವದ ಕಥೆಗಳನ್ನು ತೋರಿಸುತ್ತಿರುವುದು. ‘ಈ ಟಿವಿ’ಯಲ್ಲಿ ಬಿಗ್ ಬಾಸ್ ಸರಣಿ ಪ್ರಕಟಗೊಂಡಾಗ, ಹಿಂದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಕನ್ನಡಕ್ಕೂ ಬಂದಿರುವ ಬಗ್ಗೆ ಹೆಮ್ಮೆ ಎನಿಸಿತು. ಆದರೆ ಆತ್ಮ ಕಥೆಗಳನ್ನು ‘ಈ ಟಿವಿ’ ತೋರಿಸಲಾರಂಭಿಸಿದಾಗಈ ಟಿವಿ ಕುರಿತು ಮೂಡಿದ್ದ ಅಭಿಮಾನ ಠುಸ್ಸೆಂದಿತು.  ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಟಿವಿ ವಾಹಿನಿಗಳು ಇಂಥ ಹೀನ ಮಟ್ಟಕ್ಕೆ ಇಳಿಯುತ್ತಿರುವುದನ್ನು ಕಂಡು ಚಕಿತನಾದೆ. ಆತ್ಮಕಥೆಗಳು ನಿಜಜೀವನದ ಕಥೆಗಳೇನೂ ಅಲ್ಲ. ಆತ್ಮಗಳು ಇದ್ದರೇ ತಾನೇ ನಿಜಜೀವನದಲ್ಲಿ ಅಂಥ ಕತೆ ನಡೆಯುವುದು?   ಟಿವಿ ಮನೆಮಂದಿಯೆಲ್ಲ ಕುಳಿತು ನೋಡುವ ಸಾಧನ. .... ಮುಂದೆ ಓದಿ
ಅನ್ನದಾತನ ಕೂಗು ಅರಣ್ಯರೋದನ
ಅನ್ನದಾತ ಸುಖೀಭವ ಎಂದು ಕೆಲವು ಜನರು ಹೇಳುವುದು ವಾಡಿಕೆ. ಆದರೆ ಇಲ್ಲಿ ಅನ್ನದಾತ ಎಂದರೆ ಅನ್ನವನ್ನು ಕೊಡುವವರಿಗಿಂತ ಬತ್ತವನ್ನು ಬೆಳೆಯುವ ರೈತರಿಗೆ ಹೆಚ್ಚು ಅನ್ವಯಿಸುತ್ತದೆ. ರೈತ ದೇಶದ ಇಡೀ ಜನರಿಗೆ ಅಗತ್ಯವಾದ  ಆಹಾರವನ್ನು ಪೂರೈಸುತ್ತಾನೆ. ಆದರೆ ಅವನ ಹೆಂಡತಿ , ಮಕ್ಕಳಿಗೆ ಉಡಲು ಬಟ್ಟೆಯಿಲ್ಲದೇ, ವಾಸಕ್ಕೆ ಯೋಗ್ಯ ಮನೆಯಿಲ್ಲದೇ, ಸಾಲದ ಸುಳಿಯಲ್ಲಿ ಸಿಕ್ಕು ಬವಣೆ ಪಡುವಂತಹ ಸ್ಥಿತಿಯಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವದಿಂದ ಬೆಳೆಗಳು ಒಣಗಿಹೋದರೆ ಲೇವಾದೇವಿಗಾರರಲ್ಲಿ  ಬೆಳೆ ತೆಗೆಯಲು ಮಾಡಿದ ದುಬಾರಿ ಬಡ್ಡಿಯ ಸಾಲ ತೀರಿಸಲಾಗದೇ ಅಸಹಾಯಕ ಸ್ಥಿತಿಗೆ ರೈತ ತಲುಪುತ್ತಾನೆ. ಸಾಲಿಗರ ದೌರ್ಜನ್ಯ ಹೆಚ್ಚಿದಾಗ, ಮಾನ, ಮರ್ಯಾದೆಗೆ ಅಂಜಿದ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ತಲುಪುತ್ತಾನೆ. ರೈತನ ಈ ದಯನೀಯ ಸ್ಥಿತಿಗೆ ಕಾರಣವೇನೆಂದು .... ಮುಂದೆ ಓದಿ
Prev 1 2
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery