ಪ್ರಚಲಿತ
ತಮಿಳುನಾಡು ರಾಜಕೀಯ ಹಗ್ಗ ಜಗ್ಗಾಟದಲ್ಲಿ ಗೆದ್ದವರು ಸೋತರು, ಸೋತವರು ಮಣ್ಣುಮುಕ್ಕಿದರು
ತಮಿಳುನಾಡು ರಾಜಕೀಯ ಹಗ್ಗ-ಜಗ್ಗಾಟದಲ್ಲಿ ಸೋತವರು ಮಣ್ಣುಮುಕ್ಕಿದರು. ಗೆದ್ದವರು  ಸೋತರು. ಚಿನ್ನಮ್ಮ ಅರ್ಥಾತ್ ಶಶಿಕಲಾ ಜಯಲಲಿತಾ ಮಣ್ಣುಪಾಲಾದ ಮರುಗಳಿಗೆಯೇ ಮುಖ್ಯಮಂತ್ರಿ ಪಟ್ಟಕ್ಕೇರುವ ಕನಸು ಹೊತ್ತಿದ್ದರು. ಆದರೆ ಪನ್ನೀರ್ ಸೆಲ್ವಂ ಶಶಿಕಲಾಗೆ ಸೆಡ್ಡು ಹೊಡೆದು ಅಡ್ಡಗಾಲು ಹಾಕಿದರು. ನಂತರದ ಬೆಳವಣಿಗೆಗಳು ಶಶಿಕಲಾಕರನ್ನು ಪರಪ್ಪನ ಅಗ್ರಹಾರಕ್ಕೆ ದೂಡಿತು. ಪರಪ್ಪನ ಅಗ್ರಹಾರ  ಸೇರುವುದಕ್ಕೆ ಮುಂಚೆ ಶಶಿಕಲಾ ಜಯಾ ಸಮಾಧಿಯಲ್ಲಿ ಶಪಥ ಮಾಡುವ ಮೂಲಕ ರಾಜಕೀಯ ಸೇಡಿಗೆ ಮುನ್ನುಡಿ ಬರೆದರು. ಹೀಗಾಗಿ ಬಂಡಾಯವೆದ್ದ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗುವ ಕನಸಿಗೆ ತಣ್ಣೀರ್ ಬಿತ್ತು. ಪನ್ನೀರ್ ಬಣದ ಸದಸ್ಯರು ಕೂಡ ಯಾವುದೇ ಪದವಿಯಿಲ್ಲದೇ ವಿಧಾನಸಭೆಯ ಸದಸ್ಯತ್ವವನ್ನು ಮಾತ್ರ ಉಳಿಸಿಕೊಂಡು ದಿಕ್ಕಿಲ್ಲದ ಪರದೇಸಿಗಳಂತಾಗಿದ್ದಾರೆ.  ಕಳೆದುಹೋದ ಸ್ಥಾನಮಾನ ಮತ್ತೆ ಸಂಪಾದಿಸುವುದು ಹೇಗೆಂಬುದೇ ಸೆಲ್ವಂ ಬಣದ ಯೋಚನೆಯಾಗಿದೆ.  ಬೂದಿಮುಚ್ಚಿದ ಕೆಂಡದಂತೆ .... ಮುಂದೆ ಓದಿ
ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಟ ಅಗತ್ಯ
ಲಕ್ಷಾಂತರ ಮೈಲುಗಳು ದೂರದಲ್ಲಿರುವ ಗ್ರಹಗಳು, ಸೂರ್ಯ,ಚಂದ್ರ ಮನುಷ್ಯರ ಮೇಲೆ ಪರಿಣಾಮ ಬೀರುವುದನ್ನು ವೈಜ್ಞಾನಿಕನವಾಗಿ ನಂಬುವುದಕ್ಕೆ ಸಾಧ್ಯವೇ, ಇಂತಹ ಮೌಢ್ಯಗಳನ್ನು ಜನರಲ್ಲಿ ಮೂಡಿಸಿ ಜ್ಯೋತಿಷಿಗಳು  ಹೊಟ್ಟೆ ಹೊರೆದುಕೊಳ್ಳುತ್ತಾರೆ.   ದೋಷ ಪರಿಹಾರಕ್ಕೆ ಹೋಮ, ಹವನ ಎಂದು ಒಂದಷ್ಟು ಧನವ್ಯಯ ಮಾಡಿಸುತ್ತಾರೆ. ಆದರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದನ್ನು ಅರಿಯಬೇಕಾಗಿದೆ. ಜ್ಯೋತಿಷಿಗಳು ಯಾವುದೋ ಜ್ಯೋತಿಷ್ಯದ ಶಾಸ್ತ್ರಗಳನ್ನು ಹೇಳಿ ಅದರಿಂದಲೇ ನಿಮಗೆ ಕೇಡು ಉಂಟಾಗಿದೆ. ನಿಮ್ಮ ಗ್ರಹ,ಗತಿ ಸರಿಯಾಗಿಲ್ಲ. ಅದಕ್ಕಾಗಿ ಇಷ್ಟೆಲ್ಲಾ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದೀರಿ ಎಂದೆಲ್ಲಾ ಹೇಳುತ್ತಾರೆ.ನಮ್ಮ ಕರ್ಮಫಲವನ್ನು ನಾವೀಗ ಅನುಭವಿಸುತ್ತಿದ್ದೇವೆಯೇ ಹೊರತು ಬೇರಾವುದೋ ಲೋಕದ ಗ್ರಹಗಳ ಚಲನೆಯ ಫಲವಲ್ಲ.   ಜ್ಯೋತಿಷ್ಯದಂತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಜನರಲ್ಲಿ ಮೌಢ್ಯ ಕಂದಾಚಾರಗಳನ್ನು ಟಿವಿ ವಾಹಿನಿಗಳು ಬಿತ್ತುತ್ತಿವೆ ಎಂದು ಸಿದ್ದರಾಮಯ್ಯ .... ಮುಂದೆ ಓದಿ
ನಮ್ಮ ಪೊಲೀಸರಿಗೆ ಹೆಲ್ಮೆಟ್, ಗುಂಡು ನಿರೋಧಕ ಕವಚ ಬೇಡವೇ?
ಕಳೆದ ಸೋಮವಾರ ದಿಟ್ಟ ಪಂಜಾಬ್ ಪೊಲೀಸ್ ಅಧಿಕಾರಿ ಬಲ್ಜಿತ್ ಸಿಂಗ್ ಗುರುದಾಸ್‌ಪುರದ ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿದ ಮೂವರು ಭಯೋತ್ಪಾದಕರಿಗೆ ಧೈರ್ಯವಿದ್ದರೆ ಹೊರಬಂದು ಮುಖಾಮುಖಿ ಕಾಳಗ ಮಾಡುವಂತೆ ಕರೆ ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಬಲ್ಜಿತ್ ಸಿಂಗ್ ಹೆಣವಾಗಿ ಬಿದ್ದಿದ್ದರು. ಅವರು ಹೆಲ್ಮೆಟ್ ಆಗಲೀ ಅಥವಾ  ಗುಂಡುನಿರೋಧಕ ಪಾಟ್ಕಾ ಧರಿಸಿರಲಿಲ್ಲ. ಪಾಟ್ಕಾ ಭಾರತದ ಸೇನೆಯ ಶೋಧವಾಗಿದ್ದು, ಗುಂಡಿನದಾಳಿಯಿಂದ ಯೋಧರಿಗೆ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ. ಸಿಂಗ್ ಧೈರ್ಯಶಾಲಿ ನಿಜ, ಆದರೆ ಧೈರ್ಯವೊಂದರಿಂದಲೇ ನುರಿತ ತರಬೇತಿ ಪಡೆದ ಭಯೋತ್ಪಾದಕರನ್ನು ಸೋಲಿಸಲು ಸಾಧ್ಯವಿಲ್ಲ.ಕೆಲವು ಪಂಜಾಬ್ ಪೊಲೀಸರು ಹೆಲ್ಮೆಟ್ ಅಥವಾ ಗುಂಡುನಿರೋಧಕ ಕವಚ ಧರಿಸದೇ ಸ್ವಯಂ ಗುಂಡು ತುಂಬುವ ಬಂದೂಕುಗಳಿಂದ ಎರದುರಿಸುತ್ತಿದ್ದರು. ಆದರೆ ಶತ್ರುವಿನ ಎಕೆ 45 ಬಂದೂಕುಗಳಿಗೆ ಇವು ಸರಿಸಾಟಿಯಾಗಿರಲಿಲ್ಲ.  ಸ್ವಲ್ಪ ದೂರದಲ್ಲಿ .... ಮುಂದೆ ಓದಿ
ಕೃಷಿ ಕಡೆಗಣಿಸಿದ ಸರ್ಕಾರಗಳು: ನೇಣಿಗೆ ಕೊರಳೊಡ್ಡುವ ರೈತ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ 25 ರೈತರು ಕಳೆದ ತಿಂಗಳಿನಿಂದೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದರು. 8 ಕಬ್ಬು ಬೆಳೆಗಾರರು ಸಾಲದ ಭಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದವರು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.  ರಾಜ್ಯ ಕೃಷಿ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ 2009-10ರಲ್ಲಿ 145 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 50. ಆದರೆ 2015ರಲ್ಲಿ ಕೇವಲ ಒಂದೇ ತಿಂಗಳಲ್ಲಿ 25 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾದರೆ ರೈತರ ಆತ್ಮಹತ್ಯೆ ಪ್ರಕರಣಗಳು 2015ರಲ್ಲಿ ಇನ್ನಷ್ಟು ಕುಸಿಯಬೇಕಾಗಿತ್ತು. ಆದರೆ ಒಮ್ಮಿಂದೊಮ್ಮೆಲೆ ಆಕಾಶಕ್ಕೆ ಜಿಗಿದಿದ್ದು ಹೇಗೆ? ನಾನಾ ಕಾರಣಗಳಿಗಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಸಾಲಭಾದೆಯಿಲ್ಲದೇ ಕೌಟುಂಬಿಕ ಕಾರಣಗಳಿಗಾಗಿ ಅಷ್ಟೊಂದು .... ಮುಂದೆ ಓದಿ
ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: ಬೇಲಿಯೇ ಎದ್ದು ಹೊಲ ಮೇಯಿತೇ?
ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ನಾನಾ ಅಭಿಯಾನಗಳನ್ನು ಹಮ್ಮಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತರು. ಆದರೆ ಕೊನೆಗೆ ಏನಾಯಿತು? ಲೋಕಪಾಲ ಮಸೂದೆ ಇನ್ನೂ ಲೋಕಸಭೆಯಲ್ಲಿ ಧೂಳು ತಿನ್ನುತ್ತಾ ಕೂತಿದೆ. ಹೋಗಲಿ ವಿವಿಧ ರಾಜ್ಯಗಳು ಸ್ಥಾಪಿಸಿದ ಲೋಕಾಯುಕ್ತಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿರಬಹುದು  ಎಂದು ಭಾವಿಸಬೇಡಿ. ಅಲ್ಲಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೆಲವು ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ಮಾಡಿ ಒಂದಷ್ಟು ದಾಖಲೆಗಳನ್ನು ವಶಪಡಿಸಿಕೊಂಡು ಕೇಸು ಜಡಿಯುವ ಸುದ್ದಿ ಪತ್ರಿಕೆಗಳಲ್ಲಿ ಬರುತ್ತವೆ. ನಂತರ ಆ ಅಧಿಕಾರಿಗಳು ಏನಾದರು ಎಂದು ಹುಡುಕುತ್ತಾ ಹೋದರೆ ಅವರು ಬಡ್ತಿ ಪಡೆದು ಇನ್ನೊಂದು ಹುದ್ದೆಯಲ್ಲಿ ಮಜಾ ಮಾಡುತ್ತಾ ಕಾಲಕಳೆಯುವುದು ಕಂಡುಬರುತ್ತದೆ. ಅದರೆ ಲೋಕಾಯುಕ್ತಕ್ಕೆ ಕೇಸು ದಾಖಲಿಸಬಹುದೇ ಹೊರತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ .... ಮುಂದೆ ಓದಿ
1 2 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery