ತಾಜಾ ಸುದ್ದಿ
ನನ್ನ ಮನೆಯಲ್ಲಿ ಡೈರಿ ಸಿಕ್ಕಿರಲೇ ಇಲ್ಲ: ಗೋವಿಂದ ರಾಜು ಯೂ ಟರ್ನ್
ಬೆಂಗಳೂರು: ನನ್ನ ಮನೆಯಲ್ಲಿ ಡೈರಿ ಸಿಕ್ಕಿರಲೇ ಇಲ್ಲ. ಐಟಿ ಅಧಿಕಾರಿಗಳ ನಾಟಕದಿಂದ ಇವೆಲ್ಲಾ ನಡೆದಿದೆ ಎಂದು ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಗೋವಿಂದ ರಾಜು ಹೇಳಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕುರಿತು ಗೋವಿಂದ ರಾಜು ಐಟಿ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಟಿ ಅಧಿಕಾರಿಗಳೇ ನನ್ನ ಮನೆಯಲ್ಲಿ ಡೈರಿ ತಂದಿಟ್ಟು ನನ್ನ ಮನೆಯಲ್ಲಿ ಡೈರಿ ಸಿಕ್ಕಿದ ನಾಟಕವಾಗಿದ್ದಾರೆ. ಡೈರಿಯಲ್ಲಿ ಬರೆದಿದ್ದೆಲ್ಲಾ ಪೂರ್ವನಿಯೋಜಿತ ಕೃತ್ಯ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೋವಿಂದ ರಾಜು ಮನೆಯಲ್ಲಿ ಸಿಕ್ಕಿದೆಯೆಂದು ಹೇಳಲಾದ ಡೈರಿಯಿಂದ ಕಾಂಗ್ರೆಸ್ ಮುಖಂಡರು ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಜತೆಗೆ ಸ್ಟೀಲ್ ಫ್ಲೈ ಓವರ್ ಯೋಜನೆಯಲ್ಲಿ ಗುತ್ತಿಗೆದಾರರು ಕಪ್ಪ ನೀಡಿದ್ದಾರೆಂದು ಯಡಿಯೂರಪ್ಪ ಆರೋಪಿಸಿದ್ದರಿಂದ .... ಮುಂದೆ ಓದಿ
ಯುವತಿಯನ್ನು ನುಂಗಲು ಹೊಂಚುಹಾಕಿದ ಸಾಕು ಹೆಬ್ಬಾವು
ನಿಮ್ಮ ಸಾಕು ನಾಯಿ ಅಥವಾ ಬೆಕ್ಕಿನ ಜತೆ ನೀವು ಹಾಸಿಗೆಯಲ್ಲಿ ಮಲಗಿದ್ದೀರಾ? ಆದರೆ ನಿಮ್ಮ ಸಾಕು ಹೆಬ್ಬಾವಿನ ಜತೆ ಎಂದಾದರೂ ಮಲಗಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್ ಪ್ರಕಾರ, ಮಹಿಳೆ ತನ್ನ ಸಾಕು ಹೆಬ್ಬಾವಿನ ಜತೆ ಹಾಸಿಗೆಯಲ್ಲಿ ಮಲಗಲು ಅವಕಾಶ ನೀಡಿದ್ದಳು. 7 ಅಡಿ ಉದ್ದದ ಹೆಬ್ಬಾವು ಪ್ರತಿ ರಾತ್ರಿ ಹಾಸಿಗೆಯಲ್ಲಿ .ಯುವತಿಯ ಜತೆ ಮಲಗುತ್ತಿತ್ತು. ಆದರೆ ಒಂದು ದಿನ ಮಹಿಳೆ ಅಚ್ಚರಿಪಡುವಂತೆ ಹೆಬ್ಬಾವು ಆಹಾರ ಸೇವಿಸುವುದನ್ನೇ ನಿಲ್ಲಿಸಿತು. ಅದರ ನೆಚ್ಚಿನ ಆಹಾರಗಳಾದ ಇಲಿಗಳು ಮತ್ತು ಹಂದಿಮರಿಗಳನ್ನು ಸೇವಿಸುವುದನ್ನು ಕೂಡ ಹೆಬ್ಬಾವು ನಿಲ್ಲಿಸಿದಾಗ ಅದನ್ನು ಪಶುವೈದ್ಯರ ಬಳಿ ಯುವತಿ ಕರೆದುಕೊಂಡು ಹೋದಳು. ಪಶುವೈದ್ಯರು .... ಮುಂದೆ ಓದಿ
ಕ್ರಿಕೆಟ್ ಆಟಗಾರನ ತಲೆಬುರುಡೆಗೆ 15 ಹೊಲಿಗೆ
ಯಾರ್ಕ್ ಶೈರ್ ಕ್ಲಬ್ ಕ್ರಿಕೆಟರ್ ಅಲೆಕ್ಸ್ ಟೈಟ್ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿದಾಗ ತನ್ನ ಜೀವನದ ಭಯಾನಕ ಅನುಭವವನ್ನು ಎದುರಿಸಿದ. ಅವನು ತಲೆ ಬಗ್ಗಿಸಿದ್ದಾಗ ಅಡ್ಡದಾರಿ ಹಿಡಿದ ಚೆಂಡೊಂದು ಅವನ ಹಣೆಗೆ ಕಣ್ಣುಗಳ ನಡುವೆ ಬಡಿದಿತ್ತು. ಬಲವಾದ ಪೆಟ್ಟು ಬಿದ್ದಿದ್ದರಿಂದ ಅವನ ತಲೆಬುರುಡೆಯ 15 ಕಡೆ ಬಿರುಕು ಬಿಟ್ಟಿತ್ತು. ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಅವನ ಮುಖವನ್ನು ಕಿವಿಯ ಒಂದು ಭಾಗದಿಂದ ಇನ್ನೊಂದು ಭಾಗದವರೆಗೆ ಕತ್ತರಿಸಬೇಕಾಯಿತು. ಬಳಿಕ ಅವನ ಹಣೆ ಮತ್ತು ಮೂಗಿನಲ್ಲಿ ಲೋಹದ ಪ್ಲೇಟ್‌ಗಳನ್ನು ವೈದ್ಯರು ಇರಿಸಿ  ಹೊಲಿಗೆ ಹಾಕಿದರು. ಇದರಿಂದ ಅವನ ಕಣ್ಣುಗಳ ದೃಷ್ಟಿಗೆ ಅಪಾಯವಾಗುವ ಸಂಭವವಿತ್ತು. .... ಮುಂದೆ ಓದಿ
ಪರಪುರುಷನ ಪತ್ನಿಯ ಜತೆ ಅನೈತಿಕ ಸಂಬಂಧಕ್ಕೆ 5 ವರ್ಷ ಜೈಲು
ನವದೆಹಲಿ: ವೈವಾಹಿಕ ಜೀವನದ ಗಡಿಯನ್ನು ಮೀರಿದವರು ಕ್ರಿಮಿನಲ್ ಕ್ರಮಕ್ಕೆ ಗುರಿಯಾಗುತ್ತಾರೆಯೇ? ಭಾರತದ ಕಾನೂನು ಅದನ್ನು ದೃಢೀಕರಿಸುತ್ತದೆ. ಇನ್ನೊಬ್ಬ ವ್ಯಕ್ತಿಯ ಆಸ್ತಿಯನ್ನು ಅಂದರೆ ಅವರ ಪತ್ನಿಯನ್ನು ಅತಿಕ್ರಮ ಪ್ರವೇಶ ಮಾಡಿದರೆ ಅದು ಪುರುಷ ಸಂಗಾತಿಗೆ ಶಿಕ್ಷೆ ವಿಧಿಸುತ್ತದೆ. ಆದರೆ ಅನೈತಿಕ ಸಂಬಂಧದಲ್ಲಿ ಭಾಗಿಯಾದ ಪತ್ನಿಗೆ ಮಾತ್ರ ಯಾವ ಶಿಕ್ಷೆಯೂ ಇಲ್ಲ.  ಹೈದರಾಬಾದ್ ಶಿವಾಜಿನಗರದ ನಿವಾಸಿಯಾದ ಸಿ. ಚನ್ನಯ್ಯ ಕಳೆದವಾರ ಪೊಲೀಸ್ ಪೇದೆಯೊಬ್ಬ ತನ್ನ ಪತ್ನಿಯ ತೆಕ್ಕೆಯಲ್ಲಿ ಹಾಸಿಗೆಯಲ್ಲಿರುವುದನ್ನು ಕಂಡು ವ್ಯಭಿಚಾರದ ಆರೋಪಗಳನ್ನು ಮಾಡಿದ್ದರು. ಚೆನ್ನಯ್ಯ ತಮ್ಮ ಪತ್ನಿ ಮತ್ತು ಪೇದೆ ಮದುಸೂದನ್ ರೆಡ್ಡಿಯನ್ನು ಮಲಗುವ ಕೋಣೆಯಲ್ಲಿ ಕೂಡಿಹಾಕಿ ಬಳಿಕ ಕೂಗೆಬ್ಬಿಸಿದ್ದರು.ಈ ಅನೈತಿಕ ಸಂಬಂಧ ಅನೇಕ ತಿಂಗಳವರೆಗೆ ನಡೆದಿತ್ತೆಂದು ಅವರು ಆರೋಪಿಸಿದರು. ರೆಡ್ಡಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ .... ಮುಂದೆ ಓದಿ
ರಾತ್ರಿ ವೇಳೆ ಸ್ಮಶಾನಕ್ಕೆ ಹೋಗಬಾರದೇಕೆ?
ನಿಮ್ಮ ಅಜ್ಜ ಅಜ್ಜಿಯರು ಅಥವಾ ಹಿರಿಯರು ರಾತ್ರಿ ವೇಳೆಯಲ್ಲಿ ಸ್ಮಶಾನಕ್ಕೆ ಹೋಗಬಾರದೆಂದು ಹಿತವಚನ ನೀಡುವುದನ್ನು ಕೇಳಿರಬಹುದು. ಇದನ್ನು ಸುಮ್ಮನೇ ನಮ್ಮನ್ನು ಹೆದರಿಸಲು ಹೇಳುತ್ತಿರಬಹುದೇ ಅಥವಾ ಅದಕ್ಕೆ ಕಾರಣವಿರಬಹುದೇ ಎಂದು ನೀವು ಯೋಚಿಸಿರಬಹುದು.ಆದರೆ ರಾತ್ರಿ ವೇಳೆಯಲ್ಲಿ ಸ್ಮಶಾನಕ್ಕೆ ಹೋಗಬಾರದೆಂಬುದಕ್ಕೆ ವೈಜ್ಞಾನಿಕ ಮತ್ತು ಮಾನಸಿಕ ಕಾರಣವಿದೆ.  ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಮಗೆ ತಿಳಿದಿರುವ ಜಗತ್ತು ಮಾನವನಿಗೆ ತಿಳಿದಿರದ ಅನೇಕ ಆಯಾಮಗಳಿಂದ ಕೂಡಿದೆ. ಬೌದ್ಧ ಗ್ರಂಥಗಳಲ್ಲಿ ಪ್ರೇತಗಳ ಅಸ್ತಿತ್ವವನ್ನು ಕೊಡಲಾಗಿದೆ. ವಿಜ್ಞಾನದಲ್ಲಿ ಈ ವಿವಿಧ ಆಯಾಮಗಳ ಬಗ್ಗೆ ಉತ್ತರ ಸಿಕ್ಕಿಲ್ಲವಾದರೂ ಅನುಭವ ನಮಗೆ ಬೇರೆಯದನ್ನೇ ಹೇಳುತ್ತದೆ. ಹಿಂದೂ ಧರ್ಮದಲ್ಲಿ ಭಗವಾನ್ ಶಿವ ಮತ್ತು ಅವನ ಪತ್ನಿ ಕಾಳಿದೇವತೆ ಸ್ಮಶಾನದ ಅಧಿಪತಿಗಳೆಂದು ಪರಿಗಣಿಸಲಾಗಿದೆ. ಭಗವಾನ್ ಶಿವ ಮೈತುಂಬ ಬೂದಿ ಹಚ್ಚಿಕೊಂಡು .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery