ತಾಜಾ ಸುದ್ದಿ
ಸೆಲ್ಫಿ ಕ್ಲಿಕ್ಕಿಸುವ ಕ್ರೇಜ್‌ಗೆ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಬಲಿ
ಮಂಡ್ಯ: ಮಂಡ್ಯದಲ್ಲಿ ಸೆಲ್ಫೀಗಳನ್ನು ಕ್ಲಿಕ್ ಮಾಡುವ ಚಾಳಿಯಿಂದ  ಮೂವರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ.   ವೈದ್ಯಕೀಯ ಶಿಕ್ಷಣ ಪೂರೈಸಿದ್ದ ಐವರು ವಿದ್ಯಾರ್ಥಿಗಳು ಗ್ರಾಮೀಣ ಸೇವೆಗೆ ಮತ್ತು ಸಮುದಾಯ ಆರೋಗ್ಯ ಸೇವೆ ಕಾರ್ಯಕ್ರಮದಲ್ಲಿ  ಇಂಟರ್ನ್‌ಶಿಪ್‌ಗೆ ನೇಮಕವಾಗಿದ್ದು ಕೆರಗೋಡುವಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಲು ತೆರಳಿದ್ದರು.ಕೆರಗೋಡುವಿಗೆ ಮೋಟರ್ ಬೈಕ್‌ನಲ್ಲಿ ಬಂದ ಎಲ್ಲಾ ಐದು ಮಂದಿ ವಾಪಸ್ ತೆರಳುವಾಗ ಕಾಲುವೆಗೆ ಇಳಿದು ಸೆಲ್ಫಿಗಳನ್ನು ಕ್ಲಿಕ್ಕಿಸತೊಡಗಿ  ಸ್ನೇಹಿತರಿಗೆ ಚಿತ್ರಗಳನ್ನು ರವಾನಿಸತೊಡಗಿದರು. ಶುಕ್ರವಾರ ಕೂಡ ಕಾಲುವೆಗೆ ಇಳಿದು ಸೆಲ್ಫೀ ಕ್ಲಿಕ್ಕಿಸುತ್ತಿದ್ದರು.  ಕಾಲುವೆ ದಂಡೆಯಲ್ಲಿ ಬೈಕ್‌ಗಳನ್ನು ಪಾರ್ಕ್ ಮಾಡಿ ಕಾಲುವೆಯ ಇನ್ನೊಂದು ಬದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದರು. ನೀರಿನ ಸೆಳೆತವಿದೆ ಎಂದು ಗ್ರಾಮಸ್ಥರು ನೀಡಿದ್ದ ಎಚ್ಚರಿಕೆಯನ್ನು ಲೆಕ್ಕಿಸದೇ ಆ ಜಾಗಕ್ಕೆ .... ಮುಂದೆ ಓದಿ
ಬೆಂಗಳೂರು ನಗರ ಜಿಲ್ಲೆಯಲ್ಲಿ 8.40 ಲಕ್ಷ ಮತದಾರರು
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಇದೇ ಫೆಬ್ರವರಿ 13 ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 840449 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 878 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 312 ಸೂಕ್ಷ್ಮ ಮತ್ತು 230 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ.ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.ಚುನಾವಣಾ ನೀತಿ ಸಂಹಿತೆಯು ದಿನಾಂಕ: ಜನವರಿ 18 ರಿಂದ ಫೆ. 24ರವರೆಗೆ  ಜಾರಿಯಲ್ಲಿರುತ್ತದೆ. ಬಿತ್ತಿಪತ್ರ, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ತೆರವುಗೊಳಿಸಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆ ಸಮಾರಂಭಗಳನ್ನು ನಡೆಸಲು ಚುನಾವಣಾಧಿಕಾರಿ ಅಥವಾ ಪೊಲೀಸ್, ಸಾರಿಗೆ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.ಚುನಾವಣೆಯು ಶಾಂತಿ .... ಮುಂದೆ ಓದಿ
102 ಉಗ್ರರ ಜತೆ ಲಷ್ಕರ್ ತರಬೇತಿ ಪಡೆದಿದ್ದ ಡೇವಿಡ್ ಹೆಡ್ಲಿ
ನವದೆಹಲಿ: ತಮ್ಮ ದೇಶ ಉಗ್ರ ಪೋಷಕವಲ್ಲ ಎಂದು ಹೇಳುತ್ತಿದ್ದ ಪಾಕಿಸ್ತಾನದ ಬಣ್ಣ ಬಟಾಬಯಲಾಗಿದೆ. 26/11ರ ಮುಂಬೈ ದಾಳಿಯ ಸೂತ್ರಧಾರ ಡೇವಿಡ್ ಹೆಡ್ಲಿ ಸೋಮವಾರ ಬಿಚ್ಚಿಟ್ಟ ಸತ್ಯಗಳಿಂದ ಮುಂಬೈ ದಾಳಿಯಲ್ಲಿ ಪಾಕ್‌ನ ಐಎಸ್‍‌ಐ ಕೈವಾಡ ಬೆಳಕಿಗೆ ಬಂದಿದೆ. ಅಮೆರಿಕದ ಚಿಕಾಗೊ ಜೈಲಿನಲ್ಲಿ ಬಂಧಿತನಾಗಿರುವ ಲಷ್ಕರ್ ತೊಯ್ಬಾ ಸಂಘಟನೆ ಉಗ್ರ ಡೇವಿಡ್ ಹೆಡ್ಲಿ ಇಂದು ಕೂಡ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದಿದ್ದು, 2004ರಲ್ಲಿ ತಾನು ಲಷ್ಕರ್ ತರಬೇತಿಯನ್ನು 102  ಉಗ್ರರ ಜತೆ ಪಡೆದಿದ್ದಾಗಿ ತಿಳಿಸಿದ್ದಾನೆ.  ಐಎಸ್‌ಐ ಸೂಚನೆ ಮೇರೆಗೆ ತಾನು ಹೆಸರು ಬದಲಿಸಿಕೊಂಡಿದ್ದಾಗಿ ಸೂಚಿಸಿದ್ದಾನೆ. ಲಷ್ಕರ್  ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿದಾಗ ಅದರ ವಿರುದ್ಧ ಅಮೆರಿಕ ಕೋರ್ಟ್‌ಗೆ ಹೋಗಲು ಕೂಡ ಹೆಡ್ಲಿ .... ಮುಂದೆ ಓದಿ
ವಿಬ್‌ಗಯಾರ್ ಶಾಲೆಯೊಳಗೆ ನುಗ್ಗಿದ ಚಿರತೆ
ಬೆಂಗಳೂರು: ಭಾನುವಾರ ಬೆಳಗ್ಗೆ ಬೆಂಗಳೂರಿನ ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ಚಿರತೆಯೊಂದು ನುಗ್ಗಿ ಶಾಲೆಯ ಆವರಣದಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ಶಾಲೆಯ ಸಿಸಿಟಿವಿ ಕ್ಯಾಮರಾಗಳು ಸೆರೆಹಿಡಿದಿವೆ. ಶಾಲೆಯ ಆವರಣದೊಳಗಡೆ ಶಾಲಾ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ಎರಗಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ. ಶಾಲೆಯ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಶಾಲೆಗೆ ಧಾವಿಸಿ ಚಿರತೆಯನ್ನು ಜೀವಂತ ಹಿಡಿಯಲು ಕಾರ್ಯಾಚರಣೆ ಕೈಗೊಂಡು ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿದಿದ್ದಾರೆ. ಶಾಲೆಗೆ ರಜೆ ಇದ್ದದ್ದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ಕ್ಲಿಕ್ ಮಾಡಿ .... ಮುಂದೆ ಓದಿ
ಸುಸೂಗೆ ಬ್ರೇಕ್ ಪಡೆದ ನಾಯಿ 13.1 ಮೈಲು ಮ್ಯಾರಥಾನ್ ಓಡಿತು
ಸಾಕಿದ ನಾಯಿಯೊಂದಕ್ಕೆ  ಬಾತ್ ರೂಂಗೆ ತೆರಳಿ ಸುಸೂ ಮಾಡಲು ಬ್ರೇಕ್  ಕೊಟ್ಟಿದ್ದೇ ತಡ ಕೂಡಲೇ ಸಮೀಪದ  ಮ್ಯಾರಥಾನ್ ರೇಸ್‌ನಲ್ಲಿ ಪಾಲ್ಗೊಂಡು ಓಟಗಾರರ ಜತೆ 13. 1 ಮೈಲುಗಳಷ್ಟು ದೂರ ಓಡಿತು. ಜನವರಿ 16ರಂದು ಬ್ಲಡ್‌ಹೌಂಡ್ ಲುಡಿವೈನ್ ಅಲಬಾಮಾದ ಎಲ್ಕ್‌ಮಂಟ್ ಹಾಫ್ ಮ್ಯಾರಥಾನ್‌ ಸ್ಟಾರ್ಟಿಂಗ್ ಲೈನ್‌ನಲ್ಲಿ ಬಂದು ನಿಂತುಕೊಂಡು ವಿಷಲ್ ಊದಿದ ಕೂಡಲೇ ಉಳಿದ ಓಟಗಾರರ ಜತೆ ತಾನೂ ಓಡಲಾರಂಭಿಸಿತು. ಸ್ವಲ್ಪ ದೂರ ಓಡಿ ನಿಲ್ಲಿಸಬಹುದೆಂದು ಜನರು ಎಣಿಸಿದ್ದರು. ಆದರೆ ಹೆಣ್ಣು ನಾಯಿ ಜತೆಗಿದ್ದ ಓಟಗಾರರಿಗೆ ಸವಾಲು ಹಾಕುವಂತೆ ಓಡುತ್ತಾ ಕೊನೆಗೆ 13. 1 ಮೈಲು ದೂರದ ಗುರಿಯನ್ನು ಮುಟ್ಟಿ ಏಳನೇ ಸ್ಥಾನ ಪಡೆಯಿತು.  ನಾಯಿಯ ಮಾಲೀಕನಿಗೆ ತನ್ನ ಪ್ರಸಿದ್ಧ ನಾಯಿ ಮ್ಯಾರಥಾನ್‌ನಲ್ಲಿ ಓಡಿತೆಂಬುದನ್ನು ಅವರ ಸ್ನೇಹಿತ .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery