ತಾಜಾ ಸುದ್ದಿ
ಫ್ರಾನ್ಸ್‌ನಲ್ಲಿ ವೇಶ್ಯೆಯರಿಗೆ ಹಣ ಕೊಟ್ಟು ಖರೀದಿ ಮಾಡುವುದು ಕಾನೂನುಬಾಹಿರ
ಪ್ಯಾರಿಸ್: ಫ್ರಾನ್ಸ್‌ನಲ್ಲಿ ಮೈಮಾರುವ ಮಾಂಸ ದಂಧೆ ನಿಷೇಧಕ್ಕೆ ಹೊಸ ಕಾಯಿದೆ ಜಾರಿಗೆ ತರಲಾಗಿದೆ . ಹಣ ಕೊಟ್ಟು ಲೈಂಗಿಕ ಕ್ರಿಯೆ ಅನುಭವಿಸುವುದು ಇನ್ನು ಮೇಲೆ ಕಾನೂನುಬಾಹಿರವಾಗಲಿದೆ. ಹಾಗೆ ಹಣ ಕೊಟ್ಟು ಖರೀದಿ ಮಾಡಿದವರು ಸಿಕ್ಕಿಬಿದ್ದರೆ ಅವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ವೇಶ್ಯಾವಾಟಿಕೆ ಹಾನಿಗಳನ್ನು ಕುರಿತ ತರಗತಿಗಳಿಗೆ ಹಾಜರಿಯಾಗಬೇಕಾಗುತ್ತದೆ. ಆದರೆ ವೇಶ್ಯೆಯರು ಮೈಮಾರಾಟ ಮಾಡಿದರೆ ಅವರಿಗೆ ಯಾವುದೇ ಶಿಕ್ಷೆಯಿಲ್ಲ. ಹಣ ಕೊಟ್ಟು ಸೆಕ್ಸ್ ಖರೀದಿ ಮಾಡುವ ಗಿರಾಕಿಗಳಿಗೆ ಈ ಶಿಕ್ಷೆ ಕಾದಿರುತ್ತದೆ.ಮೊದಲ ಅಪರಾಧಕ್ಕೆ 1500 ಪೌಂಡ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಅಪರಾಧಕ್ಕೆ 3750 ಪೌಂಡ್ ದಂಡ ವಿಧಿಸಲಾಗುತ್ತದೆ ಮತ್ತು ಕ್ರಿಮಿನಲ್ ದಾಖಲೆಯಲ್ಲಿ ವ್ಯಕ್ತಿಯನ್ನು ಇಡಲಾಗುತ್ತದೆ.ವೇಶ್ಯೆಯರಿಗೆ ಗಿರಾಕಿಗಳು ಹಣ ಕೊಟ್ಟು ಸೆಕ್ಸ್ ಖರೀದಿಗೆ ಹೆದರುವುದರಿಂದ ವೇಶ್ಯೆಯರ ಉದ್ಯೋಗಕ್ಕೆ .... ಮುಂದೆ ಓದಿ
ಭಾರತಕ್ಕೆ ಕಳಿಸಲು ಒಪ್ಪದ ಸೌದಿ: ಅಬ್ದುಲ್ ಸತ್ತಾರ್ ನೆರವಿಗೆ ಸುಷ್ಮಾ
ಸೌದಿ: ಭಾರತಕ್ಕೆ ಹಿಂತಿರುಗಲು ಸೌದಿ ಅರೇಬಿಯಾದ ಮಾಲೀಕರು ಅವಕಾಶ ನೀಡದಿದ್ದರಿಂದ ಭಾರತೀಯನೊಬ್ಬ ನೆರವು ಕೋರಿ ಅಂತರ್ಜಾಲದಲ್ಲಿ ವಿಡಿಯೊ  ಹರಿಯಬಿಟ್ಟಿದ್ದ. ಇದರಿಂದ ಕುಪಿತಗೊಂಡ ಸೌದಿ ಆಡಳಿತ ಅವನನ್ನು ಬಂಧಿಸಿತ್ತು.ಬಂಧಿತನಾದ ಉತ್ತರಕನ್ನಡ ದಾಂಡೇಲಿ ಮೂಲದ ಚಾಲಕ ಅಬ್ದುಲ್ ಸತ್ತಾರ್ ಎಂಬವನ ನೆರವಿಗೆ ಧಾವಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಧಾವಿಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಕುರಿತು ಟ್ವೀಟ್ ಮಾಡಿದ್ದು, ಅಬ್ದುಲ್ ಸತ್ತಾರ್ ಸುರಕ್ಷತೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ  ವಿಚಾರವನ್ನು  ಸೌದಿ ಅರೇಬಿಯಾ ಆಡಳಿತದೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚಿಸಲು ಸುಷ್ಮಾ ನಿರ್ಧರಿಸಿದ್ದಾರೆ. ಈಗಾಗಲೇ ಸೌದಿ ಭಾರತೀಯ ರಾಯ‌ಭಾರಿ ಕಚೇರಿ ಸುಷ್ಮಾ ಸ್ವರಾಜ್‌ಗೆ ವರದಿ ಸಲ್ಲಿಸಿದೆ. .... ಮುಂದೆ ಓದಿ
ಮೊಸಳೆಯನ್ನು ನಿರ್ದಯವಾಗಿ ಕಲ್ಲಿನಿಂದ ಥಳಿಸಿದ ಗ್ರಾಮಸ್ಥರು
ಶಿವನೂರು: ಯಾದಗಿರಿ ಜಿಲ್ಲೆಯ ಶಿವನೂರಿನಲ್ಲಿ ನೀರಿನಿಂದ ಹೊರಬಂದ ಜಮೀನಿನಲ್ಲಿ ಪತ್ತೆಯಾದ ಮೊಸಳೆಯೊಂದಕ್ಕೆ ಗ್ರಾಮಸ್ಥರು ಕಲ್ಲುಗಳಿಂದ, ಇಟ್ಟಿಗೆಗಳಿಂದ ನಿರ್ದಯವಾಗಿ ಥಳಿಸಿ ಅದರ ತಲೆಯಲ್ಲಿ ರಕ್ತ ಒಸರುವಂತೆ ಮಾಡಿದ ಅಮಾನವೀಯ ಘಟನೆ ಸಂಭವಿಸಿದೆ. ಗ್ರಾಮಸ್ಥರಲ್ಲಿ ಇಬ್ಬರು ಮೊಸಳೆ ಸತ್ತಿದೆಯೆಂದು ಊಹಿಸಿ ಅದರ ಬಾಲ ಹಿಡಿದು ಎಳೆದರು. ಇನ್ನೊಬ್ಬ ನಿಶ್ಚಲವಾಗಿ ಬಿದ್ದಿದ್ದ ಮೊಸಳೆಯ ಮೈಮೇಲೆ ಕಾಲಿರಿಸಿದ. ಇನ್ನೂ ಜೀವಂತವಾಗಿದ್ದ ಮೊಸಳೆ ತನ್ನ ರಕ್ತತೊಟ್ಟಿಕ್ಕುತ್ತಿದ್ದ ತಲೆಯನ್ನು ಮೇಲೆತ್ತಿದಾಗ ಇನ್ನೊಬ್ಬ ಮತ್ತೆ ಕಲ್ಲೊಂದರಿಂದ ಅದರ ಮೇಲೆ ದಾಳಿ ಮಾಡಿದ. ಮಾನವನ ಕ್ರೌರ್ಯದ ಪೂರ್ಣ ಚಿತ್ರಣ ವಿಡಿಯೊದಲ್ಲಿ ದಾಖಲಾಗಿದ್ದು, ಮೊಬೈಲ್ ಫೋನ್‌ನಲ್ಲಿ ಅದನ್ನು ಚಿತ್ರೀಕರಿಸಲಾಗಿದೆ.ಈ ಘಟನೆ ಯಾವಾಗ ಸಂಭವಿಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸಳೆಯನ್ನು ಕೊಲ್ಲುವುದು ವನ್ಯಜೀವಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಅರಣ್ಯ ಇಲಾಖೆ ಈ ದಾಳಿಯ .... ಮುಂದೆ ಓದಿ
ಪ್ರತಿಯೊಂದು ಸೆಟ್‌ನಿಂದ 31 ರೂ. ಲಾಭ: ಮೋಹಿತ್ ಗೋಯಲ್
ನವದೆಹಲಿ :ಮೋಹಿತ್ ಗೋಯಲ್ 251 ರೂ. ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಬುಕಿಂಗ್ ಆರಂಭಿಸಿದಾಗಿನಿಂದ ವ್ಯಾಪಕ ಸಂದೇಹಕ್ಕೆ  ಒಳಗಾಗಿದ್ದಾರೆ. ಅಷ್ಟೊಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಹೇಗೆ ಕೊಡುತ್ತಾರೆ ಎನ್ನುವ ಅನುಮಾನ ಕಾಡುತ್ತಿದೆ. ನೊಯ್ಡಾದಲ್ಲಿರುವ ಅವರ ಎರಡು ಮಹಡಿಗಳ ಕಚೇರಿಗೆ ಪೊಲೀಸರು ಮತ್ತು ಆದಾಯತೆರಿಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ತಾವು ಹೇಳಿದ ಅಚ್ಚರಿಯ ದರದಲ್ಲಿ ಫೋನ್ ಡೆಲಿವರಿ ಮಾಡುವುದಲ್ಲದೇ ಪ್ರತಿಯೊಂದು ಹ್ಯಾಂಡ್‌ಸೆಟ್‌ಗೆ 31 ರೂ. ಲಾಭ ಗಳಿಸುವುದಾಗಿ ಮೋಹಿತ್ ಹೇಳಿದ್ದಾರೆ.ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ  ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳ ಭೇಟಿ ಕುರಿತು   ಪ್ರಶ್ನಿಸಿದ ಅಮಿತ್ , ನಾನೇನು ತಪ್ಪುಮಾಡಿದ್ದೇನೆ ಎಂದು ಕೇಳಿದ್ದಾರೆ. ತಮ್ಮ ವಿರುದ್ಧ ಯಾವುದೇ ಆದಾಯ ತೆರಿಗೆ ತಪ್ಪಿಸಿದ ಪ್ರಕರಣವಿಲ್ಲ. .... ಮುಂದೆ ಓದಿ
ಹರೀಶ್‌ಗೆ ಬಡ್ತಿ ನಿರಾಕರಿಸಿದ್ದರಿಂದ ಸಾವಿಗೆ ಶರಣಾದರೇ?
ಚೆನ್ನೈ: ಚೆನ್ನೈ ಪೊಲೀಸ್ ಅಧಿಕಾರಿಗಳ ಮೆಸ್‌ನಲ್ಲಿ ಬೆಂಗಳೂರು ಮೂಲದ ಐಪಿಎಸ್ ಅಧಿಕಾರಿ  ಎನ್. ಹರೀಶ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾದವಿವಾದ ಷುರುವಾಗಿದೆ. ಮಾಜಿ ಡಿಜಿಪಿ ರಾಮಾನುಜಂ ತಮ್ಮನ್ನು ದೂರಿದ ಅಜ್ಞಾತ ಮೂಲಗಳ ವಿರುದ್ಧ ವಾಗ್ದಾಳಿ ಮಾಡಿದರು. ಹರೀಶ್ ಅವರ ಬ್ಯಾಚ್‌ಮೇಟ್ ಎಂದು ಹೇಳುವ ವ್ಯಕ್ತಿ ಡಿಜಿಪಿ ರಾಮಾನುಜಂ ಹರೀಶ್ ಸಾವಿಗೆ ಕಾರಣರೆಂದು ಆರೋಪಮಾಡಿದ್ದರು.  ಹರೀಶ್ ಅವರ ಬಡ್ತಿಯನ್ನು ತಡೆಹಿಡಿದು ಚಿತ್ರಹಿಂಸೆ ನೀಡಿದ್ದರಿಂದ ಬೇಸತ್ತ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿಸಿದ್ದರು. ಆದರೆ ಈ ಆರೋಪ ಅಲ್ಲಗಳೆದ ರಾಮಾನುಜಂ ಅಧಿಕಾರಿಗಳಿಗಿರುವ ತಮಿಳು ಪ್ರೌಢಿಮೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹರೀಶ್ ವಿಫಲರಾಗಿದ್ದರಿಂದ ಅವರಿಗೆ ಬಡ್ತಿ ನೀಡಿರಲಿಲ್ಲ. ವೈಯಕ್ತಿಕವಾಗಿ ಅವರ ಮೇಲೆ ತಮಗೇನೂ .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery