ತಾಜಾ ಸುದ್ದಿ
ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪದ ಆರೋಪ: ಎದಿರೇಟು ನೀಡಿದ ಗುಂಡೂರಾವ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಹಾಲಿ ಕರ್ನಾಟಕದ ಸಚಿವರು ಕಪ್ಪು ಹಣವನ್ನು ಕಪ್ಪವಾಗಿ ನೀಡಿದ ಆರೋಪದ ಬೆನ್ನ ಹಿಂದೆಯೇ, ಬಿಜೆಪಿ ಎಂಎಲ್‌ಸಿ ಲೆಹರ್ ಸಿಂಗ್ ಸಿಸೋರಿಯಾ ಅವರಿಂದ ಐಟಿ ಇಲಾಖೆ ವಶಪಡಿಸಿಕೊಂಡ ಡೈರಿಯೊಂದಿಗೆ ಕಾಂಗ್ರೆಸ್ ಎದಿರೇಟು ನೀಡಿದೆ. 2013ರಲ್ಲಿ ಕೇಸರಿ ಪಕ್ಷ ಅಧಿಕಾರ ಹಿಡಿದಾಗ, ನಮೋ ಮತ್ತು ಎಎಸ್ ಅವರಿಗೆ 154 ಕೋಟಿ ರೂ. ಸಂದಾಯ ಮಾಡಿರುವುದನ್ನು ಆ ಡೈರಿಯಲ್ಲಿ ಕೊಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಡೈರಿಯ ರಹಸ್ಯಗಳನ್ನು ಬಿಚ್ಚಿಟ್ಟ ಕೆಪಿಎಸ್‌ಸಿ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಯಡಿಯೂರಪ್ಪನವರ ಆಡಳಿತದ ಕಾಲದಲ್ಲಿ ಬಿಜೆಪಿಯೆ ಮಾಜಿ ಖಜಾಂಜಿಯಾಗಿದ್ದ ಸಿಸೋರಿಯಾ ಅವರ ಸಹಿಗೆ ಹೋಲಿಕೆಯಾಗುವ ಸಹಿಯನ್ನು ಡೈರಿಯಲ್ಲಿ ಮಾಡಲಾಗಿತ್ತು ಎಂದು ತಿಳಿಸಿದರು. 2013ರ ನವೆಂಬರ್ 9ರಂದು .... ಮುಂದೆ ಓದಿ
ಪ್ರಭಾ ಹತ್ಯೆಗೆ ಸುಪಾರಿ: ಆಸ್ಟ್ರೇಲಿಯಾ ಪೊಲೀಸರ ಶಂಕೆ
ಬೆಂಗಳೂರು: ಎರಡು ವರ್ಷಗಳ ಹಿಂದೆ ಸಿಡ್ನಿ ಪಾರ್ಕ್‌ನಲ್ಲಿ ಮಾರಣಾಂತಿಕ ಇರಿತಕ್ಕೊಳಗಾಗಿ ಮೃತಪಟ್ಟ ಪ್ರಭಾ ಅರುಣ್ ಕುಮಾರ್ ಕರ್ನಾಟಕದಲ್ಲಿ ಅವರ ಪರಿಚಿತರೇ ನಿಯೋಜಿಸಿದ ಬಾಡಿಗೆ ಹಂತಕರಿಗೆ ಬಲಿಪಶುವಾಗಿರಬಹುದೆಂದು ಆಸ್ಟ್ರೇಲಿಯಾ ಪೊಲೀಸರು ಶಂಕಿಸಿದ್ದಾರೆ. ಪ್ರಭಾ ಹತ್ಯೆಯ ತನಿಖೆ ನಡೆಸುತ್ತಿರುವ ಆಸ್ಟ್ರೇಲಿಯಾ ಪೊಲೀಸರು ಕೋರ್ಟ್‌ಗೆ ಸಲ್ಲಿಸಲಾದ ವರದಿಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯಾ ಪೊಲೀಸ್ ತಂಡ ಜನವರಿ 14ರಂದು ನಗರಕ್ಕೆ ಆಗಮಿಸಿ ಪ್ರಭಾ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿಚಾರಣೆ ನಡೆಸಿತು.ಪ್ರಭಾ ಕುಟುಂಬಕ್ಕೆ ಈ ದುರಂತ ಸಂಭವಿಸಿದಾಗ ಪ್ರಭಾರ ಏಕೈಕ ಪುತ್ರಿ ಬೆಂಗಳೂರಿನಲ್ಲಿ ತನ್ನ ತಂದೆಯ ಜತೆ ವಾಸವಿದ್ದಳು. ಆಸ್ಟ್ರೇಲಿಯಾ ತಂಡ ಪ್ರಭಾ ಪತಿ ಸಾಫ್ಟ್‌ವೇರ್ ಉದ್ಯಮಿ ಅರುಣ್ ಕುಮಾರ್ ಅವರನ್ನು ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಸಿಐಡಿ ಪೊಲೀಸರ .... ಮುಂದೆ ಓದಿ
ಬ್ಯಾಟ್ಸ್ ಮನ್ ಸ್ಟಂಪ್ ಏಟಿಗೆ ವಿಕೆಟ್ ಕೀಪರ್ ಕಲಾಸ್
ಢಾಕಾ:  ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ  ವಿಕೆಟ್ ಕೀಪರ್ ಆಗಿದ್ದ ಬಾಲಕನನ್ನು ಬ್ಯಾಟ್ಸ್ ಮನ್ ವಿಕೆಟ್‌ನಿಂದ ಹೊಡೆದು ಸಾಯಿಸಿದ ಅಮಾನುಷ ಘಟನೆ ವರದಿಯಾಗಿದೆ. ಬೌಲರೊಬ್ಬನ ಎಸೆತಕ್ಕೆ ಬ್ಯಾಟ್ಸ್‌ಮನ್ ಕ್ಯಾಚಿತ್ತು ಔಟಾಗಿದ್ದರು. ಆದರೆ ಬೌಲರ್ ಕ್ರೀಸ್ ಆಚೆ ಕಾಲಿಟ್ಟು ಬೌಲಿಂಗ್ ಮಾಡಿದ್ದರಿಂದ ನೋಬಾಲ್ ಕಾರಣದಿಂದ ಅಂಪೈರ್ ಔಟ್ ಕೊಟ್ಟಿರಲಿಲ್ಲ. ಎರಡನೇ ಬಾರಿ ಕೂಡ ಬ್ಯಾಟ್ಸ್ ಮನ್  ಕ್ಯಾಚಿತ್ತು ಔಟಾದಾಗ ಅದನ್ನು ಕೂಡ ಅಂಪೈರ್ ನೋಬಾಲ್ ಡಿಕ್ಲೇರ್ ಮಾಡಿದ್ದರು. ಆಗಲೂ ಬೌಲರ್ ಕ್ರೀಸ್ ಆಚೆ ಪಾದ ಊರಿದ್ದಾನೆಂದು ಅಂಪೈರ್ ಘೋಷಿಸಿದ್ದರು.  ಇದರಿಂದ ಕೋಪಗೊಂಡ ವಿಕೆಟ್ ಕೀಪರ್ 16ರ ಹರೆಯದ ಶಿಕ್ದರ್ ಅಂಪೈರ್ ತೀರ್ಪನ್ನು ಪ್ರಶ್ನಿಸಿ ಅಂಪೈರ್ ಬಳಿಗೆ ಧಾವಿಸಿ ಬೈಯಲಾರಂಭಿಸಿದ. ಆಗ ಬ್ಯಾಟ್ಸ್ ಮನ್ ಕೋಪಗೊಂಡು ಸ್ಟಂಪ್ಸ್‌ ಕಿತ್ತು ಶಿಕ್ದರ್ .... ಮುಂದೆ ಓದಿ
ಪತ್ನಿಯ ಅನೈತಿಕ ಸಂಬಂಧ ಪುರಾವೆಗೆ ಕ್ಯಾಮರಾ ಅಳವಡಿಸಿದ ಸಾಫ್ಟ್‌ವೇರ್ ಎಂಜಿನಿಯರ್
ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ತಮ್ಮ ಪತ್ನಿಯ ಶೀಲದ ಬಗ್ಗೆ ಶಂಕಿಸಿ ಅವಳನ್ನು ಪ್ರಶ್ನಿಸಿದಾಗಲೆಲ್ಲಾ ಜಗಳಕ್ಕೆ  ಇಳಿಯುತ್ತಿದ್ದಳು. ಆಗ ತನ್ನ ಬುದ್ಧಿಮತ್ತೆಯನ್ನು ಬಳಸಿಕೊಂಡ ಪತಿ ಸಾಕ್ಷ್ಯಾಧಾರ ಸಮೇತ ಪತ್ನಿಯ ಅನೈಡತಿಕ ಸಂಬಂಧ ಬಯಲಿಗೆಳೆದು ಅವಳಿಗೆ ವಿಚ್ಛೇದನ ನೀಡಿದ. ಕಳೆದ ಫೆಬ್ರವರಿಯಲ್ಲಿ ತನ್ನ ಕೋಣೆಯ ಮೂಲೆಯೊಂದರಲ್ಲಿ ಸಿಗರೇಟ್ ತುಂಡೊಂದನ್ನು ಸೇದಿ ಬಿಸಾಡಿದ್ದು ಅವರಿಗೆ ಪತ್ತೆಯಾಗಿತ್ತು. ಇದರಿಂದ ಪತ್ನಿಯ ಮೇಲೆ ಸಂಶಯದಿಂದ ಪ್ರಶ್ನಿಸಿದಾಗ ಅವಳು ಯಾವುದೋ ಒಂದು ಉತ್ತರಹೇಳಿ ನುಣುಚಿಕೊಂಡಿದ್ದಳು. ಆಗ ಪತಿ ಮಲಗುವ ಕೋಣೆಯ ಹಿಂದೆ ಕ್ಯಾಮರಾವನ್ನು ಗೋಪ್ಯವಾಗಿ ಅಳವಡಿಸಿದ್ದರು.ಕೆಲವು ತಿಂಗಳವರೆಗೆ ಯಾವುದೇ ಪ್ರಸಂಗ ಪತ್ತೆಯಾಗದಿದ್ದಾಗ ವಿವಿಧ ಕೋನಗಳಲ್ಲಿ ಇನ್ನೂ 2 ಕ್ಯಾಮೆರಾಗಳನ್ನು ಪತಿ ಜೋಡಿಸಿದರು.ತನ್ನ ಪತಿಯ ಫೋನನ್ನು ತನ್ನ ಲ್ಯಾಪ್‌ಟಾಪ್‌ಗೆ ವಿವಿಧ ಮತ್ತು ರಿಮೋಟ್ .... ಮುಂದೆ ಓದಿ
ಬೆಂಕಿಯ ಜ್ವಾಲೆಯ ಕಟ್ಟಡದಿಂದ 3 ಮಕ್ಕಳನ್ನು ಕೆಳಕ್ಕೆಸೆದ ಮಹಿಳೆ
ದಕ್ಷಿಣ ಕೊರಿಯಾದ ಪಿಯಾಂಗ್‌ಟೇಕ್ ಕೌಂಟಿಯಲ್ಲಿ ಕಟ್ಟಡವೊಂದರ ನಾಲ್ಕನೇ ಮಹಡಿಯಲ್ಲಿ ಬೆಂಕಿ ಆವರಿಸಿಕೊಂಡಿತು. ನಾಲ್ಕನೇ ಮಹಡಿಯ ಧೈರ್ಯಗೆಡದ ಮಹಿಳೆ ತನ್ನ ಜೊತೆಗಿರುವ  ಮೂವರು ಮಕ್ಕಳ ಪ್ರಾಣರಕ್ಷಣೆಗೆ ಉಪಾಯ ಹುಡುಕಿ ಬಾಲ್ಕನಿಗೆ ಬಂದಳು. ಕೆಳಗೆ ನಿಂತಿದ್ದ ನೂರಾರು ಜನರು ಏರ್ ಮನ್ ಸಿಬ್ಬಂದಿಯನ್ನು ಕರೆಸಿದರು. ಮಹಿಳೆ ಕಟ್ಟಡದ ಮೇಲಿಂದ ಮಕ್ಕಳನ್ನು ಒಬ್ಬರಾದ ನಂತರ ಒಬ್ಬರನ್ನು ಎಸೆದಳು. ಪ್ರೆಶಸ್ ಎನಿಯೋಕೊ ತನ್ನ 7 ತಿಂಗಳು, 3 ಮತ್ತು ನಾಲ್ಕು ವಯಸ್ಸಿನ ಮಕ್ಕಳೊಂದಿಗೆ ಬೆಂಕಿಯ ಜ್ವಾಲೆಯಲ್ಲಿ ಉರಿಯುತ್ತಿದ್ದ ನಾಲ್ಕನೇ ಮಹಡಿಯಲ್ಲಿ ಸಿಕ್ಕಿಬಿದ್ದಿದ್ದಳು. ಸಮೀಪದ ಒಸಾನ್ ವಾಯುನೆಲೆಯ ಅಮೆರಿಕದ ಏರ್‌ಮನ್ ಶುಕ್ರವಾರ ಸಂಜೆ ಕಟ್ಟಡದ ಕೆಳಗೆ ಗದ್ದಲವನ್ನು ಕಂಡು, ಸ್ಥಳೀಯರು ಮತ್ತು ಮಿಲಿಟರಿಯ ರಕ್ಷಣಾ ತಂಡವನ್ನು ಸೇರಿಸಿದರು.ನಾಲ್ಕನೇ ಮಹಡಿಯಿಂದ ತಾಯಿ ಮಕ್ಕಳನ್ನು ಕೆಳಕ್ಕೆ ಎಸೆಯುತ್ತಿದ್ದರಂತೆ .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery