ತಾಜಾ ಸುದ್ದಿ
ಚಾಲಕನ ಸಮಯಪ್ರಜ್ಞೆ: ಅಪಾಯದಿಂದ ಪಾರಾದ ಮೋಟರ್‌ಸೈಕಲ್ ಸವಾರರು
ಮಂಗಳೂರು: ಸಮೀಪದ ಗುಡ್ಡೆಹೊಸೂರು ಸಮೀಪದ ಬಿ.ಎಂ ರಸ್ತೆಯಲ್ಲಿ ಶುಕ್ರವಾರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಪವಾಡಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿರುವುದು .ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಸೋದರನ ಬೈಕಿನಲ್ಲಿ ಕುಳಿತು ಕುಶಾಲನಗರದಿಂದ ಗುಡ್ಡೆಹೊಸೂರು ಕಡೆಗೆ ತೆರಳುತ್ತಿದ್ದಾಗ ಏಕಾಏಕಿ ಬೈಕ್ ಸವಾರ ಸಮೀಪದ ಪೆಟ್ರೋಲ್ ಬಂಕ್ ಬಳಿ ಬಲಕ್ಕೆ ತಿರುಗಿಸಿದಾಗ ಹಿಂಬದಿಯಲ್ಲಿ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದರಿಂದ ಮೋಟರ್ ಸೈಕಲ್ ಸವಾರರು ಅಪಾಯದಿಂದ ಪಾರಾದರು. ಬಸ್ ಮೋಟರ್ ಸೈಕಲ್‌‍ಗೆ ಸ್ವಲ್ಪ ಮಾತ್ರ ತಾಗಿದ್ದರಿಂದ ವಾಹನ ಕೆಳಕ್ಕೆ ಬಿದ್ದು ಮಹಿಳೆ ಬಸ್ಸಿನಡಿ ಸಿಲುಕಿದರೂ ಕೊನೆಗೆ ಸ್ವಲ್ಪ ತರಚಿದ ಗಾಯಗಳಿಂದ ಅಪಾಯದಿಂದ ಪಾರಾದರು. .... ಮುಂದೆ ಓದಿ
ಐಟಿ ಕ್ಷೇತ್ರದ ನೌಕರರನ್ನು ಕಾಡುತ್ತಿರುವ ಉದ್ಯೋಗ ಅಭದ್ರತೆಯ ತಳಮಳ
 ಬೆಂಗಳೂರು: ಐಟಿ ಕ್ಷೇತ್ರದ ನೌಕರರಲ್ಲಿ ತಳಮಳ ಉಂಟಾಗಿದೆ. ಪುಣೆ ಮೂಲದ ಟೆಕ್ಕಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ಟಿಪ್ಪಣಿಯೊಂದನ್ನು ಬರೆದಿಟ್ಟಿದ್ದು, ಐಟಿಯಲ್ಲಿ ಉದ್ಯೋಗ ಭದ್ರತೆ ಇಲ್ಲ. ನನ್ನ ಕುಟುಂಬದ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ ಎಂದು ಪತ್ರ ಬರೆದಿಟ್ಟು ಮೃತಪಟ್ಟಿದ್ದ.60ರ ವಯಸ್ಸಿನ ತಂದೆಯೊಬ್ಬರು ತಮ್ಮ ಪುತ್ರಿ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದಾಳೆಂದು ದೂರಿದರು. ಅವಳನ್ನು ಕೌನ್ಸಿಲಿಂಗ್‌ಗೆ ಕರೆದುಕೊಂಡು ಹೋದಾಗ, ಅವಳು ಕೆಲಸ ಕಳೆದುಕೊಂಡ ವಿಷಯ ತಂದೆ, ತಾಯಿಗಳಿಗೆ ಗೊತ್ತಾಗಿತ್ತು. ಆದರೂ ದಿನನಿತ್ಯ ಅವಳು ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಹೋಗುತ್ತಿದ್ದಳು.ವಿಪ್ರೋ, ಇನ್ಫೋಸಿಸ್, ಟೆಕ್ ಮಹೇಂದ್ರ ಮುಂತಾದ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಕಂಪನಿಗಳಲ್ಲಿ ಲೇಆಫ್ ಕೊಡುತ್ತಿರುವುದು ಸಾವಿರಾರು ಐಟಿ ವೃತ್ತಿಪರರ ನಿದ್ದೆ .... ಮುಂದೆ ಓದಿ
ಪವಾಡಸದೃಶ ರೀತಿಯಲ್ಲಿ ಪಾರಾದ ಜನರು
ಇಂದಿನ ಜಗತ್ತಿನಲ್ಲಿ ರಸ್ತೆ ಅಪಘಾತಗಳು ಅನೇಕ ಜನರನ್ನು ಬಲಿತೆಗೆದುಕೊಳ್ಳುತ್ತಿವೆ. ಆಕಸ್ಮಿಕವಾಗಿ ಜರುಗುವ ಈ ಅಪಘಾತಗಳಿಗೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ತಮ್ಮ ನಿರ್ಲಕ್ಷ್ಯದಿಂದಲೋ ಇತರೆ ವಾಹನ ಚಾಲಕರ ಅಡ್ಡಾ ದಿಡ್ಡಿ ಚಾಲನೆಗೆ ತಮ್ಮ ಪ್ರಾಣ ಕಳೆದುಕೊಳ್ಳುವವರು ಅನೇಕ ಮಂದಿ. ಆದರೆ ಕೆಲವರು ಅದೃಷ್ಟವಶಾತ್ ಇಂತಹ ಅಪಘಾತಗಳು ಸಂಭವಿಸಿದರೂ ಪವಾಡಸದೃಶ ರೀತಿಯಲ್ಲಿ , ಕೂದಲೆಳೆಯ ಅಂತರದಿಂದ ಸಾವಿನಿಂದ ಪಾರಾಗುತ್ತಾರೆ. ಅವುಗಳ ಒಂದು ಝಲಕ್ ಇಲ್ಲಿ ಕೊಡಲಾಗಿದೆ. ಈ ವಿಡಿಯೊ ಕ್ಲಿಕ್ ಮಾಡಿ .... ಮುಂದೆ ಓದಿ
ಕರ್ನಾಟಕದ ಜನರು ಮಾನವೀಯತೆ ಮರೆತಿದ್ದಾರೆಯೇ?
ಬೆಂಗಳೂರು: ಚಿತ್ರದುರ್ಗದ ಮೊಳಕಾಲ್ಮೂರುವಿನಲ್ಲಿ ಇತ್ತೀಚೆಗೆ ಒಂದು ಅಪಘಾತ ನಡೆಯಿತು. ಲಾರಿಯೊಂದು ಆಟೊಗೆ ಡಿಕ್ಕಿಹೊಡೆದಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಬ್ಬನ ಎರಡೂ ಕಾಲುಗಳ ಮೇಲೆ ಲಾರಿಯ ಚಕ್ರ ಹರಿದಿದ್ದರಿಂದ ಅವನ ಕಾಲುಗಳು ತುಂಡಾಗಿ ನೋವಿನಿಂದ ನರಳುತ್ತಿದ್ದ. ಯಾರಾದ್ರೂ ಕಾಪಾಡಿ, ಅಯ್ಯೋ ಅಮ್ಮಾ ಎಂಬ ಅವನ ಆರ್ತನಾದಕ್ಕೆ ಅಲ್ಲಿ ಸೇರಿದ್ದ ಜನರ ಮನಸ್ಸು ಕರಗಲಿಲ್ಲ.  ರಕ್ತದ ಮಡುವಿನಲ್ಲಿ ರಮೇಶ್ ಎಂಬ ಯುವಕ ಬಿದ್ದಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಯಾರೊಬ್ಬರೂ ಸಮೀಪದ ಆಸ್ಪತ್ರೆಗೆ ಒಯ್ಡು ನೆರವಾಗುವುದಕ್ಕೆ ಮುಂದೆ ಬರಲಿಲ್ಲ. ಜನರು ಮಾನವೀಯತೆ ಮರೆತಂತೆ, ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರೇ ವಿನಾ ನಮಗೇಕೆ ಸುಮ್ಮನೇ ಪೊಲೀಸು, ಕೇಸು ಅಂತಾ ಉಸಾಬರಿ ಎಂದು ಭಾವಿಸಿದವರೇ ಹೆಚ್ಚು.  ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ನೆರವಾದವರಿಗೆ ಯಾವುದೇ ತೊಂದರೆ ನೀಡಬಾರದು .... ಮುಂದೆ ಓದಿ
ನನ್ನ ಮನೆಯಲ್ಲಿ ಡೈರಿ ಸಿಕ್ಕಿರಲೇ ಇಲ್ಲ: ಗೋವಿಂದ ರಾಜು ಯೂ ಟರ್ನ್
ಬೆಂಗಳೂರು: ನನ್ನ ಮನೆಯಲ್ಲಿ ಡೈರಿ ಸಿಕ್ಕಿರಲೇ ಇಲ್ಲ. ಐಟಿ ಅಧಿಕಾರಿಗಳ ನಾಟಕದಿಂದ ಇವೆಲ್ಲಾ ನಡೆದಿದೆ ಎಂದು ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಗೋವಿಂದ ರಾಜು ಹೇಳಿದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕುರಿತು ಗೋವಿಂದ ರಾಜು ಐಟಿ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಟಿ ಅಧಿಕಾರಿಗಳೇ ನನ್ನ ಮನೆಯಲ್ಲಿ ಡೈರಿ ತಂದಿಟ್ಟು ನನ್ನ ಮನೆಯಲ್ಲಿ ಡೈರಿ ಸಿಕ್ಕಿದ ನಾಟಕವಾಗಿದ್ದಾರೆ. ಡೈರಿಯಲ್ಲಿ ಬರೆದಿದ್ದೆಲ್ಲಾ ಪೂರ್ವನಿಯೋಜಿತ ಕೃತ್ಯ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೋವಿಂದ ರಾಜು ಮನೆಯಲ್ಲಿ ಸಿಕ್ಕಿದೆಯೆಂದು ಹೇಳಲಾದ ಡೈರಿಯಿಂದ ಕಾಂಗ್ರೆಸ್ ಮುಖಂಡರು ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡಿದ್ದಾರೆಂದು ಬಿಜೆಪಿ ಆರೋಪಿಸಿತ್ತು. ಜತೆಗೆ ಸ್ಟೀಲ್ ಫ್ಲೈ ಓವರ್ ಯೋಜನೆಯಲ್ಲಿ ಗುತ್ತಿಗೆದಾರರು ಕಪ್ಪ ನೀಡಿದ್ದಾರೆಂದು ಯಡಿಯೂರಪ್ಪ ಆರೋಪಿಸಿದ್ದರಿಂದ .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery