ಕ್ರೀಡಾ ಸುದ್ದಿ
ನೇಮರ್ ಶೂಟ್ ಔಟ್: ಬ್ರೆಜಿಲ್‌‌ಗೆ ಪ್ರಪ್ರಥಮ ಒಲಿಂಪಿಕ್ ಫುಟ್ಬಾಲ್ ಚಿನ್ನದ ಪದಕ
ರಿಯೊ ಡಿ ಜನೈರೊ: ನೇಮರ್ ಗೆಲುವಿನ ಪೆನಾಲ್ಟಿ ಸ್ಕೋರ್ ಮಾಡುವ ಮೂಲಕ  ಬ್ರೆಜಿಲ್ ಜರ್ಮನಿ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಪ್ರಪ್ರಥಮ ಒಲಿಂಪಿಕ್ ಫುಟ್ಬಾಲ್ ಚಿನ್ನ ಪದಕವನ್ನು ಗೆದ್ದುಕೊಂಡಿದೆ. 5-4 ಶೂಟ್ ಔಟ್ ಜಯದಿಂದ 2 ವರ್ಷಗಳ ಹಿಂದೆ ಜರ್ಮನಿ ವಿರುದ್ಧ  ವಿಶ್ವಕಪ್ ಸೆಮಿಫೈನಲ್‌ನಲ್ಲಿ 7-1 ಅವಮಾನಕರ ಸೋಲಿಗೆ ಸೇಡು ತೀರಿಸಿಕೊಂಡಿದೆ. ಐದು ಬಾರಿ ವಿಶ್ವಚಾಂಪಿಯನ್ನರಾದ ಬ್ರೆಜಿಲ್ ಇದುವರೆಗೆ ಒಲಿಂಪಿಕ್ ಚಿನ್ನದ ಪದಕದಿಂದ ವಂಚಿತವಾಗಿತ್ತು. ಬಾರ್ಸೆಲೋನಾ ಸ್ಟಾರ್ ನೇಮರ್ ಗೆಲುವಿನ ಪೆನಾಲ್ಟಿ ಶೂಟ್ ಹೊಡೆದು ಒಲಿಂಪಿಕ್ ಚಿನ್ನದ ಪದಕ ಗೆದ್ದಾಗ ಅವರ ಕಣ್ಣಿನಲ್ಲಿ ಆನಂದಭಾಷ್ಪ ಹರಿಯಿತು.  ರಿಯೊ ಕ್ರೀಡಾಕೂಟದ ಕಿಕ್ಕಿರಿದ ಗುಂಪಿನ ಎದುರು, ಜಮೈಕಾದ ಸ್ಟಾರ್ ಓಟಗಾರ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಸಮ್ಮುಖದಲ್ಲಿ ನೇಮರ್ .... ಮುಂದೆ ಓದಿ
ರಿಯೊದಲ್ಲಿ ಬೆಳ್ಳಿಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸಿಂಧು
 ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ, ಸಿಂಧು ಅವರು ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ನಂಬರ್ ಒನ್ ಕರೊಲಿನಾ ಮಾರಿನ್ ಅವರಿಗೆ ಸೋತರೂ ಬೆಳ್ಳಿಪದಕ ಜಯಿಸುವ ಮೂಲಕ ಭಾರತದ ಲಕ್ಷಾಂತರ ಕ್ರೀಡಾಭಿಮಾನಿಗಳ ಹ್ರದಯ ಗೆದ್ದಿದ್ದಾರೆ. 21 ವರ್ಷದ ಸಿಂಧು ಅವರು ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದ ಬಳಿಕ ಭಾರತಕ್ಕೆ 2ನೇ ಪದಕ ಗೆಲ್ಲಿಸಿಕೊಟ್ಟಿದ್ದಾರೆ.ಸಿಂಧು ಫೈನಲ್ಸ್‌ನಲ್ಲಿ ಮೊದಲ ಸೆಟ್‌ನಲ್ಲಿ ಕೆಚ್ಚೆದೆಯ ಹೋರಾಟ ನೀಡಿ 21-19ರಿಂದ ಗೆದ್ದುಕೊಂಡರು. ಮಾರಿನ್ ಎರಡನೇ ಸೆಟ್ಟನ್ನು 21-12ರಿಂದ ಮತ್ತು ಮೂರನೇ ಸೆಟ್ಟನ್ನು 21-15ರಿಂದ ಗೆದ್ದುಕೊಂಡು ಚಿನ್ನದ ಪದಕ ಗೆದ್ದರು.  ಸಿಂಧು ಅವರು ಕರ್ಣಮ್ ಮಲ್ಲೇಶ್ವರಿ, ಮೇರಿ ಕೋಮ್, ಸೈನಾ ನೆಹ್ವಾಲ್ ಮತ್ತು ಸಾಕ್ಷಿ ಮಲಿಕ್ ಬಳಿಕ ಪದಕ ಗೆದ್ದ ಐದನೇ .... ಮುಂದೆ ಓದಿ
ವಿಂಡೀಸ್ 108ಕ್ಕೆ ಆಲೌಟ್: ಭಾರತಕ್ಕೆ 2-0ಯಿಂದ ಸರಣಿ ಜಯ
ಭಾರತ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ವೆಸ್ಟ್ ಇಂಡೀಸ್ ತಂಡವನ್ನು 108 ರನ್‌ಗಳಿಗೆ ಆಲೌಟ್  ಮಾಡುವ ಮೂಲಕ 237 ರನ್ ಅಂತರದಿಂದ ಜಯಗಳಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂ‌ಡೀಸ್ 225 ರನ್‌ಗಳಿಗೆ ಆಲೌಟ್ ಆದ ಬಳಿಕ ಭಾರತ 7 ವಿಕೆಟ್‌ಗೆ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.59 ರನ್‌ಗಳೊಂದಿಗೆ ಡೆರೆನ್ ಬ್ರೇವೊ ಸ್ವಲ್ಪ ಪ್ರತಿರೋಧ ತೋರಿದರು. ಭಾರತ ಬೌಲಿಂಗ್‌ನ ವೇಗ ಮತ್ತು ಸ್ಪಿನ್ ಎದುರಿಸಲು ತಾಂತ್ರಿಕವಾಗಿ ಸಜ್ಜಾಗಿರದ ವಿಂಡೀಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 108 ರನ್‌ಗಳಿಗೆ ಬೌಲ್ಡ್ ಆಗಿದೆ.ವೇಗಿ ಮೊಹಮ್ಮದ್ ಶಮಿ ಮಾರಕ ದಾಳಿಯ ಮೂಲಕ 11ಕ್ಕೆ 3 ವಿಕೆಟ್ ಕಬಳಿಸಿದರು. ಇದು ಭಾರತಕ್ಕೆ 2-0 ಸರಣಿ ಜಯ .... ಮುಂದೆ ಓದಿ
ಶೂಟಿಂಗ್‌ನಲ್ಲಿ ಭಿಂದ್ರಾಗೆ ಸ್ವಲ್ಪದರಲ್ಲಿ ಕೈತಪ್ಪಿದ ಕಂಚಿನ ಪದಕ
ರಿಯೊ ಡಿ ಜನೈರೊ: ಭಾರತದ ಬೀಜಿಂಗ್ ಒಲಿಂಪಿಕ್ ಶೂಟಿಂಗ್ ಸ್ವರ್ಣ ಪದಕ ವಿಜೇತ  ಅಭಿನವ್ ಭಿಂದ್ರಾ  ತಮ್ಮ ಎರಡನೇ ಒಲಿಂಪಿಕ್ ಪದಕವನ್ನು ಗೆಲ್ಲುವುದು 0.1 ಪಾಯಿಂಟ್‌ನಿಂದ ಮಿಸ್ ಆಗಿದ್ದು ಕಂಚಿನ ಪದಕವು ಸ್ವಲ್ಪದರಲ್ಲಿ ಕೈತಪ್ಪಿದೆ.  10 ಮೀ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಒಟ್ಟು 163. 8 ಪಾಯಿಂಟ್ ಸ್ಕೋರ್ ಮಾಡಿ ನಾಲ್ಕನೇ ಸ್ಥಾನವನ್ನು ಭಿಂದ್ರಾ ಪಡೆದರು. ಅರ್ಹತಾ ಸುತ್ತಿನಲ್ಲಿ ಅಚ್ಚರಿಯಾಗಿ ಚೇತರಿಸಿಕೊಂಡು ಫೈನಲ್ ಪ್ರವೇಶಿದ್ದ ಭಿಂದ್ರಾ ತಮ್ಮ ಗಮನ ಮತ್ತು ತರಬೇತಿಯ ಮೂಲಕ ಮೊನಚುಗೊಳಿಸಿದ ಕೌಶಲ್ಯದಿಂದ ಮೂರನೇ ಸ್ಥಾನಕ್ಕೆ ಏರಿದ್ದರು. ಆದರೆ ಕೊನೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದು ಸ್ವಲ್ಪದರಲ್ಲಿ ಕಂಚಿನ ಪದಕ ಕೈತಪ್ಪಿದೆ. ರಷ್ಯಾದ ವ್ಲಾಡಿಮಿರ್ ಮಸೆಲೆನಿಕೋವ್ ಮೂರನೇ ಸ್ಥಾನ ಪಡೆದರು. ಇಟಲಿಯ ನಿಕೋಲೊ .... ಮುಂದೆ ಓದಿ
ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಸ ಪ್ರದರ್ಶನ
ರಿಯೊ ಡಿ ಜನೈರೊ: 9 ಕ್ರೀಡಾಪಟುಗಳು ಮೊದಲ ರೌಂಡ್‌ನಲ್ಲೇ ನಿರ್ಗಮನೊಂದಿಗೆ ರಿಯೋದಲ್ಲಿ ಭಾರತದ ಮೊದಲ ದಿನದ ಅಭಿಯಾನ ನೀರಸವಾಗಿದ್ದು, ರೋಯರ್ ಪಟು ದತ್ತು ಬಾಬನ್ ಬೊಕಾನಲ್ ಮತ್ತು ಪುರುಷರ ಹಾಕಿ ತಂಡ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಬೊಕಾನಲ್ ಪುರುಷರ ಸಿಂಗಲ್ ದೋಣಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು ಮತ್ತು ಪುರುಷರ ಹಾಕಿ ತಂಡ ಐರ್ಲೆಂಡ್ ವಿರುದ್ಧ 3-2ರಿಂದ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ. ಜೀತು ರಾಯ್ ಪುರುಷರ 100 ಮೀ ಏರ್ ಪಿಸ್ಟಲ್ ಅರ್ಹತಾ ಸುತ್ತಿನಲ್ಲಿ ಫೈನಲ್ ಸುತ್ತಿಗೆ 6 ಸೀರೀಸ್‌ನ‌ಲ್ಲಿ 580 ಪಾಯಿಂಟ್‌ಗಳೊಂದಿಗೆ ಪ್ರವೇಶಿಸಿದರು.ಆದರೆ ಫೈನಲ್‌ನಲ್ಲಿ 78.7 ಸ್ಕೋರ್‌ನೊಂದಿಗೆ ಕಡೆಯದಾಗಿ ಉಳಿದು ಸೋಲಪ್ಪಿದರು. ಅಪೂರ್ವಿ ಚಾಂದೇಲಾ ಮತ್ತು ಅಯೋನಿಕಾ ಪಾಲ್ ಹಾಗೂ ಟೆನ್ನಿಸ್ ಜೋಡಿ ಲಿಯಾಂಡರ್ .... ಮುಂದೆ ಓದಿ
Prev 1 2 3 4 5 6 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery