ಕ್ರೀಡಾ ಸುದ್ದಿ
ವೆಸ್ಟ್ ಇಂಡೀಸ್‌ಗೆ ಜಯ ತಂದಿತ್ತ ಬ್ರಾತ್ ವೈಟ್ ಹೊಸ ಹೀರೋ
ಕಾರ್ಲೋಸ್ ಬ್ರಾತ್‌ವೈಟ್ ಅವರನ್ನು ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ 4.2 ಕೋಟಿ ರೂ. ಕೊಟ್ಟು ಹರಾಜಿನಲ್ಲಿ ಖರೀದಿ ಮಾಡಿದಾಗ ಎಲ್ಲರೂ ‌ವೈಮೂಗಿನ ಮೇಲೆ ಬೆರಳಿಟ್ಟಿದ್ದರು. ಆದರೆ ಬ್ರಾತ್‌ವೈಟ್ ಎಡನ್‌ಗಾರ್ಡನ್ಸ್‌ನಲ್ಲಿ ಭಾನುವಾರ ಡೆಲ್ಲಿ ಫ್ರಾಂಚೈಸಿ ತನಗೆ ಖರ್ಚು ಮಾಡಿದ ಒಂದೊಂದು ಪೈಸೆಗೂ ತಾನು ಯೋಗ್ಯನಾಗಿರುವುದಾಗಿ ರುಜುವಾತು ಮಾಡಿದರು.ರಾತ್‌ವೈಟ್ ಸ್ಫೋಟಕ ಬ್ಯಾಟ್ಸ್ ಮನ್ ಎಂದು ಹೆಸರಾಗಿದ್ದು, ಎಡೆನ್‌ಗಾರ್ಡನ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಅವರ ಬೌಲಿಂಗ್‌ನಲ್ಲಿ ಸತತ ನಾಲ್ಕು ಸಿಕ್ಸರುಗಳನ್ನು ಸಿಡಿಸಿ ಆತಂಕದಲ್ಲಿದ್ದ ವೆಸ್ಟ್ ಇಂಡೀಸ್ ಪಾಳೆಯದಲ್ಲಿ ಹರುಷದ ಹೊನಲು ಹರಿಸಿದರು. ಕ್ರಿಸ್ ಜೋರ್ಡಾನ್ ತನ್ನ ಕೊನೆಯ ಓವರಿನಲ್ಲಿ ಕೇವಲ 8 ರನ್ ನೀಡಿದಾಗ ಇಂಗ್ಲೆಂಡ್ ಪಾಳೆಯದಲ್ಲಿ ಗೆಲುವಿನ ಆಶಾಕಿರಣ ಮೂಡಿತ್ತು. ಕೊನೆಯ 6 ಎಸೆತಗಳ 19 ರನ್ ಅಗತ್ಯವಿತ್ತು. .... ಮುಂದೆ ಓದಿ
ಆಸ್ಟ್ರೇಲಿಯಾ ವಿರುದ್ಧ ಗೆದ್ದ ವಿಂಡೀಸ್ ಮಹಿಳಾ ತಂಡಕ್ಕೆ ವಿಶ್ವ ಟಿ 20 ಟ್ರೋಫಿ
ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2016ರ ವಿಶ್ವ ಟಿ 20 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸತತವಾಗಿ ಮೂರು ಬಾರಿ ವಿಶ್ವ ಟಿ 20 ಪ್ರಶಸ್ತಿಯನ್ನು ಗೆದ್ದಿದ್ದ ಆಸ್ಟ್ರೇಲಿಯಾಕ್ಕೆ ನಾಲ್ಕನೇ ಅವಕಾಶದಿಂದ ವಂಚಿತರನ್ನಾಗಿ ಮಾಡಿದೆ. ಎಗ್ ಲಾನಿಂಗ್ ಅವರ 52 ರನ್ ಮತ್ತು ಎಲೈಸ್ ವಿಲಾನಿ ಅವರ 52 ರನ್ ನೆರವಿನಿಂದ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು.ಗೆಲುವಿಗೆ 149 ರನ್  ವೆಸ್ಟ್ ಇಂಡೀಸ್ ಪರ ಆರಂಭಿಕ  ಆಟಗಾರ್ತಿಯರಾದ ಮ್ಯಾಥೀವ್ಸ್ ಮತ್ತು ಸ್ಟಫಾನಿ ಟೈಲರ್ಸ್ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿ ಆಸೀಸ್ ಬೌಲರುಗಳನ್ನು ದಂಡಿಸಿದರು. ಆರಂಭಿಕ ಜೋಡಿ 120 ರನ್ ಕಲೆಹಾಕಿದ್ದಾಗ ಮ್ಯಾಥೀವ್ಸ್ ಕ್ರಿಸ್ಟನ್ ಬೀಮ್ಸ್ ಬೌಲಿಂಗ್‌ನಲ್ಲಿ .... ಮುಂದೆ ಓದಿ
ರಾಹುಲ್ ದ್ರಾವಿಡ್‌ರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಿಸಲು ಸಲಹಾ ಸಮಿತಿ ಪ್ರಸ್ತಾಪ
ಮುಂಬೈ:  ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಅವರನ್ನು ಒಳಗೊಂಡ  ಭಾರತ ಕ್ರಿಕೆಟ್ ಮಂಡಳಿಯ ಸಲಹಾ ಸಮಿತಿ ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲು ಆಸಕ್ತಿ ಇದೆಯಾ ಎಂದು ಕೇಳಿದ್ದಾರೆ. ದ್ರಾವಿಡ್ ಸುಮಾರು ಒಂದು ವರ್ಷಗಳಿಂದ ಇಂಡಿಯಾ ಎ ಮತ್ತು ಇಂಡಿಯ ಅಂಡರ್ 19 ತಂಡಗಳಿಗೆ ತರಬೇತಿ ನೀಡುತ್ತಿದ್ದಾರೆ. ಮುಂದೆ ಇಂತಹ ಪ್ರಸ್ತಾಪ ಮಂಡಿಸಿದರೆ ನೀವು ಮುಖ್ಯ ಕೋಚ್ ಆಗಿ ಲಭ್ಯರಾಗುತ್ತೀರಾ ಎಂದು ಸಲಹಾ ಮಂಡಳಿ ಕೇಳಿದೆ. ಈ ಕುರಿತು ಯೋಚಿಸಿ ಹೇಳುವುದಾಗಿ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.ತಂಡದ ಕೆಲವು ಯುವ ಪ್ರತಿಭಾವಂತ ಆಟಗಾರರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿಯನ್ನು ಕೋಚ್ ಹುದ್ದೆಗೆ ನೇಮಿಸಲು ಬಿಸಿಸಿಐ ಆಸಕ್ತವಾಗಿದೆ. ದ್ರಾವಿಡ್ ಈ .... ಮುಂದೆ ಓದಿ
ಜಾಸನ್ ರಾಯ್ ಸಿಡಿಲಬ್ಬರದ 78 ರನ್ : ಇಂಗ್ಲೆಂಡ್‌ಗೆ ಕಿವೀಸ್ ವಿರುದ್ಧ ಜಯ
ನವದೆಹಲಿ:  ಜಾಸನ್ ರಾಯ್ ಅವರ ಅಮೋಘ 44 ಎಸೆತಗಳಲ್ಲಿ 78 ರನ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ನಿರಾಯಾಸವಾಗಿ ಗೆದ್ದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ವಿಶ್ವ ಟಿ 20 ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ 153 ರನ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಗ್ರೂಪ್ ಪಂದ್ಯಗಳಲ್ಲಿ ಸತತವಾಗಿ ನಾಲ್ಕು ಜಯ ಸಂಪಾದಿಸಿ ಅಗ್ರಸ್ಥಾನಕ್ಕೆ ಏರುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ ನಿರಾಯಾಸವಾಗಿ ಸೋಲಿಸಿತು. ನ್ಯೂಜಿಲೆಂಡ್ ಬೌಲರುಗಳ ಸ್ಪಿನ್ ಕೈಚಳಕ ಕೋಟ್ಲಾ ಮೈದಾನದಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ.   ಜೇಸನ್ ರಾಯ್ ಸ್ಕೋರಿನಲ್ಲಿ 11 ಬೌಂಡರಿ .... ಮುಂದೆ ಓದಿ
ಕೊಹ್ಲಿ ವಿರಾಟ್ ದರ್ಶನ: ಆಸೀಸ್ ವಿರುದ್ಧ ಗೆದ್ದ ಭಾರತ ಸೆಮಿಫೈನಲ್‌ಗೆ
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ 20 ಪಂದ್ಯ ಮಾಡು ಇಲ್ಲವೇ ಮಡಿ ಹೋರಾಟವಾಗಿತ್ತು. ಆಸೀಸ್ 160 ರನ್‌ಗಳಿಗೆ ಉತ್ತರವಾಗಿ ಭಾರತ 49 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಭಾರತ ಗೆಲ್ಲುವುದೋ ಇಲ್ಲವೋ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ ವಿರಾಟ್ ಕೊಹ್ಲಿ ಆಡಲಿಳಿದ ಮೇಲೆ ಪಂದ್ಯದ ಗತಿಯೇ ಬದಲಾಯಿತು. ಕೊಹ್ಲಿ, ಯುವರಾಜ್ 45 ರನ್ ಜತೆಯಾಟವಾಡಿದರು. ಧೋನಿ ಆಡಲಿಳಿದ ಮೇಲೆ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯ 3 ಓವರುಗಳಲ್ಲಿ ಭಾರತದ ಗೆಲುವಿಗೆ 39 ರನ್ ಅಗತ್ಯವಿತ್ತು. ಕೊಹ್ಲಿ 18 ನೇ ಓವರಿನಲ್ಲಿ ಸತತ ಎರಡು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದರು. 19ನೇ ಓವರಿನಲ್ಲಿ 4 ಬೌಂಡರಿ ಬಾರಿಸಿದರು. ಕೊನೆಯ .... ಮುಂದೆ ಓದಿ
Prev 1 2 3 4 5 6 7 8 9 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery