ಕ್ರೀಡಾ ಸುದ್ದಿ
ಲಯನ್ಸ್ ಗರ್ಜನೆಯನ್ನು ಅಡಗಿಸಿದ ಸನ್‌ರೈಸರ್ಸ್ ಫೈನಲ್ ಪ್ರವೇಶ
ಹೈದರಾಬಾದ್: ಸನ್ ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಬಿರುಸಿನ 95 ರನ್ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತು ಸ್ಕೋರಿನ ವೇಗವನ್ನು ಹೆಚ್ಚಿಸಿದ ಬಿಪುಲ್ ಶರ್ಮಾ ಅವರ 27 ರನ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ 6 ವಿಕೆಟ್‌ಗೆ 163 ರನ್ ಗಳಿಸಿ ಗುಜರಾತ್ ಲಯನ್ಸ್ ತಂಡವನ್ನು ಸೋಲಿಸಿದೆ. ಒಂದು ಹಂತದಲ್ಲಿ ಸನ್ ರೈಸರ್ಸ್ 84ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ವಾರ್ನರ್ ಔಟಾಗದೇ ಅಬ್ಬರದ ಆಟವಾಡಿ ಕೊನೆಯವರೆಗೆ ಔಟಾಗದೇ ಉಳಿದು ಗೆಲುವು ದಕ್ಕಿಸಿಕೊಟ್ಟರು. ಕೊನೆಯ 2 ಓವರುಗಳಲ್ಲಿ  24 ರನ್ ಅಗತ್ಯವಿತ್ತು. ಗುಜರಾತ್ ಗೆಲುವಿನ ಆಸೆ  ಚಿಗುರೊಡೆದಿತ್ತು. ಆದರೆ ಡ್ವೇನ್ ಬ್ರೇವೊ 19ನೇ ಓವರಿನಲ್ಲಿ 19 ರನ್ ಕೊಟ್ಟಿದ್ದು, ಪಂದ್ಯದ ದಿಕ್ಕನ್ನು ಬದಲಿಸಿತು. ವಾರ್ನರ್ .... ಮುಂದೆ ಓದಿ
ಸೇಡು ತೀರಿಸಿಕೊಂಡ ಸನ್ ರೈಸರ್ಸ್‌ಗೆ ನೈಟ್ ರೈಡರ್ಸ್ ವಿರುದ್ಧ ಗೆಲುವು
ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲೀಗ್ ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸರ್ಸ್ ತಂಡ ಎಲಿಮಿನೇಟರ್‌ನಲ್ಲಿ 22 ರನ್‌ಗಳಿಂದ ಜಯಗಳಿಸಿ ಸೇಡು ತೀರಿಸಿಕೊಂಡಿದೆ. ಸನ್ ರೈಸರ್ಸ್ 162 ರನ್‌ಗೆ ಉತ್ತರವಾಗಿ ನೈಟ್ ರೈಡರ್ಸ್ 140 ರನ್ ಮಾತ್ರ ಸ್ಕೋರ್ ಮಾಡಿದ್ದರಿಂದ ಟೂರ್ನಿಯಿಂದ ಹೊರಬಿದ್ದಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ಡೇವಿಡ್ ವಾರ್ನರ್ 28 ರನ್ ಮ‌ತ್ತು ಯುವರಾಜ್ ಸಿಂಗ್ ಅವರ 44 ರನ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 162 ಸ್ಕೋರ್ ಮಾಡಿತ್ತು. ಕುಲದೀಪ್ ಯಾದವ್ 3 ವಿಕೆಟ್ ಮತ್ತು ಮಾರ್ಕೆಲ್ ಹಾಗೂ ಹೋಲ್ಡರ್ ತಲಾ 2  ವಿಕೆಟ್ ಕಬಳಿಸಿದ್ದರು. ಬಳಿಕ ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ಪರ ಉತ್ತಪ್ಪಾ ಎರಡನೇ ಓವರಿನಲ್ಲಿ ಬರೀಂದರ್ .... ಮುಂದೆ ಓದಿ
ವಿರಾಟ್ ದರ್ಶನ: ಅಬ್ಬರಿಸಿದ ಕೊಹ್ಲಿ(113), ಗೇಲ್ (73)
ಬೆಂಗಳೂರು: ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಶತಕದ 113 ರನ್ ಮತ್ತು ಕ್ರಿಸ್ ಗೇಲ್ ಅವರ 73 ರನ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 15 ಓವರುಗಳಲ್ಲಿ 211 ರನ್ ಭಾರೀ ಮೊತ್ತವನ್ನು ಕಲೆಹಾಕಿದೆ. ಬೆಂಗಳೂರಿನ  ಪ್ರೇಕ್ಷಕರು ಕ್ರಿಸ್ ಗೇಲ್ ಮತ್ತು ಕೊಹ್ಲಿ ಅವರ ಆಟವನ್ನು ನೋಡಿ ಮನಸಾರೆ ಆನಂದಿಸಿದರು. ಮಳೆಯಿಂದಾಗಿ ಓವರುಗಳನ್ನು 15ಕ್ಕೆ ಮೊಟಕುಗೊಳಿಸಲಾಯಿತು. ಕಿಂಗ್ಸ್  ಇಲೆವನ್ ಬೌಲರುಗಳನ್ನು ಮನಬಂದಂತೆ ದಂಡಿಸಿ ಬೌಂಡರಿ, ಸಿಕ್ಸರುಗಳ ಸುರಿಮಳೆಯನ್ನು ಇವರಿಬ್ಬರು ಸುರಿಸಿದರು.  ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ 8 ಸಿಕ್ಸರುಗಳು ಮತ್ತು 12 ಬೌಂಡರಿಗಳ  113 ರನ್ ಸ್ಕೋರ್ ಮಾಡಿದರೆ , ಕ್ರಿಸ್ ಗೇಲ್ 32 ಎಸೆತಗಳಲ್ಲಿ 73 ರನ್ .... ಮುಂದೆ ಓದಿ
ಐಪಿಎಲ್ ಮಹಾರಾಷ್ಟ್ರದಿಂದ ಹೊರಗೆ : ಸುಪ್ರೀಂಕೋರ್ಟ್ ಆದೇಶ
ನವದೆಹಲಿ: ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ನಡೆಸುವ ಸಾಧ್ಯತೆ ಕುರಿತಂತೆ ಎಂಸಿಎ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುವ ಮೂಲಕ ಐಪಿಎಲ್ ಮಹಾರಾಷ್ಟ್ರದಿಂದ ಹೊರಗೆ ಆಡುವುದು ದ್ರಢಪಟ್ಟಿದೆ. ಮುಂಬೈ ಹೈಕೋರ್ಟ್ ತೀರ್ಪಿನ ವಿರುದ್ಧ ಎಂಸಿಎ ಅರ್ಜಿ ಸಲ್ಲಿಸಿತ್ತು.ಪ್ರೀಂಕೋರ್ಟ್ ಆದೇಶದಲ್ಲಿ ಮೇ ಒಂದರಿಂದ ಯಾವುದೇ ಪಂದ್ಯವನ್ನು ನಡೆಸಲಾಗುವುದಿಲ್ಲ. ಬರದ ಹಿನ್ನೆಲೆಯಲ್ಲಿ ಪಂದ್ಯಗಳನ್ನು  ಹೊರಗೆ ನಡೆಸುವುದು ಒಳ್ಳೆಯದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.ಎಂಸಿಎ ಸುಪ್ರೀಂಕೋರ್ಟ್‌ನಲ್ಲಿ ಜಂಟಿ ಅರ್ಜಿಯನ್ನು ಸಲ್ಲಿಸಿತ್ತು. ರಾಜ್ಯದಲ್ಲಿ  ಗಂಭೀರ ನೀರಿನ ಸಮಸ್ಯೆ ಇ ರುವುದರಿಂದ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಹೊರಗೆ ನಡೆಸಬೇಕೆಂದು ಅನೇಕ ಸಂಘಟನೆಗಳು ಒತ್ತಾಯಿಸಿವೆ. .... ಮುಂದೆ ಓದಿ
ವಿರಾಟ್ ಕೊಹ್ಲಿ ಚೊಚ್ಚಲ ಶತಕ : ಲಯನ್ಸ್ ವಿರುದ್ಧ ಸೋಲಿಗೆ ಬೌಲಿಂಗ್ ವೈಫಲ್ಯ ಕಾರಣ
ರಾಜಕೋಟ್: ರಾಯಲ್ ಚಾಲೆಂಜರ್ಸ್ ತಂಡ ಮತ್ತೊಮ್ಮೆ ತನ್ನ ಬೌಲಿಂಗ್ ವೈಫಲ್ಯದಿಂದ ಇನ್ನೊಂದು ಪಂದ್ಯದಲ್ಲಿ ಸೋಲನುಭವಿಸಿದೆ. ಗುಜರಾತ್ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 63 ಎಸೆತಗಳಲ್ಲಿ ಸಿಡಿಲಬ್ಬರದ, ಚೊಚ್ಚಲ ಶತಕ ಸಿಡಿಸಿದ್ದರು. ಅವರ ಸ್ಕೋರಿನಲ್ಲಿ 11 ಬೌಂಡರಿಗಳು ಮತ್ತು  ಒಂದು ಸಿಕ್ಸರ್ ಇತ್ತು. ರಾಯಲ್ ಚಾಲೆಂಜರ್ 180 ರನ್ ಉತ್ತಮ ಸ್ಕೋರ್ ದಾಖಲಿಸಿದರೂ ಗೆಲ್ಲುವುದಕ್ಕೆ ವಿಫಲವಾಯಿತು. ಇದು ರಾಯಲ್ ಬೌಲಿಂಗ್ ವೈಫಲ್ಯವನ್ನು ಎತ್ತಿತೋರಿಸಿದೆ. ರಾಯಲ್ ಕಡೆ  ಲೋಕೇಶ್ ರಾಹುಲ್ 51 ರನ್ ಬಾರಿಸಿದರು. ರಾಜ್ ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಮೆಕಲಮ್ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟಿಂಗ್ ನೆರವಿನಿಂದ 19.3 ಓವರುಗಳಲ್ಲಿ ಚಾಲೆಂಜರ್ಸ್ ಸ್ಕೋರಿನ ಗಡಿಯನ್ನು ದಾಟಿದರು. ರಾಯಲ್ ಚಾಲೆಂಜರ್ಸ್ ಆರಂಭದ ಓವರುಗಳಲ್ಲಿ .... ಮುಂದೆ ಓದಿ
Prev 1 2 3 4 5 6 7 8 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery