ಕ್ರೀಡಾ ಸುದ್ದಿ
ರಿಯೊ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಐರ್ಲೆಂಡ್ ವಿರುದ್ಧ 3-2ರಿಂದ ಜಯ
ರಿಯೊ ಡಿ ಜನೈರೊ:ರೂಪಿಂದರ್ ಪಾಲ್ ಸಿಂಗ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ತನ್ನ ಆರಂಭಿಕ ಹಾಕಿ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 3-2ರಿಂದ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ. ರಘುನಾಥ್ ಮತ್ತು ರೂಪಿಂದರ್ ಏಳು ಪೆನಾಲ್ಟಿ ಕಾರ್ನರುಗಳ ಪೈಕಿ ಮೂರನ್ನು ಗೋಲಾಗಿಸಿದರು. 2000 ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಆರಂಭದ ಪಂದ್ಯ ಗೆದ್ದಿದ್ದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಆರಂಭಿಕ ಪಂದ್ಯದಲ್ಲಿ ಭಾರತ ಜಯಗಳಿಸಿದೆ.ಆರಂಭದಿಂದಲೇ ಐರ್ಲೆಂಡ್ ಮೇಲೆ ಸತತ ದಾಳಿ ನಡೆಸುವ ಮೂಲಕ ಭಾರತ ಒತ್ತಡ ಹಾಕಿತು. ಐರ್ಲೆಂಡ್ ಕೂಡ ಪ್ರತಿದಾಳಿ ಮಾಡುವ ಮೂಲಕ ಎದುರಾಳಿಯನ್ನು ಅಚ್ಚರಿಗೊಳಿಸಿತು. .... ಮುಂದೆ ಓದಿ
ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಿದ ಲಯೊನೆಲ್ ಮೆಸ್ಸಿ
ಕೊಪಾ ಅಮೆರಿಕ ಫೈನಲ್ ಸೋಲಿನ ಬಳಿಕ ರಾಷ್ಟ್ರೀಯ ತಂಡದಿಂದ ನಿವ್ರತ್ತರಾಗಲು ನಿರ್ಧರಿಸಿರುವುದಾಗಿ ಲಯನಲ್ ಮೆಸ್ಸಿ ಹೇಳಿದ್ದಾರೆ. ಸೂಪರ್ ಸ್ಟಾರ್ ತಮ್ಮ ನಾಲ್ಕನೇ ಪ್ರಮುಖ ಪಂದ್ಯಾವಳಿಯ ಫೈನಲ್‌ನಲ್ಲಿ ಸೋತಿದ್ದು,  ಅನೇಕ ಅವಕಾಶಗಳು ಮಿಸ್ ಆದ ಬಳಿಕ ತಾವು ಅಲ್ಲಿಂದ ನಿರ್ಗಮಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.  ಚಿಲಿ  ಅರ್ಜೈಂಟೀನಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ  4-2ರಿಂದ ಶೂಟ್ ಔಟ್ ಮೂಲಕ ಗೆದ್ದಿದೆ.ಪೆನಾಲ್ಟಿ ಶೂಟ್ ಔಟ್ ಮಿಸ್ ಆಗಿದ್ದಕ್ಕೆ ಮತ್ತು  ಫೈನಲ್ ಸೋಲಿನ ಬಳಿಕ ತೀವ್ರ ಭಾವುಕತೆಯಿಂದ ಮೆಸ್ಸಿ ವರ್ತಿಸಿದ ವಿಡಿಯೊ ಕೆಳಕ್ಕೆ ನೀಡಲಾಗಿದೆ.ವಿಡಿಯೊ ಕ್ಲಿಕ್ ಮಾಡಿ .... ಮುಂದೆ ಓದಿ
ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದು ಹೇಗೆ?
ರವಿ ಶಾಸ್ತ್ರಿಯನ್ನು ಬದಿಗೆಸರಿಸಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ ಹೆಗಲ ಮೇಲೆ ಭಾರೀ ಹೊಣೆಗಾರಿಕೆಯೊಂದು ಬಿದ್ದಿದೆ. ಭಾರತ ತಂಡ ಸ್ವದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ವಿದೇಶದಲ್ಲಿ ಸಪ್ಪೆ ಪ್ರದರ್ಶನ ನೀಡುತ್ತಿದ್ದು, ಅದನ್ನು ಸುಧಾರಿಸಲು ಅನಿಲ್ ಕುಂಬ್ಳೆ ನೆರವಾಗಬೇಕಾಗಿದೆ. ರವಿ ಶಾಸ್ತ್ರಿ ಕೂಡ ಭಾರತ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಮಾಡುವಲ್ಲಿ ವಿಫಲರಾಗಿದ್ದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ವಿದೇಶದಲ್ಲಿ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುವ ವ್ಯಕ್ತಿಯನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಬೇಕೆಂದು ಸಚಿನ್, ಗಂಗೂಲಿ, ಲಕ್ಷ್ಮಣ್ ಸಲಹಾ ಸಮಿತಿ ಆಲೋಚಿಸಿತ್ತು. ವಿದೇಶದಲ್ಲಿ ಟೀಂ ಇಂಡಿಯಾದ ಉತ್ತಮ ಪ್ರದರ್ಶನಕ್ಕೆ ನೆರವಾಗುವ ನೀಲ ನಕ್ಷೆಗಳನ್ನು ಅನಿಲ್ ಕುಂಬ್ಳೆ ಸಲ್ಲಿಸಿದ್ದು ಸಲಹಾ ಸಮಿತಿಗೆ ಮೆಚ್ಚಿಗೆಯಾಗಿ ಅವರನ್ನು ಆಯ್ಕೆ .... ಮುಂದೆ ಓದಿ
ಆರ್‌ಸಿಬಿ ಕನಸು ಭಗ್ನ: ಸನ್‌ರೈಸರ್ಸ್ ಚಾಂಪಿಯನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವ ಸುಲಭ ಅವಕಾಶವನ್ನು ಕಳೆದುಕೊಂಡು ಸೋಲನ್ನಪ್ಪಿದೆ. ಸನ್ ರೈಸರ್ಸ್ ಫೈನಲ್‌ನಲ್ಲಿ ಗೆಲುವು ಗಳಿಸಿ ಚಾಂಪಿಯನ್ ಆಗಿ ಉದಯಿಸಿತು. ಸನ್ ರೈಸರ್ಸ್ 208 ರನ್ ಸ್ಕೋರನ್ನು ಬೆನ್ನಟ್ಟಿದ ಆರ್‌ಸಿಬಿ ಪರ ಕ್ರಿಸ್ ಗೇಲ್ ಮತ್ತು ಕೊಹ್ಲಿ ಸ್ಫೋಟಕ ಬ್ಯಾಟಿಂಗ್  ಪ್ರದರ್ಶಿಸಿದಾಗ ಅಭಿಮಾನಿಗಳಿಗೆ ಆರ್‌ಸಿಬಿ  ಖಂಡಿತವಾಗಿ ಗೆಲ್ಲುವುದೆಂಬ ಭರವಸೆ  ಮೂಡಿತ್ತು. ಒಂದು ಹಂತದಲ್ಲಿ ಆರ್‌ಸಿಬಿ ಇಬ್ಬರ ಶತಕದ ಜತೆಯಾಟದಿಂದ 112ಕ್ಕೆ ನೋಲಾಸ್  ಸ್ಕೋರ್ ಮಾಡಿತ್ತು. ಆದರೆ 11 ನೇ ಓವರಿನಲ್ಲಿ ಬೆನ್ ಕಟಿಂಗ್ ಬೌಲಿಂಗ್‌ನಲ್ಲಿ ವಿಪುಲ್ ಶರ್ಮಾ ಕ್ಯಾಚ್ ಹಿಡಿದಿದ್ದರಿಂದ ಗೇಲ್ ಆಟಕ್ಕೆ ತೆರೆಬಿತ್ತು. ಆರ್‌ಸಿಬಿಗೆ ಗೆಲ್ಲುವುದಕ್ಕೆ 54 ಎಸೆತಗಳಲ್ಲಿ 84 ರನ್ ಅಗತ್ಯವಿತ್ತು. ಅದೇನೂ ಕಷ್ಟದ ಕೆಲಸವಾಗಿರಲಿಲ್ಲ. .... ಮುಂದೆ ಓದಿ
ಆರ್‌ಸಿಬಿ ಬ್ಯಾಟಿಂಗ್, ಸನ್ ರೈಸರ್ಸ್ ಬೌಲಿಂಗ್ ನಡುವೆ ಹಣಾಹಣಿ ಹೋರಾಟ
ಬೆಂಗಳೂರು:  ವಿರಾಟ್ ಕೊಹ್ಲಿ ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟಿಂಗ್ ಶಕ್ತಿ ಮತ್ತು ಡೇವಿಡ್ ವಾರ್ನರ್  ನಾಯಕತ್ವದ ಸನ್ ರೈಸರ್ಸ್ ಬೌಲಿಂಗ್ ಶಕ್ತಿಯ ನಡುವೆ ಹಣಾಹಣಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಂಡುಬರಲಿದೆ.ಆರ್‌ಸಿಬಿ 2009 ಮತ್ತು 2011ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಎರಡು ಬಾರಿ ಆಡಿದ ಅನುಭವ ಹೊಂದಿದ್ದು, ಸನ್ ರೈಸರ್ಸ್‌ಗಿಂತ ಕೊಂಚ ಮೇಲುಗೈ ಹೊಂದಿದೆ. ಆರ್‌ಸಿಬಿ ಎರಡು ಬಾರಿಯೂ ರನ್ನರ್ ಅಪ್ ಆಗಿತ್ತು.  ಸನ್‌ರೈಸರ್ಸ್ ಪ್ಲೇ ಆಫ್ ಸ್ಥಾನ ಪ್ರವೇಶಿಸಿದ್ದು ಬಿಟ್ಟರೆ ಫೈನಲ್ ಹಂತಕ್ಕೆ ಲಗ್ಗೆ ಹಾಕಿದ್ದು ಇದೇ ಮೊದಲು.ಆರ್‌ಸಿಬಿ ಲೀಗ್‌ನ ಒಂದು ಹಂತದಲ್ಲಿ ಸತತ ಸೋಲುಗಳಿಂದ ತೊಂದರೆಗೆ ಸಿಲುಕಿ, ಪ್ಲೇ ಆಫ್ ಪ್ರವೇಶಕ್ಕೆ ಕೊನೆಯ ನಾಲ್ಕು ಪಂದ್ಯಗಳನ್ನೂ ಗೆಲ್ಲಲೇಬೇಕಿತ್ತು. .... ಮುಂದೆ ಓದಿ
Prev 1 2 3 4 5 6 7 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery