ಕ್ರೀಡಾ ಸುದ್ದಿ
ಭಾರತದ ಎದಿರೇಟು: ಆಸೀಸ್ ವಿರುದ್ಧ ಜಯ, ಸ್ಕೋರು ಸಮಸಮ
ಬೆಂಗಳೂರು: ರವಿಚಂದ್ರನ್ ಅಶ್ವಿನ್ ಅಮೋಘ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 112 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಭಾರತ 75 ರನ್‌ಗಳಿಂದ ಜಯಗಳಿಸಿ ಸ್ಕೋರನ್ನು 1-1ರಿಂದ ಸಮಮಾಡಿಕೊಂಡಿದೆ. ಭಾರತದ ಬೌಲರುಗಳು ಬೌಲಿಂಗ್ ಪಿಚ್ಚನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದರಿಂದ ಆಸೀಸ್ ಬ್ಯಾಟಿಂಗ್ ಲೈನ್ ಅಪ್ ಒತ್ತಡದಿಂದ ಧೂಳೀಪಟವಾಯಿತು. ಅಶ್ವಿನ್ 41 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಉಮೇಶ್ ಯಾದವ್ ಎರಡು ನಿರ್ಣಾಯಕ ವಿಕೆಟ್ ಗಳಿಸಿದರು. ಇಶಾಂತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಗಳಿಸಿದರು.ಭಾರತ  ನಿನ್ನೆಯ ಮೊತ್ತವಾದ 213ಕ್ಕೆ 4 ವಿಕೆಟ್ ಕಳೆದುಕೊಂಡು ದಿನದಾಟ ಆರಂಭಿಸಿದಾಗ ಆಸೀಸ್‌ಗೆ ಚೇಸ್ ಮಾಡಲು ದೊಡ್ಡ .... ಮುಂದೆ ಓದಿ
ಸ್ಟೀವ್ ಓ ಕೀಫ್ ಮಾಂತ್ರಿಕ ಸ್ಪಿನ್: ಆಸೀಸ್‌ಗೆ 333 ರನ್ ಜಯ
ಸ್ಟೀವ್ ಓ ಕೀಫ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಮಾರಕ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡಿ ಆಸ್ಟೇಲಿಯಾಕ್ಕೆ ಪುಣೆಯಲ್ಲಿ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಗಳಿಸಿಕೊಟ್ಟಿದ್ದಾರೆ. ಇದರಿಂದ ಟೆಸ್ಟ್ ಪಂದ್ಯಗಳಲ್ಲಿ ಅಜೇಯ 19 ಪಂದ್ಯಗಳ ಗೆಲುವಿಗೆ ಆಸೀಸ್ ಕಡಿವಾಣ ಹಾಕಿದೆ.ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 107 ರನ್‌ಗಳಿಗೆ ಆಲೌಟ್ ಆಗಿದ್ದು, ಎಡಗೈ ಸ್ಪಿನ್ನರ್ ಕೀಫ್ 35 ರನ್ನಿಗೆ 6 ವಿಕೆಟ್ ಕಬಳಿಸಿದರು ಮತ್ತು ನಾಥನ್ ಲಯನ್ ಉಳಿದ ವಿಕೆಟ್ ಕಬಳಿಸಿದರು. ಲಯನ್ 53 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯವನ್ನು 333 ರನ್‌ಗಳಿಂದ ಗೆದ್ದು 1-0 ಮುನ್ನಡೆಯನ್ನು ಸಾಧಿಸಿದೆ.ಎರಡನೇ ಇನ್ನಿಂಗ್ಸ್‌ನಲ್ಲಿ 441 ರನ್ ಗುರಿಯೊಂದಿಗೆ ಆಟ ಆರಂಭಿಸಿದ .... ಮುಂದೆ ಓದಿ
ಭಾರತದ ಕಳಪೆ ಬ್ಯಾಟಿಂಗ್: ಕೀಫ್ ಸ್ಪಿನ್ ದಾಳಿಗೆ ಬಲಿ
ಪುಣೆ: ಸ್ಟೀವ್ ಓ ಕೀಫ್ ಅವರ  ಮಾರಕ ಸ್ಪಿನ್ ದಾಳಿಗೆ ತುತ್ತಾದ ಭಾರತ ಕೇವಲ 105 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 143ಕ್ಕೆ 4 ವಿಕೆಟ್ ಗಳಿಸಿದ್ದು, 298 ರನ್ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ ಅಂತಿಮ ವಿಕೆಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಪ್ರಬಲ ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಸ್ಟಾರ್ಕ್ 5ನೇ ಎಸೆತಕ್ಕೆ ಔಟ್ ಆಗಿದ್ದರಿಂದ ಪ್ರವಾಸಿ ತಂಡ 260ಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಭಾರತ ಕಳಪೆಯಾಗಿ ಬ್ಯಾಟಿಂಗ್ ಆರಂಭಿಸಿ ಮುರಳಿ ವಿಜಯ್ 10 ರನ್ ಮಾಡಿ ಔಟಾದರು. ಚೇತೇಶ್ವರ್ ಪೂಜಾರ್ ಕೂಡ ವಿಜಯ್ ಅವರನ್ನು .... ಮುಂದೆ ಓದಿ
ಅತೀ ವೇಗದಲ್ಲಿ 250 ವಿಕೆಟ್ ಗಡಿ ಮುಟ್ಟಿದ ಅಶ್ವಿನ್ ಟೆಸ್ಟ್ ದಾಖಲೆ
ನವದೆಹಲಿ: ಭಾರತದ ಪ್ರಮುಖ ಸ್ಪಿನ್ ಬೌಲರ್ ಆರ್. ಅಶ್ವಿನ್ ಆಟದ ಇತಿಹಾಸದಲ್ಲಿ ಅತೀ ವೇಗದಲ್ಲಿ 250 ವಿಕೆಟ್ ಗಡಿಯನ್ನು ಮುಟ್ಟುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇನ್ನೊಂದು ಮೈಲಿಗಲ್ಲು ಕ್ರಮಿಸಿದ್ದಾರೆ. ಹೈದರಾಬಾದಿನಲ್ಲಿ ನಡೆದ ಟೆಸ್ಟ್‌ನ ನಾಲ್ಕನೇ ದಿನದಂದು ಬಾಂಗ್ಲಾದೇಶದ ನಾಯಕ ಮುಶ್ಫಿಕುರ್ ರಹೀಮ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ತಮ್ಮ 45ನೇ ಟೆಸ್ಟ್‌ನಲ್ಲಿ 250 ವಿಕೆಟ್ ಗಡಿಯನ್ನು ಮುಟ್ಟಿದರು. ಆಸ್ಟ್ರೇಲಿಯಾದ ಲಿಜೆಂಡ್ ಆಟಗಾರ ಡೆನ್ನಿಸ್ ಲಿಲ್ಲಿ 1981ರ ಫೆಬ್ರವರಿಯಲ್ಲಿ 250 ವಿಕೆಟ್ ಗಡಿ ಮುಟ್ಟಲು ಅಗತ್ಯವಾಗಿದ್ದಕ್ಕಿಂತ ನಾಲ್ಕು ಕಡಿಮೆ ಟೆಸ್ಟ್‌ಗಳಲ್ಲೇ ಅಶ್ವಿನ್ ಈ ವಿಕ್ರಮ ಸಾಧಿಸಿದ್ದಾರೆ.ಅಗ್ರ ಕ್ರಮಾಂಕದ ಬೌಲರ್ ಮತ್ತು ಆಲ್ ರೌಂಡರ್ ಅಶ್ವಿನ್ ಬಾಂಗ್ಲಾ ವಿರುದ್ಧ ಪ್ರಸಕ್ತ ಪಂದ್ಯದಲ್ಲಿ 248 ಗಡಿಯನ್ನು ಮುಟ್ಟಿದರು .... ಮುಂದೆ ಓದಿ
ಕುಸ್ತಿಯಲ್ಲಿ ಭಾರತಕ್ಕೆ 2ನೇ ಪದಕ ಗೆಲ್ಲಿಸಿಕೊಡುವುದು ಯೋಗೇಶ್ವರ್ ಗುರಿ
ರಿಯೊ ಡಿ ಜನೈರೊ: ಯೋಗೇಶ್ವರ್ ದತ್ 2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ  ಸಾಕ್ಷಿ ಮಲಿಕ್ ಬಳಿಕ ಕುಸ್ತಿಯಲ್ಲಿ 2ನೇ ಒಲಿಂಪಿಕ್ ಪದಕ ಗೆಲ್ಲಿಸಿಕೊಡುವ ಪ್ರಯತ್ನದಲ್ಲಿದ್ದಾರೆ. ರಿಯೊದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಮೊದಲ ಪುರುಷ ಕ್ರೀಡಾಪಟುವಾಗುವ ಗುರಿಯನ್ನು ಯೋಗೇಶ್ವರ್ ಹೊಂದಿದ್ದಾರೆ. ಲಂಡನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ತಮ್ಮ ಕ್ರೀಡಾಜೀವನದಲ್ಲಿ ಇನ್ನೊಂದು ಪದಕ ಗೆಲ್ಲುವರೇ ಎನ್ನುವುದು ಪ್ರಶ್ನೆಯಾಗಿದೆ. ಯೋಗೇಶ್ವರ್ ಅವರ ಆರಂಭಿಕ ಪಂದ್ಯವು ಎರಡು ಬಾರಿ  ವಿಶ್ವಚಾಂಪಿಯನ್ ಷಿಪ್ ಪದಕ ವಿಜೇತ ಮಂಗೋಲಿಯಾದ ಗಾಂಜೊರಿಗ್ ಮಂಡಕ್ನಾರನ್ ವಿರುದ್ಧ ನಡೆಯಲಿದೆ. 65 ಕೆಜಿ ವಿಭಾಗದಲ್ಲಿ 9.15ಕ್ಕೆ ಕಂಚಿನ ಪದಕದ ಪಂದ್ಯ ನಡೆಯಲು ನಿಗದಿಯಾಗಿದ್ದು, ಚಿನ್ನದ ಪದಕದ ಪಂದ್ಯವು ಸ್ವಲ್ಪ ನಡೆಯಲಿದೆ.ಇದು ಬಹುಶಃ 33 ವರ್ಷದ ಯೋಗೇಶ್ವರ್ ಅವರ ಕೊನೆಯ ಒಲಿಂಪಿಕ್ಸ್ .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery