ಆರೋಗ್ಯ
ವಾರಕ್ಕೆ 55 ಗಂಟೆಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೆ ಸ್ಟ್ರೋಕ್ ಅಪಾಯ ಹೆಚ್ಚು
ನೀವು ಆಫೀಸಿನಲ್ಲಿ ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತೀರಾ, ಹಾಗಾದರೆ ನಿಮ್ಮ ಆರೋಗ್ಯ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರೆ ನೀವು ಸ್ಟ್ರೋಕ್ ಆಘಾತ ಅನುಭವಿಸುವುದಕ್ಕೆ ಸಮೀಪವಿರುತ್ತೀರಿ ಎಂದು ಸಂಶೋಧಕರು ಹೇಳಿದ್ದಾರೆ. ಸುಮಾರು 6 ಲಕ್ಷ ಜನರನ್ನು ಒಳಗೊಂಡ ಅಧ್ಯಯನದಲ್ಲಿ ಹೆಚ್ಚು ಅವಧಿ ಕೆಲಸ ಮಾಡುವ ಜನರಿಗೆ ವಾರಕ್ಕೆ 35ರಿಂದ 40 ಗಂಟೆ ಕೆಲಸ ಮಾಡುವ ಜನರಿಗಿಂತ ಶೇ. 33ರಷ್ಟು ಪಾರ್ಶ್ವವಾಯುವಿನ ಅಪಾಯವಿರುತ್ತದೆ ಮತ್ತು ಶೇ. 13ರಷ್ಟು ಹೃದಯಬೇನೆಯ ಅಪಾಯವಿರುತ್ತದೆ. ಲ್ಯಾನ್ಸೆಟ್‌ನಲ್ಲಿ ಈ ವರದಿಯನ್ನು ಪ್ರಕಟಿಸಲಾಗಿದ್ದು, ವಾರಕ್ಕೆ 40ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಜನರಲ್ಲಿ ಪ್ರತೀ ಗಂಟೆಗೂ ಅಪಾಯ ಹೆಚ್ಚಾಗುತ್ತದೆ. 48 ಗಂಟೆ ಕೆಲಸ ಮಾಡುವ ಜನರಲ್ಲಿ ಶೇ. .... ಮುಂದೆ ಓದಿ
ಮೈಗೆ ಅಂಟುವ ಬಿಗಿಯಾದ ಜೀನ್ಸ್‌ಗಳಿಂದ ನರಗಳಿಗೆ ಹಾನಿ
ಲಂಡನ್: ಮೈಗಂಟಿಕೊಳ್ಳುವ ಬಿಗಿಯಾದ ಜೀನ್ಸ್ ಧರಿಸಬೇಡಿ, ಅದು ಹೆಚ್ಚು ಕಾಲ ಧರಿಸುವುದು ಇನ್ನೂ ಅಪಾಯಕಾರಿ. ಹೀಗೆಂದು ಆಸ್ಟ್ರೇಲಿಯಾದ ವೈದ್ಯರು ಹೇಳುತ್ತಾರೆ. 35 ವರ್ಷದ ಮಹಿಳೆಯೊಬ್ಬರು ಟೈಟ್ ಫಿಟ್ಟಿಂಗ್ ಜೀನ್ಸ್ ಧರಿಸಿದ ಬಳಿಕ ಸ್ನಾಯು ಹಾನಿ, ಊದುವಿಕೆ, ಕಾಲಿನ ನರಗಳ ಬ್ಲಾಕೇಜ್ ಉಂಟಾಗಿ ನಡೆಯಲೂ ಆಗದ ಸ್ಥಿತಿ ಉಂಟಾಗಿ ನಾಲ್ಕು ದಿನಗಳ ಕಾಲ ಆಸ್ಪತ್ರೆಗೆ ಸೇರಿದ ಸಂಗತಿ ವರದಿಯಾಗಿದೆ.  ರೋಗಿಯ ನರಗಳು ಮತ್ತು ಸ್ನಾಯುಗಳಿಗೆ ತೀವ್ರ ಹಾನಿಯಾಗಿದ್ದು ಕಂಡು ಅಚ್ಚರಿಯಾಯಿತು ಎಂದು ಆಸ್ಟ್ರೇಲಿಯಾದ ರಾಯಲ್ ಅಡೆಲೇಡ್ ಆಸ್ಪತ್ರೆಯ ಡಾ. ಥಾಮಸ್ ಕಿಂಬರ್ ಹೇಳಿದ್ದಾರೆ.  ನರಗಳಿಗೆ ಹಾನಿಯಾದ ಮಹಿಳೆ ಹಿಂದಿನ ದಿನ  ಕಪ್‌ಬೋರ್ಡ್ ಖಾಲಿ ಮಾಡುವಾಗ ಮಂಡಿಗಳ ಮೇಲೆ ದೀರ್ಘಾವಧಿ ಕುಳಿತುಕೊಂಡಿದ್ದರು. ಬಿಗಿಯಾದ ಜೀನ್ಸ್ ಧರಿಸಿದ್ದ ಮಹಿಳೆ ಮನೆಗೆ ತೆರಳುವಾಗ .... ಮುಂದೆ ಓದಿ
ಈಜುಕೊಳಗಳ ಸೋಂಕಿನಿಂದ ಮಕ್ಕಳನ್ನು ತಪ್ಪಿಸುವುದು ಹೇಗೆ?
ಮೈಸುಡುವ ಬಿಸಿಲಿನಲ್ಲಿ ಸಮೀಪದ ಈಜುಕೊಳಕ್ಕೆ ಇಳಿದು ಮೈತಂಪಾಗಿಸಲು ವಯಸ್ಕರು ಮತ್ತು ಮಕ್ಕಳು ಬಯಸುತ್ತಾರೆ. ಆದರೆ  ಒಂದೇ ಕಾಲದಲ್ಲಿ ಅನೇಕ ಜನರು ಈಜುಕೊಳದ ನೀರನ್ನು ಹಂಚಿಕೊಳ್ಳುವುದರಿಂದ ಈಜುಕೊಳಗಳು ಸೋಂಕುಗಳು ಮತ್ತು ರೋಗಗಳ ತಾಣವಾಗುವ ಸಾಧ್ಯತೆಯಿದೆ. ಪೂರ್ಣವಾಗಿ ಅಭಿವ್ರದ್ಧಿಯಾಗದ ರೋಗನಿರೋಧಕ ವ್ಯವಸ್ಥೆ ಹೊಂದಿರುವುದರಿಂದ ಮಕ್ಕಳು ಈಜು ಕೊಳಗಳಲ್ಲಿ ಸುಲಭವಾಗಿ ಸೋಂಕುಗಳಿಗೆ ಒಳಗಾಗುತ್ತವೆ. ಈಜು ಕೊಳಗಳನ್ನು ಸೂಕ್ತವಾಗಿ ಸ್ವಚ್ಛಮಾಡದಿದ್ದರೆ, ಅನೇಕ ಸೋಂಕುಗಳಿಗೆ ತಾಣವಾಗುತ್ತದೆ. ಮಕ್ಕಳು ಈಜುಕೊಳದಲ್ಲಿರುವಾಗ ಸಾಮಾನ್ಯವಾಗಿ ಕಿವಿಗಳು, ಮೂಗುಗಳು ಮತ್ತು ಗಂಟಲಿನ ಸೋಂಕುಗಳಿಗೆ ಒಳಗಾಗುವ ಸಂಭವವಿರುತ್ತದೆ ಎಂದು ಇಂತಹ ಪ್ರಕರಣಗಳನ್ನು ನಿಭಾಯಿಸುತ್ತಿರುವ ಮೀರತ್ ಮೂಲದ ಹಿರಿಯ ಮಕ್ಕಳ ತಜ್ಞ ನೀರಜ್ ಕಾಂಬೋಜ್ ಹೇಳಿದ್ದಾರೆ. ಈಜುಕೊಳಕ್ಕೆ ಹೋಗುವ ಅನೇಕ ಮಕ್ಕಳು ಕಿವಿ ನೋವಿನ ಬಗ್ಗೆ ದೂರುತ್ತಾರೆ. ಇದರ ಜೊತೆಗೆ ಗಂಟಲು ಮತ್ತು ಮೂಗಿನ .... ಮುಂದೆ ಓದಿ
ಲೇಬಲ್‌ಗಳಲ್ಲಿ ಆಹಾರದ ಎಲ್ಲಾ ಅಂಶಗಳನ್ನೂ ತಿಳಿಸಬೇಕು
ಮುಂಬೈ: ಮ್ಯಾಗಿಯ ಮಾದರಿಗಳ ಪರೀಕ್ಷೆಯಲ್ಲಿ ಸೀಸ ಮತ್ತು ಎಂಎಸ್‌ಜಿ ಪತ್ತೆಯಾದ ಬಳಿಕ, ದೇಶದ ಆಹಾರ ಪ್ಯಾಕೇಜಿಂಗ್ ನಿಯಮಗಳನ್ನು ಬಲಪಡಿಸಿ ಗ್ರಾಹಕ ಹಿತಾಸಕ್ತಿಗಾಗಿ ಇನ್ನಷ್ಟು ಬಹಿರಂಗಗಳನ್ನು ಸೇರಿಸಬೇಕೆಂಬ ಬಗ್ಗೆ ಬೆಳಕುಚೆಲ್ಲಿದೆ. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ಯಾಕೇಜಿಂಗ್ ಬಹಿರಂಗದಲ್ಲಿ ಆಹಾರದ ಎಲ್ಲ ಪದಾರ್ಥಗಳು ಮತ್ತು ಪೌಷ್ಠಿಕಗಳ ಪ್ರಮಾಣವನ್ನು ನೀಡಲಾಗುತ್ತದೆ. ಈ ಉತ್ಪನ್ನ ಕಾರ್ಖಾನೆಯಲ್ಲಿ ಉತ್ಪಾದನೆಯಾಗಿದೆಯೇ  ಎಂಬ ಸತ್ಯಾಂಶವನ್ನು ಒಳಗೊಂಡಿರುತ್ತವೆ. ಏಕೆಂದರೆ ಕೆಲವು ಗ್ರಾಹಕರಿಗೆ ಅವು ಅಲರ್ಜಿಯಾಗುವ ಸಾಧ್ಯತೆಯಿದೆ. ಆಹಾರದಲ್ಲಿರುವ ಪದಾರ್ಥಗಳ ಬಗ್ಗೆ ಮತ್ತು ಆರೋಗ್ಯದ ಮೇಲೆ ಅವುಗಳ ಪರಿಣಾಮ ಮತ್ತು ಅಲರ್ಜಿಗಳ ಬಗ್ಗೆ ಅರಿವು ಹೆಚ್ಚುತ್ತಿರುವ ನಡುವೆ ಭಾರತದಲ್ಲಿ ಲೇಬಲಿಂಗ್(ಆಹಾರದಲ್ಲಿರುವ ಅಂಶಗಳ ಪಟ್ಟಿ) ನಿಯಮ ಬದಲಾಗಬೇಕು ಎಂದು ಕೈಗಾರಿಕೆ ತಜ್ಞರು ಭಾವಿಸಿದ್ದಾರೆ.   ಈ ನಿಯಮಗಳನ್ನು ಬದಲಾವಣೆ ಮಾಡಿದಾಗ, ಆಹಾರ ಕಂಪನಿಗಳು ಅದಕ್ಕೆ .... ಮುಂದೆ ಓದಿ
ಮ್ಯಾಗಿ ಮಾತ್ರವಲ್ಲ, ಎಲ್ಲಾ ರೆಡಿಮೇಡ್ ಆಹಾರದಿಂದ ದೇಹಕ್ಕೆ ಹಾನಿ
ನವದೆಹಲಿ: ಮ್ಯಾಗಿ ನೂಡಲ್ಸ್‌‌ನಲ್ಲಿ ವಿಷಕಾರಿ ಸೀಸದ ಅಂಶವಿದ್ದು, ಅದರ ಮಾರಾಟವನ್ನು ಅನೇಕ ರಾಜ್ಯಗಳು ನಿಷೇಧಿಸಿರುವ ನಡುವೆ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಂಗಾಂಗ ಹಾನಿಉಂಟುಮಾಡಬಹುದಾದ ಆಹಾರ ಉತ್ಪನ್ನ ಮ್ಯಾಗಿ ಮಾತ್ರವಲ್ಲ. ಎಲ್ಲಾ ರೆಡಿ ಮೇಡ್ ಅಥವಾ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಲಾದ ಆಹಾರಗಳು ಬಣ್ಣದ ಕಾರಕಗಳು, ಕ್ರತಕ ಸಿಹಿಕಾರಿ ಮತ್ತು ಸಂರಕ್ಷಕಗಳಿಂದ ಕೂಡಿದ್ದು, ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಜನರಿಗೆ ಸಿದ್ಧಪಡಿಸಿದ ಆಹಾರ ಪದಾರ್ಥ ಸೇವನೆ ನಿಲ್ಲಿಸುವಂತೆ ಸಲಹೆ ಮಾಡುವುದು ಅಥವಾ ಆಹಾರ ಪದಾರ್ಥಗಳ ಮೇಲೆ ನಿಷೇಧ ವಿಧಿಸುವುದು ಅಪ್ರಾಯೋಗಿಕವಾಗುತ್ತದೆ ಎಂದು ಗುರಗಾಂವ್ ಫೋರ್ಟಿಸ್ ಸಂಸ್ಥೆಯ ವೈದ್ಯ ಅಮಿತಾಬ್ ಪಾರ್ತಿ ಹೇಳಿದ್ದಾರೆ.  ಅದಕ್ಕೆ ಬದಲಾಗಿ ಸರ್ಕಾರ ನಿಯಮಿತ ತಪಾಸಣೆ ಮಾಡಿ ರಾಸಾಯನಿಕಗಳ ಬಳಕೆ ಅಂಗೀಕಾರ್ಹ ಮಿತಿಯಲ್ಲಿರುವ .... ಮುಂದೆ ಓದಿ
1 2 3 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery