ಅಂತಾರಾಷ್ಟ್ರೀಯ ಸುದ್ದಿ
ರಷ್ಯಾದಲ್ಲಿ ವಿಮಾನ ಅಪಘಾತ: 2 ಭಾರತೀಯರು ಸೇರಿ 62 ದುರ್ಮರಣ
ಮಾಸ್ಕೊ: ರಷ್ಯಾದ ದಕ್ಷಿಣ ನಗರ ರೋಸ್ತೊವ್‌ನಲ್ಲಿ ಶನಿವಾರ ಬೆಳಿಗ್ಗೆ ದುಬೈ ಏರ್ ಲೈನರ್ ವಿಮಾನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ 62 ಜನರ ಪೈಕಿ ಇಬ್ಬರು ಭಾರತೀಯರು ಸೇರಿದ್ದಾರೆ. ದುಬೈ ಏರ್ ಲೈನ್ಸ್ ವಿಮಾನ ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಪ್ರಬಲವಾದ ಗಾಳಿಯಿಂದ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತೆಂದು ವರದಿಯಾಗಿದೆ.  ಫ್ಲೈದುಬೈ ಬೋಯಿಂಗ್ 737-800 ಅಪಘಾತದಲ್ಲಿ ಸತ್ತವರ ಪೌರತ್ವದ ಬಗ್ಗೆ ಮಾಹಿತಿ ನೀಡಿದ ದುಬೈ ಮಾಧ್ಯಮ ಕಚೇರಿ ವಿಮಾನದಲ್ಲಿ 44 ರಷ್ಯನ್ನರು, 8 ಉಕ್ರೇನರು, ಇಬ್ಬರು ಭಾರೇತೀಯರು ಮತ್ತು ಉಜ್ಬೆಕಿಸ್ತಾನದ ಒಬ್ಬ ವ್ಯಕ್ತಿ ಇದ್ದರೆಂದು ತಿಳಿಸಿದೆ. ಇಡೀ ಯುಎಇ ಪರವಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಪರವಾಗಿ ಸಂತಾಪ ಸೂಚಿಸಿದೆ. ಫ್ಲೈದುಬೈ ನಿರ್ವಹಿಸುವ ಬೋಯಿಂಗ್ ವಿಮಾನದಲ್ಲಿ 55 ಪ್ರಯಾಣಿಕರಿದ್ದು ಅವರ ಪೈಕಿ ಬಹುತೇಕರು .... ಮುಂದೆ ಓದಿ
ಲೈಂಗಿಕ ಗುಲಾಮರಿಗೆ ಗರ್ಭ ನಿರೋಧಕ ಮಾತ್ರೆ ನೀಡುವ ಐಎಸ್
ದೋಹುಕ್: ಕೇವಲ ಒಂದು ಹಾಸಿಗೆಯ ಪೀಠೋಪಕರಣವಿರುವ ಕೋಣೆಯಲ್ಲಿ 16 ವರ್ಷದ ಬಾಲಕಿಯನ್ನು ಕೂಡಿಹಾಕಿದ್ದರು. ಆ ಬಾಲಕಿಗೆ ಕತ್ತಲಾಗುತ್ತಿದ್ದಂತೆ ಭಯ ಆವರಿಸುತ್ತಿತ್ತು. ಏಕೆಂದರೆ ಕತ್ತಲು ಕವಿಯುತ್ತಿದ್ದಂತೆ ಅವಳ ಮುಂದಿನ ಅತ್ಯಾಚಾರಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಇಸ್ಲಾಮಿಕ್ ಸ್ಟೇಟ್ ಉಗ್ರರು ಅವಳನ್ನು ಸೆರೆಹಿಡಿದ ಒಂದುವರ್ಷದಿಂದೀಚೆಗೆ ಐಎಸ್ ಉಗ್ರರ ಉಸಿರಾಟದ ಕಮಟು ವಾಸನೆ, ಅವರ ಅಸಹ್ಯಹುಟ್ಟಿಸುವ ಧ್ವನಿಗಳು ಮತ್ತು ದೇಹದ ಮೇಲೆ ಉಂಟು ಮಾಡಿದ  ನೋವು ದುಃಸ್ವಪ್ವವಾಗಿ ಕಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಚಾರಿಯ ಮಗುವಿನೊಂದಿಗೆ ಗರ್ಭಿಣಿಯಾಗುತ್ತೇನೆಂಬ ಯೋಚನೆ ಅವಳ ಮನಸ್ಸನ್ನು ಕೊರೆಯುತ್ತಿತ್ತು. ಆದರೆ ಐಎಸ್ ಉಗ್ರರು ಯುವತಿಯರು ಗರ್ಭಿಣಿಯರಾಗದಂತೆ ತಡೆಯಲು ಉಪಾಯ ಕಂಡುಕೊಂಡಿದ್ದರು. ಅವಳನ್ನು ಖರೀದಿಸಿದ ಕೂಡಲೇ ಉಗ್ರನೊಬ್ಬ ನಾಲ್ಕು ಮಾತ್ರೆಗಳ ಸ್ಟ್ರಿಪ್ ಹೊಂದಿದ್ದ ದುಂಡನೆಯ ಪೆಟ್ಟಿಗೆಯನ್ನು ಕೊಟ್ಟಿದ್ದ. ಅದರಲ್ಲಿ ಒಂದು .... ಮುಂದೆ ಓದಿ
ಬ್ಯಾಂಕ್‌ಗೆ ವಂಚನೆ:ಕ್ಯಾಲಿಫೋರ್ನಿಯಾದ 1280 ಎಕರೆ ಭೂಮಿ ಜಫ್ತಿ
ಅಹ್ಮದಾಬಾದ್: ಇತಿಹಾಸದಲ್ಲಿ ಮೊದಲ ಬಾರಿ ಅಹ್ಮದಾಬಾದ್ ಜಾರಿ ನಿರ್ದೇಶನಾಲಯವು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 1280 ಎಕರೆ ಭೂಮಿಯನ್ನು ಜಫ್ತಿ ಮಾಡಿದೆ. ಜೂಮ್ ಡೆವಲಪರ್ಸ್ ಮತ್ತು ಅದರ ಪ್ರವರ್ತಕ ವಿಜಯ್ ಚೌಧರಿಯ ವಿರುದ್ಧ 2200 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಚೌಧರಿ ಐರೋಪ್ಯ ರಾಷ್ಟ್ರಗಳಲ್ಲಿ ವಿವಿಧ ಯೋಜನೆಗಳನ್ನು ನಿರ್ವಹಿಸುವುದಾಗಿ ಒಟ್ಟು 2200 ಕೋಟಿ ಬ್ಯಾಂಕ್ ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಯಾವ ಯೋಜನೆಯನ್ನೂ ಆರಂಭಿಸದೇ ಹಣವನ್ನು ವಂಚಿಸಲಾಗಿತ್ತು. ಈಗ ಜಫ್ತಿ ಮಾಡಿರುವ ಆಸ್ತಿ ಸುಮಾರು 1000 ಕೋಟಿ ರೂ. ಮೌಲ್ಯದಿಂದ ಕೂಡಿದೆ. ವರದಿಗಳ ಪ್ರಕಾರ ಅಮೆರಿಕದಲ್ಲಿ ಜಾರಿ ನಿರ್ದೇಶನಾಲಯ ಆಸ್ತಿ ಜಫ್ತಿ ಮಾಡಿರುವುದು ಇದೇ ಮೊದಲ ಬಾರಿ.  .... ಮುಂದೆ ಓದಿ
ಬಸ್ ಮೇಲೆ ದಾಳಿಗೆ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್
ಕರಾಚಿ/ ಬೈರೂತ್: ಬುಧವಾರ ಪಾಕಿಸ್ತಾನದ ಕರಾಚಿಯಲ್ಲಿ ಬಸ್ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ 43 ಶಿಯಾ ಮುಸ್ಲಿಮರು ಸತ್ತಿರುವ ಘಟನೆಗೆ ಇಸ್ಲಾಮಿಕ್ ಸ್ಟೇಟ್ ಸಂಘಟನೆ   ಹೊಣೆ ಹೊತ್ತಿದೆ. ಅಲ್ಲಾಗೆ ಧನ್ಯವಾದಗಳು,ಕರಾಚಿಯಲ್ಲಿ ಶಿಯಾ ಜನರನ್ನು ಸಾಗಿಸುತ್ತಿದ್ದ ಬಸ್ ಮೇಲೆ ಇಸ್ಲಾಮಿ ಸ್ಟೇಟ್ ಯೋಧರು ದಾಳಿಮಾಡಿದ್ದರಿಂದ  43 ಧರ್ಮನಿಂದಕರು ಹತರಾಗಿದ್ದಾರೆ  ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಜಿಹಾದಿಗಳ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಉಗ್ರಗಾಮಿ ಸಂಘಟನೆ ತಿಳಿಸಿದೆ.  ಐಸಿಸ್ ಸಿರಿಯಾ ಮತ್ತು ಇರಾಕ್ ಬಹುಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಜನವರಿಯಲ್ಲಿ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಸುತ್ತಮುತ್ತಲ ಭಾಗಗಳನ್ನೊಳಗೊಂಡ ಪ್ರಾಂತ್ಯ ಎಂಬ ಶಾಖೆಯನ್ನು ರಚಿಸಿದೆ. ಮೋಟರ್ ಸೈಕಲ್‌ನಲ್ಲಿ ಬಂದ  ಬಂದೂಕುಧಾರಿಗಳು ಬಸ್ಸೊಂದನ್ನು ಏರಿ ಪ್ರಯಾಣಿಕರ ಮೇಲೆ ತಮ್ಮ ಬಂದೂಕಿನಿಂದ ಗುಂಡಿನಮಳೆಗರೆದರು. ನಸುಗೆಂಪು .... ಮುಂದೆ ಓದಿ
ಕ್ಯಾಮರಾನ್ ಮತ್ತೆ ಪ್ರಧಾನಿ: ಕನ್ಸರ್ವೇಟಿವ್ ಪಕ್ಷಕ್ಕೆ ಜಯ
ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಡೇವಿಡ್ ಕ್ಯಾಮರಾನ್ ಅವರ ಕನ್ಸರ್ವೇಟಿವ್ ಪಕ್ಷ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು, ಡೇವಿಡ್ ಮತ್ತೆ ಪ್ರಧಾನಿಯಾಗಿ ಐದು ವರ್ಷಗಳ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.  650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ 329 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದೆ. ಪ್ರತಿಪಕ್ಷವಾದ ಲೇಬರ್ ಪಾರ್ಟಿ ಮತ್ತು ಅದರ ನಾಯಕ ಎಡ್ ಮಿಲಿಬ್ಯಾಂಡ್‌ಗೆ ಈ ಫಲಿತಾಂಶದಿಂದ ನಿರಾಶೆಯಾಗಿದೆ.ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷದ ನಡುವೆ ಹಣಾಹಣಿ ಹೋರಾಟವಿರುತ್ತದೆಂದು ಚುನಾವಣೆ ಪೂರ್ವ ಸಮೀಕ್ಷೆಗಳು ತಿಳಿಸಿದ್ದವು.ಕನ್ಸರ್ವೇಟಿವ್‌ಗಳು 650 ಸೀಟುಗಳ ಪೈಕಿ 331 ಸೀಟು ಗೆದ್ದಿದ್ದು, ಹಿಂದಿನ ಚುನಾವಣೆಗಿಂತ 24 ಸೀಟುಗಳನ್ನು ಹೆಚ್ಚು ಗಳಿಸಿದೆ.  ಅದರ ಎದುರಾಳಿ ಲೇಬರ್ ಪಕ್ಷವು ಸ್ಕಾಟ್ಲೆಂಡ್‌ನಲ್ಲಿ ಸಂಪೂರ್ಣ ಧೂಳೀಪಟವಾಗಿದ್ದು, ಬ್ರಿಟನ್ .... ಮುಂದೆ ಓದಿ
Prev 1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery