ಅಂತಾರಾಷ್ಟ್ರೀಯ ಸುದ್ದಿ
ಮಹಿಳೆ ಉಡುಪು ಧರಿಸಿದ ಚಿತ್ರ ಅಪಲೋಡ್ ಮಾಡಿದ ಪುರುಷರು
ಲಂಡನ್-ಧಾರ್ಮಿಕ ಸಂಪ್ರದಾಯವಾದಿ ಇರಾನ್‌ನಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾದ ವ್ಯಕ್ತಿಗೆ ಮಹಿಳೆಯ ಉಡುಪುಗಳನ್ನು ಧರಿಸಿ ಮೆರವಣಿಗೆ ಮಾಡಿಸಿದ ಶಿಕ್ಷೆಯಿಂದ ಇಲ್ಲಿನ ಯುವಕರು ಆಕ್ರೋಶಗೊಂಡಿದ್ದಾರೆ. ಇದನ್ನು ಪ್ರತಿಭಟಿಸಲು ಅವರು ಆನ್‌ಲೈನ್ ಪ್ರತಿಭಟನೆ ಆರಂಭಿಸಿ ಮಹಿಳೆಯರ ಹಕ್ಕುಗಳಿಗಾಗಿ ಒತ್ತಾಯಿಸಿದ್ದಾರೆ.ಹತ್ತಾರು ಯುವಕರು ಸಾಂಪ್ರದಾಯಿಕ ಮಹಿಳಾ ಉಡುಗೆಗಳನ್ನು ಧರಿಸಿದ ತಮ್ಮ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ‘ಸಮಾನತೆಯ ಕುರ್ದಿ ಪುರುಷರ’ ಗುಂಪು ಎಂಬ ಹೆಸರಿನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಲಿಂಗಭೇದಭಾವದ ಶಿಕ್ಷೆಗೆ ಪ್ರತಿಭಟನೆಸೂಚಿಸಿದೆ. ಅವರ ಸಂದೇಶ ಸರಳವಾಗಿದೆ. ಪುರುಷರನ್ನು ಮಹಿಳೆಯ ರೀತಿಯಲ್ಲಿ ತೋರಿಸುವ ಮೂಲಕ ಯಾರನ್ನಾದರೂ ಶಿಕ್ಷಿಸುವುದು ಅಥವಾ ಅವಮಾನಿಸುವುದುಸರಿಯಾದ ಮಾರ್ಗವಲ್ಲ ಎನ್ನುವುದಾಗಿದೆ. ಎಲ್ಲ ರೀತಿಯ ಮಹಿಳಾ ಉಡುಪುಗಳು, ಬುರ್ಕಾಗಳು ಮತ್ತು ಕಂಠವಸ್ತ್ರಗಳನ್ನು ಧರಿಸಿದ 150ಕ್ಕೂ ಹೆಚ್ಚು ಪುರುಷರ ಚಿತ್ರಗಳನ್ನು ಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ .... ಮುಂದೆ ಓದಿ
ಪ್ರಭಾಕರನ್ ಪುತ್ರನಿಗೆ ಗುಂಡಿಕ್ಕಿದ ಶ್ರೀಲಂಕಾ ಸೇನೆ: ಬ್ರಿಟನ್ ಚಾನೆಲ್ ವರದಿ
ಲಂಡನ್: ಬ್ರಿಟನ್‌ನ ಚಾನೆಲ್ 4 ಎಲ್‌ಟಿಟಿಇ ಮುಖಂಡ, ವೇಲುಪಿಳ್ಳೈ ಪ್ರಭಾಕರನ್ ಅವರ 12 ವರ್ಷ ವಯಸ್ಸಿನ ಪುತ್ರನನ್ನು ಶ್ರೀಲಂಕಾ ಸೇನೆ ಗುಂಡಿಕ್ಕಿ ಕೊಂದಿರುವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದೆ. ಇದರಿಂದಾಗಿ ಶ್ರೀಲಂಕಾದಲ್ಲಿ ಸೇನೆಯ ದೌರ್ಜನ್ಯ, ಅನಾಚಾರಗಳಿಗೆ ಸ್ಪಷ್ಟ ಸಾಕ್ಷ್ಯ ಒದಗಿಸಿದೆ ಎಂದು ಬ್ರಿಟನ್ ಚಾನೆಲ್ ವರದಿ ಮಾಡಿದೆ. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳನ್ನು ಹತ್ತಿಕ್ಕುವ ಭರದಲ್ಲಿ ಶ್ರೀಲಂಕಾ ಸೇನೆ ಸ್ವೇಚ್ಛಾಚಾರದಿಂದ ವರ್ತಿಸಿದ್ದು, ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಲಾಗಿದೆ.  ಪ್ರಭಾಕರನ್ ಪುತ್ರನನ್ನು ನಿರ್ದಯವಾಗಿ ಹತ್ಯೆ ಮಾಡಿದ ಸೇನೆಯ ದೌರ್ಜನ್ಯದ ವಿರುದ್ದ ತಮಿಳುನಾಡಿನಲ್ಲಿ ವಿವಿಧ ಪಕ್ಷಗಳು ಖಂಡಿಸಿವೆ. ಅಮೆರಿಕ ಕೂಡ ತನ್ನ ಖಂಡನೆ ವ್ಯಕ್ತಪಡಿಸಿದ್ದು, ಯುಎನ್‌ಎಚ್‌ಆರ್‌ಸಿ ನಿರ್ಣಯವನ್ನು ಮಂಡಿಸುವ ಸಂಭವವಿದೆ.ಶ್ರೀಲಂಕಾ ಸೇನೆ ಪ್ರಭಾಕರನ್ .... ಮುಂದೆ ಓದಿ
ಸಿಐಎ ಪರ ಬೇಹುಗಾರಿಕೆ ಆರೋಪ: ಅಮೆರಿಕದ ವ್ಯಕ್ತಿಗೆ ಗಲ್ಲು
ಟೆಹ್ರಾನ್: ಸಿಐಎ ಬೇಹುಗಾರಿಕೆ ಸಂಸ್ಥೆ ಪರವಾಗಿ ಕೆಲಸ ಮಾಡುತ್ತಿದ್ದ ಅಮೆರಿಕದ ವ್ಯಕ್ತಿಯೊಬ್ಬನಿಗೆ ಇರಾನ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಇರಾನ್ ಸ್ವಾಮ್ಯದ ರೇಡಿಯೊ ವರದಿ ಮಾಡಿದೆ.ಮಾಜಿ ಅಮೆರಿಕದ  ನೌಕಾಧಿಕಾರಿ ಅಮೀರ್ ಮಿರ್‌ಜೈ ಹೆಕ್‌ಮತಿ ವಿಶೇಷ ತರಬೇತಿ ಸ್ವೀಕರಿಸಿ ಇರಾಕ್ ಮತ್ತು ಆಫ್ಘಾನಿಸ್ತಾನದ ಮಿಲಿಟರಿ ನೆಲೆಗಳಲ್ಲಿ ಸೇವೆ ಸಲ್ಲಿಸಿದ್ದರು.  ನಂತರ  ಗುಪ್ತಚರ ಕಾರ್ಯಾಚರಣೆ ಸಲುವಾಗಿ ಇರಾನ್‌ಗೆ ತೆರಳಿದ್ದರು ಎಂದು ರೇಡಿಯೊ ವರದಿ ಮಾಡಿದೆ. 28 ವರ್ಷ ವಯಸ್ಸಿನ ಹೆಕ್ಮತಿ ಅರಿಜೋನಾದಲ್ಲಿ ಹುಟ್ಟಿದ್ದಾರೆ. ಅವರ ಕುಟುಂಬ ಇರಾನ್ ಮೂಲಕ್ಕೆ ಸೇರಿದೆ. ತಮ್ಮ ಪುತ್ರ ಸಿಐಎ ಬೇಹುಗಾರ ಅಲ್ಲವೆಂದು ಮಿಚಿಗನ್‌ನಲ್ಲಿ ವಾಸಿಸುತ್ತಿರುವ ಅವರ ತಂದೆ ತಿಳಿಸಿದ್ದಾರೆ. ಅವನು ಇರಾನ್‌ನಲ್ಲಿರುವ ತನ್ನ ಅಜ್ಜಿಯಂದಿರನ್ನು ಭೇಟಿ ಮಾಡಲು ತೆರಳಿದ್ದಾಗ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. .... ಮುಂದೆ ಓದಿ
ಜರ್ದಾರಿಗೆ ಲಘು ಹೃದಯಾಘಾತ
ಇಸ್ಲಾಮಾಬಾದ್-ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರಿಗೆ ಲಘು ಹೃದಯಾಘಾತ ಉಂಟಾಗಿದ್ದು, ದುಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಅವರು ಉತ್ತಮ ಆರೋಗ್ಯದಲ್ಲಿದ್ದು, ನಾಳೆ ವಾಪಸು ಬರಲಿದ್ದಾರೆ ಎಂದು ಸಚಿವ ಮುಸ್ತಫಾ ಖೋಕರ್ ತಿಳಿಸಿದ್ದಾರೆ.ಆದರೆ ರಾಜೀನಾಮೆ ನೀಡುತ್ತಾರೆಂಬ ಮಾಧ್ಯಮ ವರದಿಗಳನ್ನು ಅಲ್ಲಗಳೆದು ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದ್ದಾರೆ. ಜರ್ದಾರಿ ಅವರು ಹಗರಣಕ್ಕೆ ಸಂಬಂದಿಸಿದಂತೆ ತೀವ್ರ ಒತ್ತಡದಲ್ಲಿದ್ದರು ಮತ್ತು ಅಮೆರಿಕದ ಅವರ ರಾಯಭಾರಿ ಕೂಡ ರಾಜೀನಾಮೆ ಸಲ್ಲಿಸಿದ್ದರು. ಮೆಮೋಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ ಟಿಪ್ಪಣಿ ಕಳಿಸಿದ್ದಾರೆಂಬ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಜರ್ದಾರಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಈ ಕುರಿತು ಸಂಸತ್ತಿಗೆ ಹೇಳಿಕೆ ನೀಡಬೇಕಾಗಿತ್ತು. .... ಮುಂದೆ ಓದಿ
ಆಪಲ್ ಸಂಸ್ಥೆಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ನಿಧನ
ನ್ಯೂಯಾರ್ಕ್-ಆಪಲ್‌ ಸಂಸ್ಥೆಯ ದೂರದೃಷ್ಟಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬುಧವಾರ ಮೃತರಾಗಿದ್ದಾರೆ. ಕಂಪೆನಿಯ ನಿರ್ದೇಶಕರ ಮಂಡೆಳಿಯು ಸ್ಟೀವ್ ಜಾಬ್ಸ್ ನಿಧನದ ಸುದ್ದಿಯನ್ನು ಪ್ರಕಟಿಸಿದೆ. ಸ್ಟೀವ್ ಅವರ ಚಾತುರ್ಯ, ಶಕ್ತಿ ಮತ್ತು ಉತ್ಸಾಹವು ಅಸಂಖ್ಯಾತ ಆವಿಷ್ಕಾರಗಳಿಗೆ ಮೂಲವಾಗಿದ್ದು, ನಮ್ಮ ಜೀವನ ಸುಧಾರಣೆ ಮತ್ತು ಸಮೃದ್ಧತೆಗೆ ನೆರವಾಗಿದೆ ಎಂದು ಹೇಳಿಕೆಯಲ್ಲಿ ಅದು ಪ್ರತಿಕ್ರಿಯಿಸಿದೆ. ವಿಶ್ವಕ್ಕೆ ಐಪಾಡ್ ಮತ್ತು ಐಫೋನ್ ಕೊಡುಗೆಯಾಗಿ ನೀಡಿದ ಸಿಲಿಕಾನ್ ಕಣಿವೆಯ ಕಣ್ಮಣಿ ಕಳೆದ ಆಗಸ್ಟ್‌ನಲ್ಲಿ ವಿಶ್ವದ ಅತೀ ದೊಡ್ಡ ತಂತ್ರಜ್ಞಾನ ಸಂಸ್ಥೆಯ ಸಿಇಒ ಆಗಿ ರಾಜೀನಾಮೆ ಸಲ್ಲಿಸಿದ್ದರು ಮತ್ತು ಪ್ರಸಕ್ತ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕೂಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. 2004ರಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಜಾಬ್ಸ್, 2009ರಲ್ಲಿ ಪಿತ್ತಜನಕಾಂಗದ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜಾಬ್ಸ್ ತಮ್ಮ ಹೈಸ್ಕೂಲ್ .... ಮುಂದೆ ಓದಿ
Prev 1 2 3 4 5
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery