ಅಂತಾರಾಷ್ಟ್ರೀಯ ಸುದ್ದಿ
ಸದ್ದಾಂನ ಮಿಲಿಟರಿ ಅಧಿಕಾರಿಗಳು ಈಗ ಇಸ್ಲಾಮಿಕ್ ಉಗ್ರಗಾಮಿಗಳು
ಬಾಗ್ದಾದ್: ಇಸ್ಲಾಮಿಕ್ ರಾಜ್ಯದ ಹೋರಾಟಗಾರರು ಇರಾಕ್ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿರುವ ನಡುವೆ, ಈ ಸಂಘಟನೆ ಸದ್ದಾಂ ಹುಸೇನ್ ಆಡಳಿತದ ಅನೇಕ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡಿರುವ ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ. ಮಧ್ಯವಯಸ್ಕ ಇರಾಕಿಗಳು ಸೇರಿದಂತೆ ಅನೇಕ ಮಿಲಿಟರಿ ಅಧಿಕಾರಿಗಳು ಹಣಕಾಸು, ಶಸ್ತ್ರಾಸ್ತ್ರ, ಸ್ಥಳೀಯ ಆಡಳಿತ, ಮಿಲಿಟರಿ ಕಾರ್ಯಾಚರಣೆ ಮತ್ತು ನೇಮಕದ ಉಸ್ತುವಾರಿ ವಹಿಸಿದ್ದಾರೆ.  ಸದ್ದಾಂ ಮಿಲಿಟರಿ ಅಧಿಕಾರಿಗಳಾಗಿದ್ದವರು ಈಗ ಉಗ್ರಗಾಮಿಗಳಾಗಿರುವುದು ಇರಾಕ್ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.ಸಂಘಟನೆಯ ಉನ್ನತಮಟ್ಟದಲ್ಲಿ ಸ್ವಯಂಘೋಷಿತ ಮುಖಂಡ ಅಬು ಬಕರ್ ಅಲ್ ಬಗ್ದಾದಿ ಇದ್ದು, ಕ್ಯಾಂಪಾ ಬುಕಾ ಬಂಧನ ಕೇಂದ್ರದಲ್ಲಿ ಕೈದಿಯಾಗಿದ್ದಾಗ ಭೇಟಿ ಮಾಡಿದ ಜನರ ಪೈಕಿ ತನ್ನ ಅನೇಕ ಡೆಪ್ಯೂಟಿಗಳನ್ನು ನೇಮಕ ಮಾಡಿದ್ದಾನೆ.  ಅವನು ಮಿಲಿಟರಿ ವ್ಯಕ್ತಿಗಳಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಅವನ .... ಮುಂದೆ ಓದಿ
ನರೇಂದ್ರ ಮೋದಿ ಪದಗ್ರಹಣ: ಮೀನುಗಾರರಿಗೆ ಬಿಡುಗಡೆ ಭಾಗ್ಯ
ಇಸ್ಲಾಮಾಬಾದ್: ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನ ಮತ್ತು ಶ್ರೀಲಂಕಾ ಅಧ್ಯಕ್ಷರಿಗೆ ಆಹ್ವಾನ ನೀಡಿದ್ದರಿಂದ ಪಾಕಿಸ್ತಾನ ಕರಾವಳಿಯಲ್ಲಿ ಬಂಧನಕ್ಕೊಳಗಾಗಿದ್ದ 59 ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ಸರ್ಕಾರ ಸೆರೆಯಲ್ಲಿಟ್ಟದ್ದ ಮೀನುಗಾರರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.ಭಾರತ ಹಾಗೂ ಪಾಕಿಸ್ತಾನದ ವಾಘಾ ಗಡಿಯಲ್ಲಿ ಭಾರತೀಯ ಮೀನುಗಾರರ ಕುಟುಂಬದ ಸಂಭ್ರಮ ಮುಗಿಲು ಮುಟ್ಟಿದೆ. ಕನಿಷ್ಟ ತಮಿಳುನಾಡಿನ ಮೂರು ಮೀನುಗಾರರು ಪ್ರಸಕ್ತ ಲಂಕಾದ ಜೈಲುಗಳಲ್ಲಿದ್ದು, ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅಧ್ಯಕ್ಷರ ಆದೇಶ ಇವರು ಮೂವರಿಗೂ ಅನ್ವಯಿಸುತ್ತದೆಯೇ ಎಂಬ ಬಗ್ಗೆ ಲಂಕಾ ಅಧಿಕಾರಿಗಳಿಗೆ ಖಚಿತಪಟ್ಟಿಲ್ಲ. ಏತನ್ಮಧ್ಯೆ ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಅವರನ್ನು ಆಹ್ವಾನಿಸಿರುವ ಬಗ್ಗೆ ಎಂಡಿಎಂಕೆ, ಪಿಎಂಕೆ ಮತ್ತು ಡಿಎಂಡಿಕೆ ವಿರೋಧಿಸಿದೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಮೋದಿ .... ಮುಂದೆ ಓದಿ
ವಿಮಾನದಲ್ಲಿ ನಿದ್ರೆಗೆ ಜಾರಿದ ಪ್ರಯಾಣಿಕನಿಗೆ ಲಾಸ್ ಏಂಜಲ್ಸ್ ಫ್ಲೈಟ್ ಮಿಸ್
 ಹೋಸ್ಟನ್: ಲಾಸ್ ಏಂಜಲ್ಸ್‌ಗೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಸುಸ್ತಾಗಿ ನಿದ್ರೆಗೆ ಜಾರಿದ್ದರು. ಅವರು ಹೋಸ್ಟನ್‌ನಲ್ಲಿ ನಿದ್ರೆಯಿಂದ ಎಚ್ಚೆತ್ತಾಗ ವಿಮಾನವೆಲ್ಲ ಖಾಲಿ, ಖಾಲಿ, ಕತ್ತಲು ತುಂಬಿಕೊಂಡಿತ್ತು. ಹೊರಗಿನಿಂದ ಲಾಕ್ ಮಾಡಲಾಗಿತ್ತು.ಕೂಡಲೇ ಟಾಮ್ ವಾಗ್ನರ್ ತನ್ನ ಸ್ನೇಹಿತೆಗೆ ಕರೆ ಮಾಡಿದ್ದರಿಂದ ಅವರನ್ನು ಪಾರು ಮಾಡುವಂತೆ ಸ್ನೇಹಿತೆ ಏರ್‌ಲೈನ್‌ಗೆ ಸೂಚಿಸಿದರು. ತಾವು ವಿಮಾನದ ಸುತ್ತಲೂ ಕಣ್ಣು ಹಾಯಿಸಿದಾಗ ಯಾರೂ ಕಾಣಲಿಲ್ಲ. ಅದು ಲಾಕ್ ಆಗಿತ್ತು.  ಲೈಟ್ ಆಫ್ ಆಗಿತ್ತು. ಮೋಟರ್ ಓಡುತ್ತಿರಲಿಲ್ಲ.ಇನ್ನೊಂದು ಸಂಗತಿಯೇನೆಂದರೆ ಮೆಕ್ಸಿಕೊ ಕೊಲ್ಲಿಯಲ್ಲಿ ವಾಗ್ನರ್ ತೈಲ ಪೂರೈಕೆ ನೌಕೆಯ ಕ್ಯಾಪ್ಟನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ನಿದ್ರೆ ಮಾಡುವಾಗ ಯಾವುದೇ ಕುಲುಕಾಟಕ್ಕೆ, ಚಲನವಲನಕ್ಕೆ ಎಚ್ಚರವಾಗುತ್ತಿರಲಿಲ್ಲ.   ಇದರಿಂದ ವಿಮಾನ ಲ್ಯಾಂಡ್ ಮಾಡುವಾಗ ಉಂಟಾದ ಕುಲುಕಾಟಕ್ಕೆ ಅವರಿಗೆ ಎಚ್ಚರವಾಗಿರಲಿಲ್ಲ. ತಾನು ವಿಮಾನದಲ್ಲಿ ಒಂಟಿಯಾಗಿರುವುದನ್ನು .... ಮುಂದೆ ಓದಿ
ಮುಷರಫ್‌ಗೆ ಮುಚ್ಚಿ ಹೋದ ರಾಜಕೀಯ ಭವಿಷ್ಯ
ಇಸ್ಲಾಮಾಬಾದ್-ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರ ಉಳಿದ ಜೀವಿತಾವಧಿಯಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ಪ್ರಾಂತೀಯ ಕೋರ್ಟ್ ನಿಷೇಧ ವಿಧಿಸುವ ಮೂಲಕ ಮುಷರಫ್ ರಾಜಕೀಯಕ್ಕೆ ಹಿಂತಿರುಗುವ ಯೋಜನೆ  ಅಕ್ಷರಶಃ ಮುಚ್ಚಿಹೋಗಿದೆ. ಇನ್ನೊಂದು ಕೋರ್ಟ್ ಮೇ 11ರ ಸಾರ್ವತ್ರಿಕ ಚುನಾವಣೆ ನಂತರದ ಮೂರು ದಿನಗಳವರೆಗೂ ಮುಷರಫ್ ಅವರನ್ನು ನ್ಯಾಯಾಂಗ ಕಸ್ಟಡಿಯಲ್ಲಿರಿಸಲು ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ದೋಸ್ತ್ ಮಹಮದ್ ಖಾನ್ ನೇತೃತ್ವದ ಪೇಶಾವರ ಹೈಕೋರ್ಟ್‌ನ ನಾಲ್ಕು ನ್ಯಾಯಾಧೀಶರ ಪೀಠ ಈ ನಿಷೇಧವನ್ನು ವಿಧಿಸಿದೆ. ಮುಷರಫ್ ಅವರ ಮೇ 11ರ ಚುನಾವಣೆಯ ನಾಮಪತ್ರ ತಿರಸ್ಕರಿಸಿದ ಕ್ರಮದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿಹಾಕಿದ ಪೀಠ ಈ ನಿಷೇಧ ವಿಧಿಸಿದೆ.ಮುಷರಫ್ ಸಂವಿಧಾನವನ್ನು ಎರಡು ಬಾರಿ ಉಲ್ಲಂಘಿಸಿ 2007 ತುರ್ತುಪರಿಸ್ಥಿತಿ ಕಾಲದಲ್ಲಿ ನ್ಯಾಯಾಧೀಶರನ್ನು ಬಂಧನದಲ್ಲಿಟ್ಟಿದ್ದರು .... ಮುಂದೆ ಓದಿ
ರಷ್ಯಾದಲ್ಲಿ ಬೆಂಕಿ ದುರಂತಕ್ಕೆ 38 ಜನರು ಬಲಿ
ಮಾಸ್ಕೊ-ರಷ್ಯಾ ದ ಮಾಸ್ಕೊ  ನಗರದಲ್ಲಿ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನಲ್ಲಿ ಬೆಂಕಿ ದುರಂತ ಸಂಭವ ಿಸಿ ಬಹುಮಟ್ಟಿಗೆ ರೋಗಿಗ ಳಿಂದ ಕೂಡಿದ್ದ 38 ಜನರು ಅಸುನೀಗಿದ್ದಾರೆ. ಸ್ಥಳೀಯ ಕಾಲಮಾನ ಮುಂಜಾನೆ  3ಗಂಟೆಗೆ ಒಂದು ಮಹಡಿಯಿರುವ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಆವರಿಸಿಕೊಂಡಿತು. ಮಾಸ್ಕೊ ಉತ್ತರಕ್ಕೆ 120 ಕಿಮೀ. ದೂರದ ರಾಮೆ ನ್‌ಸ್ಕೈನಲ್ಲಿ ಈ ದುರಂತ ಸಂಭವಿಸಿದ ್ದು, ರೋಗಿಗಳಿಗೆ ಚಿತ್ತಶಾಮಕ ಔಷಧಿಗಳನ್ನು ನೀಡಿರಬಹುದು ಅಥವಾ ಅಥವಾ ಕಟ್ಟಿಹಾಕಿರಬಹುದ ು ಎಂದು ಶಂಕಿಸಲಾಗಿ ದೆ. ಬಹುತೇಕ ರೋಗಿಗಳು ಹೊಗೆಗಳಿಂದ ಉಸಿರು ಕಟ್ಟಿ ನಿದ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಕಟ್ಟಡದಲ್ಲಿ 12 ದೇಹಗಳು ಪತ್ತೆಯಾಗಿದ್ದು, ಅ ವು ಸಂಪೂರ್ಣ ಸುಟ್ಟುಹೋಗಿವೆ. ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಶೋಧಕ್ಕೆ ಅಡ್ಡಿಯಾಗಿದೆ. ಬೆಂಕಿಯು ಕಟ್ಟಡವನ್ನು ಬಹುಬೇಗನೇ ಆಪೋಷನ ತೆಗೆದುಕೊಂಡಿತು ಮತ್ತ ು ಅಗ್ನಿಶಾಮಕ .... ಮುಂದೆ ಓದಿ
Prev 1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery