ಅಂತಾರಾಷ್ಟ್ರೀಯ ಸುದ್ದಿ
ಯೆಮೆನ್‌ನಿಂದ ಬದುಕುಳಿದು ಬಂದ ಬೆಂಗಳೂರಿನ ಉದ್ಯಮಿ
 2015-04-05 ನವದೆಹಲಿ: ವಿಮಾನವು ಶನಿವಾರ ಬೆಳಿಗ್ಗೆ ಬೆಂಗಳೂರು ವಿಮಾನನಿಲ್ದಾಣವನ್ನು ಮುಟ್ಟಿದಾಗ ನಗರ ಮೂಲದ ಉದ್ಯಮಿ ರವಿಕುಮಾರ್ ಕಣ್ಣಂಚಿನಲ್ಲಿ ನೀರು ಹನಿದಿತ್ತು. ಯೆಮೆನ್‌ನ ಸಾನಾದಲ್ಲಿ 9 ಭಯಾನಕ ದಿನಗಳನ್ನು ಕಳೆದ ಬಳಿಕ ಅವರು ಹಿಂತಿರುಗಿದ್ದರು. ನಾನು ಜೀವಂತ ವಾಪಸು ಬರುತ್ತೇನೆಂದು ಭಾವಿಸಿರಲೇ ಇಲ್ಲ ಎಂದು ರವಿಕುಮಾರ್ ಹೇಳಿದ್ದಾರೆ.ತಮ್ಮ ಕುಟುಂಬವನ್ನು ಭೇಟಿ ಮಾಡಿ ಯುದ್ಧ ಪೀಡಿತ ಯೆಮೆನ್‌ನಲ್ಲಿ ಸಿಕ್ಕಿಬಿದ್ದ ಅನುಭವವನ್ನು ಬಿಚ್ಚಿಟ್ಟರು. ಯೆಮೆನ್‌ನಲ್ಲಿ ಸಂಘರ್ಷ ಆರಂಭವಾಗುವುದಕ್ಕೆ ಒಂದು ದಿನ ಮುನ್ನ ಮಾರ್ಚ್ 25ರಂದು ವ್ಯಾಪಾರೋದ್ದೇಶಕ್ಕಾಗಿ ಅಲ್ಲಿ ಕಾಲಿರಿಸಿದ್ದರು. ಮುಂದಿನ 9 ದಿನಗಳ ಕಾಲ ಯೆಮೆನ್ ಹೊತ್ತಿ ಉರಿಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ವೈಮಾನಿಕ ದಾಳಿಗಳು ಅಕ್ಕಪಕ್ಕದ ಕಟ್ಟಡಗಳನ್ನು ಉರುಳಿಸಿದವು.  ತಮ್ಮನ್ನು 150 ಭಾರತೀಯರ ಜೊತೆ ಅತಿಥಿಗಹವೊಂದರಲ್ಲಿ ಇರಿಸಲಾಯಿತು.ಅವರಿಗಿದ್ದ ದೊಡ್ಡ ಆತಂಕವೆಂದರೆ ಹೌಥಿ .... ಮುಂದೆ ಓದಿ
ತನ್ನ ಮುದ್ದಿನ ನಾಯಿ ರೋಸ್ಟ್ ಆಗಿದ್ದನ್ನು ಕಂಡು ಅಳತೊಡಗಿದ ಬಾಲಕಿ
 ಐದು ವರ್ಷ ವಯಸ್ಸಿನ ಪುಟ್ಟ ಬಾಲಕಿಯೊಬ್ಬಳು ವಿಯೆಟ್ನಾಂ ಆಹಾರದ ಅಂಗಡಿಯಲ್ಲಿ ತನ್ನ ಮುದ್ದಿನ ನಾಯಿ ಸುಟ್ಟಿರುವ ಸ್ಥಿತಿಯಲ್ಲಿ ಕಂಡು ನಾಯಿಯ ಬಳಿ ನಿಂತುಕೊಂಡು ಅಳತೊಡಗಿದಳು. ಈ ಚಿತ್ರವು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ತನ್ನ ಮುದ್ದಿನ ನಾಯಿ ಕಾಣೆಯಾಗಿದ್ದರಿಂದ ಬಾಲಕಿ ಮಾಂಸದ ಅಂಗಡಿಗಳಿಗೆ ತೆರಳಿ ಹುಡುಕತೊಡಗಿದಳು.  ಅಂಗಡಿಯೊಂದರಲ್ಲಿ ಸುಟ್ಟ ನಾಯಿಯ ಶವವನ್ನು  ಕಂಡು ಕೂಡಲೇ  ತನ್ನ ನಾಯಿಯ ಗುರುತು ಹಿಡಿದು ಹತ್ತಿರ ಹೋಗಿ ಕೈಯಲ್ಲಿ ಮುಟ್ಟುತ್ತಾ ಅಳತೊಡಗಿದಳು. ತನ್ನ ಮುದ್ದಿನ ಸಾಕು ನಾಯಿ ಫ್ಲವರ್ ಮಾಂಸ ಅದಾಗಿತ್ತು. ಈಶಾನ್ಯ ಏಷ್ಯಾ ರಾಷ್ಟ್ರಗಳಲ್ಲಿ ನಾಯಿಯ ಮಾಂಸವನ್ನು ಬಡಿಸುವ ಪ್ರಕ್ರಿಯೆಯಿಂದ ಜನರು ಆಕ್ರೋಶಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕ್ಯಾಮೆರಾವನ್ನೇ ಗನ್ ಎಂದು ಭಾವಿಸಿದ ಸಿರಿಯಾದ ಬಾಲಕನೊಬ್ಬ .... ಮುಂದೆ ಓದಿ
ಕರಾಚಿಯಲ್ಲಿ ಬಾಂಬ್ ಸ್ಫೋಟಕ್ಕೆ 49 ಬಲಿ
ಕರಾಚಿಯಲ್ಲಿ ಭಯೋತ್ಪಾದಕರು. ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಶಿಕಾರಿಪುರ ನಗರದ ಶಿಯಾ ಮಸೀದಿಯಲ್ಲಿ ಸ್ಫೋಟಿಸಿದ ಬಾಂಬ್‌ನಿಂದ ರಕ್ತದ ಕೋಡಿಯೇ ಹರಿದಿದ್ದು, ಒಟ್ಟು 49 ಮಂದಿ ಮತಪಟ್ಟಿದ್ದಾರೆ ಮತ್ತು 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನುಆಸ್ಪತ್ರೆಗೆ ಸೇರಿಸಲಾಗಿದೆ.ಶಿಯಾ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸುನ್ನಿ ಜನಾಂಗಕ್ಕೆ ಸೇರಿದ ಭಯೋತ್ಪಾದಕರು ಈ ಕ್ರತ್ಯವೆಸಗಿದ್ದಾರೆಂದು ಶಂಕಿಸಲಾಗಿದೆ. .... ಮುಂದೆ ಓದಿ
ಪಾಕಿಸ್ತಾನ ಕುರಿತ ದೃಷ್ಟಿಕೋನ ಬದಲಿಸದಿದ್ದರೆ ಕೆಟ್ಟ ಪರಿಣಾಮ:ಮುಷರಫ್
ನೆರೆಹೊರೆಯ ರಾಷ್ಟ್ರಗಳೆರಡೂ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಪ್ರಯತ್ನದಲ್ಲಿರುವ ನಡುವೆ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್  ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಹಾಕಿದ್ದು,  ಪಾಕಿಸ್ತಾನ  ಕುರಿತ ದೃಷ್ಟಿಕೋನ ಬದಲಿಸದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.  ಪಾಕಿಸ್ತಾನದ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮುಷರಫ್  ಮೋದಿ ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಎಂದು ಹೇಳಿದ್ದಾರೆ. ಮೋದಿ ಅವರ ವರ್ತನೆಯಿಂದ ಅವರು ಮುಸ್ಲಿಂ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರಲ್ಲಿ ಸಂಶಯವೇ ಇಲ್ಲ. ನಮಗೆ ಹಾನಿಮಾಡಬಹುದೆಂಬ ಯಾವುದೇ ಅನುಮಾನವೂ ಅವರ ತಲೆಯಲ್ಲಿರಬಾರದು. ನಾವು ಪ್ರಬಲ ರಾಷ್ಟ್ರವಾಗಿದ್ದು, ಅಣ್ವಸ್ತ್ರ ಬಲವನ್ನು ಹೊಂದಿದ್ದೇವೆ. ಆದ್ದರಿಂದ ಮೋದಿಯನ್ನು ನಾವು  ವೈಸರಾಯ್ ರೀತಿಯಲ್ಲಿ ನಡೆಸಿಕೊಳ್ಳಬಾರದು. ಮೋದಿಗೆ .... ಮುಂದೆ ಓದಿ
ನ್ಯೂಯಾರ್ಕ್ ವೈದ್ಯರೊಬ್ಬರಿಗೆ ಅಂಟಿದ ಎಬೋಲಾ ಕಾಯಿಲೆ
 ನ್ಯೂಯಾರ್ಕ್: ಗೀನಿಯಾದ ಎಬೋಲಾ ರೋಗಿಗಳಿಗೆ ಚಿಕಿತ್ಸೆ ನೀಡಿ ನ್ಯೂಯಾರ್ಕ್‌ಗೆ ಹಿಂತಿರುಗಿದ ವೈದ್ಯರೊಬ್ಬರನ್ನು ಪರೀಕ್ಷೆಗೆ ಒಳಪಡಿಸಿದಾಗ ಎಬೋಲಾ ರೋಗದ ವೈರಸ್ ಪಾಸಿಟಿವ್ ಎಂಬ ಫಲಿತಾಂಶ ಬಂದಿದೆ. ಕ್ರೈಗ್ ಸ್ಪೆನ್ಸರ್ ಎಂಬ 33 ವರ್ಷ ವಯಸ್ಸಿನ ವೈದ್ಯರು ಅಮೆರಿಕದ ದೊಡ್ಡ ನಗರಕ್ಕೆ ಜೆಎಫ್‌ಕೆ ವಿಮಾನನಿಲ್ದಾಣದಲ್ಲಿ ಅಕ್ಟೋಬರ್ 17ರಂದು ಬಂದಿಳಿದ ಕೂಡಲೇ ಜ್ವರ, ವಾಂತಿ, ನೋವು ಮತ್ತು ಸುಸ್ತು ಕಾಣಿಸಿಕೊಂಡಿತು. ಅವರನ್ನು ಪ್ರತ್ಯೇಕವಾಗಿ ಇರಿಸಿ ನ್ಯೂಯಾರ್ಕ್ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಅಮೆರಿಕದಲ್ಲಿ ಗುರುತಿಸಿದ ನಾಲ್ಕನೇ ಎಬೋಲಾ ರೋಗದ ಪ್ರಕರಣವಾಗಿದೆ ಮತ್ತು ಟೆಕ್ಸಾಸ್ ಹೊರಗೆ ಮೊದಲ ಪ್ರಕರಣವಾಗಿದೆ. ವಿಶ್ವದ ಮಾರಣಾಂತಿಕ ಎಬೋಲಾ ರೋಗ ಗಿನಿಯಾದ ಗ್ರಾಮವೊಂದರ 2 ವರ್ಷದ ಮಗುವಿಗೆ ಮೊಟ್ಟಮೊದಲು ಕಾಣಿಸಿಕೊಂಡಿತು. ಬಾಲಕ ಅಜ್ಞಾತ ಕಾರಣಕ್ಕಾಗಿ 2013ರ ಡಿ. .... ಮುಂದೆ ಓದಿ
Prev 1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery