ಅಂತಾರಾಷ್ಟ್ರೀಯ ಸುದ್ದಿ
ವಿವೇಕ್ ಮೂರ್ತಿ ಅಮೆರಿಕ ಸರ್ಜನ್ ಜನರಲ್ ಹುದ್ದೆಯಿಂದ ಔಟ್
ವಾಷಿಂಗ್ಟನ್ : ಇಂಡೋ-ಅಮೇರಿಕನ್ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದ ವಿವೇಕ್ ಮೂರ್ತಿ ಹಲ್ಲಗೆರೆಯವರಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಟ್ರಂಪ್ ಸರ್ಕಾರ ಹೇಳಿದೆ.ಅಮೆರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ವಿವೇಕ್ ಮೂರ್ತಿ ಸರ್ಜನ್ ಜನರಲ್ ಆಗಿ ನೇಮಕವಾಗಿದ್ದರು. ವಿವೇಕ್ ಮೂರ್ತಿ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹುದ್ದೆಯಿಂದ ಕೆಳಕ್ಕಿಳಿದ ಎರಡನೇ ಇಂಡೋ ಅಮೆರಿಕನ್ ಎನಿಸಿದ್ದಾರೆ. ತಮ್ಮ ದೇಶದವರನ್ನೇ ಸರ್ಜನ್ ಜನರಲ್ ಹುದ್ದೆಗೆ ನೇಮಿಸುವುದಕ್ಕಾಗಿ ವಿವೇಕ್ ಮೂರ್ತಿಯನ್ನು ಹುದ್ದೆಯಿಂದ ರಿಲೀವ್ ಮಾಡಲಾಗಿದೆ. ಅವರು ಪಬ್ಲಿಕ್ ಹೆಲ್ತ್ ಸರ್ವಿಸ್ ಕಮಿಷನ್ ನ ಸದಸ್ಯರಾಗಿ ಮುಂದುವರೆಯಲಿದ್ದಾರೆ ಎಂದು ಅಮೆರಿಕಾ ಆರೋಗ್ಯ ಇಲಾಖೆ ಹೇಳಿದೆ.ಪ್ರಸ್ತುತ ಡೆಪ್ಯುಟಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಲ್ವಿಯಾ ಟ್ರೆಂಟ್ ಆ್ಯಡಮ್ಸ್ ವಿವೇಕ್ ಮೂರ್ತಿಯವರ .... ಮುಂದೆ ಓದಿ
ಅಮೆರಿಕದ ಪ್ರಜೆಗಳನ್ನು ಓಡಿಸಲು ಇರಾನ್ ನಿರ್ಧಾರ
ಟೆಹರಾನ್ : ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳ ವಲಸೆಗೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಇರಾನ್ ಕೂಡ ತನ್ನ ದೇಶದಲ್ಲಿರುವ ಅಮೆರಿಕದ ಪ್ರಜೆಗಳನ್ನು ಇರಾನ್‌ನಿಂದ ಹೊರಗೆ ಕಳಿಸಲು ನಿರ್ಧರಿಸಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮುಸ್ಲಿಂ ಪೌರರೇ ಹೆಚ್ಚಾಗಿ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದರಿಂದ ಮುಸ್ಲಿಂ ರಾಷ್ಟ್ರಗಳಿಗೆ ಸೇರಿದ ಪ್ರಜೆಗಳಿಗೆ ಅಮೆರಿಕದ ವೀಸಾ ನೀಡುವುದಕ್ಕೆ ಕಠಿಣ ನಿರ್ಬಂಧಗಳನ್ನು ಹೇರಲು ನಿರ್ಧರಿಸಿದ್ದರು. ಇದರಿಂದಾಗಿ ಅಮೆರಿಕಕ್ಕೆ ವಲಸೆ ಬರಲು ನಿರ್ಧರಿಸಿದ್ದ ಅನೇಕ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ತೊಂದರೆಯಾಗಿದೆ. ಈ ರಾಷ್ಟ್ರಗಳ ಪೈಕಿ ಇರಾನ್ ಕೂಡ ಸೇರಿದ್ದರಿಂದ ಅಮೆರಿಕದ ಕ್ರಮವನ್ನು ಇರಾನ್ ಖಂಡಿಸಿದ್ದು, ಟ್ರಂಪ್ ಅವರ ನಿರ್ಧಾರವನ್ನು ಅವಮಾನಕರ ಎಂದು ಇರಾನ್ ವಿದೇಶಾಂಗ ಇಲಾಖೆ ಬಣ್ಣಿಸಿದೆ. .... ಮುಂದೆ ಓದಿ
ಮೊದಲ ದಿನವೇ ಪತ್ರಕರ್ತರ ವಿರುದ್ಧ ಹರಿಹಾಯ್ದ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಿನವೇ ಪತ್ರಕರ್ತರನ್ನು ಅತ್ಯಂತ ಅಪ್ರಾಮಾಣಿಕ ಮಾನವ ಜೀವಿಗಳು ಎಂದು ಹೀಗಳೆಯುವ ಮೂಲಕ ಮತ್ತೆ ವಿವಾದಕ್ಕೆ ಆಸ್ಪದ ಕಲ್ಪಿಸಿದ್ದಾರೆ. ತಮ್ಮ ಉದ್ಘಾಟನಾ ಭಾಷಣದಲ್ಲಿ ಸೇರಿದ್ದ ಗುಂಪಿನ ಗಾತ್ರದ ಬಗ್ಗೆ ಮಾಧ್ಯಮ ಸುಳ್ಳು ಸುಳ್ಳೇ ವರದಿ ಮಾಡಿದೆ ಎಂದು ಅವರು ದೂರಿದರು. ಇದಕ್ಕೆ ಮುಂಚೆ ಸಿಎನ್ಎನ್ ಸುದ್ದಿಸಂಸ್ಥೆಯನ್ನು ನಕಲಿ ನ್ಯೂಸ್ ಎಂದು ಪತ್ರಿಕಾಗೋಷ್ಠಿಯಲ್ಲಿ ಜರಿದಿದ್ದರು.ತಮ್ಮ ಅಧಿಕಾರದ ಮೊದಲ ದಿನವೇ ಪತ್ರಕರ್ತರನ್ನು ವಾಚಾಮಗೋಚರವಾಗಿ ಬೈಯುವುದಕ್ಕೆ ಬಳಸಿಕೊಂಡರು ಟ್ರಂಪ್.  ಸಮಾರಂಭದಲ್ಲಿ ಮಿಲಿಯಗಟ್ಟಲೆ ಜನರು ಹಾಜರಿದ್ದರೂ ಖಾಲಿ ಸ್ಥಳವನ್ನು ಚಿತ್ರಿಸಿ ಸಮಾರಂಭದಲ್ಲಿ ಕೆಲವೇ ಮಂದಿ ಭಾಗವಹಿಸಿದ್ದರು ಎಂದು ಹೇಳಿದ ಪತ್ರಕರ್ತರು ಸತ್ಯವನ್ನು ತಿರುಚಿದ್ದಾರೆ ಎಂದು .... ಮುಂದೆ ಓದಿ
ಅಂತರ ಧರ್ಮೀಯ ವಿವಾಹ ವಿರೋಧಿಸಿ ಗುರುದ್ವಾರಕ್ಕೆ ಸಿಖ್ಖರ ಮುತ್ತಿಗೆ
ಲಂಡನ್; ಮಿಡ್‌ಲ್ಯಾಂಡ್ಸ್ ಪ್ರದೇಶದ ಸಿಖ್ ಗುರುದ್ವಾರದಲ್ಲಿ ಸಿಖ್ ಮತ್ತು ಸಿಖ್ಖೇತರರ ನಡುವೆ ಅಂತರಧರ್ಮ ವಿವಾಹವನ್ನು ವಿರೋಧಿಸಿದ 20-30 ಜನರಿದ್ದ ಸಿಖ್ಖರು ಹರಿತವಾದ ಆಯುಧಗಳನ್ನು ಹಿಡಿದು ಸಿಖ್ ಮಂದಿರಕ್ಕೆ ಮುತ್ತಿಗೆ ಹಾಕಿದಾಗ ಸಶಸ್ತ್ರ ಪೊಲೀಸರು ಪಶ್ಚಿಮ ಮಿಡಲ್ಯಾಂಡ್ ಗುರುದ್ವಾರವನ್ನು ಸುತ್ತುವರೆದರು. ವಿಶೇಷವಾಗಿ ತರಬೇತಾದ ಅಧಿಕಾರಿಗಳು ಗುರುದ್ವಾರ ಸಾಹಿಬ್ ಒಳಗಿದ್ದು, ಅಲ್ಲಿ ಮುತ್ತಿಗೆ ಹಾಕಿದ ಸಿಖ್ಖರ ಜತೆ ಸಂಧಾನ ನಡೆಸಿದರು.ಈ ಘಟನೆಯನ್ನು ಭಯೋತ್ಪಾದನೆ ಕ್ರತ್ಯವಾಗಿ ನಾವು ಪರಿಗಣಿಸುವುದಿಲ್ಲ ಎಂದು ವಾರ್ವಿಕ್ ಶೈರ್ ಪೊಲೀಸ್ ವಕ್ತಾರ ತಿಳಿಸಿದರು. ಮಂದಿರದಲ್ಲಿ ಧಾರ್ಮಿಕ ನಾಯಕರು ಶಾಂತಿಯುತ ಇತ್ಯರ್ಥಕ್ಕೆ ಅಧಿಕಾರಿಗಳ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಕ್ತಾರ ಹೇಳಿದರು. .... ಮುಂದೆ ಓದಿ
ಬ್ರಸೆಲ್ಸ್ ವಿಮಾನನಿಲ್ದಾಣದಲ್ಲಿ ಪ್ರಬಲ ಸ್ಫೋಟಕ್ಕೆ 21 ಜನರ ಬಲಿ
ಬ್ರಸೆಲ್ಸ್ : ಬೆಲ್ಜಿಯಂನ ಬ್ರಸೆಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಆವರಣದಲ್ಲಿ 2 ಭಾರೀ ಸ್ಫೋಟಗಳು ಸಂಭವಿಸಿದ್ದು, 21 ಜನರು ಬಲಿಯಾಗಿದ್ದು, 35ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬ್ರಸೆಲ್ ವಿಮಾನನಿಲ್ದಾಣದ ಅಮೆರಿಕ ಪ್ರಯಾಣಿಕರ ಚೆಕ್ ಇನ್ ಕೌಂಟರ್ ಬಳಿ ಈ ದುರಂತ ಸಂಭವಿಸಿದ್ದು ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಿರಬಹುದಾದ ಸಾಧ್ಯತೆ ಇದೆ. ನೂರಾರು ಪ್ರಯಾಣಿಕರು ಚೆಕ್ ಇನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಈ ಸ್ಫೋಟಗಳು ಸಂಭವಿಸಿದ್ದು, ಸ್ಫೋಟದ ಹೊಣೆಗಾರಿಕೆಯನ್ನು ಯಾರೂ ಹೊತ್ತುಕೊಂಡಿಲ್ಲ. ಪ್ಯಾರಿಸ್ ದಾಳಿಯ ರೂವಾರಿ ಅಬ್ದೇಸಲೇಂ ಅವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಈ ಬಂಧನದ ಹಿಂದೆಯೇ ಸ್ಫೋಟ ಸಂಭವಿಸಿದೆ. .... ಮುಂದೆ ಓದಿ
1 2 3 4 5 Next
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery