ಗಾದೆ ತಗಾದೆ

 ನಗುವ ಹುಡುಗಿಯರನ್ನು , ಅಳುವ ಗಂಡಸರನ್ನು ನಂಬಬೇಡಿ ಎನ್ನುವ ಗಾದೆ ಮಾತಿದೆ.

ಜೋಕ್ ಮಾಡಿದಾಗ ಹುಡುಗಿ ನಕ್ಕರೆ, ಅಪ್ಪ ಸತ್ತಾಗ ಮಗ ಅತ್ತರೆ  ಅವರನ್ನು ನಂಬದಿರಲಾಗುತ್ತದೆಯೇ?

  • ನಗು ಸಾಂದರ್ಭಿಕವಾಗಿರದಿದ್ದರೆ ನಿಮ್ಹಾನ್ಸ್‌ಗೆ ದಾರಿ

ಸದಾ ನಗುನಗುತ್ತಾ ಇರಿ, ಆದರೆ ಅಳಬೇಕಾದ ಸಂದರ್ಭದಲ್ಲಿ ನಗುತ್ತಿದ್ದರೆ, ನಗಬೇಕಾದ ಸಂದರ್ಭದಲ್ಲಿ ಅಳುತ್ತಿದ್ದರೆ ನಿಮ್ಹಾನ್ಸ್‌ಗೆ ದಾರಿ ತೋರಿಸಬಹುದು.

  • ಖಾಲಿ ಪರ್ಸ್ ಕರಾಮತ್ತು

ಬಸ್ ಪ್ರಯಾಣದಲ್ಲಿ ಪಿಕ್‌ಪಾಕೆಟ್ ಭಯದಿಂದ ಖಾಲಿ ಪರ್ಸ್ ಪ್ಯಾಂಟ್ ಜೇಬಿನಲ್ಲಿಡುತ್ತಿದ್ದ ಭೂಪ, 3 ತಿಂಗಳಾವಧಿಯಲ್ಲಿ 15 ಪರ್ಸ್ ಕಳೆದುಕೊಂಡ. ಆದರೂ ಶರ್ಟ್ ಜೇಬಿನಲ್ಲಿ ಹಣವಿಟ್ಟು ಸೇವ್ ಮಾಡಿದ್ದೇನೆಂದು ಸಂತಸಪಟ್ಟ.

  • ಕನಸು ಕಾಣಲು ನಿದ್ರೆಗೆ ಜಾರಿ

 ನಿಮ್ಮ ಭವಿಷ್ಯ ಕನಸುಗಳನ್ನು ಕಾಣುವುದನ್ನು ಅವಲಂಬಿಸಿದೆ. ಆದ್ದರಿಂದ ದಯವಿಟ್ಟು ನಿದ್ರೆಗೆ ಜಾರಿ.

  • ಮದುವೆಯೊ, ಪಬ್ಲಿಕ್ ಟಾಯ್ಲೆಟ್ಟೊ

ಮದುವೆ ಪಬ್ಲಿಕ್ ಟಾಯ್ಲೆಟ್ ಇದ್ದ ಹಾಗೆ. ಹೊರಗೆ ಕಾಯುತ್ತಿರುವವರು ಹತಾಶಸ್ಥಿತಿಯಲ್ಲಿ ಒಳಹೋಗಲು ಯತ್ನಿಸುತ್ತಾರೆ. ಒಳಗೆ ಹೋದವರು ಹತಾಶರಾಗಿ ಹೊರಬರಲು ಯತ್ನಿಸುತ್ತಾರೆ.

  • god ಹಿಂದುಮುಂದಾಯಿತು

ವೈವಾಹಿಕ ಜೀವನದ ಆರಂಭದ ದಿನಗಳಲ್ಲಿ ಪತ್ನಿ ತನ್ನ ಪತಿಯನ್ನು ದೇವರಂತೆ(god)ಕಾಣುತ್ತಾಳೆ. ಸ್ವಲ್ಪ ಕಾಲದ ನಂತರ ಹೇಗೊ ಆ ಅಕ್ಷರಗಳು ಹಿಂದುಮುಂದಾಗುತ್ತದೆ(dog).

 

  

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery