ಕಪ್ಪು ಹಣದ ಕಿಂಚಿತ್ ಲಾಭಕ್ಕಾಗಿ ಕ್ಯೂನಲ್ಲಿ ನಿಲ್ಲಲೇಬೇಕಾಗಿದೆ
ನವದೆಹಲಿ: 500 ರೂ ಮತ್ತು  1000 ರೂ. ನೋಟುಗಳನ್ನು ನಿಷೇಧಿಸಿದ್ದರಿಂದ ಆರ್ಥಿಕ ನಷ್ಟ ಮತ್ತು ವ್ಯಾಪಕ ಸಂಕಷ್ಟ ಉಂಟಾಗಿದ್ದರೂ ಜನಸಾಮಾನ್ಯರು ಇದೆಲ್ಲವನ್ನೂ ಕಪ್ಪು ಹಣದ ಹರಿವನ್ನು ತಡೆಯುತ್ತದೆಂಬ ಸಕಾರಾತ್ಮಕ ದೃಷ್ಟಿಕೋನದೊಂದಿಗೆ ಸಹಿಸಿಕೊಂಡಿದ್ದಾರೆ. ನೋಟುಗಳ ನಿಷೇಧದಿಂದ ಕಪ್ಪು ಹಣದ ಹರಿವು, ನಕಲಿ ನೋಟುಗಳ ಹಾವಳಿ ನಿವಾರಿಸುತ್ತೆನ್ನುವುದು ಸರ್ಕಾರದ ಅಭಿಮತ. ಈಗಾಗಲೇ ಜನಸಾಮಾನ್ಯರು ಹಣದ ಅಭಾವದೊಂದಿಗೆ 12 ದಿನಗಳನ್ನು ಕಳೆದಿದ್ದಾರೆ. ಆದರೆ ಸರ್ಕಾರದ ಉದ್ದೇಶಗಳು ಈಡೇರುವುದೇ ಎಂಬ ಪ್ರಶ್ನೆಗಳು ಹೊರಹೊಮ್ಮುತ್ತಿವೆ. ಹಾಗೆ ಈಡೇರದಿದ್ದರೆ ಯಾವ ಪ್ರಯೋಜನವೂ ಇಲ್ಲದೇ ಇಷ್ಟೆಲ್ಲಾ ನೋವು ಅನುಭವಿಸಬೇಕೇ?

ಕಪ್ಪುಹಣದ ಪ್ರಮಾಣ ಜಿಡಿಪಿಯಲ್ಲಿ ಎಷ್ಟಿರಬಹುದು. ನಿಖರ ಅಂಕಿಅಂಶಗಳು ಇರದಿದ್ದರೂ ಜಿಡಿಪಿ ಪ್ರಮಾಣ 20-66% ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ನೋಟು ರದ್ದತಿ ಕ್ರಮದಿಂದ ಇವೆಲ್ಲಾ ಕಪ್ಪುಹಣ ಈಚೆಗೆ ಬರುವುದೇ?
...ಮುಂದೆ ಓದಿ
ನೋಟುಗಳ ನಿಷೇಧ: ಬೆಳವಣಿಗೆಗಳ ಸ್ಥೂಲ ನೋಟ
ನವದೆಹಲಿ: 500 ಮತ್ತು 1000 ರೂ. ನೋಟುಗಳ ನಿಷೇಧವನ್ನು ಸರ್ಕಾರ ಪ್ರಕಟಿಸಿದ ಬಳಿಕ ಅಮಾನ್ಯಗೊಂಡ ನೋಟುಗಳ ವಿನಿಮಯಕ್ಕೆ ಅಥವಾ ಹಿಂತೆಗೆದುಕೊಳ್ಳಲು ಎಟಿಎಂಗಳಿಗೆ ಮತ್ತು ಬ್ಯಾಂಕ್‌ಗಳಿಗೆ ಎಡತಾಕುವ ಜನರಿಗೆ ಬಿಡುವು ಸಿಗುವುದಂತೂ ಕಂಡುಬರುತ್ತಿಲ್ಲ. ಎಲ್ಲಾ ಪ್ರಮುಖ ಬೆಳವಣಿಗೆಗಳ ಸ್ಥೂಲ ನೋಟ ಕೆಳಗಿದೆ
1. ಶನಿವಾರ ಬ್ಯಾಂಕುಗಳು ತಮ್ಮಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಮಾತ್ರ ಸೇವೆಸಲ್ಲಿಸುತ್ತಿದ್ದು, ಇತರೆ ಬ್ಯಾಂಕ್‌ಗಳ ಗ್ರಾಹಕರೊಂದಿಗೆ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿಲ್ಲ. ಆದಾಗ್ಯೂ ಈ ನಿರ್ಬಂಧವು ಹಿರಿಯ ನಾಗರಿಕರಿಗೆ ಅನ್ವಯವಾಗುವುದಿಲ್ಲ.
...ಮುಂದೆ ಓದಿ
ನೋಟುಗಳ ಬಿಡುಗಡೆಯಲ್ಲಿ ಏರುಪೇರು: ಜೇಟ್ಲಿಗೆ ಪತ್ರ ಬರೆದ ಸಿದ್ದರಾಮಯ್ಯ
ಬೆಂಗಳೂರು, : ಚಲಾವಣೆಯಲ್ಲಿದ್ದ ಐದು ನೂರು ರೂ ಮತ್ತು ಒಂದು ಸಾವಿರ ರೂ ನೋಟುಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ಕ್ರಮದಿಂದ ಜನಸಾಮಾನ್ಯರಿಗೆ ಉಂಟಾಗಿರುವ ತೊಂದರೆ ಕುರಿತಂತೆ ಬ್ಯಾಂಕ್ ಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಡನೆ ಸೋಮವಾರ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಕೇಂದ್ರ ಸರ್ಕಾರವು ಕೈಗೊಳ್ಳಬೇಕಾದ ಉಪಶಮನ ಕ್ರಮಗಳ ಕುರಿತಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು ಹಲವು ಸಲಹೆಗಳನ್ನು ನೀಡಿದ್ದಾರೆ.

ಐದು ನೂರು ರೂ ಮತ್ತು ಒಂದು ಸಾವಿರ ರೂ ನೋಟುಗಳನ್ನು ಹಿಂದಕ್ಕೆ ಪಡೆದು 2000 ರೂ ಮುಖ ಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
...ಮುಂದೆ ಓದಿ
ನೀರಿನಲ್ಲಿ ತೊಳೆದರೂ ಹೊಸ 2000 ರೂ. ನೋಟ್ ಸೇಫ್

ನವದೆಹಲಿ:ಹೊಸ ಕರೆನ್ಸಿ ನೋಟುಗಳನ್ನು ಪಡೆಯಲು ಅನೇಕಮಂದಿ ತಿಣುಕಾಡುತ್ತಿರುವ ನಡುವೆ ಕೆಲವರು ಈ ನೋಟುಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವಿಡಿಯೊದಲ್ಲಿ ಸುರಿಯುವ ನೀರಿಗೆ ಹೊಸ 2000 ರೂ. ನೋಟನ್ನು ಅದ್ದಿ ತೊಳೆಯುತ್ತಿರುವುದನ್ನು ತೋರಿಸಿದೆ.

ಇದಕ್ಕಿಂತ ವಿಚಿತ್ರವೆಂದರೆ ಈ ವಿಡಿಯೊ ಸಂಪೂರ್ಣ ವೈರಲ್ ಆಗಿ 5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ನೀರಿನಲ್ಲಿ ನೋಟನ್ನು ಅದ್ದಿ ಪರೀಕ್ಷಿಸುತ್ತಿರುವ ಇನ್ನೂ ಅನೇಕ ವಿಡಿಯೊಗಳು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದ್ದು,ಕೆಲವಕ್ಕೆ ಉತ್ತಮ ವ್ಯೂವ್ಸ್ ಸಿಕ್ಕಿದೆ.

...ಮುಂದೆ ಓದಿ
ಕಸದ ತೊಟ್ಟಿಯಲ್ಲಿ 500, 1000 ರೂ. ನೋಟುಗಳು

ಕೊಲ್ಕತಾ:ಕಸದ ತೊಟ್ಟಿಯಲ್ಲಿ 500 ಮತ್ತು 1000  ರೂ.ನ ಹರಿದ ನೋಟುಗಳು ಕೊಲ್ಕತಾದಲ್ಲಿ ಪತ್ತೆಯಾಗಿದೆ. 500 ಮತ್ತು 1000 ರೂ.ನೋಟುಗಳಿಗೆ ನಿಷೇಧ ಹೇರಿದ ಬಳಿಕ ಎರಡು ಚೀಲಗಳಲ್ಲಿ ಹರಿದ ನೋಟುಗಳನ್ನು ತುಂಬಿ ಕಸದ ತೊಟ್ಟಿಯಲ್ಲಿ ಎಸೆಯಲಾಗಿದೆ.

ಈ ನೋಟುಗಳನ್ನು ತೆರಿಗೆ ಕಳ್ಳನೋಟುಗಳೆಂದು ಹೇಳಲಾಗಿದ್ದು, ನೋಟಿನ ಮೇಲಿರುವ ಸಂಖ್ಯೆಗಳನ್ನು ಪೊಲೀಸರು ನಮೂದಿಸಿಕೊಂಡಿದ್ದಾರೆ. ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಮತ್ತು ಡಿಪಾಸಿಟ್ ಮಾಡಲು ಕಾಲಾವಕಾಶ ವಿದ್ದರ ಕಸದ ತೊಟ್ಟಿಯಲ್ಲಿ ಎಸೆದಿರವುದರಿಂದ ಅದು ಕಪ್ಪು ಹಣವೆನ್ನುವುದು ಖಚಿತವಾಗಿದೆ.

...ಮುಂದೆ ಓದಿ
ನೋಟು ನಿಷೇಧ: ಪ್ರತಿಪಕ್ಷದ ವಾಗ್ದಾಳಿಗೆ ಪ್ರಧಾನಿ ಭಾವುಕ ಉತ್ತರ

ಪಣಜಿ: 1000 ರೂ. ಮತ್ತು 500 ರೂ. ನೋಟುಗಳ ನಿಷೇಧದ ವಿರುದ್ಧ ವಿರೋಧಪಕ್ಷಗಳ ವಾಗ್ದಾಳಿ ಮತ್ತು ಬ್ಯಾಂಕುಗಳಲ್ಲಿ  ಮತ್ತು ಎಟಿಎಂಗಳಲ್ಲಿ ಉದ್ದನೆಯ ಸಾಲಿನಿಂದ ಸಾರ್ವಜನಿಕರಲ್ಲಿ ಉಂಟಾದ ಅಸಹನೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾವುಕರಾಗಿ ಪ್ರತಿಕ್ರಿಯಿಸಿದರು.
 
ತಮಗೆ ಜನರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಜವಾಬ್ದಾರಿ ವಹಿಸಿದ್ದು, ಯಾವುದೇ ಪರಿಣಾಮ ಎದುರಿಸಲು ತಾವು ಸಿದ್ಧವಿರುವುದಾಗಿ ಹೇಳಿದರು.
...ಮುಂದೆ ಓದಿ
ತಂದೆ, ತಾಯಿ ಚುಂಬಿಸಿದರೆ ಅಸೂಯೆಯಿಂದ ಅಳುವ ಮಗು

  ಹೆಣ್ಣು ಮಗುವಿಗೆ ತನ್ನ ತಂದೆ, ತಾಯಿ ಪರಸ್ಪರ ಮುತ್ತು ಕೊಡುವುದನ್ನು ನೋಡಿದರೆ ಬೇಸರವಾಗುತ್ತದೋ, ಅಸೂಯೆಯಾಗುತ್ತದೋ ಗೊತ್ತಿಲ್ಲ.

ಒಟ್ಟಿನಲ್ಲಿ ಲವಲವಿಕೆಯಿಂದಿದ್ದ ಮಗು ದಿಢೀರನೆ ಅಳುವುದಕ್ಕೆ ಆರಂಭಿಸುತ್ತದೆ. ತಮ್ಮ ಮಗು ಸದಾ ಸಂತೋಷವಾಗಿರುತ್ತದೆ. ಆದರೆ ತಾವಿಬ್ಬರು ಕಿಸ್ ಕೊಟ್ಟರೆ ಮಾತ್ರ ಅಳುವುದಕ್ಕೆ ಆರಂಭಿಸುತ್ತದೆಂದು ತಂದೆ, ತಾಯಿ ಹೇಳಿದ್ದಾರೆ.

...ಮುಂದೆ ಓದಿ
ದಾಖಲೆಗೆ ಹೆಬ್ಬೆಟ್ಟು ಗುರುತು ಹಾಕಿದ ಜಯಲಲಿತಾ

ಚೆನ್ನೈ:ತಮಿಳುನಾಡು ಮುಖ್ಯಮಂತ್ರಿ ಅನಾರೋಗ್ಯದಿಂದ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿದ್ದು ಅವರ ಬಲಗೈ ಊದಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ಪ್ರಮಾಣಪತ್ರಗಳಿಗೆ ಸಹಿ ಹಾಕದೇ ಹೆಬ್ಬೆಟ್ಟು ಗುರುತು ಹಾಕಿದ್ದಾರೆ. ಜ್ವರ ಮತ್ತು ನಿರ್ಜಲೀಕರಣದಿಂದ ಸೆಪ್ಟೆಂಬರ್ 22ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ತರುವಾಯದ ಆರೋಗ್ಯ ಪರೀಕ್ಷೆಯಲ್ಲಿ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದು ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

...ಮುಂದೆ ಓದಿ
ತಮಿಳುನಾಡಿಗೆ ನೀರು ಬಿಡದಿರಲು ಕರ್ನಾಟಕ ಸರ್ಕಾರ ಕಠಿಣ ನಿರ್ಧಾರ

ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶವನ್ನು  ಧಿಕ್ಕರಿಸಿದ ಕರ್ನಾಟಕ ಸರ್ಕಾರ ನೀರು ಬಿಡದೇ ಇರುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿದಂತೆ ಉಭಯ ಸದನಗಳಲ್ಲಿ ತೀರ್ಮಾನವಾಗುವ  ತನಕ ನೀರು ಬಿಡದಿರಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಉಭಯ ಸದನಗಳ ಸಭೆಯನ್ನು ಶುಕ್ರವಾರ ಕರೆಯಲು ರಾಜ್ಯಪಾಲರ ಅನುಮತಿ ಕೇಳಿದ್ದು, ಉಭಯ ಸದನಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾಗುವ ತನಕ ನೀರು ಬಿಡದಿರಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು ...ಮುಂದೆ ಓದಿ
ಕಾವೇರಿ ಹಿಂಸಾಚಾರಕ್ಕೆ ಬೆಂಗಳೂರಿನಲ್ಲಿ ಇನ್ನೊಂದು ಜೀವ ಬಲಿ

ಬೆಂಗಳೂರು: ಕಾವೇರಿ ನದಿ ವಿವಾದದಿಂದ ಭುಗಿಲೆದ್ದ ಹಿಂಸಾಚಾರಕ್ಕೆ ಇನ್ನೊಂದು ಜೀವ ಬಲಿಯಾಗಿದೆ. 32 ವರ್ಷದ ವ್ಯಕ್ತಿಯೊಬ್ಬ ಕಟ್ಟಡದ ಮೂರನೇ  ಮಹಡಿಯಿಂದ ಕೆಳಕ್ಕೆ ಹಾರಿ ತೀವ್ರ ಗಾಯಗಳಿಂದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ವ್ರತ್ತಿಯಲ್ಲಿ ಬಾರ್ ಬೆಂಡರ್ ಆಗಿರುವ ಕುಮಾರ್ ನಾರಾಯಣ್ ಸುಂಕದಕಟ್ಟೆ ನಿವಾಸಿಯಾಗಿದ್ದು, ಪೊಲೀಸರು ಮಾಗಡಿರಸ್ತೆಯ ಬ್ಯಾಡರಹಳ್ಳಿಯಲ್ಲಿ ರಾತ್ರಿ 10.30ಕ್ಕೆ ಹಿಂಸಾಚಾರ ನಿರತ ಗುಂಪನ್ನು ಚದುರಿಸಲು ಲಾಠಿ ಪ್ರಹಾರ ಮಾಡಿದಾಗ ಕುಮಾರ್ ನಾರಾಯಣ್ ಕಟ್ಟಡದ ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿದ್ದರು.

...ಮುಂದೆ ಓದಿ

ಢಾಕಾ:  ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ  ವಿಕೆಟ್ ಕೀಪರ್ ಆಗಿದ್ದ ಬಾಲಕನನ್ನು ಬ್ಯಾಟ್ಸ್ ಮನ್ ವಿಕೆಟ್‌ನಿಂದ ಹೊಡೆದು ಸಾಯಿಸಿದ ಅಮಾನುಷ ಘಟನೆ ವರದಿಯಾಗಿದೆ. ಬೌಲರೊಬ್ಬನ ಎಸೆತಕ್ಕೆ ಬ್ಯಾಟ್ಸ್‌ಮನ್ ಕ್ಯಾಚಿತ್ತು ಔಟಾಗಿದ್ದರು.

ಆದರೆ ಬೌಲರ್ ಕ್ರೀಸ್ ಆಚೆ ಕಾಲಿಟ್ಟು ಬೌಲಿಂಗ್ ಮಾಡಿದ್ದರಿಂದ ನೋಬಾಲ್ ಕಾರಣದಿಂದ ಅಂಪೈರ್ ಔಟ್ ಕೊಟ್ಟಿರಲಿಲ್ಲ. ...ಮುಂದೆ ಓದಿ


ಬ್ಯಾಟ್ಸ್ ಮನ್ ಸ್ಟಂಪ್ ಏಟಿಗೆ ವಿಕೆಟ್ ಕೀಪರ್ ಕಲಾಸ್
ಪತ್ನಿಯ ಅನೈತಿಕ ಸಂಬಂಧ ಪುರಾವೆಗೆ ಕ್ಯಾಮರಾ ಅಳವಡಿಸಿದ ಸಾಫ್ಟ್‌ವೇರ್ ಎಂಜಿನಿಯರ್
ಪ್ರತಿಯೊಂದು ಸೆಟ್‌ನಿಂದ 31 ರೂ. ಲಾಭ: ಮೋಹಿತ್ ಗೋಯಲ್
ಹರೀಶ್‌ಗೆ ಬಡ್ತಿ ನಿರಾಕರಿಸಿದ್ದರಿಂದ ಸಾವಿಗೆ ಶರಣಾದರೇ?
ಸೆಲ್ಫಿ ಕ್ಲಿಕ್ಕಿಸುವ ಕ್ರೇಜ್‌ಗೆ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಬಲಿ
ಬೆಂಗಳೂರು ನಗರ ಜಿಲ್ಲೆಯಲ್ಲಿ 8.40 ಲಕ್ಷ ಮತದಾರರು
102 ಉಗ್ರರ ಜತೆ ಲಷ್ಕರ್ ತರಬೇತಿ ಪಡೆದಿದ್ದ ಡೇವಿಡ್ ಹೆಡ್ಲಿ
ಸುಸೂಗೆ ಬ್ರೇಕ್ ಪಡೆದ ನಾಯಿ 13.1 ಮೈಲು ಮ್ಯಾರಥಾನ್ ಓಡಿತು
ಅಶ್ಲೀಲತೆ ಹಾಗೂ ಹಿಂಸೆ ಇಲ್ಲದ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿ : ಸಿದ್ದರಾಮಯ್ಯ
ಮಹಿಳೆಗೆ 6 ದಶಲಕ್ಷ ಡಾಲರ್ ಪರಿಹಾರ: ಯೋಗಗುರುವಿಗೆ ಕೋರ್ಟ್ ಆದೇಶ
ಕ್ರೀಡಾ ಸುದ್ದಿ

ರಿಯೊ ಡಿ ಜನೈರೊ: ಯೋಗೇಶ್ವರ್ ದತ್ 2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ  ಸಾಕ್ಷಿ ಮಲಿಕ್ ಬಳಿಕ ಕುಸ್ತಿಯಲ್ಲಿ 2ನೇ ಒಲಿಂಪಿಕ್ ಪದಕ ಗೆಲ್ಲಿಸಿಕೊಡುವ ಪ್ರಯತ್ನದಲ್ಲಿದ್ದಾರೆ. ರಿಯೊದಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಮೊದಲ ಪುರುಷ ಕ್ರೀಡಾಪಟುವಾಗುವ ಗುರಿಯನ್ನು ಯೋಗೇಶ್ವರ್ ಹೊಂದಿದ್ದಾರೆ. ಲಂಡನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ತಮ್ಮ ಕ್ರೀಡಾಜೀವನದಲ್ಲಿ ಇನ್ನೊಂದು ಪದಕ ಗೆಲ್ಲುವರೇ ಎನ್ನುವುದು ಪ್ರಶ್ನೆಯಾಗಿದೆ.


 ಯೋಗೇಶ್ವರ್ ಅವರ ಆರಂಭಿಕ ಪಂದ್ಯವು ಎರಡು ಬಾರಿ  ವಿಶ್ವಚಾಂಪಿಯನ್ ಷಿಪ್ ಪದಕ ವಿಜೇತ ಮಂಗೋಲಿಯಾದ ಗಾಂಜೊರಿಗ್ ಮಂಡಕ್ನಾರನ್ ವಿರುದ್ಧ ನಡೆಯಲಿದೆ.
...ಮುಂದೆ ಓದಿ


ಕುಸ್ತಿಯಲ್ಲಿ ಭಾರತಕ್ಕೆ 2ನೇ ಪದಕ ಗೆಲ್ಲಿಸಿಕೊಡುವುದು ಯೋಗೇಶ್ವರ್ ಗುರಿ
ನೇಮರ್ ಶೂಟ್ ಔಟ್: ಬ್ರೆಜಿಲ್‌‌ಗೆ ಪ್ರಪ್ರಥಮ ಒಲಿಂಪಿಕ್ ಫುಟ್ಬಾಲ್ ಚಿನ್ನದ ಪದಕ
ರಿಯೊದಲ್ಲಿ ಬೆಳ್ಳಿಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸಿಂಧು
ವಿಂಡೀಸ್ 108ಕ್ಕೆ ಆಲೌಟ್: ಭಾರತಕ್ಕೆ 2-0ಯಿಂದ ಸರಣಿ ಜಯ
ಶೂಟಿಂಗ್‌ನಲ್ಲಿ ಭಿಂದ್ರಾಗೆ ಸ್ವಲ್ಪದರಲ್ಲಿ ಕೈತಪ್ಪಿದ ಕಂಚಿನ ಪದಕ
ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಸ ಪ್ರದರ್ಶನ
ರಿಯೊ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಐರ್ಲೆಂಡ್ ವಿರುದ್ಧ 3-2ರಿಂದ ಜಯ
ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಿದ ಲಯೊನೆಲ್ ಮೆಸ್ಸಿ
ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದು ಹೇಗೆ?
ಆರ್‌ಸಿಬಿ ಕನಸು ಭಗ್ನ: ಸನ್‌ರೈಸರ್ಸ್ ಚಾಂಪಿಯನ್
 
ಮನರಂಜನೆ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಜತೆ ಡಿನ್ನರ್‌ಗೆ ಹಾಜರಾಗುವುದು ಕೂಡ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಖಚಿತವಿಲ್ಲವಂತೆ. ಅಮೆರಿಕದ ಟಿವಿ ಸರಣಿಯಲ್ಲಿ ಪಾತ್ರದ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ಪ್ರಿಯಾಂಕಾಗೆ ಈ ತಿಂಗಳು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಥಮ ಮಹಿಳೆ ಮಿಶೆಲೆ ಒಬಾಮಾ ಡಿನ್ನರ್‌ಗೆ ಆಹ್ವಾನಿಸಿದ್ದಾರೆ.

ಆದರೆ ಅಮೆರಿಕದ ಖ್ಯಾತ ಅಧ್ಯಕ್ಷ ಒಬಾಮಾ ಡಿನ್ನರ್‌ಗೆ ಹೋಗೋದುಕ್ಕೂ ಪ್ರಿಯಾಂಕಗೆ ಪುರುಸೋತ್ತಿಲ್ಲವಲ್ಲವಂತೆ. ಅವರು ಶೂಟಿಂಗ್‌ಗೆ ತೊಂದರೆಯಾಗದಂತೆ ಬಿಜಿಯಾಗಿರುವುದು ನೋಡಿದರೆ ಅವರ ಕಾರ್ಯನಿಷ್ಠೆಗೆ ಮೆಚ್ಚಲೇಬೇಕು. ...ಮುಂದೆ ಓದಿ


ಒಬಾಮಾ ಡಿ‌ನ್ನರ್‌ಗೆ ಹಾಜರಾಗುವುದಕ್ಕೂ ಪ್ರಿಯಾಂಕಗೆ ಪುರುಸೋತ್ತಿಲ್ಲವಂತೆ
ಜೊಕೋವಿಕ್ ಜತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ಅತ್ಯಾಚಾರದ ದೂರಿನಿಂದ ನೊಂದ ಕಿರುತೆರೆ ನಟ ವಿಶಾಲ್ ನಾಪತ್ತೆ
ಹುಚ್ಚ ವೆಂಕಟ್ ಹಾಡಿದ `ಹುಟ್ಟಿದ ಊರನು ಬಿಟ್ಟು ಬಂದ ಮ್ಯಾಲೆ`
ಬೈಕ್ ಸ್ಕಿಡ್ ಆಗಿ ಬಿಸಿಲೆ ಚಿತ್ರದ ನಿರ್ದೇಶಕ ಸಂದೀಪ್ ವಿಧಿವಶ
ಸಿಗರೇಟ್ ಅಭ್ಯಾಸ ಮಾಡಿದ ನಟಿ ಹರಿಪ್ರಿಯಾ
ಲೈಂಗಿಕ ಕಿರುಕುಳದಿಂದ ಮನನೊಂದ ನಟಿ ಶ್ರುತಿರಾಜ್ ಆತ್ಮಹತ್ಯೆ ಯತ್ನ
ಪ್ರಣಯದ 6 ಹಸಿಬಿಸಿ ದೃಶ್ಯಗಳಲ್ಲಿ ಸನ್ನಿ ಲಿಯೋನ್
ಹಿಟ್ ಅಂಡ್ ರನ್ ಕೇಸ್‌ಗೆ ಸಲ್ಮಾನ್ ಖರ್ಚು ಮಾಡಿದ್ದು 25 ಕೋಟಿ ರೂ.
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮಾಧುರಿ ದುಬೈನಲ್ಲಿ ಜಾರಿಬಿದ್ದರು
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery